For Quick Alerts
ALLOW NOTIFICATIONS  
For Daily Alerts

ಸವರನ್ ಗೋಲ್ಡ್ ಬಾಂಡ್ ಯೋಜನೆ: ಆಗಸ್ಟ್‌ 30ರಿಂದ ಖರೀದಿಗೆ ಅವಕಾಶ

|

ಹೂಡಿಕೆದಾರರ ನೆಚ್ಚಿನ ಗೋಲ್ಡ್‌ ಬಾಂಡ್ ಯೋಜನೆ ಸವರನ್ ಗೋಲ್ಡ್ ಬಾಂಡ್‌ನ ಆರನೇ ಚಂದಾದಾರಿಕೆ ಆಗಸ್ಟ್‌ 30 ರಿಂದ ಆರಂಭಗೊಳ್ಳಲಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂತಿಮ ಸಿರೀಸ್ ಆಗಿದ್ದು ಸೆಪ್ಟೆಂಬರ್ 03ರವರೆಗೆ ಚಂದಾದಾರಿಕೆಗೆ ಅವಕಾಶವಿದೆ ಶುಕ್ರವಾರ ಆರ್‌ಬಿಐ ತಿಳಿಸಿದೆ.

 

ಈಗಾಗಲೇ ಒಟ್ಟು ಐದು ಕಂತುಗಳಲ್ಲಿ ಯೋಜನೆಗೆ ಮುಂದುವರಿದಿದ್ದು, ಅಂತಿಮ ಕಂತಿನಲ್ಲಿ, ಒಂದು ಗ್ರಾಂ ಚಿನ್ನದ ದರವನ್ನು 4,732 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಸವರನ್ ಗೋಲ್ಡ್ ಬಾಂಡ್ 2021-22ರ ಸರಣಿ VI ಚಂದಾದಾರಿಕೆಯ ಮೇಲೆ ಹೂಡಿಕೆ ಮಾಡಲು ಐದು ದಿನಗಳ ಕಾಲ ಅವಕಾಶವಿದ್ದು, ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಹೆಚ್ಚಿನ ವಿವರಗಳನ್ನು ತಿಳಿಯಿರಿ.

ಪ್ರತಿ ಗ್ರಾಂಗೆ 4,732 ರೂಪಾಯಿ

ಪ್ರತಿ ಗ್ರಾಂಗೆ 4,732 ರೂಪಾಯಿ

ಆರ್‌ಬಿಐ ಪ್ರಕಾರ, ಬಾಂಡ್‌ನ ಅತ್ಯಲ್ಪ ಮೌಲ್ಯವು ಪ್ರತಿ ಗ್ರಾಂ ಚಿನ್ನಕ್ಕೆ 4,732 ರೂ. ನಿಗದಿ ಮಾಡಲಾಗಿದೆ. ಆರ್‌ಬಿಐನೊಂದಿಗೆ ಸಮಾಲೋಚಿಸಿ ಈ ಬಾಂಡ್‌ಗಳ ಮೇಲೆ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿಯನ್ನು ನೀಡುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಮತ್ತು ಡಿಜಿಟಲ್ ಮೋಡ್ ಮೂಲಕ ಅರ್ಜಿ ಪಾವತಿ ಮಾಡುವವರಿಗೆ ಈ ವಿನಾಯಿತಿಗಳು ಲಭ್ಯವಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ರಿಯಾಯಿತಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರಿಗೆ ರಿಯಾಯಿತಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ನಾಮಮಾತ್ರ ಮೌಲ್ಯಕ್ಕಿಂತ ಪ್ರತಿ ಗ್ರಾಂಗೆ 50 ರೂಪಾಯಿ ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಮತ್ತು ಅರ್ಜಿಯ ವಿರುದ್ಧ ಪಾವತಿಯನ್ನು ಡಿಜಿಟಲ್ ಮೋಡ್ ಮೂಲಕ ಮಾಡಲಾಗುತ್ತದೆ. ಪ್ರತಿ ಗ್ರಾಂಗೆ 50 ರೂಪಾಯಿಯಂತೆ, 10 ಗ್ರಾಂಗೆ 500 ರೂಪಾಯಿ ರಿಯಾಯಿತಿ ನೀಡಲಾಗುವುದು

ಸವರನ್ ಗೋಲ್ಡ್ ಬಾಂಡ್ ಖರೀದಿ ಹೇಗೆ?
 

ಸವರನ್ ಗೋಲ್ಡ್ ಬಾಂಡ್ ಖರೀದಿ ಹೇಗೆ?

ಸವರನ್ ಗೋಲ್ಡ್‌ ಬಾಂಡ್‌ಗಳನ್ನು ಖರೀದಿಸಲು ನಿಮ್ಮ ಬ್ಯಾಂಕ್ ಅಥವಾ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ನೀವು ಸಂಪರ್ಕಿಸಬಹುದು. ಇದಲ್ಲದೆ, ಆಯ್ದ ಅಂಚೆ ಕಚೇರಿಗಳ ಮೂಲಕವೂ ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೆ ಇದನ್ನು ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ (ಎನ್ಎಸ್ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (ಬಿಎಸ್ಇ) ಯಿಂದಲೂ ಖರೀದಿಸಬಹುದು.

ಸವರನ್ ಗೋಲ್ಡ್‌ ಬಾಂಡ್ ಶೇ. 2.5 ರಷ್ಟು ಬಡ್ಡಿ

ಸವರನ್ ಗೋಲ್ಡ್‌ ಬಾಂಡ್ ಶೇ. 2.5 ರಷ್ಟು ಬಡ್ಡಿ

ಸವರನ್ ಗೋಲ್ಡ್‌ ಬಾಂಡ್‌ಗಳಲ್ಲಿ ಶೇಕಡಾ 2.5 ರಷ್ಟು ಬಡ್ಡಿ ಲಭ್ಯವಿದೆ. ಇದರಲ್ಲಿ ಹೂಡಿಕೆ ಮಾಡುವವರಿಗೆ ವಾರ್ಷಿಕವಾಗಿ ಶೇಕಡಾ 2.5ರಷ್ಟು ಬಡ್ಡಿಯನ್ನು ಸಹ ನೀಡಲಾಗುತ್ತದೆ. ಅಂದರೆ, ಒಬ್ಬ ವ್ಯಕ್ತಿಯು ಸವರನ್ ಗೋಲ್ಡ್‌ ಬಾಂಡ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದರೆ, ಅವನಿಗೆ ಪ್ರತಿ ವರ್ಷ 2500 ರೂ. ಬಡ್ಡಿ ಸಿಗಲಿದ್ದು, 8 ವರ್ಷಗಳವರೆಗೆ ಲಭ್ಯವಿದೆ. ಇನ್ನು ಸವರನ್ ಗೋಲ್ಡ್‌ ಬಾಂಡ್‌ನ ಮುಕ್ತಾಯ ಅವಧಿ 8 ವರ್ಷಗಳು ಮಾತ್ರ. ಆದಾಗ್ಯೂ, ಹೂಡಿಕೆದಾರರಿಗೆ 5 ವರ್ಷಗಳ ನಂತರ ಅದನ್ನು ಮಾರಾಟ ಮಾಡುವ ಸ್ವಾತಂತ್ರ್ಯವಿದೆ.

ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಬಾಂಡ್‌ಗಳನ್ನು ಬ್ಯಾಂಕುಗಳ ಮೂಲಕ (ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಪಾವತಿ ಬ್ಯಾಂಕ್‌ಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಆಯ್ದ ಅಂಚೆ ಕಚೇರಿಗಳು ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಿಎಸ್‌ಇ ಮೂಲಕ ಮಾರಾಟ ಮಾಡಲಾಗುತ್ತದೆ.

ಗೋಲ್ಡ್ ಬಾಂಡ್ ಯೋಜನೆಯ ಆರಂಭದಿಂದ 2021ರ ಮಾರ್ಚ್ ಅಂತ್ಯದವರೆಗೆ ಒಟ್ಟು 25,702 ಕೋಟಿ ರೂ. ಗುರಿಯೊಂದಿಗೆ, ರಿಸರ್ವ್ ಬ್ಯಾಂಕ್ 2020-21ರ ಅವಧಿಯಲ್ಲಿ 12 ಟ್ರ್ಯಾಂಚ್ ಎಸ್‌ಜಿಬಿಗಳನ್ನು ಒಟ್ಟು 16,049 ಕೋಟಿ ರೂಪಾಯಿಗಳನ್ನು (32.35 ಟನ್) ಬಿಡುಗಡೆ ಮಾಡಿತ್ತು. ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಮತ್ತು ಗೃಹ ಉಳಿತಾಯವನ್ನು ಚಿನ್ನದ ಖರೀದಿಗಾಗಿ ಆರ್ಥಿಕ ಉಳಿತಾಯವಾಗಿ ಪರಿವರ್ತಿಸುವ ಉದ್ದೇಶದಿಂದ ಈ ಯೋಜನೆಯನ್ನು ನವೆಂಬರ್ 2015 ರಲ್ಲಿ ಆರಂಭಿಸಲಾಯಿತು.

English summary

Sovereign Gold Bond 2021-22 : 6th Series Opens Monday

The Reserve Bank of India has announced the Sovereign Gold Bond Scheme 2021-2022, Series 6, that will be open for subscription for five days from August 30 to September 3, 2021.
Story first published: Saturday, August 28, 2021, 16:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X