ಎಸ್ಬಿಐ ಬಡ್ಡಿದರ ಪರಿಷ್ಕರಣೆ: ಇಲ್ಲಿದೆ ವಿವರ
ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ರೂ 2 ಕೋಟಿಗಿಂತ ಕಡಿಮೆಯ ಫಿಕ್ಸಿಡ್ ಡೆಪಾಸಿಟ್ಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿದೆ. ಮಂಗಳವಾರದಿಂದ (15.02.2022) ಜಾರಿಗೆ ಬರುವಂತೆ, ಬ್ಯಾಂಕ್ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಚಿಲ್ಲರೆ ಅವಧಿಯ ಫಿಕ್ಸಿಡ್ ಡೆಪಾಸಿಟ್ಗಳ ಮೇಲಿನ ಬಡ್ಡಿ ದರಗಳನ್ನು 10-15 ಬೇಸಿಸ್ ಪಾಯಿಂಟ್ಗಳಷ್ಟು (bps) ಹೆಚ್ಚಿಸಿದೆ.
ಎಸ್ಬಿಐ ಈ ಹಿಂದೆ 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್ಗಳ ಮೇಲೆ 5.10 ಪ್ರತಿಶತ ಬಡ್ಡಿದರವನ್ನು ನೀಡಿತ್ತು. 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ 5.30 ಪ್ರತಿಶತ ಹಾಗೂ ಐದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್ಡಿಗಳ ಮೇಲೆ 5.40 ಪ್ರತಿಶತ ಬಡ್ಡಿದರವನ್ನು ನೀಡುತ್ತಿದ್ದವು.
ಈ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಎಫ್ಡಿಗೆ ಶೇ.7 ಬಡ್ಡಿ!
ಆದರೆ 15.02.2022ರಿಂದ ಜಾರಿಗೆ ಬರುವಂತೆ ಪ್ರಸ್ತುತ ಬ್ಯಾಂಕ್ 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್ಗಳ ಮೇಲೆ 5.20 ಪ್ರತಿಶತ ಬಡ್ಡಿದರವನ್ನು ನೀಡುತ್ತದೆ. ಮೂರರಿಂದ ಐದು ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್ಡಿಗಳ ಮೇಲೆ ಶೇಕಡಾ 5.45 ಮತ್ತು ಐದರಿಂದ ಹತ್ತು ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್ಡಿಗಳ ಮೇಲೆ ಶೇಕಡಾ 5.50 ರ ಬಡ್ಡಿದರವನ್ನು ನೀಡುತ್ತಿದೆ.

ನಿಯಮಿತ ಗ್ರಾಹಕರಿಗೆ ಎಸ್ಬಿಐ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಹೇಗಿದೆ?
7 ರಿಂದ 45 ದಿನ: ಈ ಹಿಂದೆ ಶೇಕಡ 2.9 ಬಡ್ಡಿದರ, ಪ್ರಸ್ತುತ ಶೇಕಡ 2.9 ಬಡ್ಡಿದರ
46 ರಿಂದ 179 ದಿನ: ಈ ಹಿಂದೆ ಶೇಕಡ 3.9 ಬಡ್ಡಿದರ, ಪ್ರಸ್ತುತ ಶೇಕಡ 3.9 ಬಡ್ಡಿದರ
180 ದಿನಗಳಿಂದ 210 ದಿನ: ಈ ಹಿಂದೆ ಶೇಕಡ 4.4ಬಡ್ಡಿದರ, ಪ್ರಸ್ತುತ ಶೇಕಡ 4.4 ಬಡ್ಡಿದರ
211 ದಿನಗಳಿಂದ 1 ವರ್ಷ: ಈ ಹಿಂದೆ ಶೇಕಡ 4.4ಬಡ್ಡಿದರ, ಪ್ರಸ್ತುತ ಶೇಕಡ 4.4 ಬಡ್ಡಿದರ
1 ವರ್ಷದಿಂದ 2 ವರ್ಷ: ಈ ಹಿಂದೆ ಶೇಕಡ 5.1 ಬಡ್ಡಿದರ, ಪ್ರಸ್ತುತ ಶೇಕಡ 5.1 ಬಡ್ಡಿದರ
2 ವರ್ಷದಿಂದ 3 ವರ್ಷ: ಈ ಹಿಂದೆ ಶೇಕಡ 5.1 ಬಡ್ಡಿದರ, ಪ್ರಸ್ತುತ ಶೇಕಡ 5.2 ಬಡ್ಡಿದರ
3 ವರ್ಷದಿಂದ 5 ವರ್ಷ: ಈ ಹಿಂದೆ ಶೇಕಡ 5.3 ಬಡ್ಡಿದರ, ಪ್ರಸ್ತುತ ಶೇಕಡ 5.45 ಬಡ್ಡಿದರ
5 ವರ್ಷದಿಂದ 10 ವರ್ಷ: ಈ ಹಿಂದೆ ಶೇಕಡ 5.4 ಬಡ್ಡಿದರ, ಪ್ರಸ್ತುತ ಶೇಕಡ 5.5 ಬಡ್ಡಿದರ
ಎಸ್ಬಿಐ ಅಲರ್ಟ್: ಈ ಕಾರ್ಯ ಮಾಡದಿದ್ದರೆ ನಿಮ್ಮ ಬ್ಯಾಂಕಿಂಗ್ ಸೇವೆ ಸ್ಥಗಿತ!
ಹಿರಿಯ ನಾಗರಿಕರಿಗೆ ಎಸ್ಬಿಐ ಎಫ್ಡಿ ಬಡ್ಡಿದರಗಳು
7 ದಿನಗಳಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ, ಹಿರಿಯ ನಾಗರಿಕರು 0.50 ಪ್ರತಿಶತ ಹೆಚ್ಚುವರಿ ದರವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಮತ್ತೊಂದೆಡೆ, ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ವಿಶೇಷ "SBI Wecare" ಠೇವಣಿಯನ್ನೂ ಸಹ ನೀಡುತ್ತದೆ. ಇದರಲ್ಲಿ 30 ಬೇಸಿಸ್ ಪಾಯಿಂಟ್ಗಳ ಹೆಚ್ಚುವರಿ ಪ್ರೀಮಿಯಂ ಅನ್ನು ಸ್ಟ್ಯಾಂಡರ್ಡ್ 50 ಬೇಸಿಸ್ ಪಾಯಿಂಟ್ಗಳ ಮೇಲೆ ಮತ್ತು ಹಿರಿಯ ನಾಗರಿಕರಿಗೆ ಅವರ ಚಿಲ್ಲರೆ ಅವಧಿಯ ಠೇವಣಿಗಳ ಅವಧಿಗೆ ನೀಡಲಾಗುತ್ತದೆ. ಹಿರಿಯ ನಾಗರಿಕರು ಈಗ 5 ರಿಂದ 10 ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್ಗಳ ಮೇಲೆ ಶೇಕಡಾ 6.30 ಬಡ್ಡಿದರವನ್ನು ಪಡೆಯುತ್ತಾರೆ. ಬ್ಯಾಂಕ್ ಪ್ರಕಾರ "SBI Wecare" ಠೇವಣಿ ಯೋಜನೆಯನ್ನು ಈಗ ಸೆಪ್ಟೆಂಬರ್ 30, 2022 ರವರೆಗೆ ವಿಸ್ತರಿಸಲಾಗಿದೆ.
7 ರಿಂದ 45 ದಿನ: ಈ ಹಿಂದೆ ಶೇಕಡ 3.4 ಬಡ್ಡಿದರ, ಪ್ರಸ್ತುತ ಶೇಕಡ 3.4 ಬಡ್ಡಿದರ
46 ರಿಂದ 179 ದಿನ: ಈ ಹಿಂದೆ ಶೇಕಡ 4.4 ಬಡ್ಡಿದರ, ಪ್ರಸ್ತುತ ಶೇಕಡ 4.4 ಬಡ್ಡಿದರ
180 ದಿನಗಳಿಂದ 210 ದಿನ: ಈ ಹಿಂದೆ ಶೇಕಡ 4.9 ಬಡ್ಡಿದರ, ಪ್ರಸ್ತುತ ಶೇಕಡ 4.9 ಬಡ್ಡಿದರ
211 ದಿನಗಳಿಂದ 1 ವರ್ಷ: ಈ ಹಿಂದೆ ಶೇಕಡ 4.9 ಬಡ್ಡಿದರ, ಪ್ರಸ್ತುತ ಶೇಕಡ 4.9 ಬಡ್ಡಿದರ
1 ವರ್ಷದಿಂದ 2 ವರ್ಷ: ಈ ಹಿಂದೆ ಶೇಕಡ 5.6 ಬಡ್ಡಿದರ, ಪ್ರಸ್ತುತ ಶೇಕಡ 5.6 ಬಡ್ಡಿದರ
2 ವರ್ಷದಿಂದ 3 ವರ್ಷ: ಈ ಹಿಂದೆ ಶೇಕಡ 5.6 ಬಡ್ಡಿದರ, ಪ್ರಸ್ತುತ ಶೇಕಡ 5.7 ಬಡ್ಡಿದರ
3 ವರ್ಷದಿಂದ 5 ವರ್ಷ: ಈ ಹಿಂದೆ ಶೇಕಡ 5.8 ಬಡ್ಡಿದರ, ಪ್ರಸ್ತುತ ಶೇಕಡ 5.95 ಬಡ್ಡಿದರ
5 ವರ್ಷದಿಂದ 10 ವರ್ಷ: ಈ ಹಿಂದೆ ಶೇಕಡ 6.2 ಬಡ್ಡಿದರ, ಪ್ರಸ್ತುತ ಶೇಕಡ 6.3 ಬಡ್ಡಿದರ