For Quick Alerts
ALLOW NOTIFICATIONS  
For Daily Alerts

ಪೇಟಿಎಂ ಐಪಿಒ: ಯಾವಾಗ ಆರಂಭ?, ಇಲ್ಲಿದೆ ಮಾಹಿತಿ

|

ಡಿಜಿಟಲ್ ಪೇಮೆಂಟ್‌ ಆಪ್‌ ಆದ ಪೇಟಿಎಂನ ಮೂಲ ಕಂಪನಿಯಾದ ಒನ್‌97 ಕಮ್ಯುನಿಕೇಷನ್ಸ್ ತನ್ನ ರೂ 18,300 ಕೋಟಿ ಪ್ರಮುಖ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಸೋಮವಾರ, ಅಂದರೆ ನವೆಂಬರ್‌ 8, 2021 ರಂದು ಪ್ರಾರಂಭ ಮಾಡಲಿದೆ. ಈ ಐಪಿಒ ನವೆಂಬರ್ 10, 2021 ರ ಬುಧವಾರದವರೆಗೆ ಇರಲಿದೆ. ನವೆಂಬರ್ 10 ರವರೆಗೆ ಚಂದಾದಾರಿಕೆಗಳನ್ನು ಸ್ವೀಕಾರ ಮಾಡಲಾಗುತ್ತದೆ.

 

ಐಪಿಒನ ಪ್ರೈಸ್‌ ಬ್ಯಾಂಡ್‌ ಪ್ರತಿ ಷೇರಿಗೆ ರೂಪಾಯಿ1 ಮುಖಬೆಲೆಯೊಂದಿಗೆ 2,080 ರಿಂದ 2,150 ರವರೆಗೆ ಇರಲಿದೆ. ಮಾರುಕಟ್ಟೆ ನಿಯಂತ್ರಕರು ಕಳೆದ ವಾರ ನಿಗಮಕ್ಕೆ ಹಸಿರು ನಿಶಾನೆ ತೋರಿಸಿದರು. ಡಿಜಿಟಲ್ ಪಾವತಿಗಳ ದೈತ್ಯ ಎಂದೇ ಕರೆಸಿಕೊಳ್ಳುವ ಈ ಸಂಸ್ಥೆಯು 18,300 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುವ ಉದ್ದೇಶದಿಂದಾಗಿ ಈ ಐಪಿಒನತ್ತ ಮುಖ ಮಾಡಿದೆ. ಕಂಪನಿಯು ತನ್ನ ಐಪಿಒ ಗಾತ್ರವನ್ನು 16,600 ಕೋಟಿ ರೂಪಾಯಿಯಿಂದ 1,700 ಕೋಟಿ ರೂಪಾಯಿಗೆ ಏರಿಕೆ ಮಾಡಿದೆ. ಪ್ರಸ್ತುತ ಮಾಲೀಕರು ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಿರುವ ಕಾರಣದಿಂದಾಗಿ ಈ ಏರಿಕೆ ಕಂಡು ಬಂದಿದೆ.

Diwali Muhurat Trading 2021: ದಿನಾಂಕ, ಅವಧಿ, ಮಹತ್ವ, ವಿಶೇಷದ ಬಗ್ಗೆ ತಿಳಿಯಿರಿ

ವಿಜಯ್‌ ಶೇಖರ್‌ ಶರ್ಮಾ 402.65 ಕೋಟಿ ರೂಪಾಯಿಯಷ್ಟು ಮಾರಾಟ ಮಾಡಿದ್ದಾರೆ. ಆಂಟ್‌ಫಿನ್ (ನೆದರ್‌ಲ್ಯಾಂಡ್ಸ್) ಹೋಲ್ಡಿಂಗ್ಸ್ 4,704.43 ಕೋಟಿ ರೂ.ವರೆಗೆ ಮಾರಾಟ ಮಾಡಿದೆ. ಆಲಿಬಾಬಾ.ಕಾಮ್‌ ಸಿಂಗಾಪುರ್ ಇ-ಕಾಮರ್ಸ್ 784.82 ಕೋಟಿ ರೂಪಾಯಿವರೆಗೆ ಮಾರಾಟ ಮಾಡಲಾಗಿದೆ. ಎಲಿವೇಶನ್ ಕ್ಯಾಪಿಟಲ್ವಿ ಎಫ್ಐಐ ಹೋಲ್ಡಿಂಗ್ಸ್ 75.02 ಕೋಟಿ ರೂಪಾಯಿವರೆಗೆ ಮಾರಾಟವನ್ನು ಮಾಡಿದೆ. ಮಾರಾಟ ಮಾಡುವ ಆಹ್ವಾನ ನೀಡುವ ಮೂಲಕ ಈ ಮಾರಾಟವನ್ನು ಮಾಡಲಾಗಿದೆ.

 ಪೇಟಿಎಂ ಐಪಿಒ: ಯಾವಾಗ ಆರಂಭ?, ಇಲ್ಲಿದೆ ಮಾಹಿತಿ

ಐಪಿಯು ದಾಖಲೆಗಳ ಪ್ರಕಾರ, ಎಲಿವೇಶನ್ ಕ್ಯಾಪಿಟಲ್ ವಿ ಲಿಮಿಟೆಡ್ 64.01 ಕೋಟಿ ರೂಪಾಯಿಯ ಐಪಿಒ ಆಹ್ವಾನ ನೀಡಿದೆ. ಸೈಫ್ III ಮಾರಿಷಸ್ 1,327.65 ಕೋಟಿ ರೂಪಾಯಿಯಷ್ಟು ಐಪಿಒ ಆಹ್ವಾನ ನೀಡಿದೆ. ಸೈಫ್ ಪಾಲುದಾರರು 563.63 ಕೋಟಿ ರೂಪಾಯಿ ಐಪಿಒ ಆಹ್ವಾನ ನೀಡಿದ್ದಾರೆ. ಎಸ್‌ವಿಎಫ್‌ ಪಾಲುದಾರರು 1,689.03 ಕೋಟಿ ರೂಪಾಯಿ ಹೂಡಿಕೆಗಾಗಿ ಪ್ರಮುಖ ಸಾರ್ವಜನಿಕ ಕೊಡುಗೆಗೆ ಆಹ್ವಾನವನ್ನು ನೀಡಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಹೋಲ್ಡಿಂಗ್ಸ್‌ಗಳು 301.77 ಕೋಟಿಯ ಆಹ್ವಾನವನ್ನು ನೀಡಿದೆ.

 

ಮೋರ್ಗಾನ್ ಸ್ಟಾನ್ಲಿ ಇಂಡಿಯಾ ಕಂಪನಿ, ಗೋಲ್ಡ್ಮನ್ ಸ್ಯಾಚ್ಸ್ (ಇಂಡಿಯಾ) ಸೆಕ್ಯುರಿಟೀಸ್, ಆಕ್ಸಿಸ್ ಕ್ಯಾಪಿಟಲ್, ಐಸಿಐಸಿಐ ಸೆಕ್ಯುರಿಟೀಸ್, ಜೆಪಿ ಮೋರ್ಗಾನ್ ಇಂಡಿಯಾ, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ, ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಐಪಿಒಗಾಗಿ ಪ್ರಮುಖ ವ್ಯವಸ್ಥಾಪಕರು ಆಗಿದ್ದಾರೆ. ಒನ್‌97 ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ನಲ್ಲಿ ಸಂಗ್ರಹಿಸಿದ ಹಣವನ್ನು ಗ್ರಾಹರಕು ಹಾಗೂ ವ್ಯಾಪಾರಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಪೇಟಿಎಂ ಪರಿಸರ ವ್ಯವಸ್ಥೆಯನ್ನು ವಿಸ್ತಾರ ಮಾಡಲು ಬಳಸಲಾಗುವುದು ಎಂದು ಹೇಳಿದೆ. ಕಂಪನಿಯ ಪ್ರಕಾರ ಗ್ರಾಹಕರು ಮತ್ತು ವ್ಯಾಪಾರಿಗಳು ಮಾರ್ಕೆಟಿಂಗ್‌, ಕ್ಯಾಷ್‌ಬ್ಯಾಕ್‌ ಮತ್ತು ಬೇರೆ ರಿವಾರ್ಡ್ ಮೂಲಕ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಬಳಸಲಾಗುವುದು ಎಂದಿದೆ.

IPO ನಲ್ಲಿ ಹೂಡಿಕೆ ಮಾಡುವಿರಾ? ಹಾಗಾದ್ರೆ ಈ ಮಾಹಿತಿ ಗೊತ್ತಿರಲೇಬೇಕು

ಪ್ರಸ್ತುತ ಮಾರುಕಟ್ಟೆಯಲ್ಲಿ ಐಪಿಒ ಗಳ ಅಲೆ ಇದೆ. 2021 ರಲ್ಲಿ ಜನರು ಹೆಚ್ಚಾಗಿ ಪ್ರಮುಖ ಸಾರ್ವಜನಿಕ ಕೊಡುಗೆ (ಐಪಿಒ) ಅತ್ತ ಮುಖ ಮಾಡುತ್ತಿದ್ದಾರೆ. 2021 ರ ಮೊದಲಾರ್ಧದಲ್ಲಿ ಜೊಮ್ಯಾಟೊ, ಕಾಮ್‌ಸ್ಟಾರ್‌, ಐಆರ್‌ಎಫ್‌ಸಿ, ಪವರ್‌ ಗ್ರಿಡ್‌ ಇನ್‌ವಿಟ್‌ ಹಾಗೂ ಹಲವು ಐಪಿಒಗಳು ಹೆಸರುವಾಸಿಯಾಗಿದ್ದವು. ಈ ಅರ್ಧ ವರ್ಷದಲ್ಲಿ, ಇನ್ನು ಕಲೆವು ಐಪಿಒಗಳು ಪ್ರಚಲಿತವಾಗಿದೆ.

ಐಪಿಒ ಎಂದರೆ ಪ್ರಮುಖ ಸಾರ್ವಜನಿಕ ಕೊಡುಗೆ ಆಗಿದೆ. ಖಾಸಗಿ ಸಂಸ್ಥೆಗಳು ಸಾಮಾನ್ಯ ಜನರಿಗೆ ಈ ಸಂಸ್ಥೆಯ ಷೇರುಗಳನ್ನು ಖರೀದಿ ಮಾಡಲು ಆಹ್ವಾನ ನೀಡುವುದೇ ನಾವು ಐಪಿಒ ಎಂದು ಕರೆಯತ್ತೇವೆ. ಸಾಮಾನ್ಯವಾಗಿ ಬಂಡವಾಳ, ಸಂಸ್ಥೆಯ ವಿಸ್ತರಣೆ, ಸಾಲ ಮರುಪಾವತಿ ಹಾಗೂ ಇತರೆ ಉದ್ದೇಶಗಳಿಗಾಗಿ ಹಣವನ್ನು ಸಂಗ್ರಹ ಮಾಡಲು ಮಾಡಲಾಗುತ್ತದೆ. ಒಂದು ಕಂಪನಿಯ ಐಪಿಒ ಬರುತ್ತಿದೆ ಎಂದರೆ ಅದು ಖಾಸಗಿ ಸಂಸ್ಥೆಯಿಂದ ಸಾರ್ವಜನಿಕ ಉದ್ಯಮವಾಗುತ್ತಿದೆ ಎಂದು ಅರ್ಥ.

English summary

Paytm IPO; Subscription To Open On November 8, Check Other Details

Paytm IPO; Subscription To Open On November 8, Check Other Details in Kannada.
Story first published: Saturday, October 30, 2021, 19:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X