For Quick Alerts
ALLOW NOTIFICATIONS  
For Daily Alerts

ಟಾಟಾ ನೆಕ್ಸಾನ್ 5 ವರ್ಷದ ಮರುಪಾವತಿ ಅವಧಿಗೆ 5999 ರು. ಇಎಂಐ ಆರಂಭ

|

ಈ ಬಾರಿಯ ಹಬ್ಬದ ಸೀಸನ್ ಗೆ ಟಾಟಾ ಮೋಟಾರ್ಸ್ ನಿಂದ ಎಸ್ ಯುವಿಗಳ ಮೇಲೆ ನಾನಾ ಆಫರ್ ಗಳನ್ನು ನೀಡಲಾಗುತ್ತಿದೆ. ಇದೀಗ ಟಾಟಾ ನೆಕ್ಸಾನ್ ಗೆ ವಿಶೇಷ ಇಎಂಐ ಯೋಜನೆ ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಮರುಪಾವತಿ ಮಾಡಲು ಐದು ವರ್ಷದ ಅವಧಿ ದೊರೆಯುತ್ತದೆ. ಜತೆಗೆ ತಿಂಗಳ ಇಎಂಐ 5999 ರುಪಾಯಿ ಇರುತ್ತದೆ.

 

ಈಚೆಗಷ್ಟೇ ಹ್ಯಾರಿಯರ್ ಎಸ್ ಯುವಿ ಮೇಲೆ ಭಾರೀ ರಿಯಾಯಿತಿ ಘೋಷಣೆ ಮಾಡಿತ್ತು ಟಾಟಾ ಮೋಟಾರ್ಸ್. ಈಗ ಟಾಟಾ ನೆಕ್ಸಾನ್ ಗೆ ಹಲವು ಸುಲಭ ಪಾವತಿ ಆಯ್ಕೆಗಳನ್ನು ನೀಡುತ್ತಿದೆ. ಈ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಹಕರು ಮರುಪಾವತಿ ಅವಧಿಯ ಕೊನೆಕೊನೆಗೆ ಹೆಚ್ಚು ಪಾವತಿ ಮಾಡಬಹುದು.

ಕೊರೊನಾ ವಾರಿಯರ್ಸ್‌ಗೆ ಟಾಟಾ ಮೋಟಾರ್ಸ್ ಆಫರ್

ನೆಕ್ಸಾನ್ ಗೆ ಉತ್ಪಾದಕರಿಂದಲೇ ಹಣಕಾಸು ಸೌಲಭ್ಯ ಪಡೆಯುತ್ತಿದ್ದಲ್ಲಿ ಆರು ತಿಂಗಳ ಇಎಂಐ ಹಾಲಿಡೇ ಸಿಗುತ್ತದೆ. ಕೇವಲ ತಿಂಗಳ ಬಡ್ಡಿ ಮಾತ್ರ ಪಾವತಿ ಮಾಡಬೇಕಾಗುತ್ತದೆ. ಇನ್ನು ಯಾವುದೇ ಡೌನ್ ಪೇಮೆಂಟ್ ಇಲ್ಲದೆ ನೆಕ್ಸಾನ್ ಖರೀದಿಸಬಹುದು. ಜತೆಗೆ ಶೇಕಡಾ ನೂರರಷ್ಟು ಆನ್ ರೋಡ್ ಬೆಲೆಯ ಸಾಲ ಸೌಲಭ್ಯ ಸಿಗುತ್ತದೆ ಎಂದು ವರದಿ ಆಗಿದೆ.

ಟಾಟಾ ನೆಕ್ಸಾನ್ 5 ವರ್ಷದ ಮರುಪಾವತಿ ಅವಧಿಗೆ 5999 ರು. ಇಎಂಐ ಆರಂಭ

ಟಾಟಾ ನೆಕ್ಸಾನ್ 1.2 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಬರುತ್ತದೆ. ಅದರ ಜತೆಗೆ ಆಟೋಮೆಟಿಕ್ ಹಾಗೂ ಮ್ಯಾನ್ಯುಯಲ್ ಅವತರಣಿಕೆ ದೊರೆಯುತ್ತದೆ. ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್, 7 ಇಂಚಿನ ಇನ್ ಫೋಟೇನ್ ಮೆಂಟ್ ಸಿಸ್ಟಮ್ ಹಾಗೂ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳ ಸಹಿತ ಬರುತ್ತದೆ.

English summary

Tata Nexon Offer: EMI Start With 5999 And Zero Down Payment Other Discount

Tata Nexon offer zero down payment with EMI start 5999 and other discount details here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X