For Quick Alerts
ALLOW NOTIFICATIONS  
For Daily Alerts

ಟಾಟಾ ಕ್ಯಾಪಿಟಲ್ ನಿಂದ 7.99 ಪರ್ಸೆಂಟ್ ಬಡ್ಡಿ ದರದ ಹೌಸಿಂಗ್ ಲೋನ್

|

ಟಾಟಾ ಕ್ಯಾಪಿಟಲ್ ಗೆ ಸೇರಿದ ಗೃಹ ಸಾಲ ಸಂಸ್ಥೆಯಾದ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಟಿಸಿಎಚ್ ಎಫ್ ಎಲ್) ಎಕ್ಸ್ ಕ್ಲೂಸಿವ್ ಗೃಹ ಸಾಲ ಯೋಜನೆಯನ್ನು ಸೋಮವಾರ ಘೋಷಣೆ ಮಾಡಿದೆ. ನಗರ ಪ್ರದೇಶ, ಟಯರ್ 2 ಹಾಗೂ ಟಯರ್ 3 ನಗರ ಪ್ರದೇಶಗಳ ವೇತನದಾರರು ಮತ್ತು ಸ್ವ ಉದ್ಯೋಗಿಗಳಿಗೆ ಈ ಯೋಜನೆ ಪರಿಚಯಿಸಲಾಗಿದೆ.

 

ಯಾವ ಬ್ಯಾಂಕ್ ನಲ್ಲಿ ಹೌಸಿಂಗ್ ಲೋನ್ ಮೇಲೆ ಬಡ್ಡಿ ಬಹಳ ಕಡಿಮೆ?

ಈ ಯೋಜನೆ ಅಡಿಯಲ್ಲಿ 35 ಲಕ್ಷ ರುಪಾಯಿ ತನಕದ ಸಾಲವನ್ನು ವಾರ್ಷಿಕ ಬಡ್ಡಿ ದರ 7.99 ಪರ್ಸೆಂಟ್ ನಲ್ಲಿ ನೀಡಲಾಗುತ್ತದೆ. ಆಸ್ತಿಯ ಮೌಲ್ಯ, ನಗರ ಹಾಗೂ ಪಟ್ಟಣದ ಕ್ಯಾಟಗರಿ ಆಧಾರದ ಮೇಲೆ ಈ ಸಾಲವನ್ನು ಅರ್ಹರು ಪಡೆದುಕೊಳ್ಳಬಹುದು ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಾಲ ನೀಡುವುದಕ್ಕೆ ಮಾನದಂಡ ಏನು?

ಸಾಲ ನೀಡುವುದಕ್ಕೆ ಮಾನದಂಡ ಏನು?

ನಗರ ಪ್ರದೇಶ 1ನೇ ವಿಭಾಗದ ಅಡಿಯಲ್ಲಿ ಬರುವುದಕ್ಕೆ

ವೇತನದಾರರಿಗೆ 35 ಲಕ್ಷದೊಳಗಿನ ಸಾಲಕ್ಕೆ

ಸ್ವ ಉದ್ಯೋಗಿಗಳಿಗೆ 25 ಲಕ್ಷದೊಳಗಿನ ಸಾಲಕ್ಕೆ

ಆಸ್ತಿಯ ಮೌಲ್ಯ

ವೇತನದಾರರಿಗೆ 45 ಲಕ್ಷದೊಳಗಿದ್ದರೆ

ಸ್ವ ಉದ್ಯೋಗಿಗಳಿಗೆ 30 ಲಕ್ಷದೊಳಗಿದ್ದರೆ

ಬಡ್ಡಿ ದರ 7.99 ಪರ್ಸೆಂಟ್

ಬಡ್ಡಿ ದರ 7.99 ಪರ್ಸೆಂಟ್

ಬಡ್ಡಿ ದರವು 7.99 ಪರ್ಸೆಂಟ್ ಇರುತ್ತದೆ. ಕೈಗೆಟುಕುವ ದರದ ಗೃಹ ಸಾಲವನ್ನು ಉತ್ತೇಜಿಸುವ ಉದ್ದೇಶಕ್ಕೆ ಈ ಯೋಜನೆ ತರಲಾಗಿದೆ. ಇದರಿಂದ ಸ್ವಂತ ಮನೆ ತೆಗೆದುಕೊಳ್ಳಬೇಕು ಅಂತ ಇರುವವರಿಗೆ ನೆರವಾಗುತ್ತದೆ. ಭಾರತದಾದ್ಯಂತ ಇರುವ ಗ್ರಾಹಕರಿಗೆ ಸುಲಭ ಹಾಗೂ ಸಮಸ್ಯೆ ಇಲ್ಲದಂತೆ ಇಎಂಐ ಯೋಜನೆಯನ್ನು ಒದಗಿಸಲಾಗುತ್ತಿದೆ ಎಂದು ಹೊಸ ಯೋಜನೆ ಬಗ್ಗೆ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಅನಿಲ್ ಕೌಲ್ ತಿಳಿಸಿದ್ದಾರೆ.

ಪ್ರೊಸೆಸಿಂಗ್ ಶುಲ್ಕ ಮತ್ತಿತರ ಮಾಹಿತಿ
 

ಪ್ರೊಸೆಸಿಂಗ್ ಶುಲ್ಕ ಮತ್ತಿತರ ಮಾಹಿತಿ

ಟಿಸಿಎಚ್ ಎಫ್ ಎಲ್ ಹೊಸ ಗೃಹ ಸಾಲ ಯೋಜನೆಗೆ ಅರ್ಹತಾ ಮಾನದಂಡದ ಬಗ್ಗೆ ಪರಿಶೀಲನೆ ಮಾಡಬೇಕಿದ್ದರೆ ಟಾಟಾ ಕ್ಯಾಪಿಟಲ್ ವೆಬ್ ಸೈಟ್ ಗೆ ಭೇಟಿ ನೀಡಬೇಕು. ಬಡ್ಡಿ ದರ, ಶುಲ್ಕ, ಪ್ರೊಸೆಸಿಂಗ್ ಶುಲ್ಕ, ಇಎಂಐ ತಡವಾದಲ್ಲಿ ವಿಧಿಸುವ ದಂಡ, ಕಾನೂನು ಮತ್ತು ಇತರ ಶುಲ್ಕಗಳ ಮಾಹಿತಿಯನ್ನು ಅಲ್ಲಿ ಪಡೆಯಬಹುದು.

English summary

Tata Capital Introducing New Home Loan Scheme With Interest Rate 7.99 Percent

New housing scheme introducing by Tata Capital with the interest rate of 7.99% pa. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X