For Quick Alerts
ALLOW NOTIFICATIONS  
For Daily Alerts

ಸ್ವಿಗ್ಗಿ, ಜೊಮ್ಯಾಟೊ ಗ್ರಾಹಕರಿಂದ ಶೇ. 5 ಜಿಎಸ್‌ಟಿ ಸಂಗ್ರಹಿಸಲಿದೆ: ಏನಿದು ಬದಲಾವಣೆ?

|

ದೇಶದ ಪ್ರಮುಖ ಆಹಾರ ಪೂರೈಕೆ ಅಪ್ಲಿಕೇಷನ್‌ (food delivery application) ಸ್ವಿಗ್ಗಿ ಮತ್ತು ಜೊಮ್ಯಾಟೊದಂತಹ ಕಂಪನಿಗಳು ಹೊಸ ವರ್ಷದಿಂದ ರೆಸ್ಟೋರೆಂಟ್ ಬದಲಿಗೆ ಗ್ರಾಹಕರಿಂದಲೇ ನೇರವಾಗಿ ಶೇ. 5 ರಷ್ಟು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅನ್ನು ಸಂಗ್ರಹ ಮಾಡಲಿದೆ.

 

ಕೇಂದ್ರ ಸರ್ಕಾರದ 45ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಸೆಪ್ಟೆಂಬರ್‌ನಲ್ಲಿ ನಡೆದಿದೆ. ಈ ಸಭೆಯಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೊದಂತಹ ಕಂಪನಿಗಳು ಗ್ರಾಹಕರಿಂದಲೇ ನೇರವಾಗಿ ಶೇ. 5 ರಷ್ಟು ಜಿಎಸ್‌ಟಿ ಸಂಗ್ರಹ ಮಾಡುವ ಪ್ರಸ್ತಾಪವನ್ನು ಅನುಮೋದನೆ ಮಾಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಭಾರತದಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೊ ರೀತಿಯ ಕಂಪನಿಗಳು ರೆಸ್ಟೋರೆಂಟ್ ಬದಲಿಗೆ ಗ್ರಾಹಕರಿಂದಲೇ ನೇರವಾಗಿ ಶೇ.5ರಷ್ಟು ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆಯನ್ನು ಸಂಗ್ರಹಿಸಬೇಕು," ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ರೆಸ್ಟೋರೆಂಟ್ ಮಾಲೀಕರು ತೆರಿಗೆಯನ್ನು ಪಾವತಿಸುತ್ತಿದ್ದರು. ಆದರೆ ಈಗ ಆಪ್‌ಗಳು ಕೂಡಾ ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ. ಆಹಾರ ಪೂರೈಕೆ ಸಂಸ್ಥೆಗಳ ಮೇಲೆ ಶೇಕಡ ಐದರಷ್ಟು ಜಿಎಸ್‌ಟಿಯನ್ನು ವಿಧಿಸಲಾಗಿತ್ತು. ಆದರೆ ಈಗ ಈ ಸಂಸ್ಥೆಗಳ ಮೇಲಿನ ಮೇಲಿನ ತೆರಿಗೆ ನೀತಿ ಬದಲಾವಣೆ ಆಗಿದ್ದು, ಈ ಫುಡ್ ಡೆಲಿವರಿ ಅಪ್ಲಿಕೇಷನ್‌ಗಳು ಗ್ರಾಹಕರಿಂದ ಶೇ.5ರಷ್ಟು ಜಿಎಸ್ ಟಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಬೇಕಿದೆ. ಹಾಗಾದರೆ ಈ ಬದಲಾವಣೆ ಏತಕ್ಕಾಗಿ ಮಾಡಲಾಗಿದೆ?, ಹಾಗೂ ಇದರಿಂದಾಗಿ ಗ್ರಾಹಕರ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ..

ತೆರಿಗೆ ನೀತಿಯಲ್ಲಿ ಏಕೆ ಬದಲಾವಣೆ ಮಾಡಲಾಗಿದೆ?

ತೆರಿಗೆ ನೀತಿಯಲ್ಲಿ ಏಕೆ ಬದಲಾವಣೆ ಮಾಡಲಾಗಿದೆ?

ಈಗ ಗ್ರಾಹಕರು ಜೊಮ್ಯಾಟೊ ಹಾಗೂ ಸ್ವಿಗ್ಗಿ ಮೂಲಕ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್‌ ಮಾಡಿದರೆ, ಆಹಾರದ ಮೇಲೆ ಶೇಕಡ 5 ರಷ್ಟು ತೆರಿಗೆಯನ್ನು ಈ ಸಂಸ್ಥೆಗಳೇ ಸಂಗ್ರಹಿಸಿ ರೆಸ್ಟೋರೆಂಟ್‌ಗಳಿಗೆ ನೀಡುತ್ತಿದ್ದವು. ಆದರೆ ಕೆಲವು ರೆಸ್ಟೋರೆಂಟ್‌ಗಳು ಈ ತೆರಿಗೆಯನ್ನು ಸರಿಯಾಗಿ ಪಾವತಿ ಮಾಡಲ್ಲ. ಗ್ರಾಹಕರಿಂದ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಆದರೆ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿಲ್ಲ. ಕೆಲವು ರೆಸ್ಟೋರೆಂಟ್‌ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ಫುಡ್‌ ಡೆಲಿವರಿ ಆಪ್ಲಿಕೇಷನ್‌ಗಳು ಜನವರಿ 1 ರಿಂದ ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡುವ ಕಾರ್ಯವನ್ನು ಮಾಡಲಿದೆ. ಇದರಿಂದಾಗಿ ರೆಸ್ಟೋರೆಂಟ್‌ಗಳು ಮ್ಮ ಆನ್ ಲೈನ್ ವ್ಯವಹಾರದ ಮಾಹಿತಿಗಳನ್ನು ಮುಚ್ಚಿಡಲು ಸಾಧ್ಯವಾಗಲಾರದು.

ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರಲಿದೆ?

ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರಲಿದೆ?

ಈ ಹೊಸ ವ್ಯವಸ್ಥೆ ಗ್ರಾಹಕರ ಮೇಲೆ ಯಾವುದೇ ಪರಿಣಾಮವನ್ನು ಬೀರಲಾರದು. ಏಕೆಂದರೆ ಈಗಾಗಲೇ ಇರುವ ತೆರಿಗೆಯನ್ನು ಜಮೆ ಮಾಡುವ ವಿಧಾನದಲ್ಲಿ ಮಾತ್ರ ಬದಲಾವಣೆಯನ್ನು ತರಲಾಗಿದೆಯೇ ಹೊರತು ಜಿಎಸ್‌ಟಿಯನ್ನು ಹೆಚ್ಚಳ ಮಾಡಿಲ್ಲ ಅಥವಾ ಹೊಸದಾಗಿ ಜಿಎಸ್‌ಟಿ ವಿಧಿಸಲಾಗಿಲ್ಲ. ಹೊಸ ತೆರಿಗೆಯನ್ನು ವಿಧಿಸದಿರುವ ಕಾರಣದಿಂದಾಗಿ ಈ ಹೊಸ ನೀತಿಯು ಗ್ರಾಹಕರ ಮೇಲೆ ಯಾವುದೇ ಪರಿಣಾಮವನ್ನು ಉಂಟು ಮಾಡಲಾರದು. ಪ್ರಸ್ತುತ ಇರುವಂತೆ ಗ್ರಾಹಕರು ಶೇಕಡ .5ರಷ್ಟು ತೆರಿಗೆಯನ್ನು ಪಾವತಿಸಬೇಕಾಗಿದೆ ಅಷ್ಟೇ.

ಇಲ್ಲಿ ಪೆಟ್ಟು ಬೀಳುವುದು ಸಣ್ಣ ರೆಸ್ಟೋರೆಂಟ್‌ಗಳಿಗೆ
 

ಇಲ್ಲಿ ಪೆಟ್ಟು ಬೀಳುವುದು ಸಣ್ಣ ರೆಸ್ಟೋರೆಂಟ್‌ಗಳಿಗೆ

ಈ ನೀತಿಯಿಂದಾಗಿ ಮುಖ್ಯವಾಗಿ ಸಣ್ಣ ರೆಸ್ಟೋರೆಂಟ್‌ಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳಿದ್ದಾರೆ. 20ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ, ಈ ಹಿಂದೆ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇಲ್ಲದ ರೆಸ್ಟೋರೆಂಟ್‌ಗಳ ಮೇಲೆ ಈ ಹೊಸ ತೆರಿಗೆ ನೀತಿಯು ಪರಿಣಾಮ ಬೀರಲಿದೆ. ಈ ಪುಟ್ಟ ರೆಸ್ಟೋರೆಂಟ್‌ಗಳು ಕೂಡಾ ಇನ್ನು ಮುಂದೆ ಆನ್‌ಲೈನ್‌ ವ್ಯವಹಾರಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಈವರೆಗ ಈ ಸಣ್ಣ ರೆಸ್ಟೋರೆಂಟ್‌ಗಳು ಆನ್‌ಲೈನ್‌ ವ್ಯವಹಾರದ ದಾಖಲೆಗಳನ್ನು ನಿರ್ವಹಣೆ ಮಾಡುತ್ತಿರಲಿಲ್ಲ. ಆದೆ ಇನ್ನು ಮುಂದೆ ಎಲ್ಲಾ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇದರೊಂದಿಗೆ ಆಹಾರ ಡೆಲಿವರಿ ಮಾಡುವ ಸಂಸ್ಥೆಗಳಿಗೂ ಕೂಡಾ ಹೊರೆ ಉಂಟಾಗಲಿದೆ. ರೆಸ್ಟೋರೆಂಟ್‌ ಪರವಾಗಿ ಆನ್‌ಲೈನ್‌ ಆಹಾರ ಪೂರೈಕೆ ಸಂಸ್ಥೆಗಳೇ ತೆರಿಗೆ ಸಂಗ್ರಹ ಮಾಡಿ, ಅದನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ.

ಗ್ರಾಹಕರ ಮೇಲೆ ಹೊರೆ ಆಗಲಾರದು ಎಂದಿರುವ ಸರ್ಕಾರ

ಗ್ರಾಹಕರ ಮೇಲೆ ಹೊರೆ ಆಗಲಾರದು ಎಂದಿರುವ ಸರ್ಕಾರ

ಇನ್ನು ಸರ್ಕಾರ ಈ ಬಗ್ಗೆ ಪ್ರಸ್ತಾವನೆ ಮಾಡಿದ ಸಂದರ್ಭದಲ್ಲೇ ಗ್ರಾಹಕರಿಗೆ ಹೊರೆ ಆಗದು ಎಂದು ಹೇಳಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, "ನೀವು ಡೆಲವರಿ ಮಾಡುವವರಿಂದ ಆಹಾರವನ್ನು ಆರ್ಡರ್ ಮಾಡಿದರೆ, ಪ್ರಸ್ತುತ ರೆಸ್ಟೋರೆಂಟ್ ತೆರಿಗೆ ಪಾವತಿಸುತ್ತಿದೆ. ಆದರೆ ಕೆಲವು ರೆಸ್ಟೋರೆಂಟ್‌ಗಳು ತೆರಿಗೆ ಪಾವತಿಸುತ್ತಿರಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಈಗ ನೀವು ಸಂಗ್ರಹಾಕಾರರಿಗೆ ಆರ್ಡರ್ ಮಾಡಿದರೆ, ಗ್ರಾಹಕರಿಂದ ಸಂಗ್ರಹಿಸಿ ನೇರವಾಗಿ ಅಧಿಕಾರಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ. ಈ ಮೊದಲು ರೆಸ್ಟೋರೆಂಟ್ ಈ ಕಾರ್ಯವನ್ನು ಮಾಡುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿ ಹೆಚ್ಚುವರಿ ತೆರಿಗೆ ಹೇರುವುದಿಲ್ಲ. ಕೇವಲ ಜಿಎಸ್‌ಟಿ ಸಂಗ್ರಹಣಾ ಕೇಂದ್ರವನ್ನು ವರ್ಗಾಯಿಸಲಾಗುತ್ತಿದೆ," ಎಂದು ತಿಳಿಸಿದ್ದಾರೆ.

English summary

Swiggy, Zomato to collect 5% GST from customers from Jan 1, Know How it effect?

Swiggy, Zomato to collect 5% GST from customers from January 1. Know How it effect.
Story first published: Tuesday, December 21, 2021, 10:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X