For Quick Alerts
ALLOW NOTIFICATIONS  
For Daily Alerts

ರೂ. 256 ಇಎಂಐನಲ್ಲಿ ಎಸ್‌ಬಿಐ ದ್ವಿಚಕ್ರ ವಾಹನ ಸಾಲ: ಬಡ್ಡಿದರ, ಅರ್ಹತೆ, ಇತರೆ ಮಾಹಿತಿ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದ್ವಿಚಕ್ರ ವಾಹನ ಸಾಲಕ್ಕೆ ಕಡಿಮೆ ರೂಪಾಯಿಯ ಇಎಂಐ ವ್ಯವಸ್ಥೆಯನ್ನು ನೀಡುತ್ತದೆ. ಪ್ರತಿ 10,000 ರೂ.ಗೆ 256 ರೂಪಾಯಿಗಳ ಸಾಲಕ್ಕೆ ರೂಪಾಯಿ 256 ಇಎಂಐ ಅನ್ನು ಪಾವತಿ ಮಾಡಬಹುದಾದ ಅವಕಾಶವನ್ನು ಎಸ್‌ಬಿಐ ನೀಡಿದೆ.

 

ಗ್ರಾಹಕರು ಎಸ್‌ಬಿಐ ಯೋನೋ ಆಪ್ ಮೂಲಕ ಪೂರ್ವ-ಅನುಮೋದಿತ ಸಾಲವನ್ನು ಕೂಡಾ ಪಡೆಯಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸುಲಭವಾದ ಇಎಂಐ ವ್ಯವಸ್ಥೆ, ಸುಲಭ ಪ್ರಕ್ರಿಯೆ ಹಾಗೂ ಸುಲಭ ಸಾಲ ವಿತರಣೆ ಭರವಸೆಯನ್ನು ಕುಡಾ ನೀಡಿದೆ.

ಈ ಋತುವಿನಲ್ಲಿ ಸಕ್ಕರೆ ಉತ್ಪಾದನೆ ಶೇ. 24 ರಷ್ಟು ಹೆಚ್ಚಳ: 25 ಲಕ್ಷ ಟನ್‌ಗೆ ರಫ್ತು ಒಪ್ಪಂದ

ಈ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಟ್ವೀಟ್‌ ಮಾಡಿದೆ. "ನಿಮ್ಮ ಕನಸಿನ ಸವಾರಿಗೆ ಸಿದ್ಧರಾಗಿ. ಯೋನೋ ಮೂಲಕ ನಿಮ್ಮ ದ್ವಿಚಕ್ರ ವಾಹನಕ್ಕಾಗಿ ಪೂರ್ವ-ಅನುಮೋದಿತ ಎಸ್‌ಬಿಐ ಸುಲಭ ಸಾಲವನ್ನು ಪಡೆದುಕೊಳ್ಳಿ," ಎಂದು ತಿಳಿಸಿದೆ. ಹಾಗಾದರೆ ಈ ಎಸ್‌ಬಿಐ ದ್ವಿಚಕ್ರ ವಾಹನ ಸಾಲ ಪಡೆಯಲು ಬೇಕಾದ ಅರ್ಹತೆ, ಬಡ್ಡಿದರ ಎಷ್ಟು, ಹೇಗೆ ಅರ್ಜಿ ಸಲ್ಲಿಸುವುದು ಮೊದಲಾದ ಮಾಹಿತಿಯನ್ನು ಪಡೆಯಲು ಮುಂದೆ ಓದಿ.

 ರೂ. 256 ಇಎಂಐನಲ್ಲಿ ಎಸ್‌ಬಿಐ ದ್ವಿಚಕ್ರ ವಾಹನ ಸಾಲ!

ಎಸ್‌ಬಿಐ ದ್ವಿಚಕ್ರ ಸಾಲಕ್ಕೆ ಬೇಕಾದ ಅರ್ಹತೆ ಏನು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಈ ಬಗ್ಗೆ ಟ್ವೀಟ್‌ ಮಾಡಿದೆ. "ಖಾತೆಯನ್ನು ಹೊಂದಿರುವುದು ಈಗ ಹೆಚ್ಚು ಲಾಭದಾಯಕವಾಗಿದೆ. ಕೆಲವೇ ಕ್ಲಿಕ್‌ಗಳಲ್ಲಿ ಯೋನೋ ಆಪ್‌ ಮೂಲಕ 24*7 ಆಧಾರದ ಮೇಲೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮೊದಲೇ ದ್ವಿಚಕ್ರ ವಾಹನ ಸಾಲಗಳನ್ನು ನೀವು ತಕ್ಷಣ ಪಡೆಯಬಹುದು," ಎಂದು ಎಸ್‌ಬಿಐ ಹೇಳಿದೆ. "ಪ್ರಸ್ತುತ, ಈ ಸಾಲವನ್ನು ನಮ್ಮಿಂದ ಮೊದಲೇ ನಾವು ತಿಳಿಸಿರುವಂತೆ ಕೆಲವು ಮಾನದಂಡಗಳ ಆಧಾರದಲ್ಲಿ ಮೊದಲೇ ಆಯ್ಕೆ ಮಾಡಲಾದ ಗ್ರಾಹಕರ ವರ್ಗಕ್ಕೆ ನೀಡಲಾಗುತ್ತಿದೆ," ಎಂದು ಕೂಡಾ ಎಸ್‌ಬಿಐ ಸ್ಪಷ್ಟ ಪಡಿಸಿದೆ.

* ಎಸ್‌ಬಿಐ 48 ತಿಂಗಳಿಗೆ 0.20 ಲಕ್ಷದಿಂದ 3 ಲಕ್ಷದವರೆಗೆ ಸಾಲವನ್ನು ನೀಡಲಿದೆ.
* ಬಡ್ಡಿ ದರವು ವರ್ಷಕ್ಕೆ 10.50 ಪ್ರತಿಶತದಿಂದ ಪ್ರಾರಂಭವಾಗುತ್ತದೆ.
* ಗ್ರಾಹಕರು ವಾಹನದ ಆನ್‌-ರೋಡ್‌ ಬೆಲೆಯ ಶೇಕಡ 85 ರಷ್ಟು ಸಾಲವನ್ನು ಪಡೆಯುವ ಅವಕಾಶವಿದೆ.
* ಸಾಲವನ್ನು ಪಡೆಯಲು ಗ್ರಾಹಕರು ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿಲ್ಲ
* ಯೋನೋ ಆಪ್‌ ಮೂಲಕ 24*7 ಗಂಟೆಗಳ ಕಾಲ ಈ ವಾಹನ ಸಾಲವು ಲಭ್ಯವಾಗಲಿದೆ
* ಡೀಲರ್‌ನ ಖಾತೆಯಿಂದ ಸಾಲ ಕೂಡಲೇ ಜಮೆ ಆಗಲಿದೆ ಎಂದು ಎಸ್‌ಬಿಐ ಭರವಸೆ ನೀಡಿದೆ
* ನೀವು ಅರ್ಹರೆ ಎಂದು ಎಸ್‌ಎಮ್‌ಎಸ್‌ ಮೂಲಕ ತಿಳಿದು ಕೊಳ್ಳಬಹುದು
* ಅದಕ್ಕಾಗಿ ನೀವು PA2W ಎಂದು 567676 ಗೆ ಎಸ್‌ಎಮ್‌ಎಸ್‌ ಮಾಡಬೇಕು

 

ಎಸ್‌ಬಿಐ ಚಿನ್ನದ ಸಾಲ: ಬಡ್ಡಿಯೆಷ್ಟು?, ಇಲ್ಲಿದೆ ವಿವರ

ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ?

* ಹಂತ ಒಂದು: ಯೋನೋ ಆಪ್‌ ತೆರೆದು ಲಾಗಿನ್‌ ಆಗಿ
* ಹಂತ ಎರಡು: APPLY ಎಂಬುವುದರ ಮೇಲೆ ಕ್ಲಿಕ್ ಮಾಡಿ
* ಹಂತ ಮೂರು: ವೈಯಕ್ತಿಕ ವಿವರಗಳನ್ನು ದೃಢೀಕರಿಸಿ, ಪ್ರಸ್ತುತ ಕೆಲಸದ ವಿವರಗಳನ್ನು ನಮೂದಿಸಿ
* ಹಂತ ನಾಲ್ಕು: ನಿಮ್ಮ ಆಯ್ಕೆಯ ವಾಹನ ಮತ್ತು ಡೀಲರ್ ಅನ್ನು ಆಯ್ಕೆಮಾಡಿ ಹಾಗೂ ವಾಹನದ ಬೆಲೆಯಲ್ಲಿ ಉಲ್ಲೇಖಿಸಲಾದ ಡೀಲರ್‌ ಅನ್ನು ನಮೂದಿಸಿ
* ಹಂತ ಐದು: ವಿವರಗಳನ್ನು ಪರಿಶೀಲಿಸಿ, ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡಿರುವುದಾಗಿ ಕ್ಲಿಕ್‌ ಮಾಡಿ
* OTP ಅನ್ನು ನಮೂದಿಸಿದರೆ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಯಾಗುತ್ತದೆ

English summary

SBI Offers Two Wheeler Loan at Rs 256 EMI, Here's Interest Rate, How To Apply

SBI Offers Two Wheeler Loan at Rs 256 EMI, Here's Interest Rate, How To Apply.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X