For Quick Alerts
ALLOW NOTIFICATIONS  
For Daily Alerts

5 ವರ್ಷದೊಳಗೆ ಕೆಲಸ ಬಿಟ್ಟಲ್ಲಿ ಪಿಎಫ್ ವಿಥ್ ಡ್ರಾಗೆ ತೆರಿಗೆ; ಇದು ಯಾರಿಗೆ ಅನ್ವಯಿಸಲ್ಲ?

|

ಇಪಿಎಫ್ ವಿಥ್ ಡ್ರಾ ಬಗ್ಗೆ ಬಹಳ ಮಂದಿಗೆ ಮಾಹಿತಿ ಕೊರತೆ ಇದೆ. ಆ ಕಾರಣಕ್ಕೆ ತೆರಿಗೆಯನ್ನು ಕಟ್ಟುವಂತಾಗುತ್ತದೆ. ಅದರಲ್ಲಿ ಮುಖ್ಯವಾದದ್ದು ಏನೆಂದರೆ, ಯಾವುದೇ ಉದ್ಯೋಗಿ ಐದು ವರ್ಷಗಳ ಕಾಲ ಒಂದು ಸಂಸ್ಥೆಯಲ್ಲಿ ಸೇವಾವಧಿಯನ್ನು ಪೂರೈಸದೆ, ಕೆಲಸ ಬಿಟ್ಟು ಅದೇ ಸಂಸ್ಥೆಯಲ್ಲಿ ವೇತನದ ಜತೆಗೆ ಜಮೆಯಾದ ಇಪಿಎಫ್ ವಿಥ್ ಡ್ರಾ ಮಾಡಿದಲ್ಲಿ ಅದಕ್ಕೆ ತೆರಿಗೆ ಬೀಳುತ್ತದೆ.

ಐದು ವರ್ಷದೊಳಗೆ ಕೆಲಸ ಬಿಟ್ಟು, ಇಪಿಎಫ್ ವಿಥ್ ಡ್ರಾ ಮಾಡಿದರೆ ಆ ಮೊತ್ತಕ್ಕೆ ಮಾತ್ರವಲ್ಲ. ಈ ಹಿಂದೆ ಉದ್ಯೋಗಿ ಪಾಲಿನ ಇಪಿಎಫ್ ಕೊಡುಗೆಗೆ ಸಿಗುತ್ತಿದ್ದ ತೆರಿಗೆ ಅನುಕೂಲ ಕೂಡ ವಾಪಸ್ ಆಗುತ್ತದೆ. ಇನ್ನೂ ಕೆಲವರ ಪ್ರಶ್ನೆ ಹೇಗಿರುತ್ತದೆ ಅಂದರೆ, 61 ವರ್ಷದ ವ್ತಕ್ತಿಯೊಬ್ಬರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು ಅಂತಿಟ್ಟುಕೊಳ್ಳಿ. 5 ವರ್ಷದ ಸೇವಾವಧಿ ಪೂರ್ಣಗೊಳಿಸಿರುವುದಿಲ್ಲ. ಆಗಲೂ ತೆರಿಗೆ ಬೀಳುತ್ತದಾ?

 

ಹೌದು, ಈ ವಿಚಾರದಲ್ಲಿ ಐದು ವರ್ಷದ ಸೇವಾವಧಿ ಎಂಬುದು ಮುಖ್ಯ ಆಗುತ್ತದೆಯೇ ವಿನಾ ವಯಸ್ಸಲ್ಲ.

ಈ ಹಿಂದಿನ ಸೇವಾವಧಿ ಸಹ ಗಣನೆಗೆ

ಈ ಹಿಂದಿನ ಸೇವಾವಧಿ ಸಹ ಗಣನೆಗೆ

ಇನ್ನೂ ಒಂದು ಸಂದರ್ಭ ಇದೆ. ಒಂದೇ ಸಂಸ್ಥೆಯಲ್ಲಿ ಐದು ವರ್ಷದ ಸೇವಾವಧಿಯನ್ನು ಪೂರೈಸಿರುವುದಿಲ್ಲ. ಆದರೆ ಈ ಹಿಂದೆ ಕೆಲಸ ಮಾಡುತ್ತಿದ್ದ ಅವಧಿ ಹಾಗೂ ಈಗ ಕೆಲಸ ಮಾಡುತ್ತಿರುವುದು ಸೇರಿ ಒಟ್ಟಾರೆಯಾಗಿ ಐದು ವರ್ಷ ದಾಟಿದಲ್ಲಿ ಆಗ ತೆರಿಗೆಯಿಂದ ವಿನಾಯಿತಿ ಸಿಗುತ್ತದೆ. ತೆರಿಗೆ ಮೊತ್ತ ವರ್ಗಾವಣೆ ಮಾಡುವುದನ್ನು ಹೊರತುಪಡಿಸಿದಂತೆ ವಿನಾಯಿತಿ ಸಿಗುವ ಬೇರೆ ಸನ್ನಿವೇಶಗಳು ಸಹ ಇವೆ. ಅದು ಯಾವಾಗ ಅಂದರೆ, ಉದ್ಯೋಗಿಯ ಅನಾರೋಗ್ಯ ಕಾರಣಕ್ಕೆ ಕೆಲಸದಿಂದ ತೆಗೆದಲ್ಲಿ ಅಥವಾ ಯಾವುದಾದರೂ ಕಾರಣದಿಂದ ಉದ್ಯೋಗದಾತರಿಗೆ ಆ ಉದ್ಯಮ ಅಥವಾ ವ್ಯವಹಾರ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗದಿದ್ದಲ್ಲಿ ಆಗ ನಿಯಮ ಅನ್ವಯಿಸಲ್ಲ. ಇನ್ನು ಹಳೇ ಸಂಸ್ಥೆಯಿಂದ ಹೊಸದಕ್ಕೆ ಇಪಿಎಫ್ ಖಾತೆಯನ್ನು ವರ್ಗಾವಣೆ ಮಾಡಿಸಿಕೊಂಡಾಗ ಈ ಹಿಂದಿನ ಸೇವಾವಧಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಐದು ವರ್ಷದೊಳಗೆ ಕೆಲಸ ಬಿಟ್ಟರೂ ತೆರಿಗೆ ಬೀಳಲ್ಲ ಯಾವಾಗ?

ಐದು ವರ್ಷದೊಳಗೆ ಕೆಲಸ ಬಿಟ್ಟರೂ ತೆರಿಗೆ ಬೀಳಲ್ಲ ಯಾವಾಗ?

ಆದರೆ, ಐದು ವರ್ಷಕ್ಕಿಂತ ಕಡಿಮೆ ಅವಧಿ ಕಾರ್ಯ ನಿರ್ವಹಿಸಿದ್ದರೂ ತೆರಿಗೆಯಿಂದ ವಿನಾಯಿತಿ ದೊರೆಯುವ ಕೆಲ ಸನ್ನಿವೇಶ ಇದೆ. ಖಾಸಗಿ ವಲಯದಲ್ಲಿ ಉದ್ಯೋಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅಂತಲ್ಲಿ ಕಾನೂನು ಪ್ರಕಾರ, ನಿವೃತ್ತಿ ವಯೋಮಿತಿ ಇಲ್ಲ. ಆದಾಯ ತೆರಿಗೆ ಕಾಯ್ದೆ ಪ್ರಕಾರ, ರೆಕಗ್ನೈಸ್ಡ್ ಪ್ರಾವಿಡೆಂಟ್ ಫಂಡ್ ನಿಂದ ವಿಥ್ ಡ್ರಾ ಮಾಡಿದ ಮೊತ್ತಕ್ಕೆ ವಿನಾಯಿತಿ ಸಿಗುತ್ತದೆ. ಅಂಥ ಸನ್ನಿವೇಶದಲ್ಲಿ ಉದ್ಯೋಗಿಯು ಐದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದರೂ ಆಗ ತೆರಿಗೆ ಬೀಳುವುದಿಲ್ಲ. ಇನ್ನು ಉದ್ಯೋಗಿಯ ಅನಾರೋಗ್ಯ ಕಾರಣ ನೀಡಿ, ಕೆಲಸದಿಂದ ತೆಗೆದರೆ ಹಾಗೂ ಉದ್ಯೋಗದಾತರ ವ್ಯಾಪಾರ- ಉದ್ಯಮದ ಪ್ರಮಾಣ ಕುಗ್ಗಿಸಲು ಅಥವಾ ನಿಲ್ಲಿಸಲು ನಿರ್ಧರಿಸಿದ ನಂತರ ಕೆಲಸದಿಂದ ತೆಗೆದಲ್ಲಿ ತೆರಿಗೆ ಹಾಕುವುದಿಲ್ಲ.

ಕೇಂದ್ರ ಸರ್ಕಾರದ ಅಧಿಸೂಚನೆ
 

ಕೇಂದ್ರ ಸರ್ಕಾರದ ಅಧಿಸೂಚನೆ

ಈಗಿನ ಸಂಸ್ಥೆಯಲ್ಲಿ ಇರುವ ರೆಕಗ್ನೈಸ್ಡ್ ಪ್ರಾವಿಡೆಂಟ್ ಫಂಡ್ ನಿಂದ ಮೊತ್ತವನ್ನು ಮತ್ತೊಂದು ಅದೇ ರೀತಿ ಖಾತೆಗೆ ವರ್ಗಾವಣೆ ಮಾಡಿದಲ್ಲಿ ಮತ್ತು ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ ಮತ್ತು ಸೆಕ್ಷನ್ 80CCD ಅಡಿಯಲ್ಲಿ ಪೆನ್ಷನ್ ಯೋಜನೆಯಲ್ಲಿ ಉದ್ಯೋಗಿಯ ಖಾತೆಗೆ ಹಣ ಜಮೆಯಾದರೆ ಆಗಲೂ ತೆರಿಗೆ ಬೀಳುವುದಿಲ್ಲ. ಒಬ್ಬ ವ್ಯಕ್ತಿಯ ವಯಸ್ಸು 61 ವರ್ಷವೇ ದಾಟಿರಬಹುದು. ಆದರೆ ಈ ನಿಯಮಗಳ ಪೈಕಿ ಯಾವುದಾದರೂ ಒಂದು ಪೂರ್ಣಗೊಳಿಸುತ್ತಿದ್ದಲ್ಲಿ ಮಾತ್ರ ಇದು ವರ್ಷದೊಳಗೆ ಕೆಲಸ ಬಿಟ್ಟು, ಪಿಎಫ್ ಹಣವನ್ನು ವಿಥ್ ಡ್ರಾ ಮಾಡಿದರೂ ತೆರಿಗೆ ಬೀಳುವುದಿಲ್ಲ.

English summary

PF Withdrawal Without Completing 5 Years Of Service: How It Is Taxable?

Here is the income tax rules for PF amount withdrawn less than 5 years of service.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X