For Quick Alerts
ALLOW NOTIFICATIONS  
For Daily Alerts

SBI Yonoಗೆ ಲಾಗಿನ್ ಆಗದೆ ಬ್ಯಾಲೆನ್ಸ್ ಪರೀಕ್ಷಿಸಿ, ಪಾಸ್ ಬುಕ್ ನೋಡಿ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ ಬಿಐ) ಅದರ Yono ಅಪ್ಲಿಕೇಷನ್ ಗೆ ಹೊಸದಾಗಿ ವಿಶೇಷ ಫೀಚರ್ ಗಳನ್ನು ಸೇರ್ಪಡೆ ಮಾಡಿದೆ. ಪ್ರೀ ಲಾಗಿನ್ ಫೀಚರ್ ಜತೆಗೆ ಎಸ್ ಬಿಐ ಖಾತೆದಾರರು ತಮ್ಮ ಬ್ಯಾಂಕ್ ಖಾತೆಯ ಮಾಹಿತಿ ಪಡೆಯಬಹುದು, ಪಾಸ್ ಬುಕ್ ನೋಡಬಹುದು ಮತ್ತು Yono ಅಪ್ಲಿಕೇಷನ್ ಗೆ ಲಾಗ್ ಇನ್ ಆಗದೆ ವ್ಯವಹಾರ ಮಾಡಬಹುದು.

"ಅಪ್ಲಿಕೇಷನ್ ಗೆ ಲಾಗಿನ್ ಆಗದೆ ಅಕೌಂಟ್ ಬ್ಯಾಲೆನ್ಸ್ ಪರೀಕ್ಷಿಸಿ, ಪಾಸ್ ಬುಕ್ ನೋಡಿ ಮತ್ತು ವ್ಯವಹಾರಗಳನ್ನು ಮಾಡಿ. ಯೋನೋ ಎಸ್ ಬಿಐ ಜತೆ ಬ್ಯಾಂಕ್ ವೇಗ ಪಡೆದುಕೊಂಡಿದೆ!,"ಎಂದು ಎಸ್ ಬಿಐ ಟ್ವೀಟ್ ಮಾಡಿದೆ.

ಎಸ್ ಬಿಐನಿಂದ ಯೋನೋ ಆಪ್ ನಲ್ಲಿ ಮಾಡಿರುವ ಬದಲಾವಣೆ ಏನು?

 

* ಲಾಗಿನ್ ಆಯ್ಕೆಯ ಜತೆಗೆ ಎಸ್ ಬಿಐ ಯೋನೋ ಆಪ್ ನಲ್ಲಿ ಬ್ಯಾಲೆನ್ಸ್ ನೋಡುವ ಹಾಗೂ ಶೀಘ್ರವಾಗಿ ಪಾವತಿ ಮಾಡುವ ಆಯ್ಕೆ.

SBIನಿಂದ ಹಿಂದೂಸ್ತಾನ್ ಯುನಿಲಿವರ್ ಜತೆ ಸಹಭಾಗಿತ್ವ: ರೀಟೇಲರ್ ಗಳಿಗೆ ಆನ್ ಲೈನ್ ಸಾಲ

* 6 ಅಂಕಿಯ MPIN ಅಥವಾ ಬಯೋಮೆಟ್ರಿಕ್ ಅಥೆಂಟಿಕೇಷನ್/ಫೇಸ್ ಐಡಿ ಅಥವಾ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಇದನ್ನು ಬಳಸುವುದಕ್ಕೆ ಬೇಕಾಗುತ್ತದೆ.

SBI Yonoಗೆ ಲಾಗಿನ್ ಆಗದೆ ಬ್ಯಾಲೆನ್ಸ್ ಪರೀಕ್ಷಿಸಿ, ಪಾಸ್ ಬುಕ್ ನೋಡಿ

ಎಸ್ ಬಿಐ ಯೋನೋ ಆಪ್ ಲಾಗಿನ್ ಆಗದೆ ಬ್ಯಾಲೆನ್ಸ್, ಪಾಸ್ ಬುಕ್ ಪರೀಕ್ಷೆ ಮಾಡುವುದು ಹೇಗೆ?

* MPIN, ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅಥವಾ ಬಯೋಮೆಟ್ರಿಕ್ ಬಳಸಬಹುದು.

* "ವ್ಯೂ ಬ್ಯಾಲೆನ್ಸ್" ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಬ್ಯಾಲೆನ್ಸ್ ಪರೀಕ್ಷಿಸಬಹುದು.

* ಇದಾದ ನಂತರ ಬಳಕೆದಾರರು MPIN, ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅಥವಾ ಬಯೋಮೆಟ್ರಿಕ್ ಅಥೆಂಟಿಕೇಷನ್ ಅಥವಾ ಫೇಸ್ ಐಡಿ ಆರಿಸಿಕೊಳ್ಳಬೇಕು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಲೋನ್ ಗಳಿಗೆ ಆಫರ್ ಗಳ ಸುರಿಮಳೆ

* ಅಥೆಂಟಿಕೇಷನ್ ಆದ ಮೇಲೆ ಯೋನೋ ಅಪ್ಲಿಕೇಷನ್ ಗೆ ಲಿಂಕ್ ಆದ ಎಲ್ಲ ಖಾತೆಗಳ ಬ್ಯಾಲೆನ್ಸ್ ಪರೀಕ್ಷಿಸಬಹುದು.

* ಅಕೌಂಟ್ ಬ್ಯಾಲೆನ್ಸ್ ಕೆಳಗೆ "ವ್ಯೂ ಟ್ರಾನ್ಸಾಕ್ಷನ್ಸ್" ಎಂಬ ಆಯ್ಕೆ ಇರುತ್ತದೆ. ಅದರಲ್ಲಿ ವ್ಯವಹಾರದ ಮಾಹಿತಿ, ಆಯ್ಕೆ ಮಾಡಿಕೊಂಡ ಖಾತೆಯ ಎಂ- ಪಾಸ್ ಬುಕ್ ನೋಡಬಹುದು.

ಎಸ್ ಬಿಐ Yono ಶೀಘ್ರ ಪಾವತಿ ಫೀಚರ್

* Yono Quick Pay ಕ್ಲಿಕ್ ಮಾಡುವ ಮೂಲಕ ಬಳಕೆದಾರರು 2000 ರುಪಾಯಿ ತನಕ ವ್ಯವಹಾರವನ್ನು ಅಪ್ಲಿಕೇಷನ್ ಗೆ ಲಾಗಿನ್ ಆಗದೆ ಮಾಡಬಹುದು.

* ಇದಕ್ಕಾಗಿ ಮೊದಲು ಅಥೆಂಟಿಕೇಷನ್ ಆಗಬೇಕು.

* ಅಥೆಂಟಿಕೇಷನ್ ಅನ್ನು MPIN, ಯೂಸರ್ ಐಡಿ ಮತ್ತು ಪಾಸ್ ವರ್ಡ್ ಅಥವಾ ಬಯೋಮೆಟ್ರಿಕ್ ಅಥೆಂಟಿಕೇಷನ್ ಅಥವಾ ಫೇಸ್ ಐಡಿ ಮೂಲಕ ಮಾಡಬೇಕು.

ಎಸ್ ಬಿಐನಿಂದ 2017ರಲ್ಲಿ Yono ಆರಂಭಿಸಲಾಯಿತು. ಗ್ರಾಹಕರಿಗೆ ಬ್ಯಾಂಕಿಂಗ್, ಹೂಡಿಕೆ ಮತ್ತು ಶಾಪಿಂಗ್ ಅಗತ್ಯಗಳಿಗಾಗಿ ಇದನ್ನು ಶುರು ಮಾಡಲಾಯಿತು.

English summary

SBI Yono Update: Check Balance, View Passbook Without Log In

Here is the major SBI Yono update. You can check balance and view passbook without log in.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X