ಎಫ್ಡಿ ಮೇಲಿನ ಮೂಲದರ, ಬಡ್ಡಿದರ ಹೆಚ್ಚಳ ಮಾಡಿದ ಎಸ್ಬಿಐ
ದೇಶದ ಸರ್ಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲ ದರ ಶೇಕಡ 0.10 ರಷ್ಟು ಅಥವಾ ಹತ್ತು ಬೇಸಿಸ್ ಪಾಯಿಂಟ್ (ಬಿಪಿಎಸ್) ರಷ್ಟು ಏರಿಕೆ ಮಾಡಿದೆ ಎಂದು ವೆಬ್ಸೈಟ್ನಲ್ಲಿ ಉಲ್ಲೇಖ ಮಾಡಿದೆ. ಈ ಹೊಸ ಮೂಲ ದರವು ಡಿಸೆಂಬರ್ 15, 2021 ರಿಂದ ಜಾರಿಗೆ ಬರಲಿದೆ, ವರ್ಷಕ್ಕೆ ಶೇಕಡ 7.55 ಮೂಲದರವಾಗಿದೆ.
ಈ ಹಿಂದೆ ಸೆಪ್ಟೆಂಬರ್ನಲ್ಲಿ ಬ್ಯಾಂಕ್ ಮೂಲ ದರವನ್ನು ಇಳಿಕೆ ಮಾಡಿದ್ದವು. ಐದು ಬೇಸಿಸ್ ಪಾಯಿಂಟ್ ರಷ್ಟು ಇಳಿಕೆ ಮಾಡಿದ್ದವು, ಅಂದರೆ ಈ ಹಿಂದೆ ಎಸ್ಬಿಐ ಫಿಕ್ಸಿಡ್ ಡೆಪಾಸಿಟ್ ಮೂಲ ದರವು ಶೇಕಡ 7.45 ಆಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಕನಿಷ್ಢ ಬಡ್ಡಿದರನ್ನು ಗೊತ್ತು ಮಾಡುತ್ತದೆ. ಬಳಿಕ ಎಲ್ಲಾ ಬ್ಯಾಂಕುಗಳು ಮೂಲದರವನ್ನು ನಿಗದಿ ಮಾಡುತ್ತದೆ. ಕೇಂದ್ರ ಬ್ಯಾಂಕು ನಿಗದಿ ಮಾಡಿದ್ದಕ್ಕಿಂತ ಕಡಿಮೆ ಮೂಲದರವನ್ನು ನಿಗದಿಪಡಿಸಲು ಯಾವುದೇ ಬ್ಯಾಂಕುಗಳಿಗೂ ಅವಕಾಶವಿಲ್ಲ.
ಡಿ.1ರಿಂದ ಎಸ್ಬಿಐ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟಿಗೆ ಶುಲ್ಕ
ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು ಕೂಡ ಏರಿಕೆ ಮಾಡಿದೆ. ಇದು ಕೂಡಾ ಡಿಸೆಂಬರ್ 15, 2021 ರಿಂದ ಜಾರಿಗೆ ಬರಲಿದೆ. ಈ ಹೊಸ ಬಡ್ಡಿ ದರವು ಹೊಸ ಫಿಕ್ಸಿಡ್ ಡೆಪಾಸಿಟ್ಗಳಿಗೆ ಮಾತ್ರವಲ್ಲದೇ ಈಗಾಗಲೇ ಮೆಚ್ಯೂರ್ ಆಗಿರುವ ಫಿಕ್ಸಿಡ್ ಡೆಪಾಸಿಟ್ ಅನ್ನು ರಿನೀವಲ್ ಮಾಡಿದರೆ ಅನ್ವಯ ಆಗಲಿದೆ. ಈ ಬಡ್ಡಿ ದರವು ಸ್ಥಳೀಯ ಟರ್ಮ್ ಡೆಪಾಸಿಟ್ಗೂ ಅನ್ವಯ ಆಗಲಿದೆ. ಹಾಗಾದರೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಹೊಸ ಬಡ್ಡಿ ದರ ಎಷ್ಟು, ಹೊಸ ಮೂಲ ದರ ಎಷ್ಟು ಎಂದು ತಿಳಿಯಲು ಮುಂದೆ ಓದಿ..

ಸಾಮಾನ್ಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಮೂಲ ದರ
7-45 ದಿನ: ಈ ಹಿಂದಿನ ಬಡ್ಡಿದರ ಶೇಕಡ 2.90, ಹೊಸ ಬಡ್ಡಿ ದರ ಶೇಕಡ 3.00
46-179 ದಿನ: ಈ ಹಿಂದಿನ ಬಡ್ಡಿದರ ಶೇಕಡ 2.90, ಹೊಸ ಬಡ್ಡಿ ದರ ಶೇಕಡ 3.00
180-210 ದಿನ: ಈ ಹಿಂದಿನ ಬಡ್ಡಿದರ ಶೇಕಡ 3.00, ಹೊಸ ಬಡ್ಡಿ ದರ ಶೇಕಡ 3.10
211 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 3.00, ಹೊಸ ಬಡ್ಡಿ ದರ ಶೇಕಡ 3.10
ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 3.00, ಹೊಸ ಬಡ್ಡಿ ದರ ಶೇಕಡ 3.10
ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 3.00, ಹೊಸ ಬಡ್ಡಿ ದರ ಶೇಕಡ 3.10
ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 3.00, ಹೊಸ ಬಡ್ಡಿ ದರ ಶೇಕಡ 3.10
ಐದು ವರ್ಷದಿಂದ ಹತ್ತು ವರ್ಷದವರೆಗೆ: ಹಿಂದಿನ ಬಡ್ಡಿದರ ಶೇಕಡ 3.00, ಹೊಸ ಬಡ್ಡಿ ದರ ಶೇಕಡ 3.10

ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಮೂಲ ದರ
7-45 ದಿನ: ಈ ಹಿಂದಿನ ಬಡ್ಡಿದರ ಶೇಕಡ 3.40, ಹೊಸ ಬಡ್ಡಿ ದರ ಶೇಕಡ 3.50
46-179 ದಿನ: ಈ ಹಿಂದಿನ ಬಡ್ಡಿದರ ಶೇಕಡ 3.40, ಹೊಸ ಬಡ್ಡಿ ದರ ಶೇಕಡ 3.50
180-210 ದಿನ: ಈ ಹಿಂದಿನ ಬಡ್ಡಿದರ ಶೇಕಡ 3.50, ಹೊಸ ಬಡ್ಡಿ ದರ ಶೇಕಡ 3.60
211 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 3.50, ಹೊಸ ಬಡ್ಡಿ ದರ ಶೇಕಡ 3.60
ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 3.50, ಹೊಸ ಬಡ್ಡಿ ದರ ಶೇಕಡ 3.60
ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 3.50, ಹೊಸ ಬಡ್ಡಿ ದರ ಶೇಕಡ 3.60
ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 3.50, ಹೊಸ ಬಡ್ಡಿ ದರ ಶೇಕಡ 3.60
ಐದು ವರ್ಷದಿಂದ ಹತ್ತು ವರ್ಷದವರೆಗೆ: ಹಿಂದಿನ ಬಡ್ಡಿದರ ಶೇಕಡ 3.50, ಹೊಸ ಬಡ್ಡಿ ದರ ಶೇಕಡ 3.60

ಸಾಮಾನ್ಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರ
2 ಕೋಟಿಗಿಂತ ಕಡಿಮೆ ಮೌಲ್ಯದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವು ಬದಲಾಗಿಲ್ಲ. ಆದರೆ ಎರಡು ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಅಧಿಕ ಮಾಡಲಾಗಿದೆ.
7-45 ದಿನ: ಈ ಹಿಂದಿನ ಬಡ್ಡಿದರ ಶೇಕಡ 2.90, ಹೊಸ ಬಡ್ಡಿ ದರ ಶೇಕಡ 2.90
46-179 ದಿನ: ಈ ಹಿಂದಿನ ಬಡ್ಡಿದರ ಶೇಕಡ 3.90, ಹೊಸ ಬಡ್ಡಿ ದರ ಶೇಕಡ 3.90
180-210 ದಿನ: ಈ ಹಿಂದಿನ ಬಡ್ಡಿದರ ಶೇಕಡ 4.40, ಹೊಸ ಬಡ್ಡಿ ದರ ಶೇಕಡ 4.40
211 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 4.40, ಹೊಸ ಬಡ್ಡಿ ದರ ಶೇಕಡ 4.40
ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 4.90, ಹೊಸ ಬಡ್ಡಿ ದರ ಶೇಕಡ 5.00
ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 5.10, ಹೊಸ ಬಡ್ಡಿ ದರ ಶೇಕಡ 5.10
ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 5.30, ಹೊಸ ಬಡ್ಡಿ ದರ ಶೇಕಡ 5.30
ಐದು ವರ್ಷದಿಂದ ಹತ್ತು ವರ್ಷದವರೆಗೆ: ಹಿಂದಿನ ಬಡ್ಡಿದರ ಶೇಕಡ 5.40, ಹೊಸ ಬಡ್ಡಿ ದರ ಶೇಕಡ 5.40

ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರ
2 ಕೋಟಿಗಿಂತ ಕಡಿಮೆ ಮೌಲ್ಯದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವು ಬದಲಾಗಿಲ್ಲ. ಆದರೆ ಎರಡು ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಅಧಿಕ ಮಾಡಲಾಗಿದೆ.
7-45 ದಿನ: ಈ ಹಿಂದಿನ ಬಡ್ಡಿದರ ಶೇಕಡ 3.40, ಹೊಸ ಬಡ್ಡಿ ದರ ಶೇಕಡ 3.40,
46-179 ದಿನ: ಈ ಹಿಂದಿನ ಬಡ್ಡಿದರ ಶೇಕಡ 4.40, ಹೊಸ ಬಡ್ಡಿ ದರ ಶೇಕಡ 4.40,
180-210 ದಿನ: ಈ ಹಿಂದಿನ ಬಡ್ಡಿದರ ಶೇಕಡ 4.90, ಹೊಸ ಬಡ್ಡಿ ದರ ಶೇಕಡ 4.90
211 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 4.90, ಹೊಸ ಬಡ್ಡಿ ದರ ಶೇಕಡ 4.90
ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 5.40, ಹೊಸ ಬಡ್ಡಿ ದರ ಶೇಕಡ 5.50
ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 5.60, ಹೊಸ ಬಡ್ಡಿ ದರ ಶೇಕಡ 5.60
ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ: ಹಿಂದಿನ ಬಡ್ಡಿದರ ಶೇಕಡ 5.80, ಹೊಸ ಬಡ್ಡಿ ದರ ಶೇಕಡ 5.80
ಐದು ವರ್ಷದಿಂದ ಹತ್ತು ವರ್ಷದವರೆಗೆ: ಹಿಂದಿನ ಬಡ್ಡಿದರ ಶೇಕಡ 6.20, ಹೊಸ ಬಡ್ಡಿ ದರ ಶೇಕಡ 6.20