For Quick Alerts
ALLOW NOTIFICATIONS  
For Daily Alerts

15 ನಿಮಿಷದಲ್ಲೇ 2.75 ಲಕ್ಷ ಕೋಟಿ ರೂ. ಗಳಿಸಿದ ಷೇರು ಮಾರುಕಟ್ಟೆ ಹೂಡಿಕೆದಾರರು

|

ಷೇರುಪೇಟೆಯಲ್ಲಿ ಹೂಡಿಕೆದಾರರು ಕೇವಲ 15 ನಿಮಿಷಗಳಲ್ಲಿ 2.75 ಲಕ್ಷ ಕೋಟಿ ರೂ.ಗಳ ಲಾಭ ಗಳಿಸಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಬುಧವಾರದ ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಏರಿಕೆಯಾದ ಬಳಿಕ ಈ ಲಾಭ ಗಳಿಸಿದ್ದಾರೆ.

 

ಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಯುಎಸ್ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಎಸ್. ಫೌಸಿ, "ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರಕ್ಕಿಂತ ಈ ಹೊಸ ರೂಪಾಂತರ ಓಮಿಕ್ರಾನ್‌ ಹೆಚ್ಚು ತೀವ್ರವಾಗದು," ಎಂದು ಭರವಸೆ ನೀಡಿದ ಬಳಿಕ ಷೇರುಪೇಟೆಯಲ್ಲಿ ಹೂಡಿಕೆದಾರರು ಕೇವಲ 15 ನಿಮಿಷಗಳಲ್ಲಿ 2.75 ಲಕ್ಷ ಕೋಟಿ ರೂ.ಗಳ ಲಾಭ ಗಳಿಸಿದ್ದಾರೆ ಎಂದು ವರದಿಯು ಹೇಳಿದೆ.

ತಿಂಗಳಿಗೆ 12,500 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಬಳಿಕ ಪಡೆಯಿರಿ 40 ಲಕ್ಷಕ್ಕಿಂತ ಅಧಿಕ ಹಣ!

ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿಯು ಸಭೆ ಸೇರಿ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ಬಳಿಕ ಬುಧವಾರ ಆರಂಭಿಕ ವಹಿವಾಟಿನಲ್ಲಿ 30-ಸ್ಕ್ರಿಪ್ ಸೆನ್ಸಿಟಿವ್‌ ಇಂಡೆಕ್ಸ್‌ (ಸೆನ್ಸೆಕ್ಸ್) ತೀವ್ರವಾಗಿ ಏರಿಕೆ ಕಂಡಿದೆ.

15 ನಿಮಿಷದಲ್ಲೇ 2.75 ಲಕ್ಷ ಕೋಟಿ ರೂ. ಗಳಿಸಿದ ಹೂಡಿಕೆದಾರರು

ಷೇರು ಮಾರುಕಟ್ಟೆ ಇಂದು ಹೇಗಿದೆ?

* ಆರ್‌ಬಿಐ ರೆಪೊ ದರ ಹಾಗೂ ರಿವರ್ಸ್ ರೆಪೊ ದರವನ್ನು ಬದಲಾಯಿಸಿಲ್ಲ. ರೆಪೊ ದರ ಹಾಗೂ ರಿವರ್ಸ್ ರೆಪೊ ದರದಲ್ಲಿ ಆರ್‌ಬಿಐ ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಪ್ರಸ್ತುತ ರೆಪೊ ದರವು 4 ಶೇಕಡ ಹಾಗೂ ರಿವರ್ಸ್ ರೆಪೋ ದರವು 3.35 ಶೇಕಡ ಆಗಿದೆ. ಉತ್ತಮ ಆರ್ಥಿಕ ಚೇತರಿಕೆಯನ್ನು ಖಚಿತಪಡಿಸಿಕೊಳ್ಳಲು ಆರ್‌ಬಿಐ ಅಕಾಮಡೇಟಿವ್‌ ಕೂಡಾ ಸ್ಥಿರತೆ ಕಾಯ್ದುಕೊಂಡಿದೆ.
* ಐಎಎನ್‌ಎಸ್ ವರದಿಯ ಪ್ರಕಾರ ಬೆಳಗ್ಗೆ 10.30ಕ್ಕೆ ಎಸ್&ಪಿ ಬಿಎಸ್‌ಇ ಸೆನ್ಸೆಕ್ಸ್ ಶೇ.1.25ರಷ್ಟು ಏರಿಕೆಯಾಗಿ 58,349 ಅಂಶಗಳಲ್ಲಿ ವಹಿವಾಟು ಅಂತ್ಯ ಮಾಡಿದೆ. 58,185 ಅಂಶಗಳಲ್ಲಿ ಆರಂಭ ಮಾಡಲಾಗಿತ್ತು. ಈ ಹಿಂದೆ 57,663 ಪಾಯಿಂಟ್ಸ್‌ ಇತ್ತು. ಇದುವರೆಗೆ 58,122 ಪಾಯಿಂಟ್‌ಗಳು ಕನಿಷ್ಠ ಮಟ್ಟ ಆಗಿದೆ.
* ಅಲ್ಲದೆ, ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ನಲ್ಲಿ ವಿಶಾಲವಾದ 50-ಸ್ಕ್ರಿಪ್ ನಿಫ್ಟಿ ಮಂಗಳವಾರ 17,176 ರಲ್ಲಿ ಕೊನೆಗೊಂಡಿದ್ದು, ಇಂದು 17,044 ಅಂಕಗಳಲ್ಲಿ ಪ್ರಾರಂಭ ಆಗಿದೆ. ಇದು 17,389 ಪಾಯಿಂಟ್‌ಗಳಲ್ಲಿ ವಹಿವಾಟು ನಡೆಸಿತು. ಮುಂಜಾನೆಯ ವಹಿವಾಟಿನ ಅವಧಿಯಲ್ಲಿ ಶೇಕಡಾ 1.24 ರಷ್ಟು ಏರಿಕೆಯಾಗಿದೆ ಎಂದು ಐಎಎನ್‌ಎಸ್ ವರದಿ ಹೇಳುತ್ತದೆ.
* ಸೆನ್ಸೆಕ್ಸ್‌ ಪ್ಯಾಕ್‌ನಲ್ಲಿ ಹೆಚ್‌ಸಿಎಲ್‌ ಟೆಕ್‌ ಟಾಪ್‌ ಗೇನರ್‌ ಆಗಿದ್ದು, ಶೇಕಡ 2 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಆ ಬಳಿಕ ಇನ್ಫೋಸಿಸ್, ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರ, ಎಲ್ & ಟಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಸಿಐಸಿಐ ಬ್ಯಾಂಕ್ ಏರಿಕೆ ಕಂಡಿದೆ. ಇನ್ನೊಂದೆಡೆ ಪಿಟಿಐ ವರದಿಯ ಪ್ರಕಾರ, ಎನ್‌ಟಿಪಿಸಿ ಮಾತ್ರ ಹಿಂದುಳಿದಿದೆ.

 

ಕ್ರಿಪ್ಟೋಕರೆನ್ಸಿಯಲ್ಲಿ ಒಂದೇ ಒಂದು ರೂಪಾಯಿ ಹೂಡಿಕೆ ಮಾಡಿಲ್ಲ ಎಂದ ಆನಂದ್ ಮಹೀಂದ್ರಾ

ಏಷ್ಯಾದ ಇತರೆಡೆಗಳಲ್ಲಿ, ಶಾಂಘೈ, ಸಿಯೋಲ್ ಮತ್ತು ಟೋಕಿಯೊದಲ್ಲಿನ ಷೇರುಗಳು ಮಿಡ್-ಸೆಷನ್ ಡೀಲ್‌ಗಳಲ್ಲಿ ಗಮನಾರ್ಹ ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ. ಹಾಂಗ್‌ಕಾಂಗ್‌ನ ಷೇರುಗಳು ಮಾತ್ರ ರೆಡ್‌ ಝೋನ್‌ನಲ್ಲಿ ಇದೆ. ರಾತ್ರಿಯ ಸೆಷನ್‌ ವೇಳೆ ಯುಎಸ್‌ನ ಸ್ಟಾಕ್‌ ಎಕ್ಸ್‌ಚೇಂಜ್‌ಗಳು ಕೂಡಾ ಅಧಿಕ ಆಗಿದ್ದವು. ಈ ನಡುವೆ ಅಂತರರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.42 ಶೇಕಡಾ ಕುಸಿದು ಯುಎಸ್‌ಡಿ 75.12 ಕ್ಕೆ ತಲುಪಿದೆ ಎಂದು ಪಿಟಿಐ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ಹೊಸ ರೂಪಾಂತರಕ್ಕೆ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್‌ ಎಂದು ಹೆಸರು ಇಟ್ಟಿದೆ. ಈ ಸಂದರ್ಭದಲ್ಲೇ ಓಮಿಕ್ರಾನ್‌ ಕ್ರಿಪ್ಟೋ ಮೌಲ್ಯವು ಶೇ. 900 ಏರಿಕೆ ಆಗಿತ್ತು. ಆದರೆ ಈ ಸಂದರ್ಭದಲ್ಲಿ ಕೋವಿಡ್‌ ಲಾಕ್‌ಡೌನ್‌ ಆತಂಕದಲ್ಲಿ ಷೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದಿತ್ತು.

English summary

Share Market Investors Make Rs 2.75 Lakh Crore In 15 Minutes, Here's Explained How

Share Market Investors Make ₹2.75 Lakh Crore In 15 Minutes, Here's Explained How, Read on.
Story first published: Wednesday, December 8, 2021, 13:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X