For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರಿಕರಿಗಾಗಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ, ಏನಿದೆ ಲಾಭ?

|

ಹಿರಿಯ ವಯಸ್ಕರಿಗಾಗಿಯೇ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯೇ ಪ್ರಧಾನ ಮಂತ್ರಿ ವಯ ವಂದನ ಯೋಜನೆ (ಪಿಎಂವಿವಿವೈ). ಈ ಯೋಜನೆಯಲ್ಲಿ 60 ವರ್ಷ ಹಾಗೂ ಅದಕ್ಕಿಂತ ಅಧಿಕ ವಯಸ್ಸಿನವರು ಕೇಂದ್ರ ಸರ್ಕಾರದ ಈ ಯೋಜನೆಯ ಲಾಭವನ್ನು ಪಡೆಯಬಹುದು.

 

ಕೇಂದ್ರ ಸರ್ಕಾರದ ಪರವಾಗಿ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಈ ಪ್ರಧಾನ ಮಂತ್ರಿ ವಯ ವಂದನ ಯೋಜನೆ (ಪಿಎಂವಿವಿವೈ) ಅನ್ನು ಹಿರಿಯ ನಾಗರಿಕರಿಗಾಗಿ ಮುಂದುವರಿಸುತ್ತಿದೆ. ಈ ಯೋಜನೆಯ ವಿಶೇಷತೆ ಎಂದರೆ ಈ ಯೋಜನೆಯಲ್ಲಿ ಈ ಸ್ಕೀಮ್‌ನ ಲಾಭವನ್ನು ಪಡೆಯಲು ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇಲ್ಲದಿರುವುದು ಆಗಿದೆ.

ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?

ಈ ಯೋಜನೆಯ ಟರ್ಮ್ ಹತ್ತು ವರ್ಷಗಳ ಕಾಲ ಇರುತ್ತದೆ. ಇನ್ನು ಈ ಯೋಜನೆಯಡಿ ಸ್ಕೀಮ್‌ ಅನ್ನು ಹಿರಿಯ ನಾಗರಿಕರಿಗೆ ಖರೀದಿ ಮಾಡುವಾಗ ಹದಿನೈದು ಲಕ್ಷಕ್ಕಿಂತ ಅಧಿಕ ಹಣವನ್ನು ಸ್ವೀಕಾರ ಮಾಡಲಾಗುವುದಿಲ್ಲ. ಈ ಯೋಜನೆಯು ಹಿರಿಯ ನಾಗರಿಕರ ಸಾವಿನ ಬಳಿಕ ಈ ಹಣವು ನಷ್ಟವಾಗುವುದಿಲ್ಲ.ಈ ಹಣವು ಕುಟುಂಬಸ್ಥರಿಗೆ ದೊರೆಯಲಿದೆ. ಹಾಗಾದರೆ ಈ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಏನೆಲ್ಲಾ ಪ್ರಯೋಜನಗಳು ಇದೆ, ಎಷ್ಟು ಪಿಂಚಣಿ ದೊರೆಯುತ್ತದೆ ಎಂದು ತಿಳಿಯಲು ಮುಂದೆ ಓದಿ.

 ಈ ಯೋಜನೆಯಲ್ಲಿ ಬಡ್ಡಿ ದರ ಎಷ್ಟು?

ಈ ಯೋಜನೆಯಲ್ಲಿ ಬಡ್ಡಿ ದರ ಎಷ್ಟು?

ಪ್ರಧಾನ ಮಂತ್ರಿ ವಯ ವಂದನ ಯೋಜನೆಯಲ್ಲಿ (ಪಿಎಂವಿವಿವೈ) ಸರ್ಕಾರವು ಶೇಕಡ 7.40 ಬಡ್ಡಿ ದರವನ್ನು ವಿಧಿಸುತ್ತದೆ ಎಂದು ಹೇಳಿದೆ. ಇದು ಪ್ರತಿ ತಿಂಗಳು ನೀಡಲಾಗುತ್ತದೆ. ನೀವು ಈ ಯೋಜನೆಯಲ್ಲಿ 10 ವರ್ಷಗಳ ಪಾಲಿಸಿ ಅವಧಿಗೆ ಖರೀದಿ ಮಾಡಿದ್ದರೆ, ನೀವು ಖರೀದಿ ಮಾಡಿದ ಸಂದರ್ಭದಲ್ಲಿ ಎಷ್ಟು ಬಡ್ಡಿ ದರ ಇದೆಯೋ ಅಷ್ಟೇ ಬಡ್ಡಿ ದರವು ಇರಲಿದೆ. ಬಳಿಕ ಬಡ್ಡಿ ದರ ಬದಲಾದರೂ ಕೂಡಾ ನೀವು ಖರೀದಿ ಮಾಡಿದಾಗ ಎಷ್ಟು ಬಡ್ಡಿ ದರ ಇತ್ತೋ ಅಷ್ಟೇ ಬಡ್ಡಿ ದರ ಇರಲಿದೆ. ಆದರೆ ಭಾರತ ಸರ್ಕಾರವು ಈ ಬಡ್ಡಿ ದರದಲ್ಲಿ ಬದಲಾವಣೆಯನ್ನು ತಂದಿದೆ. ಈ ಹಿಂದೆ ತಿಂಗಳಿಗೆ 8 ಶೇಕಡ ಬಡ್ಡಿಯನ್ನು ಯೋಜನೆದಾರರಿಗೆ ನೀಡಲಾಗುತ್ತಿತ್ತು. ಯೋಜನೆಯಲ್ಲಿ ಇರುವ ಬಡ್ಡಿ ದರವನ್ನೇ ಈಗ ಪಾವತಿ ಮಾಡಲಾಗುತ್ತಿದೆ. ಆದರೆ ಯೋಜನೆಯಲ್ಲಿ ಈ ಹಿಂದೆ ಇದ್ದ ಬಡ್ಡಿ ದರವನ್ನು ಇಳಿಕೆ ಮಾಡಲಾಗಿದೆ.

 ಕನಿಷ್ಠ ಮತ್ತು ಗರಿಷ್ಠ ಪಿಂಚಣಿ, ಖರೀದಿ ದರ ಎಷ್ಟು?

ಕನಿಷ್ಠ ಮತ್ತು ಗರಿಷ್ಠ ಪಿಂಚಣಿ, ಖರೀದಿ ದರ ಎಷ್ಟು?

ಕನಿಷ್ಠ ಪಿಂಚಣಿ: ತಿಂಗಳಿಗೆ 1000, ತ್ರೈಮಾಸಿಕ 3000, ಅರ್ಧವಾರ್ಷಿಕ 6000, ವಾರ್ಷಿಕ 12000

ಗರಿಷ್ಠ ಪಿಂಚಣಿ: ತಿಂಗಳಿಗೆ 9250, ತ್ರೈಮಾಸಿಕ 27750, ಅರ್ಧವಾರ್ಷಿಕ 555000, ವಾರ್ಷಿಕ 111000

ಕನಿಷ್ಠ ಖರೀದಿ ದರ: ತಿಂಗಳಿಗೆ 162162, ತ್ರೈಮಾಸಿಕ 161074, ಅರ್ಧವಾರ್ಷಿಕ 159574, ವಾರ್ಷಿಕ 156658

ಗರಿಷ್ಠ ಖರೀದಿ ದರ: ತಿಂಗಳಿಗೆ 1500000, ತ್ರೈಮಾಸಿಕ 1489933, ಅರ್ಧವಾರ್ಷಿಕ 1476064, ವಾರ್ಷಿಕ 1449086

ಭಾರತದ ಟಾಪ್‌ 7 ಗೋಲ್ಡ್‌ ಕಂಪನಿಗಳ ಸ್ಟಾಕ್‌ಗಳು, ಇಲ್ಲಿದೆ ಸಂಪೂರ್ಣ ಮಾಹಿತಿ..

 ಪಿಎಂವಿವಿವೈ ಪ್ರಯೋಜನಗಳು ಏನು?
 

ಪಿಎಂವಿವಿವೈ ಪ್ರಯೋಜನಗಳು ಏನು?

ನೀವು ನಿಮ್ಮ ಪಿಂಚಣಿಯನ್ನು ತಿಂಗಳು, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಡೆಯಬಹುದು. ನಿಮ್ಮ ಪಿಂಚಣಿಯ ಮೊದಲ ಪಾವತಿಯು ನೀವು ಯೋಜನೆಯನ್ನು ಖರೀದಿ ಮಾಡಿದ ಒಂದು ವರ್ಷ ಅಥವಾ ಆರು ತಿಂಗಳು ಅಥವಾ ಮೂರು ತಿಂಗಳು ಅಥವಾ ತಿಂಗಳ ನಂತರ ಪಡೆಯ ಬಹುದು. ಇದು ನೀವು ಆಯ್ಕೆ ಮಾಡಿರುವ ಪಾವತಿಯ ಮೇಲೆ ಅವಲಂಭಿತವಾಗಿರುತ್ತದೆ. ನಿಮ್ಮ ಈ ಯೋಜನೆಯ ಅವಧಿಯು ಹತ್ತು ವರ್ಷಗಳು ಆಗಿರುವಾಗ, ಸರ್ವವಲ್‌ ಬೆನಿಫಿಟ್‌ ಕೂಡಾ ನೀಡಲಾಗುತ್ತದೆ. ಇದು ನೀವು ಆಯ್ಕೆ ಮಾಡಿರುವ ಅವಧಿಯ ಆಧಾರದಲ್ಲಿ ಪಾವತಿ ಮಾಡಲಾಗುತ್ತದೆ. ಈ ಯೋಜನೆಯ ಕೊನೆಯಲ್ಲಿ ನೀವು ಖರೀದಿ ಮಾಡಿದ ಯೋಜನೆಯ ದರದೊಂದಿಗೆ ಕೊನೆಯ ಪಿಂಚಣಿಯನ್ನು ನಿಮಗೆ ನೀಡಲಾಗುತ್ತದೆ.

 ಯೋಜನೆದಾರರು ಸಾವನ್ನಪ್ಪಿದರೆ...?

ಯೋಜನೆದಾರರು ಸಾವನ್ನಪ್ಪಿದರೆ...?

ಇನ್ನು ಈ ಯೋಜನೆಯ ಅವಧಿಯಲ್ಲೇ ಯೋಜನೆದಾರರು ಸಾವನ್ನಪ್ಪಿದರೆ ಈ ಯೋಜನೆಯಲ್ಲಿ ಉಲ್ಲೇಖ ಮಾಡಲಾಗಿರುವ ಹಣವನ್ನು ಪಡೆಯಲಿದ್ದಾರೆ. ಸರ್ಕಾರವು, "ಒಂದು ವೇಳೆ ಯೋಜನೆದಾರರು ಯೋಜನೆಯ ಅವಧಿಯಲ್ಲೇ ಸಾವನ್ನಪ್ಪಿದರೆ ಕುಟುಂಬಸ್ಥರಿಗೆ ಈ ಪಿಂಚಣಿ ಹಣವನ್ನು ವಾಪಸ್‌ ನೀಡಲಾಗುತ್ತದೆ," ಎಂದು ತಿಳಿಸಿದೆ. ಭಾರತ ಸರ್ಕಾರದ ಪ್ರಕಾರ ಈ ಯೋಜನೆಯು ಮಾರ್ಚ್ 31, 2023 ರ ವರೆಗೆ ಮಾರಾಟ ಮಾಡಲಾಗುತ್ತದೆ.

English summary

Pradhan Mantri Vaya Vandana Yojana (PMVVY) For Senior Citizens - Eligibility and Benefits in Kannada

Pradhan Mantri Vaya Vandana Yojana (PMVVY) For Senior Citizens, By LIC. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X