For Quick Alerts
ALLOW NOTIFICATIONS  
For Daily Alerts

ಪಿಪಿಎಫ್ ಹಾಗೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ ಸಾಧ್ಯತೆ

|

ಮುಂಬರುವ ದಿನಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ಹಾಗೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

 

ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸಣ್ಣ ಉಳಿತಾಯ ದರಗಳಲ್ಲಿ ಸ್ವಲ್ಪ ಮಿತವಾಗಿರಬಹುದು ಎಂಬ ಸುಳಿವನ್ನು ನೀಡಿದ್ದಾರೆ. ಜನವರಿಯಿಂದ ಮಾರ್ಚ್‌ವರೆಗೆ ಈ ತ್ರೈಮಾಸಿಕದಲ್ಲಿ ಬ್ಯಾಂಕ್ ಠೇವಣಿಗಳನ್ನು ಮಧ್ಯಮಗೊಳಿಸಿದರೂ, ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಬಡ್ಡಿದರಗಳನ್ನು ಸರ್ಕಾರ ಸ್ಥಿರವಾಗಿರಿಸಿಕೊಂಡಿತ್ತು. ಆದರೆ ಕೆಲವು ಸಣ್ಣ ಬ್ಯಾಂಕರ್‌ಗಳು ಸಣ್ಣ ಉಳಿತಾಯ ಯೋಜನೆಗಳಲ್ಲಿ ಠೇವಣಿ ಹೆಚ್ಚಿರುವುದರಿಂದ ಬಡ್ಡಿ ದರಗಳನ್ನು ತಕ್ಷಣವೇ ಕಡಿತಗೊಳಿಸುವುದನ್ನು ನಿಷೇಧಿಸುತ್ತೇವೆ ಎಂದು ಹೇಳಿಕೊಂಡಿವೆ.

ಪಿಪಿಎಫ್ ಹಾಗೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ ಸಾಧ್ಯತೆ

'' ಭಾರತದಲ್ಲಿ ಇದೀಗ ನಾವು ಸಣ್ಣ ಉಳಿತಾಯ ಯೋಜನೆಗಳಲ್ಲಿ 12 ಲಕ್ಷ ಕೋಟಿ ರುಪಾಯಿ ಮತ್ತು ಬ್ಯಾಂಕುಗಳಲ್ಲಿ ಸರಿಸುಮಾರು 114 ಲಕ್ಷ ಕೋಟಿ ರುಪಾಯಿಯನ್ನು ಹೊಂದಿದ್ದೇವೆ. ಆದ್ದರಿಂದ ಬ್ಯಾಂಕುಗಳ ಹೊಣೆಗಾರಿಕೆಯ ಭಾಗವು 12 ಲಕ್ಷ ಕೋಟಿಯಿಂದ ಪ್ರಭಾವಿತವಾಗುತ್ತದೆ ''ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅತಾನು ಚಕ್ರವರ್ತಿ ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು 10 ಕಾರಣ

ಪ್ರಸ್ತುತ, ಪಿಪಿಎಫ್ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಅಥವಾ ಎನ್‌ಎಸ್‌ಸಿ ವಾರ್ಷಿಕವಾಗಿ 7.9 ಪರ್ಸೆಂಟ್ ಬಡ್ಡಿದರವನ್ನು ಹೊಂದಿವೆ. ಆದರೆ 5 ವರ್ಷದ ಎಸ್‌ಬಿಐ ಫಿಕ್ಸೆಡ್ ಡೆಪಾಸಿಟ್‌ಗೆ ಹೋಲಿಸಿದರೆ ಕೇವಲ 6.1 ಪರ್ಸೆಂಟ್ ನಷ್ಟಿದೆ. ಸುಕನ್ಯಾ ಸಮೃದ್ಧಿ ಖಾತೆ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ, ಇತರ ಸಣ್ಣ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿನ ದರವನ್ನು ನೀಡುತ್ತದೆ. ಹೆಣ್ಣು ಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿ ಖಾತೆಯು 8.4 ಪರ್ಸೆಂಟ್ ವಾರ್ಷಿಕವಾಗಿ ಸಂಯೋಜಿಸಲ್ಪಟ್ಟಿದೆ. ಐದು ವರ್ಷಗಳ ಹಿರಿಯ ನಾಗರೀಕರ ಉಳಿತಾಯ ಯೋಜನೆ 8.6 ಪರ್ಸೆಂಟ್ ಬಡ್ಡಿದರವನ್ನು ನೀಡುತ್ತದೆ.

ಏಪ್ರಿಲ್ 2016 ರಿಂದ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತಿದೆ. ಆದಾಗ್ಯೂ, ಶ್ಯಾಮಲಾ ಗೋಪಿನಾಥ್ ಸಮಿತಿಯು ಶಿಫಾರಸು ಮಾಡಿದಂತೆ ಸರ್ಕಾರಿ ಭದ್ರತೆಗಳ ಮೇಲೆ ಹೋಲಿಸಬಹುದಾದ ಇಳುವರಿಯನ್ನು ಆಧರಿಸಿ ಸಣ್ಣ ಉಳಿತಾಯ ದರಗಳನ್ನು ನಿಗದಿಪಡಿಸುವ ಈ ಸೂತ್ರವನ್ನು ಕೆಲವು ಭಾಗಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗಿಲ್ಲ.

English summary

PPF And Other Small Saving Schmes Interest May Come Down

A top government official has hinted that there could be some moderation in PPF and small savings rates
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X