For Quick Alerts
ALLOW NOTIFICATIONS  
For Daily Alerts

Republic Day offers: ಕ್ಯಾಶ್‌ಬ್ಯಾಕ್‌ಗಾಗಿ ಇಲ್ಲಿ ಶಾಪಿಂಗ್‌ ಮಾಡಿ

|

ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್ ಶಾಪಿಂಗ್ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಈಗ, ಆನ್‌ಲೈನ್ ಶಾಪಿಂಗ್ ಬಟ್ಟೆಗೆ ಸೀಮಿತವಾಗಿಲ್ಲ. ಇದು ದಿನಸಿ ಮತ್ತು ಎಲೆಕ್ಟ್ರಾನಿಕ್ಸ್‌ನಿಂದ ಔಷಧೀಯ ಉತ್ಪನ್ನಗಳವರೆಗೂ ವಿಸ್ತಾರವಾಗಿದೆ.

 

ರಿಯಾಯಿತಿ ದರದಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಜನರು ಹೆಚ್ಚಾಗಿ ಬಯಸುತ್ತಾರೆ. ಆಫರ್‌ಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳು ಗಣರಾಜ್ಯ ದಿನದ ಮಾರಾಟದ ಕೊಡುಗೆಗಳನ್ನು ನೀಡುತ್ತಿದೆ. ನಮ್ಮ ಆನ್‌ಲೈನ್ ಶಾಪಿಂಗ್ ಮಾರ್ಗವನ್ನು ಹೆಚ್ಚು ಲಾಭದಾಯಕವಾಗಿಸುವ ಐದು ಅತ್ಯುತ್ತಮ ಕ್ಯಾಶ್‌ಬ್ಯಾಕ್ ಅಪ್ಲಿಕೇಶನ್‌ಗಳು ಇಲ್ಲಿವೆ! ಮುಂದೆ ಓದಿ.

ಜ.21: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು?

ಹೆಚ್ಚುವರಿ ಕ್ಯಾಶ್‌ಬ್ಯಾಕ್ ಗಳಿಸಲು, ಕೆಳಗೆ ಪಟ್ಟಿ ಮಾಡಲಾದ ಕ್ಯಾಶ್‌ಬ್ಯಾಕ್ ಅಪ್ಲಿಕೇಶನ್‌ಗಳೊಂದಿಗೆ ನೀವು ಖಾತೆಯನ್ನು ರಚಿಸುವ ಅಗತ್ಯವಾಗಿದೆ. ಈ ಆಪ್‌ಗಳಲ್ಲಿ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ನೀವು ಆನ್‌ಲೈನ್ ಶಾಪಿಂಗ್ ಸೈಟ್ ಅಥವಾ ಅಮೆಜಾನ್‌ ಅಥವಾ ಮಿಂತ್ರಾದಂತಹ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಎಂದಿನಂತೆ ಶಾಪಿಂಗ್‌ ಮಾಡಬಹುದು. ನೀವು ಯಾವುದೇ ಆಪ್‌ಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ಮಾಡುವಾಗ ಜಾಗರೂಕರಾಗಿರುವುದು ಕೂಡಾ ಮುಖ್ಯ. ಹಾಗಾದರೆ ಯಾವೆಲ್ಲಾ ಅಪ್ಲಿಕೇಶನ್‌ಗಳು ಆನ್‌ಲೈನ್‌ ಮೂಲಕ ಶಾಪಿಂಗ್‌ ಮಾಡುವವರಿಗೆ ಕ್ಯಾಶ್‌ಬ್ಯಾಕ್‌ ಆಫರ್‌ ಅನ್ನು ನೀಡುತ್ತದೆ ಎಂದು ತಿಳಿಯಲು ಮುಂದೆ ಓದಿ..

 ಕ್ಯಾಶ್‌ಕರೋ ಆಪ್‌

ಕ್ಯಾಶ್‌ಕರೋ ಆಪ್‌

ಕ್ಯಾಶ್‌ಕರೋ (CashKaro) ಆಪ್‌ ಅಮೆಜಾನ್‌, ಫ್ಲಿಫ್‌ಕಾರ್ಟ್, ಬಿಗ್‌ ಬಜಾರ್‌, ಜಾಬಾಂಗ್‌, ಮಿಂತ್ರಾ ಮತ್ತು 500 ಕ್ಕೂ ಹೆಚ್ಚು ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ನೀವು ಇಲ್ಲಿ ಶೇಕಡಾ 5 ರಿಂದ 10 ರಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್/ಬಹುಮಾನಗಳನ್ನು ಗಳಿಸಲು ಸಾಧ್ಯವಾಗಲಿದೆ. ಒಮ್ಮೆ ನೀವು ರೂ 250 ಅಥವಾ ಹೆಚ್ಚಿನ ಕ್ಯಾಶ್‌ಬ್ಯಾಕ್/ಬಹುಮಾನಗಳನ್ನು ಹೊಂದಿದ್ದರೆ, ನೀವು ಇದನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು ಅಥವಾ ಅಮೆಜಾನ್‌, ಫ್ಲಿಫ್‌ಕಾರ್ಟ್ ಗಿಫ್ಟ್ ಕಾರ್ಡ್‌ಗಳಾಗಿ ಪಡೆಯಬಹುದು.

ಎಲ್‌ಪಿಜಿ ಸಿಲಿಂಡರ್‌ ಬುಕ್‌‌ ಮಾಡಿ ಬಂಪರ್ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?

 ಕೂಪನ್‌ದುನಿಯಾಗೆ ಲಾಗಿನ್‌ ಆಗಿ

ಕೂಪನ್‌ದುನಿಯಾಗೆ ಲಾಗಿನ್‌ ಆಗಿ

ಕೂಪನ್‌ದುನಿಯಾ (CouponDunia) ಅಮೆಜಾನ್‌, ಫ್ಲಿಫ್‌ಕಾರ್ಟ್, ಮೇಕ್‌ಮೈಟ್ರಿಪ್‌, ಪೇಟಿಎಂ, ಬುಕ್‌ಮೈಶೋ ಮತ್ತು 2000 ಕ್ಕೂ ಹೆಚ್ಚು ಆನ್‌ಲೈನ್ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ನೀವು ಇಲ್ಲಿ ಶೇಕಡಾ 2 ರಿಂದ 12 ರಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್/ಬಹುಮಾನಗಳನ್ನು ಗಳಿಸಲು ಸಾಧ್ಯವಿದೆ. ಒಮ್ಮೆ ನೀವು ರೂ 250 ಅಥವಾ ಹೆಚ್ಚಿನ ಕ್ಯಾಶ್‌ಬ್ಯಾಕ್ ಪಡೆದರೆ ನೀವು ಅದನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು ಅಥವಾ ಮೊಬೈಲ್ ರೀಚಾರ್ಜ್‌ಗಾಗಿ ಬಳಸಬಹುದು. ಪೇಟಿಎಂ ವ್ಯಾಲೆಟ್‌ಗೆ ವರ್ಗಾವಣೆ ಮಾಡಿಕೊಳ್ಳಬಹುದು ಅಥವಾ ಅಮೆಜಾನ್‌, ಫ್ಲಿಫ್‌ಕಾರ್ಟ್ ವೋಚರ್‌ಗಳಾಗಿ ಪಡೆಯಬಹುದು.

 ಗೋಪೈಸಾ ಬಳಸಿ: ಕ್ಯಾಶ್‌ಬ್ಯಾಕ್‌ನಿಂದ ರಿಚಾರ್ಜ್ ಮಾಡಿ
 

ಗೋಪೈಸಾ ಬಳಸಿ: ಕ್ಯಾಶ್‌ಬ್ಯಾಕ್‌ನಿಂದ ರಿಚಾರ್ಜ್ ಮಾಡಿ

ಗೋಪೈಸಾ (GoPaisa) ಅಮೆಜಾನ್‌, ಫ್ಲಿಫ್‌ಕಾರ್ಟ್, ಜಾಬಾಂಗ್‌, ಲೆನ್ಸ್‌ಕಾರ್ಟ್, ಮೇಕ್‌ಮೈಟ್ರಿಪ್‌, ಟಾಟಾ ಕ್ಲಿಕ್, ಯಾತ್ರಾ ಮತ್ತು 1000 ಕ್ಕೂ ಹೆಚ್ಚು ಆನ್‌ಲೈನ್ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಇದರಲ್ಲಿ ಪ್ರೋಮೋ ಕೋಡ್‌ಗಳು, ಕೂಪನ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳು ಲಭ್ಯವಿದೆ. ನೀವು ಶೇಕಡಾ 2 ರಿಂದ 15 ರಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್/ಬಹುಮಾನಗಳನ್ನು ಗಳಿಸಬಹುದು. ಪ್ರಿಪೇಯ್ಡ್ ಮೊಬೈಲ್ ಸಂಖ್ಯೆ ಅಥವಾ ಡಿಟಿಎಚ್‌ಗೆ ರೀಚಾರ್ಜ್ ಮಾಡಲು ಅಥವಾ ವಿದ್ಯುತ್, ನೀರು ಇತ್ಯಾದಿಗಳಿಗೆ ಬಿಲ್‌ಗಳನ್ನು ಪಾವತಿಸಲು ಇದನ್ನು ಬಳಕೆ ಮಾಡಬಹುದು. ಪಾಲುದಾರ ವೆಬ್‌ಸೈಟ್‌ಗಳಲ್ಲಿ ಪಾವತಿಗಳನ್ನು ಮಾಡಲು ನೀವು ಕ್ಯಾಶ್‌ಬ್ಯಾಕ್ ಮೊತ್ತದಿಂದ ವಿನಾಯಿತಿಯನ್ನು ಪಡೆದುಕೊಳ್ಳಬಹುದು. ಇದಲ್ಲದೆ, ಬ್ಯಾಂಕ್ ಖಾತೆ ವರ್ಗಾವಣೆಯ ಆಯ್ಕೆ ಇದೆ.

 ಲಫಲಾಫ ಮೊಬೈಲ್ ಅಪ್ಲಿಕೇಶನ್

ಲಫಲಾಫ ಮೊಬೈಲ್ ಅಪ್ಲಿಕೇಶನ್

ಲಫಲಾಫ (Lafalafa) ಮೊಬೈಲ್ ಅಪ್ಲಿಕೇಶನ್ ಕೂಪನ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಅಗ್ರಿಗೇಟರ್ ಆಗಿದೆ. ಅಮೆಜಾನ್‌, ಫ್ಲಿಫ್‌ಕಾರ್ಟ್, ಜಾಬಾಂಗ್‌, ಪೇಟಿಎಂ, ಮಿಂತ್ರಾ, ಫಸ್ಟ್‌ಕ್ರೈ, ಇತ್ಯಾದಿಗಳನ್ನು ಒಳಗೊಂಡಿರುವ 500 ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಇದು ಕೂಪನ್‌ಗಳನ್ನು ನೀಡುತ್ತದೆ. ಪಾಲುದಾರ ವ್ಯಾಪಾರಿಗಳಿಂದ ನೀವು 50 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಗಳಿಸಬಹುದು.

 ಜಿಂಗೊಯ್: ಆನ್‌ಲೈನ್‌ ಶಾಪಿಂಗ್‌

ಜಿಂಗೊಯ್: ಆನ್‌ಲೈನ್‌ ಶಾಪಿಂಗ್‌

ಜಿಂಗೊಯ್ (Zingoy) ದೈನಂದಿನ ಶಾಪಿಂಗ್ ಅಗತ್ಯತೆಗಳ ಮೇಲೆ ಕ್ಯಾಶ್‌ಬ್ಯಾಕ್ ನೀಡುತ್ತದೆ ಮತ್ತು ಅಮೆಜಾನ್‌, ಫ್ಲಿಫ್‌ಕಾರ್ಟ್, ಮಿಂತ್ರಾ, ಆಜಿಯೋ, ಕ್ರೋಮಾ, ಫಾರ್ಮಸಿ ಮುಂತಾದ 500 ಕ್ಕೂ ಹೆಚ್ಚು ನೋಂದಾಯಿತ ವ್ಯಾಪಾರಿಗಳಿಂದ ವಿಶೇಷ ಮಾರಾಟಗಳನ್ನು ನೀಡುತ್ತದೆ. ಪಾಲುದಾರ ವ್ಯಾಪಾರಿಗಳಿಂದ ನೀವು 28.5 ಪ್ರತಿಶತದಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಗಳಿಸಲು ಸಾಧ್ಯವಿದೆ. ನಿಮ್ಮ ರೆಫರಲ್ ಸೈನ್ ಅಪ್ ಮಾಡಿದಾಗ ಮತ್ತು ಪ್ರತಿ ಬಾರಿ ಶಾಪಿಂಗ್ ಮಾಡುವಾಗ ನೀವು ಮರುಪಾವತಿಯನ್ನು ಪಡೆಯುತ್ತೀರಿ. ಕನಿಷ್ಠ ರೂ. 250 ಕ್ಯಾಶ್‌ಬ್ಯಾಕ್‌ ಆಗಿದೆ. ವೋಚರ್‌ಗಳಿಂದ ಗಳಿಸಿದ ಕ್ಯಾಶ್‌ಬ್ಯಾಕ್ ಅನ್ನು ಇತರ ಗಳಿಕೆಗಳಂತೆಯೇ ಕ್ಲೈಮ್ ಮಾಡಬಹುದು.

English summary

Plan to shop from Online this Republic Day?, Use these apps for cashbacks

Plan to shop from Online this Republic Day?, Use these apps for cashbacks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X