For Quick Alerts
ALLOW NOTIFICATIONS  
For Daily Alerts

2020ಕ್ಕೆ ಭಾರತದಲ್ಲಿ ಕಡಿಮೆ ಬಂಡವಾಳ ಹೂಡಿಕೆ ಬಿಜಿನೆಸ್ ಐಡಿಯಾ

|

ಬಿಜಿನೆಸ್ ಮಾಡಲು ಹಣವಿದೆ, ಆದ್ರೆ ಯಾವುದರ ಮೇಲೆ ಹಣ ಹೂಡಿಕೆ ಮಾಡಬೇಕು ಎನ್ನುವುದು ಕೆಲವರ ಪ್ರಶ್ನೆಯಾಗಿರುತ್ತದೆ. ಮತ್ತೆ ಅನೇಕರು ಕಡಿಮೆ ಬಂಡವಾಳ ಹೂಡಿಕೆಯ ಬಿಜಿನೆಸ್ ಯಾವುದು ಅನ್ನೋ ಹುಡುಕಾಟದಲ್ಲಿರುತ್ತಾರೆ. ಜಾಸ್ತಿ ಹಣ ಹೂಡಿದರೆ ಏನಾದರೂ ನಷ್ಟ ಆದರೆ ಏನು ಗತಿ ಅನ್ನೋ ಭಯವು ಇರುತ್ತದೆ. ಹಾಗಿದ್ದರೆ ಮುಂಬರುವ ವರ್ಷಗಳಲ್ಲಿ ಕಡಿಮೆ ಬಂಡವಾಳ ಹೂಡಿ ಯಾವ ಬಿಜಿನೆಸ್ ಮಾಡಬಹುದು ಎಂಬ ಕುರಿತು ಐಡಿಯಾ ಇಲ್ಲಿವೆ ನೋಡಿ

ನಿಮ್ಮ ಸಂಬಳದಿಂದ ಹೂಡಿಕೆ ಮಾಡಲು ನಾಲ್ಕು ವಿಧಾನ ಆಯ್ಕೆ ಮಾಡಿ..

ಆಧುನಿಕ ಜಗತ್ತಿನಲ್ಲಿ ದಿನ ಕಳೆದಂತೆ ಉದ್ಯೋಗ ಭದ್ರತೆ ಕಡಿಮೆಯಾಗತೊಡಗಿದೆ. ಕಳೆದ ಕೆಲವು ವರ್ಷಗಳಲ್ಲಿ ಸ್ಟಾರ್ಟ್ ಅಪ್ ಬಿಜಿನೆಸ್ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರು ಸ್ಟಾರ್ಟ್ ಅಪ್ ಬಿಜೆನೆಸ್ ಪ್ರಿಯರ ನೆಚ್ಚಿನ ತವರೂರಾಗಿದೆ. ಕಡಿಮೆ ಬಂಡವಾಳ ಹೂಡಿ ಲಾಭ ತೆಗೆಯಲು ಮಾರ್ಗಗಳನ್ನು ಹುಡುಕುವವರ ಸಂಖ್ಯೆ ಹೆಚ್ಚು. ಉದ್ಯೋಗ ಸಾಕು ಸ್ವಂತ ಬಿಜಿನೆಸ್ ಮಾಡಬೇಕು ಅನ್ನೋರಿಗೆ ಕೆಲವು ಐಡಿಯಾ ಇಲ್ಲಿದೆ ನೋಡಿ

ಆಹಾರ ವಿತರಣಾ ಸೇವೆ (Food Delivery Service)
 

ಆಹಾರ ವಿತರಣಾ ಸೇವೆ (Food Delivery Service)

ಆಧುನಿಕತೆ ಬೆಳೆದಂತೆ ಸೇವಾ ವಲಯ ವಿಸ್ತಾರವಾಗಿ ಬೆಳೆಯುತ್ತಿದೆ. ಜನರು ಕೂತಲ್ಲಿಯೇ ಎಲ್ಲವೂ ಸಿಗಬೇಕೆಂದು ಬಯಸುತ್ತಾರೆ. ಇದಕ್ಕೆ ಮಾಡುತ್ತಿರುವ ಕೆಲಸ, ಸಮಯದ ಅಭಾವ ಸೇರಿದಂತೆ ಅನೇಕ ಕಾರಣಗಳಿವೆ. ಇದರಿಂದ ಫುಡ್ ಕೂಡ ಹೊರತಾಗಿಲ್ಲ. ತಾವಿರುವ ಸ್ಥಳಕ್ಕೆ ಫುಡ್‌ ಆರ್ಡರ್ ಮಾಡಲು ಬಯಸುತ್ತಾರೆ. ಹೀಗಾಗಿ ಮಹಾನಗರಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಿಜಿನೆಸ್ ಗಳಲ್ಲಿ ಒಂದು ಆಹಾರ ವಿತರಣಾ ಸೇವೆ (Food Delivery Service).

ಶಾಲಾ ಸಮವಸ್ತ್ರವನ್ನು ಒದಗಿಸುವುದು

ಶಾಲಾ ಸಮವಸ್ತ್ರವನ್ನು ಒದಗಿಸುವುದು

ಶಾಲೆಗಳು ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಒದಗಿಸಲು ನೇರವಾಗಿ ಉತ್ಪಾದಕರು ಇಲ್ಲವೇ ಸಮವಸ್ತ್ರ ಒದಗಿಸುವ ಸಂಸ್ಥೆಗಳೊಂದಿಗೆ ನೇರ ಸಂಪರ್ಕ ಹೊಂದಿರುತ್ತವೆ. ನಿಮ್ಮಲ್ಲಿ ಉತ್ತಮ ಮಾರ್ಕೆಟಿಂಗ್ ಕೌಶಲ್ಯವಿದ್ದರೆ ಶಾಲೆಗಳು ಉತ್ಪಾದಕರನ್ನ ಸಂಪರ್ಕಿಸುವ ಬದಲು ನೇರವಾಗಿ ನಿಮ್ಮ ಬಳಿ ಬರಬಹುದು. ಆದರೆ ನೀವು ಉತ್ತಮ ಸಮವಸ್ತ್ರ ಉತ್ಪಾದಕರು ಯಾರು ಎಂದು ತಿಳಿದು ಅವರ ಲಿಂಕ್ ಇಟ್ಟುಕೊಂಡಿರಬೇಕು.

ಮೊಬೈಲ್ ಫುಡ್ ಕೋರ್ಟ್

ಮೊಬೈಲ್ ಫುಡ್ ಕೋರ್ಟ್

ಜನರು ತಮ್ಮ ಕೆಲಸಗಳಲ್ಲಿ ತುಂಬಾನೇ ಬ್ಯುಸಿಯಾಗಿರುತ್ತಾರೆ. ತಾವಾಗಿಯೇ ಆಹಾರ ತಯಾರಿಸಿಕೊಂಡು ಬರುವಷ್ಟು ಮತ್ತು ರೆಸ್ಟೋರೆಂಟ್ ಗೆ ತೆರಳಿ ಹೆಚ್ಚು ಹಣ ಕೊಟ್ಟು ತಿಂಡಿ-ಊಟ ಮಾಡಲು ಹೆಚ್ಚು ಉತ್ಸಾಹ ತೋರುವುದಿಲ್ಲ. ನೀವು ಮೊಬೈಲ್ ಫುಡ್ ಕೋರ್ಟ್ ತೆರೆದಿದ್ದಲ್ಲಿ ಅಂತವರ ಸಮಸ್ಯೆ ಪರಿಹಾರ ಆಗೋದರ ಜೊತೆಗೆ ನಿಮ್ಮ ಆದಾಯವೂ ಹೆಚ್ಚುತ್ತದೆ. ಹೆಚ್ಚಿನ ಪ್ರಮಾಣದ ದಟ್ಟಣೆಯ ಸ್ಥಳಗಳಲ್ಲಿ ಮೊಬೈಲ್ ಫುಡ್ ಕೋರ್ಟ್ ತೆರೆಯಬಹುದು.

ಆಹಾರ ಉತ್ಪನ್ನಗಳ ವ್ಯವಹಾರ
 

ಆಹಾರ ಉತ್ಪನ್ನಗಳ ವ್ಯವಹಾರ

ನೀವು ಆಹಾರ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಪರಿಣಿತಿ ಹೊಂದಿದ್ದರೆ ಅಥವಾ ವಿಶೇಷ ಆಹಾರ ಉತ್ಪನ್ನಗಳನ್ನು ತಯಾರಿಸುವ ಕೌಶಲ್ಯವಿದ್ದರೆ ಅದನ್ನೇ ಬಳಸಿಕೊಂಡು ಆಹಾರ ಉತ್ಪನ್ನಗಳನ್ನು ತಯಾರಿಕೆಗೆ ಮುಂದಾಗಬಹುದು. ಆದರೆ ನಿಮಗೆ ಆಹಾರ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟದ ಕುರಿತು ಉತ್ತಮ ಅರಿವಿರಬೇಕು.

ವೈವಾಹಿಕ ಸೇವೆಗಳು (Matrimony Services)

ವೈವಾಹಿಕ ಸೇವೆಗಳು (Matrimony Services)

ನಿಮ್ಮಲ್ಲಿ ಸೇವಾ ಮನೋಭಾವವಿದ್ದರೆ, ಆ ಮೂಲಕವೇ ಸ್ವಲ್ಪ ಹಣ ಸಂಪಾದಿಸುವ ಬಿಜಿನೆಸ್ ಈ ಮ್ಯಾಟ್ರಿಮೊನಿ ಸರ್ವೀಸ್. ಅವಿವಾಹಿತರಿಗೆ ಹೊಂದಾಣಿಕೆಯಾಗುವ ಪ್ರೊಫೈಲ್‌ಗಳನ್ನು ಒದಗಿಸುವ ಮೂಲಕ ಸೇವೆ ಒದಗಿಸಬಹುದು. ಹಾಗೂ ಹಣವನ್ನು ಸಂಪಾದಿಸಬಹುದು

ಬಳಕೆಯಾದ ಫರ್ನಿಚರ್ ಮಾರಾಟ

ಬಳಕೆಯಾದ ಫರ್ನಿಚರ್ ಮಾರಾಟ

ಅನೇಕ ಜನರು ತಮ್ಮ ಮನೆಯಲ್ಲಿ ಉತ್ತಮ ಫರ್ನಿಚರ್ ಇರಬೇಕು ಎಂದು ಬಯಸುತ್ತಾರೆ. ಆದರೆ ಎಲ್ಲರಿಗೂ ಹೊಸ ಫರ್ನಿಚರ್ ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಬಳಕೆಯಾದ ಫರ್ನಿಚರ್ , ಟಿವಿ ಖರೀದಿಗೆ ಎದುರು ನೋಡುತ್ತಿರುತ್ತಾರೆ. ಅಂತವರಿಗೆ ಸೇವೆಯನ್ನು ಒದಗಿಸುವುದರ ಜೊತೆಗೆ ಫರ್ನಿಚರ್ ಮಾರಾಟ ಮಾಡಲು ಬಯಸುತ್ತಿರುವ ಜನರಿಗೂ ಸೇವೆ ಒದಗಿಸುವುದರ ಮೂಲಕ ಹಣ ಸಂಪಾದಿಸಬಹುದು.

ಉಪಯೋಗಿಸಿದ ಕಾರುಗಳ ಮಾರಾಟ

ಉಪಯೋಗಿಸಿದ ಕಾರುಗಳ ಮಾರಾಟ

ಭಾರತದಲ್ಲಿ ಲಾಭದಾಯಕ ವ್ಯವಹಾರಗಳಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟವು ಒಂದಾಗಿದೆ. ಪ್ರತಿಯೊಬ್ಬರು ಹೊಸ ಕಾರನ್ನು ಖರೀದಿಸಲು ಸಾಧ್ಯವಿಲ್ಲ. ಹೀಗಾಗಿ ಸೆಕೆಂಡ್ ಹ್ಯಾಂಡ್ ಕಾರುಗಳ ಹುಡುಕಾಟದಲ್ಲಿರುತ್ತಾರೆ. ಈ ಮೂಲಕ ಬಹಳಷ್ಟು ಗ್ರಾಹಕರು ನಿಮ್ಮ ವ್ಯವಹಾರವನ್ನು ಪೋಷಿಸುತ್ತಾರೆ.

ಕಾರ್ ಡ್ರೈವಿಂಗ್ ಸ್ಕೂಲ್

ಕಾರ್ ಡ್ರೈವಿಂಗ್ ಸ್ಕೂಲ್

ಕಾರ್ ಡ್ರೈವಿಂಗ್ ಸ್ಕೂಲ್ ಕೂಡ ಉತ್ತಮ ಬಿಜಿನೆಸ್ ಐಡಿಯಾ ಆಗಿದೆ. ಆದರೆ ಈ ಬಿಜಿನೆಸ್ ಆರಂಭಿಸಲು ಮೊದಲು, ಎಲ್ಲಿ ಶುರು ಮಾಡುತ್ತೀರಿ ಎಂದು ಪ್ರದೇಶದ ಆಯ್ಕೆ ಮುಖ್ಯವಾಗಿರುತ್ತದೆ. ಎಲ್ಲಿ ಹೆಚ್ಚು ಜನರು ವಾಹನ ಚಲಾಯಿಸಲು ಆಸಕ್ತಿ ಹೊಂದಿದ್ದಾರೆ ಮತ್ತು ವಾಹನ ಚಲಾಯಿಸಲು ಹೆಚ್ಚಿನ ಜನರಿಗೆ ಗೊತ್ತಿಲ್ಲ ಎಂಬ ಪ್ರದೇಶವನ್ನು ಹುಡುಕಬೇಕು.

English summary

Small Business Ideas In India For 2020

Best upcoming small business ideas in india for 2020
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more