For Quick Alerts
ALLOW NOTIFICATIONS  
For Daily Alerts

ಪೇಟಿಎಂ ಮನಿಯಿಂದ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಆರಂಭ

|

ಪೇಟಿಎಂ ಮನಿಯಿಂದ ಫ್ಯೂಚರ್ಸ್ ಅಂಡ್ ಆಪ್ಷನ್ಸ್ (F&O) ವಹಿವಾಟು ಆರಂಭಿಸಲಾಗಿದೆ. ಜನವರಿ 13ನೇ ತಾರೀಕಿನಂದು ನಡೆದ ಕಾರ್ಯಕ್ರಮದಲ್ಲಿ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ ಆರಂಭಿಸಿರುವ ಬಗ್ಗೆ ಘೋಷಣೆ ಮಾಡಿತು. ಇದರ ಜತೆಗೆ ಸ್ಟಾಕ್ಸ್, ನೇರ ಮ್ಯೂಚುವಲ್ ಫಂಡ್ಸ್, ಇಟಿಎಫ್, ಐಪಿಒ, ಎನ್ ಪಿಎಸ್ ಮತ್ತು ಡಿಜಿಟಲ್ ಗೋಲ್ಡ್ ವ್ಯವಹಾರ ಸಹ ಗ್ರಾಹಕರು ನಡೆಸಬಹುದು.

 

ಪೇಟಿಎಂ ಸ್ಥಾಪಕ ವಿಜಯ್ ಶಂಕರ್ ಶರ್ಮಾ ಮಾತನಾಡಿ, ಈ ಫೀಚರ್ ನೊಂದಿಗೆ ಕಂಪೆನಿಯ ಸಕ್ರಿಯ ಬಳಕೆದಾರರು ಹೆಚ್ಚಾಗುವ ಭರವಸೆ ಇದೆ. ಮತ್ತು ವಾರ್ಷಿಕವಾಗಿ 1.5 ಲಕ್ಷ ಕೋಟಿ ರುಪಾಯಿ ವಹಿವಾಟು ನಡೆಸುವ ಹಾಗೂ ಮುಂದಿನ ಎರಡು ವರ್ಷದಲ್ಲಿ ಹತ್ತು ಲಕ್ಷ ಟ್ರೇಡ್ಸ್ ಗುರಿ ಹಾಕಿಕೊಂಡಿದ್ದೇವೆ ಎಂದಿದ್ದಾರೆ.

ಪೇಟಿಎಂ ಮನಿಯಿಂದ ಸ್ಟಾಕ್ ಬ್ರೋಕಿಂಗ್: ಷೇರು ಹೂಡಿಕೆದಾರರಿಗೆ ಏನೆಲ್ಲ ಆಫರ್?

ತುಂಬ ಸ್ಪರ್ಧಾತ್ಮಕ ಬೆಲೆಗೆ ಈ ಸೇವೆಯನ್ನು ಪೇಟಿಎಂ ಆರಂಭಿಸಿದೆ. ಎಲ್ಲ ಫ್ಯೂಚರ್ಸ್ ಅಂಡ್ ಆಪ್ಷನ್ ಟ್ರೇಡ್ ಗಳಿಗೆ ರು. 10 ಇರುತ್ತದೆ. ಕಡಿಮೆ ಬೆಲೆ ಎಂಬ ಕಾರಣಕ್ಕೆ ಯಾವುದೇ ಪ್ಯಾಕೇಜ್ ಅಥವಾ ಕಾಂಟ್ರ್ಯಾಕೃ ಅಥವಾ ನಿರ್ದಿಷ್ಟ ಮೊತ್ತದ ವಹಿವಾಟಿಗೆ ಬದ್ಧವಾಗಬೇಕು ಎಂಬ ನಿಯಮವೇನೂ ಇಲ್ಲ. ಇನ್ನು ಇಂಟ್ರಾಡೇ ವಹಿವಾಟಿಗೆ ರು. 10 ಶುಲ್ಕ ಹಾಗೂ ಡೆಲಿವರಿ ಉಚಿತ ಇದೆ.

ಪೇಟಿಎಂ ಮನಿಯಿಂದ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಆರಂಭ

ಆರಂಭದಲ್ಲಿ ಅಭಿಪ್ರಾಯ ಸಂಗ್ರಹಕ್ಕಾಗಿ ಬಳಕೆದಾರರಿಗೆ ಆಂಡ್ರಾಯಿಡ್ ಮತ್ತು ವೆಬ್ ನಲ್ಲಿ ಬಳಕೆಗೆ ಅವಕಾಶ ಕಲ್ಪಿಸಲಾಯಿತು. ವಾಣಿಜ್ಯವಾಗಿ ಈ ಸೇವೆಗಳ ಲಭ್ಯ ಮತ್ತು iOSಗಳಲ್ಲಿ ದೊರೆಯುವುದಕ್ಕೆ ಮುಂದಿನ ವಾರಗಳಲ್ಲಿ ಆರಂಭವಾಗುತ್ತದೆ.

English summary

Paytm Launches Futures And Options Trading in Paytm Money platform

Paytm launches Futures and Options trading in Paytm money platform January 13, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X