For Quick Alerts
ALLOW NOTIFICATIONS  
For Daily Alerts

ಕೆಲಸ ತೊರೆದು 2 ದಿನಗಳಲ್ಲಿ ನಿಮ್ಮ ಕೈ ಸೇರಲಿದೆ ಬಾಕಿ ಹಣ

|

ನೀವು ಯಾವುದಾದರೂ ಕಂಪನಿ ಅಥವಾ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅಲ್ಲಿಂದ ಕೆಲಸ ತೊರೆದ ಬಳಿಕ ನಿಮ್ಮ ಅಂತಿಮ ಪಾವತಿಯನ್ನು ಪಡೆಯಲು ಸಾಮಾನ್ಯವಾಗಿ ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಆದರೆ ಶೀಘ್ರದಲ್ಲೇ ಇದು ಬದಲಾವಣೆಯಾಗುವ ಸಾಧ್ಯತೆ ಇದೆ. ವೇತನ ಸಂಹಿತೆ 2019ರ ಅಧಿಸೂಚನೆ ಪ್ರಕಾರ ನಿಮ್ಮ ಕೊನೆಯ ಕೆಲಸದ ದಿನದ ನಂತರ ಎರಡು ದಿನಗಳಲ್ಲಿ ನಿಮ್ಮ ಉದ್ಯೋಗದಾತರು(Employer) ಎಲ್ಲಾ ವೇತನವನ್ನು ಪಾವತಿಸಬೇಕಾಗುತ್ತದೆ.

ಪೂರ್ಣ ಮತ್ತು ಅಂತಿಮ ಪಾವತಿ ಕುರಿತು ವೇತನ ಸಂಹಿತೆ ಏನು ಹೇಳುತ್ತದೆ?
 

ಪೂರ್ಣ ಮತ್ತು ಅಂತಿಮ ಪಾವತಿ ಕುರಿತು ವೇತನ ಸಂಹಿತೆ ಏನು ಹೇಳುತ್ತದೆ?

ವೇತನ ಸಂಹಿತೆ ಅಡಿಯಲ್ಲಿ ವೇತನವನ್ನು ಸಂಬಳ, ಭತ್ಯೆ ಅಥವಾ ಇನ್ನಿತರ ರೀತಿಯಲ್ಲಿ ಪಡೆಯುವ ಎಲ್ಲಾ ಸಂಭಾವನೆ ಎಂದು ವ್ಯಾಖ್ಯಾನಿಸಲಾಗಿದೆ. ಇದು ಮೂಲ ವೇತನ, ಭತ್ಯೆ, ಉಳಿಸಿಕೊಳ್ಳುವ ಭತ್ಯೆ(Retaining allowance),ಎಲ್ಲವನ್ನೂ ಒಳಗೊಂಡಿದೆ. ಅಲ್ಲದೆ ವಸತಿ ಸೌಕರ್ಯಗಳ ಮೌಲ್ಯ, ಸಾಗಾಣೆ ಭತ್ಯೆ, ರಜೆ ಪ್ರಯಾಣ ಭತ್ಯೆ ಮುಂತಾದ ಕೆಲವು ನಿರ್ದಿಷ್ಟ ಪರಿಹಾರ ವಸ್ತುಗಳನ್ನು ಹೊರತುಪಡಿಸುತ್ತದೆ.

2019ರ ನೂತನ ವೇತನ ಸಂಹಿತೆ ಅಧಿಸೂಚನೆ ಪ್ರಕಾರ ಒಬ್ಬ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕಿದ್ದಲ್ಲಿ ಅಥವಾ ರಾಜೀನಾಮೆ ನೀಡಿದ್ದಾನೆ ಅಥವಾ ಸಂಸ್ಥೆಯು ಮುಚ್ಚುವಿಕೆಯಿಂದ ನಿರುದ್ಯೋಗಿಗಳಾದರೆ ಆತನಿಗೆ ಪಾವತಿಸಬೇಕಾದ ಹಣವನ್ನು 2 ಕಾರ್ಯ ನಿರ್ವಹಣೆ ದಿನದಲ್ಲಿ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ಡಿಸೆಂಬರ್ 18, 2019 ಉದ್ಯೋಗಿಯ ಕೊನೆಯ ಕೆಲಸದ ದಿನವಾಗಿದ್ದರೆ, ಉದ್ಯೋಗದಾತರು ಈ ಮೇಲ್ಕಂಡ ರೀತಿಯಲ್ಲಿ ತಿಳಿಸಿರುವಂತೆ ಡಿಸೆಂಬರ್ 20, 2019ರೊಳಗೆ ಹಣ ಪಾವತಿಸಬೇಕು.

ಈಗಿರುವ ನಿಯಮಗಳು ಏನು?

ಈಗಿರುವ ನಿಯಮಗಳು ಏನು?

1936ರ ವೇತನ ಕಾಯ್ದೆ ಪ್ರಕಾರ ವೇತನ ಎಂದರೆ ನಿರ್ದಿಷ್ಟಪಡಿಸಲಾಗಿರುವ ಹೊರಗಿಡುವಿಕೆಯನ್ನು ಹೊರತುಪಡಿಸಿ, ಪಾವತಿಸಿದ ಒಟ್ಟು ಸಂಭಾವನೆಯಾಗಿದೆ. ಬೋನಸ್ ಪಾವತಿ, ಉದ್ಯೋಗದ ನಿಯಮಗಳು, ಯಾವುದೇ ಮನೆಯ ಸೌಕರ್ಯಗಳ ಮೌಲ್ಯ, ವೈದ್ಯಕೀಯ ಸೌಲಭ್ಯಗಳು, ಭವಿಷ್ಯ ನಿಧಿಗೆ ಪಾವತಿಸಿರುವ ಯಾವುದೇ ಕೊಡುಗೆಗಳು ಇದರ ಭಾಗವಲ್ಲ.

ಸದ್ಯ ಪೂರ್ಣ ಹಾಗೂ ಅಂತಿಮ ಪಾವತಿ ವಿಚಾರವನ್ನು ಇತ್ಯರ್ಥಪಡಿಸುವ ಸಮಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ, ಕಂಪನಿಗಳು ತಮ್ಮದೇ ಆದ ನೀತಿಗಳನ್ನು ಹೊಂದಿವೆ.

2019ರ ವೇತನ ಸಂಹಿತೆ ಅಧಿಸೂಚನೆಯಿಂದ ಉದ್ಯೋಗಿಗಳಿಗೆ ಹೇಗೆ ಅನುಕೂಲ

2019ರ ವೇತನ ಸಂಹಿತೆ ಅಧಿಸೂಚನೆಯಿಂದ ಉದ್ಯೋಗಿಗಳಿಗೆ ಹೇಗೆ ಅನುಕೂಲ

ಮುಂಬರುವ ವೇತನ ಸಂಹಿತೆ ಅಧಿಸೂಚನೆ ಪ್ರಕಾರ ಉದ್ಯೋಗಿಯು ರಾಜೀನಾಮೆ ನೀಡಿದ ಎರಡು ದಿನಗಳಲ್ಲಿ ಬಾಕಿ ಹಣ ಪಾವತಿಯನ್ನು ಮಾಡಬೇಕಿದೆ. ವೇತನ ಸಂಹಿತೆಯನ್ನು ಜಾರಿಗೆ ತಂದ ನಂತರ ಕಂಪನಿಗಳು ಹೆಚ್ಚು ಸ್ಪಷ್ಟತೆ ಮತ್ತು ಉತ್ತಮ ಅನುಸರಣೆಯನ್ನು ತರುವ ಸಾಧ್ಯತೆಯಿದೆ.

ಪೀಪಲ್ ಅಡ್ವೈಸರಿ ಸರ್ವೀಸ್‌ನ ನಿರ್ದೇಶಕ ಪುನೀತ್ ಗುಪ್ತಾ ಹೇಳುವ ಪ್ರಕಾರ ಕನಿಷ್ಠ ವೇತನ ಪಾವತಿ ಮತ್ತು ನೌಕರರಿಗೆ ಸಕಾಲಿಕವಾಗಿ ಹಣ ಪಾವತಿಸಲು ಸಂಬಂಧಿಸಿದ ಕಾನೂನುಗಳನ್ನು ಸಾರ್ವತ್ರಿಕಗೊಳಿಸಲು ಈ ಅಧಿಸೂಚನೆಯು ಪ್ರಯತ್ನಿಸುತ್ತಿದೆ. ಆದರೆ ಈ ಹಿಂದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಸಮಯವನ್ನು ಕಂಪನಿಗಳು ಹೊಂದಿರದೇ ಮೌನವಾಗಿದ್ದವು ಎಂದು ಹೇಳಿದ್ದಾರೆ.

ಈ ನೂತನ ಅಧಿಸೂಚನೆಯು ವ್ಯಾಪಕವಾದ ಉದ್ಯೋಗಿಗಳಿಗೆ ಅನ್ವಯಿಸುವಂತೆ ವಿಸ್ತರಿಸಲಿದೆ. ಮತ್ತು ಉದ್ಯೋಗದಾತರು ಕಾರ್ಮಿಕ ಕಾನೂನುಗಳನ್ನು ಹೆಚ್ಚು ಅನುಸರಿಸುವುದನ್ನು ನಿರೀಕ್ಷಿಸಲಾಗಿದೆ.

ನೀವು ಕೆಲಸ ಮಾಡುವ ಕಂಪನಿ ಈ ಸೌಲಭ್ಯಗಳನ್ನು ಒದಗಿಸಬೇಕು

ಯಾವ ದಿನಾಂಕದಿಂದ ಅನ್ವಯವಾಗಲಿದೆ?
 

ಯಾವ ದಿನಾಂಕದಿಂದ ಅನ್ವಯವಾಗಲಿದೆ?

2019ರ ನೂತರ ವೇತನ ಸಂಹಿತೆ ಅಧಿಸೂಚನೆಯನ್ನು ಸಂಸತ್ತು ಅಂಗೀಕರಿಸಲ್ಪಟ್ಟಿದ್ದರೂ ಅದು ಯಾವ ದಿನಾಂಕದಿಂದ ಅನ್ವಯವಾಗಬೇಕು ಎಂಬುದನ್ನು ಸರ್ಕಾರ ತಿಳಿಸಬೇಕಿದೆ ಎಂದು ಕಸ್ತೂರಿರಂಗನ್ ಹೇಳಿದ್ದಾರೆ. ಅಂದರೆ ಸಂಸತ್ತು ನೂತನ ವೇತನ ಸಂಹಿತೆ ಅಧಿಸೂಚನೆಯನ್ನು ಅಂಗೀಕರಿಸಿದ್ದರೂ ಅದರ ಅನುಷ್ಠಾನಕ್ಕೆ ಅಗತ್ಯವಾದ ವಿವಿಧ ಕಾರ್ಯ ವಿಧಾನಗಳ ನಿಯಮಗಳು, ರೂಪಗಳನ್ನು ಇನ್ನೂ ತಿಳಿಸಲಾಗಿಲ್ಲ.

ಇಪಿಎಫ್ (EPF) ವಿತ್ ಡ್ರಾ ಯಾವಾಗ ಮಾಡಬಹುದು?

ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಕರಡು ನಿಯಮಗಳನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನವೆಂಬರ್ 1, 2019ರಂದು ಅಪ್‌ಲೋಡ್ ಮಾಡಲಾಗಿದೆ.

English summary

Soon You Will Get Full And Final Payment In Two Days

Employee will get final payment in 2 working days soon, how many days after resignation employee will get final payment
Story first published: Wednesday, December 18, 2019, 13:40 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more