For Quick Alerts
ALLOW NOTIFICATIONS  
For Daily Alerts

SBIನಿಂದ ಹಿಂದೂಸ್ತಾನ್ ಯುನಿಲಿವರ್ ಜತೆ ಸಹಭಾಗಿತ್ವ: ರೀಟೇಲರ್ ಗಳಿಗೆ ಆನ್ ಲೈನ್ ಸಾಲ

By ಅನಿಲ್ ಆಚಾರ್
|

ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅತಿ ದೊಡ್ಡ ಗ್ರಾಹಕ ವಸ್ತುಗಳ ಉತ್ಪಾದನಾ ಕಂಪೆನಿ ಹಿಂದೂಸ್ತಾನ್ ಯುನಿಲಿವರ್ ಸಹಭಾಗಿತ್ವದಲ್ಲಿ ರೀಟೇಲರ್ ಗಳು ಮತ್ತು ವಿತರಕರಿಗೆ ಆನ್ ಲೈನ್ ಸಾಲ ಸೌಲಭ್ಯ ಒದಗಿಸಲು ಮುಂದಾಗಿದೆ. ಕೊರೊನಾ ಕಾರಣಕ್ಕೆ ಸಣ್ಣ ವ್ಯಾಪಾರಗಳಿಗೆ ಆಗಿರುವ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ಈ ಸಾಲ ಯೋಜನೆ ರೂಪಿಸಲಾಗಿದೆ.

ಕೊರೊನಾ ಆರ್ಭಟಕ್ಕೆ ತತ್ತರಿಸಿದ ಗ್ರಾಮೀಣ ಭಾರತ; ಏನು ಹೇಳುತ್ತದೆ ಅಂಕಿ- ಅಂಶ?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ರೀಟೇಲರ್ ಗಳಿಗೆ ಆನ್ ಲೈನ್ ಮೂಲಕ 50 ಸಾವಿರ ರುಪಾಯಿ ತನಕ ಸಾಲ ನೀಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವರ್ತಕರು ಎಚ್ ಯುಎಲ್ ನ ಶಿಖರ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು, ಈ ಸೌಲಭ್ಯ ಬಳಸಿಕೊಳ್ಳಬಹುದು. ಆರಂಭದಲ್ಲಿ ಮುಂಬೈ ಹಾಗೂ ಬೆಂಗಳೂರಿನಲ್ಲಿ ಈ ಸೌಲಭ್ಯ ಒದಗಿಸಲಾಗುತ್ತದೆ. ಆ ನಂತರ ಇತರ ನಗರಗಳಿಗೆ ವಿಸ್ತರಣೆ ಮಾಡಲಾಗುತ್ತದೆ.

ಕಾಗದ- ಪತ್ರ ಇಲ್ಲದೆ ಓವರ್ ಡ್ರಾಫ್ಟ್ ಸೌಲಭ್ಯ
 

ಕಾಗದ- ಪತ್ರ ಇಲ್ಲದೆ ಓವರ್ ಡ್ರಾಫ್ಟ್ ಸೌಲಭ್ಯ

ವಿತರಕರಿಗೆ ಬಾಕಿ ಇರುವ ಬಿಲ್ಲಿಂಗ್ ಗೆ ವಿತರಕರಿಗೆ ಸಾಲ ಸೌಲಭ್ಯವು ಯಾವುದೇ ಕಾಗದ- ಪತ್ರದ ಅಗತ್ಯವಿಲ್ಲದೆ ತಕ್ಷಣದ ಓವರ್ ಡ್ರಾಫ್ಟ್ ಸೌಲಭ್ಯ ಸಿಗಲಿದೆ. ಇನ್ನು ಎಸ್ ಬಿಐನಿಂದ ಸಣ್ಣ ನಗರದ ಎಚ್ ಯುಎಲ್ ಟಚ್ ಪಾಯಿಂಟ್ ಗಳಲ್ಲಿ ಪಾಯಿಂಟ್ ಆಫ್ ಸೇಲ್ ಮಶೀನ್ ಹಾಕಲಿದೆ. ದೊಡ್ಡ ಮಟ್ಟದ ಡೀಲರ್ ಗಳಿಗೆ ನಗದುರಹಿತ ಪಾವತಿ ಮಾಡಲು ಯುಪಿಐ ಆಧಾರಿತ ಬೆಂಬಲವನ್ನು ರೀಟೇಲರ್ ಗಳಿಗೆ ನೀಡಲಾಗುತ್ತದೆ.

ಕೊರೊನಾದ ಕಾರಣಕ್ಕೆ ನಗದು ಸಮಸ್ಯೆ

ಕೊರೊನಾದ ಕಾರಣಕ್ಕೆ ನಗದು ಸಮಸ್ಯೆ

ರೀಟೇಲರ್ ಗಳು ಸರಕು ಖರೀದಿಸಿದ ಮೇಲೆ ಹಣ ಪಾವತಿಗೆ ವಿತರಕರಿಂದ ಏಳರಿಂದ ಹತ್ತು ದಿನಗಳ ಸಮಯ ನೀಡಲಾಗುತ್ತದೆ. ಆದರೆ ಕೊರೊನಾ ಕಾರಣಕ್ಕೆ ಹೇರಿದ ಲಾಕ್ ಡೌನ್ ನಿಂದಾಗಿ ಪೂರೈಕೆ ಜಾಲ ಮತ್ತು ಬೇಡಿಕೆಗೆ ಸಮಸ್ಯೆ ಆಗಿದೆ. ವಿತರಕರಿಗೇ ನಗದು ಸಮಸ್ಯೆ ಎದುರಾಗಿರುವುದರಿಂದ ಮುಂಚಿತವಾಗಿಯೇ ಹಣ ಪಾವತಿಸುವಂತೆ ವಿತರಕರು ಕೇಳುತ್ತಿದ್ದಾರೆ.

ಎಫ್ ಎಂಸಿಜಿಯದು ಮಾರಾಟದಲ್ಲಿ ಶೇಕಡಾ 90ರಷ್ಟು ಕೊಡುಗೆ

ಎಫ್ ಎಂಸಿಜಿಯದು ಮಾರಾಟದಲ್ಲಿ ಶೇಕಡಾ 90ರಷ್ಟು ಕೊಡುಗೆ

ಸಾಮಾನ್ಯ ವ್ಯವಹಾರದಲ್ಲಿ ಚೇತರಿಕೆ ಅಥವಾ ವಿತರಕರು ಹಾಗೂ ಸಣ್ಣ ರೀಟೇಲರ್ ಗಳು ಈ ಎಫ್ ಎಂಸಿಜಿಗೆ ಬಹಳ ಮುಖ್ಯ. ಏಕೆಂದರೆ ಎಫ್ ಎಂಸಿಜಿಯು ಮಾರಾಟದ ಶೇಕಡಾ 90ರಷ್ಟು ಕೊಡುಗೆ ನೀಡುತ್ತದೆ. ಎಚ್ ಯುಎಲ್ ನಿಂದ ಡಿಜಿಟಲೈಸ್ ಹಾಗೂ ಆಧುನಿಕತೆ ತರಲು ಪ್ರಯತ್ನಿಸಲಾಗುತ್ತದೆ. ಆ ಮೂಲಕ ಜಾಲ, ರೀಟೇಲರ್ ಗಳಿಗೆ ಬೆಂಬಲ ಮತ್ತು ಸಮಯಕ್ಕೆ ಮತ್ತು ಕೈಗೆಟುಕುವಂತೆ ಹಣಕಾಸು ಸೌಲಭ್ಯ ಸಿಗಲಿ ಎಂಬುದು ಉದ್ದೇಶ.

ಮುದ್ರಾ ಸಾಲದ ವಿಸ್ತರಣೆ
 

ಮುದ್ರಾ ಸಾಲದ ವಿಸ್ತರಣೆ

ಎಸ್ ಬಿಐ ನಿಂದ ಮಾತನಾಡಿ, ಈ ಸಹಭಾಗಿತ್ವದಿಂದ ದೇಶದ ದೂರದೂರದಲ್ಲೂ ಇರುವ ಗ್ರಾಹಕರಿಗೆ ಸೇವೆ ಒದಗಿಸಲು ಸಹಾಯ ಆಗುತ್ತದೆ. ಬ್ಯಾಂಕ್ ಅಧ್ಯಕ್ಷ ರಜನೀಶ್ ಕುಮಾರ್ ಮಾತನಾಡಿ, ಇದು ಮುದ್ರಾ ಸಾಲದ ವಿಸ್ತರಣೆ. ಭವಿಷ್ಯದಲ್ಲಿ ಇದು ಪೂರೈಕೆ ಜಾಲದ ಹಣಕಾಸು ಸೌಲಭ್ಯಕ್ಕೆ ಮಾದರಿ ಆಗಲಿದೆ ಎಂದು ಹೇಳಿದ್ದಾರೆ.

English summary

SBI Ties Up With HUL To Offer Online Credit Facility To Retailers, Distributors

India's leading bank State Bank Of India ties up with HUL to offer online credit facility to retailers and distributors.
Company Search
COVID-19