For Quick Alerts
ALLOW NOTIFICATIONS  
For Daily Alerts

PPF: ದಿನಕ್ಕೆ 70 ರೂಪಾಯಿ, ತಿಂಗಳಿಗೆ 2000 ರೂಪಾಯಿ ಹೂಡಿಕೆ: 6.50 ಲಕ್ಷ ರೂ. ರಿಟರ್ನ್

|

ಸಾರ್ವಜನಿಕ ಭವಿಷ್ಯ ನಿಧಿ ಖಾತೆ (ಪಿಪಿಎಫ್) ದೇಶದಲ್ಲಿ ತೆರಿಗೆ ಉಳಿತಾಯಕ್ಕೆ ಮತ್ತು ಹಣ ಹೂಡಿಕೆಗಾಗಿ ಬಹಳ ಜನಪ್ರಿಯವಾಗಿದೆ. ಸಾಮಾನ್ಯವಾಗಿ ಜನರು ಆದಾಯ ತೆರಿಗೆ ಉಳಿಸಲು ಮತ್ತು ದೊಡ್ಡ ಹೂಡಿಕೆಯನ್ನ ನಿರ್ಮಿಸಲು ಇಲ್ಲಿ ಹೂಡಿಕೆ ಮಾಡುತ್ತಾರೆ.

 

ಪಿಪಿಎಫ್‌ನಲ್ಲಿ ಮಾಡಬಹುದಾದ ಗರಿಷ್ಠ ಹೂಡಿಕೆ ವಾರ್ಷಿಕವಾಗಿ 1.5 ಲಕ್ಷ ರೂ. ಆಗಿದೆ. ವರ್ಷಕ್ಕೆ 12 ಬಾರಿ ಹೂಡಿಕೆ ಮಾಡುವ ಅವಕಾಶವಿದೆ. ಅದರಲ್ಲೂ ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ರಿಟರ್ನ್‌ ಪಡೆಯಬಹುದು. ಅದರಲ್ಲೂ ಪಿಪಿಎಫ್ ಎಲ್ಲರ ನೆಚ್ಚಿನ ಹೂಡಿಕೆ ಆಗಿದೆ.

ಪಿಪಿಎಫ್ ಎಂದರೇನು?

ಪಿಪಿಎಫ್ ಎಂದರೇನು?

ಪಿಪಿಎಫ್ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತದೆ, ಆದ್ದರಿಂದ ಪಿಪಿಎಫ್ ಖಾತೆಯಲ್ಲಿರುವ ಹಣ ಮತ್ತು ಅದರ ಮೇಲೆ ಪಡೆದ ಹಣಕ್ಕೆ ಖಾತರಿ ನೀಡಲಾಗುತ್ತದೆ. ಪಿಪಿಎಫ್ ನ ಮುಕ್ತಾಯ ಅವಧಿ 15 ವರ್ಷಗಳು. ಇದರೊಂದಿಗೆ, ನೀವು ದಿನಕ್ಕೆ ಸುಮಾರು 70 ರೂಪಾಯಿಗಳನ್ನು ಜಮಾ ಮಾಡುವ ಮೂಲಕ ಲಕ್ಷ ರೂಪಾಯಿಗಳ ನಿಧಿಯನ್ನು ರಚಿಸಬಹುದು.

ದಿನಕ್ಕೆ 70 ರೂಪಾಯಿ ಉಳಿಸಿ, ತಿಂಗಳಿಗೆ 2000 ರೂಪಾಯಿ ಹೂಡಿಕೆ ಮಾಡಿ

ದಿನಕ್ಕೆ 70 ರೂಪಾಯಿ ಉಳಿಸಿ, ತಿಂಗಳಿಗೆ 2000 ರೂಪಾಯಿ ಹೂಡಿಕೆ ಮಾಡಿ

ನೀವು ಪ್ರತಿ ತಿಂಗಳು 2000 ರೂಪಾಯಿಗಳನ್ನು PPF ನಲ್ಲಿ ಅಂದರೆ ದಿನಕ್ಕೆ ಸುಮಾರು 70 ರೂ.ಗಳಂತೆ ಉಳಿಸಿ ಠೇವಣಿ ಮಾಡಿದರೆ, ಆ ವರ್ಷದ ಹೂಡಿಕೆಯು 24,000 ರೂ. ಆಗುತ್ತದೆ. ಇದು 15 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ ಮೊತ್ತವು 3.60 ಲಕ್ಷ ರೂ. ತಲುಪುತ್ತದೆ. ಪ್ರಸ್ತುತ ಬಡ್ಡಿ ದರದಲ್ಲಿ (ಶೇಕಡಾ 7.1) ಈ ರೀತಿಯಾಗಿ ನೀವು 15 ವರ್ಷಗಳ ನಂತರ 6.50 ಲಕ್ಷ ರೂ.ಗಳ ಒಟ್ಟು ಮೊತ್ತವನ್ನು ಪಡೆಯುತ್ತೀರಿ.

ಓರ್ವ ಸಾಮಾನ್ಯ ವ್ಯಕ್ತಿ ಕೋಟ್ಯಧಿಪತಿ ಆಗಲು ಏನು ಮಾಡ್ಬೇಕು?

7.1 ರಷ್ಟು ಬಡ್ಡಿದರ
 

7.1 ರಷ್ಟು ಬಡ್ಡಿದರ

ಅಂಚೆ ಕಚೇರಿ ಯೋಜನೆಗಳ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲಿಸಲಾಗುತ್ತದೆ. ಅಂದರೆ, ಪ್ರತಿ ತ್ರೈಮಾಸಿಕದಲ್ಲಿ ಅವುಗಳನ್ನು ಬದಲಾಯಿಸಲು ಸಾಧ್ಯವಿದೆ. ಆದಾಗ್ಯೂ, ಕಳೆದ ಹಲವು ತ್ರೈಮಾಸಿಕಗಳಲ್ಲಿ ಅಂಚೆ ಕಚೇರಿ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಿಪಿಎಫ್‌ನಲ್ಲಿ ಪ್ರತಿ ತಿಂಗಳು 2000 ರೂ.ಗಳನ್ನು ಹೂಡಿಕೆ ಮಾಡಿದರೆ ಮತ್ತು ಬಡ್ಡಿದರಗಳು ಹೆಚ್ಚಾದರೆ ಆತನ ಮೆಚ್ಯೂರಿಟಿ ಮೊತ್ತವು ಹೆಚ್ಚಾಗುತ್ತದೆ.

ಅವಧಿಗೂ ಮುನ್ನ ಹಣ ಪಡೆಯಬಹುದು

ಅವಧಿಗೂ ಮುನ್ನ ಹಣ ಪಡೆಯಬಹುದು

ಅಂದಹಾಗೆ, ಪಿಪಿಎಫ್‌ನಲ್ಲಿ ಮೆಚ್ಯೂರಿಟಿ ಅವಧಿ 15 ವರ್ಷಗಳು. ಆದರೆ ನೀವು ಬಯಸಿದಲ್ಲಿ ಮೆಚ್ಯೂರಿಟಿ ಅವಧಿಗೆ ಮುನ್ನ ಖಾತೆಯಿಂದ ಹಣ ತೆಗೆಯಲು ಕೆಲವು ಷರತ್ತುಗಳಿವೆ. ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ, ಪಿಪಿಎಫ್ ಖಾತೆದಾರರು ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಖಾತೆದಾರರು, ಅವನ/ಅವಳ ಸಂಗಾತಿ, ಅಥವಾ ಯಾವುದೇ ಅವಲಂಬಿತ (ಪೋಷಕರು ಅಥವಾ ಮಗು) ಕೂಡ ಯಾವುದೇ ಗಂಭೀರ ಅನಾರೋಗ್ಯದ ಹಿಡಿತದಲ್ಲಿ ಬಿದ್ದರೆ ಹಣವನ್ನು ಹಿಂಪಡೆಯಲು ಅನುಮತಿಸಲಾಗುತ್ತದೆ. ಪಿಪಿಎಫ್ ಖಾತೆಯನ್ನು ಅಕಾಲಿಕವಾಗಿ ಮುಚ್ಚಲು ಸಹ ಖಾತೆದಾರನಿಗೆ ತನ್ನ ಅಥವಾ ಆತನ ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣದ ಅಗತ್ಯವಿದ್ದಾಗ ಅನುಮತಿಸಲಾಗುತ್ತದೆ.

ಖಾತೆದಾರ ಮರಣ ಹೊಂದಿದರೆ ಏನು ಗತಿ?

ಖಾತೆದಾರ ಮರಣ ಹೊಂದಿದರೆ ಏನು ಗತಿ?

ಪಿಪಿಎಫ್ ಖಾತೆದಾರರ ಅಕಾಲಿಕ ಮರಣದ ಸಂದರ್ಭದಲ್ಲಿ, ನಾಮಿನಿ ಹಣವನ್ನು ಹಿಂಪಡೆಯಬಹುದು. ಹಣವನ್ನು ನಾಮಿನಿ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗೆ ನೀಡಲಾಗುತ್ತದೆ. ನಂತರ ಖಾತೆಯನ್ನು ಮುಂದುವರಿಸಲು ಅನುಮತಿಸಲಾಗುವುದಿಲ್ಲ.

ಯಾರು ಪಿಪಿಎಫ್ ಖಾತೆಯನ್ನು ತೆರೆಯಬಹುದು ?

ಯಾರು ಪಿಪಿಎಫ್ ಖಾತೆಯನ್ನು ತೆರೆಯಬಹುದು ?

ಯಾವುದೇ ಭಾರತೀಯ ಪ್ರಜೆ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಪಿಪಿಎಫ್ ಖಾತೆ ತೆರೆಯಲು ನಿಮಗೆ ಕನಿಷ್ಠ 500 ರೂ. ಬೇಕಾಗುತ್ತದೆ. ಪಿಪಿಎಫ್ ಖಾತೆಯನ್ನು ಕನಿಷ್ಠ 500 ರೂ. ಹಾಗೂ ಒಂದು ವರ್ಷದಲ್ಲಿ ಗರಿಷ್ಠ 1,50,000 ರೂಗಳನ್ನು ಪಿಪಿಎಫ್‌ನಲ್ಲಿ ಠೇವಣಿ ಇಡಬಹುದು. ಈ ಠೇವಣಿಯನ್ನು ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಅಂಚೆ ಕಚೇರಿಯ ಹೊರತಾಗಿ, ಪಿಪಿಎಫ್ ಖಾತೆಯನ್ನು ಬ್ಯಾಂಕ್ ಶಾಖೆಗಳಲ್ಲಿ ತೆರೆಯಬಹುದು.

English summary

PPF: Invest Rs 2000 Every Month And Get Rs 6.5 Lakh Return? Explained in Kannada

What is PPF? How to invest in PPF? and Learn how to invest Rs 2000 per month and get Rs 6.5 lakh return
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X