For Quick Alerts
ALLOW NOTIFICATIONS  
For Daily Alerts

ಇದು ಟರ್ಮ್ ಇನ್ಷೂರೆನ್ಸ್; ಲೈಫ್ ಇನ್ಷೂರೆನ್ಸ್ ಅಲ್ಲ: ಪ್ರಯೋಜನ ಏನು ತಿಳಿಯಿರಿ

|

ಸ್ವಂತ ಬಿಜಿನೆಸ್ ಮಾಡಬೇಕು, ನಮಗೆ ನಾವೇ ಯಜಮಾನ ಆಗಬೇಕು ಅನ್ನೋದು ಹಲವರ ತುಡಿತ, ಗುರಿ ಆಗಿರುತ್ತದೆ. ಆದರೆ ಸ್ವಂತ ಬಿಜಿನೆಸ್ ಮಾಡುವವರಿಗೆ ಅವರದೇ ಆರ್ಥಿಕ ಸವಾಲುಗಳು ಇರುತ್ತವೆ. ಮುಖ್ಯವಾಗಿ ವ್ಯಾಪಾರ- ವ್ಯವಹಾರಕ್ಕೆ ಆಗಿಂದಾಗ್ಗೆ ಕೈ ಬದಲಿಗಾದರೂ ಹಣದ ಅಗತ್ಯ ಕಂಡುಬಂದು, ಸಾಲ ಮಾಡಬೇಕಾಗುತ್ತದೆ.

ಇನ್ನು ವ್ಯಾಪಾರ- ವ್ಯವಹಾರದ ಹೊರತಾಗಿ ಕುಟುಂಬದೊಳಗೆ ಯಾರಿಗಾದರೂ ಅನಾರೋಗ್ಯವಾದಾಗ ಅಥವಾ ಸಾವು ದಿಕ್ಕು ತೋಚದಂತೆ ಮಾಡಿಬಿಡುತ್ತವೆ. ಸ್ಥಿರವಾದ ಆದಾಯ ಇರಲ್ಲ. ಆದ್ದರಿಂದ ಫೈನಾನ್ಷಿಯಲ್ ಪ್ಲಾನಿಂಗ್ ಮಾಡುವುದು ಕಷ್ಟವಾಗಿರುತ್ತದೆ. ಆದರೆ ಈ ಮೇಲ್ಕಂಡ ಅಂಶಗಳ ಕಾರಣಕ್ಕೆ ಅಧೀರರಾಗುವ ಅಗತ್ಯ ಇಲ್ಲ.

ವಾರ್ಷಿಕ ಆದಾಯದ ಇಪ್ಪತ್ತು ಪಟ್ಟು ಮೊತ್ತ
 

ವಾರ್ಷಿಕ ಆದಾಯದ ಇಪ್ಪತ್ತು ಪಟ್ಟು ಮೊತ್ತ

ಉದ್ಯಮಿಗಳು, ವೃತ್ತಿಪರರಾದ ಚಾರ್ಟರ್ಡ್ ಅಕೌಂಟೆಂಟ್ ಗಳು, ವಕೀಲರು, ವೈದ್ಯರು... ಸಮಾಜದಲ್ಲಿ ಇಂಥವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂಥವರು ಕಂಡುಕೊಂಡ ಪರಿಹಾರ ಮಾರ್ಗವೇ ಟರ್ಮ್ ಇನ್ಷೂರೆನ್ಸ್. ತಮ್ಮ ಬಾಧ್ಯತೆಗಳು, ಅಗತ್ಯವನ್ನು ಮನಗಂಡು ನಿರ್ದಿಷ್ಟ ಮೊತ್ತಕ್ಕೆ ಟರ್ಮ್ ಇನ್ಷೂರೆನ್ಸ್ ಮಾಡಿರುತ್ತಾರೆ. ಪಾಲಿಸಿದಾರರು ದಿಢೀರ್ ಸಾವನ್ನಪ್ಪಿದಲ್ಲಿ ಅವರ ವಾರ್ಷಿಕ ಆದಾಯದ ಇಪ್ಪತ್ತು ಪಟ್ಟು ಮೊತ್ತದಷ್ಟನ್ನು ಟರ್ಮ್ ಇನ್ಷೂರೆನ್ಸ್ ಪಾಲಿಸಿಗಳು ಒದಗಿಸುತ್ತವೆ. ಆದರೆ ಅಷ್ಟು ಮೊತ್ತಕ್ಕೆ ಪ್ರೀಮಿಯಂ ಪಾವತಿಸಿರಬೇಕು. ಅವಲಂಬಿತರು ಇರುವವರು ಮತ್ತು ಜವಾಬ್ದಾರಿಗಳು ಹೆಚ್ಚಿರುವವರು MWP ಕಾಯ್ದೆ ಅನ್ವಯ ಟರ್ಮ್ ಇನ್ಷೂರೆನ್ಸ್ ಖರೀದಿಸಬಹುದು. ಟರ್ಮ್ ಇನ್ಷೂರೆನ್ಸ್ ಗಳನ್ನು ಆನ್ ಲೈನ್ ನಲ್ಲಿ ಖರೀದಿ ಮಾಡಬಹುದು ಮತ್ತು ಬಹಳ ಕಡಿಮೆ ಬೆಲೆಗೆ ದೊರಕುತ್ತದೆ. ಈ ಟರ್ಮ್ ಇನ್ಷೂರೆನ್ಸ್ ಎಲ್ಲರೂ ಮಾಡಿಸಬಹುದು. ಅದರೆ ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರಿಗೆ ಇದು ಹೆಚ್ಚು ಸೂಕ್ತ. ಸ್ವಂತ ವ್ಯವಹಾರ ಮಾಡುವವರಿಗೆ ಯಾಕೆ ಟರ್ಮ್ ಇನ್ಷೂರೆನ್ಸ್ ಸೂಕ್ತ ಎಂಬುದರ ವಿವರಣೆ ಹೀಗಿದೆ.

ಉದ್ಯೋಗಸ್ಥರಿಗಾದರೆ ಬಹುತೇಕ ಮಟ್ಟಿಗೆ ಉದ್ಯೋಗದಾತರೇ ಲೈಫ್ ಇನ್ಷೂರೆನ್ಸ್ ಮಾಡಿಸಿರುತ್ತಾರೆ. ಆದರೆ ಸ್ವಂತ ವ್ಯವಹಾರ ಮಾಡುವವರಿಗೆ ಈ ಸವಲತ್ತು ಇರುವುದಿಲ್ಲ. ಮನೆಗೆ ಆಧಾರಸ್ತಂಭವಾದ ಯಜಮಾನ ಅಥವಾ ಯಜಮಾನಿತಿಯೇ ತೀರಿಕೊಂಡರೆ ಆ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಅಂಥ ಸಂಕಷ್ಟದಿಂದ ಟರ್ಮ್ ಇನ್ಷೂರೆನ್ಸ್ ರಕ್ಷಣೆ ನೀಡುತ್ತದೆ. ಟರ್ಮ್ ಇನ್ಷೂರೆನ್ಸ್ ಹಣದಿಂದ ಮನೆ ಖರ್ಚು, ಮನೆ ನಿರ್ಮಾಣ ಅಥವಾ ಉನ್ನತ ಶಿಕ್ಷಣದ ಶುಲ್ಕ ಪಾವತಿ ಅಥವಾ ವ್ಯಾಪಾರಕ್ಕೆ ಪಡೆದಿದ್ದ ಸಾಲ ಮರುಪಾವತಿ ಮಾಡಬಹುದು. ಯಾವುದೇ ಸ್ವಂತ ವ್ಯವಹಾರಸ್ಥರು ಮಾಡಿದ ಸಾಲವನ್ನು ಆ ವ್ಯಾಪಾರದ ಮೂಲಕ ಅಥವಾ ಉತ್ತರಾಧಿಕಾರಿಗಳು ತೀರಿಸಬೇಕಾಗುತ್ತದೆ.

ಸಣ್ಣ ವಯಸ್ಸಿನಲ್ಲಿ ಕಡಿಮೆ ಪ್ರೀಮಿಯಂ ಪಾವತಿ

ಸಣ್ಣ ವಯಸ್ಸಿನಲ್ಲಿ ಕಡಿಮೆ ಪ್ರೀಮಿಯಂ ಪಾವತಿ

ಟರ್ಮ್ ಇನ್ಷೂರೆನ್ಸ್ ಅಂದರೆ ರಿಸ್ಕ್ ಮಾತ್ರ ಕವರ್ ಮಾಡುವಂಥದ್ದು. ಹಣ ಹೂಡಿಕೆಗೋ ಅಥವಾ ರಿಟರ್ನ್ಸ್ ಗಳಿಸುವುದಕ್ಕೋ ಇದನ್ನು ಬಳಸುವುದಿಲ್ಲ. ಒಂದು ವೇಳೆ ಪಾಲಿಸಿದಾರರು ಮೃತಪಟ್ಟಲ್ಲಿ ಯಾರ ಹೆಸರಿಗೆ ನಾಮಿನಿ ಮಾಡಲಾಗಿರುತ್ತದೋ ಅವರಿಗೆ ತುಂಬ ದೊಡ್ಡ ಮೊತ್ತ ದೊರೆಯುತ್ತದೆ. ಆದರೆ ಆ ದೊಡ್ಡ ಮೊತ್ತವು ಪಾಲಿಸಿದಾರರು ಎಷ್ಟು ಪ್ರೀಮಿಯಂ ಕಟ್ಟಿರುತ್ತಾರೆ ಎಂಬುದರ ಮೇಲೆ ನಿರ್ಧಾರ ಆಗುತ್ತದೆ. ಉದಾಹರಣೆಗೆ, ಮುಂಬೈನಲ್ಲಿ ವಾಸ ಇರುವ- ಧೂಮಪಾನ ಮಾಡದ ವ್ಯಕ್ತಿಯೊಬ್ಬರು ಒಂದು ಕೋಟಿ ಮೊತ್ತದ ಇನ್ಷೂರೆನ್ಸ್ ಮಾಡಿಸಲು ವಾರ್ಷಿಕ ಎಂಟು ಸಾವಿರ ರುಪಾಯಿ ಪಾವತಿಸಬೇಕಾಗುತ್ತದೆ. ಒಂದು ವೇಳೆ ಪಾಲಿಸಿದಾರರು ಸಾವನ್ನಪ್ಪಿದರೆ ನಾಮಿನಿಗೆ ಒಂದು ಕೋಟಿ ರುಪಾಯಿ ದೊರೆಯುತ್ತದೆ ಮತ್ತು ಅದಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

ಈ ಪ್ರೀಮಿಯಂ ಪಾಲಿಸಿದಾರರ ವಯಸ್ಸು ಮತ್ತು ಆರೋಗ್ಯ ಸ್ಥಿತಿ ಮೇಲೆ ಅವಲಂಬಿಸಿರುತ್ತದೆ. ಎಷ್ಟು ಕಡಿಮೆ ವಯಸ್ಸಿಗೆ ಟರ್ಮ್ ಇನ್ಷೂರೆನ್ಸ್ ಖರೀದಿ ಮಾಡುತ್ತೀರೋ ಅಷ್ಟು ಕಡಿಮೆ ಪ್ರೀಮಿಯಂ. ಮತ್ತು ಈ ಪಾಲಿಸಿ ಪ್ರೀಮಿಯಂ ಪಾಲಿಸಿ ಅವಧಿಯ ಪೂರ್ತಿಯಾಗಿಯೂ ಒಂದೇ ಥರ ಇರುತ್ತದೆ. ಈಗ ಮೂವತ್ತು ವರ್ಷದ- ಧೂಮಪಾನ ಮಾಡದ ವ್ಯಕ್ತಿ ಒಂದು ಕೋಟಿ ರುಪಾಯಿಯ ಇನ್ಷೂರೆನ್ಸ್ ಮಾಡಿಸುವುದಕ್ಕೆ ಎಂಟು ಸಾವಿರ ಪ್ರೀಮಿಯಂ ತುಂಬಿದರೆ, ಅದೇ ನಲವತ್ತೈದು ವರ್ಷದ ಆರೋಗ್ಯವಂತ ವ್ಯಕ್ತಿ ಅಷ್ಟೇ ಇನ್ಷೂರೆನ್ಸ್ ಮೊತ್ತಕ್ಕೆ ಹದಿನೇಳು ಸಾವಿರ ರುಪಾಯಿಗೂ ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆ ವ್ಯಕ್ತಿಯ ಅಭ್ಯಾಸಗಳು, ಆರೋಗ್ಯ ಸ್ಥಿತಿ ಮತ್ತು ಯಾವ ಉದ್ಯೋಗ ಇತ್ಯಾದಿ ಅಂಶಗಳನ್ನು ಇನ್ಷೂರೆನ್ಸ್ ಕಂಪೆನಿಗಳು ಗಣನೆಗೆ ತೆಗೆದುಕೊಳ್ಳುತ್ತವೆ.

ಭವಿಷ್ಯದ ಎಲ್ಲ ಪ್ರೀಮಿಯಂ ಮನ್ನಾ ಆಗುತ್ತದೆ
 

ಭವಿಷ್ಯದ ಎಲ್ಲ ಪ್ರೀಮಿಯಂ ಮನ್ನಾ ಆಗುತ್ತದೆ

ಮ್ಯಾರೀಡ್ ವುಮೆನ್ಸ್ ಪ್ರಾಪರ್ಟಿ ಕಾಯ್ದೆ 1874 (MWP Act) ಇರುವುದು ಕುಟುಂಬ ಸದಸ್ಯರು ಮತ್ತು ಸಾಲಗಾರರಿಂದ ಮಹಿಳೆಯ ಆಸ್ತಿಯನ್ನು ರಕ್ಷಿಸುವ ಉದ್ದೇಶದಿಂದ. ವಿವಾಹಿತರಾಗಿದ್ದು, ಸ್ವಂತ ವ್ಯವಹಾರವೂ ಮಾಡುತ್ತಿರುವವರಾಗಿದ್ದಲ್ಲಿ MWP Act ಅಡಿಯಲ್ಲಿ ಕುಟುಂಬದವರ ರಿಸ್ಕ್ ಕವರ್ ಮಾಡಲು ಟರ್ಮ್ ಇನ್ಷೂರೆನ್ಸ್ ಹೇಳಿ ಮಾಡಿಸಿರುವಂಥದ್ದು. ಮಾಮಾಲಿ ವಿಮೆ ಹಣ ಬಂದಾಗ ಆ ಹಣಕ್ಕಾಗಿ ಸಾಲಗಾರರು ಕ್ಲೇಮ್ ಮಾಡಬಹುದು. ಆದರೆ MWP Act ಅಡಿ ಖರೀದಿ ಮಾಡಿದ ಇನ್ಷೂರೆನ್ಸ್ ಮೊತ್ತವನ್ನು ಕ್ಲೇಮ್ ಮಾಡಲು ಆಗಲ್ಲ. ಆಗ ಸಂಗಾತಿಗೆ ಯಾವುದೇ ಆರ್ಥಿಕ ಒತ್ತಡ ಅಥವಾ ಹಿನ್ನಡೆ ಆಗುವುದಿಲ್ಲ.

ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಹೆಚ್ಚಿನ ವೆಚ್ಚವಾಗುತ್ತದೆ. ಸ್ವಂತ ಉದ್ಯೋಗ ಮಾಡುತ್ತಿರುವವರ ಪಾಲಿಗೆ ಈ ರೀತಿಯ ಕಾಯಿಲೆಗಳು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುತ್ತದೆ. ಒಂದು ವೇಳೆ ಪಾಲಿಸಿದಾರರಿಗೆ ಗಂಭೀರ ಸ್ವರೂಪದ ಕಾಯಿಲೆ ಇರುವುದು ಪತ್ತೆಯಾದಲ್ಲಿ ಆಗ ಟರ್ಮ್ ಇನ್ಷೂರೆನ್ಸ್ ಪ್ರೀಮಿಯಂ ಪಾವತಿಸಲು ಅಗತ್ಯ ಇಲ್ಲ. ಅದೇ ರೀತಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೂ ಪಾಲಿಸಿದಾರರು ಪ್ರೀಮಿಯಂ ಪಾವತಿಸ ಬೇಕಿಲ್ಲ. ಅಂಥ ಸನ್ನಿವೇಶದಲ್ಲಿ ಪಾಲಿಸಿದಾರರು ಭವಿಷ್ಯದಲ್ಲಿ ಕಟ್ಟಬೇಕಾದ ಎಲ್ಲ ಪ್ರೀಮಿಯಂ ಮನ್ನಾ ಆಗುತ್ತದೆ. ಆದರೆ ಇನ್ಷೂರೆನ್ಸ್ ಅನುಕೂಲಗಳು ಹಾಗೇ ಮುಂದುವರಿಯುತ್ತದೆ. ಇನ್ನು ಗಂಭೀರ ಕಾಯಿಲೆಯಿಂದ ಸಾವನ್ನಪ್ಪಿದಲ್ಲಿ ಕುಟುಂಬದವರಿಗೆ ಇನ್ಷೂರೆನ್ಸ್ ಹಣ ಬರುತ್ತದೆ. ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಆಗುತ್ತದೆ.

ಮಾಸಿಕ, ತ್ರೈ ಮಾಸಿಕವಾಗಿ ಪ್ರೀಮಿಯಂ ಪಾವತಿಸಬಹುದು

ಮಾಸಿಕ, ತ್ರೈ ಮಾಸಿಕವಾಗಿ ಪ್ರೀಮಿಯಂ ಪಾವತಿಸಬಹುದು

ಟರ್ಮ್ ಇನ್ಷೂರೆನ್ಸ್ ಮಾಡಿಸಬೇಕು ಅಂದರೆ, ಉದ್ಯೋಗಸ್ಥರಾದರೆ ಆದಾಯದ ದಾಖಲಾತಿ, ಆದಾಯ ತೆರಿಗೆ ರಿಟರ್ನ್ ಮಾಹಿತಿ ನೀಡಬೇಕು. ಆದರೆ ಸ್ವಂತ ವ್ಯವಹಾರಸ್ಥರಿಗೆ ಅದರಿಂದ ವಿನಾಯಿತಿ ಇದೆ. ಅಂದ ಹಾಗೆ ಸ್ವಂತ ವ್ಯವಹಾರಸ್ಥರಿಗೆ ಇರುವ ದಾಖಲಾತಿ ಪ್ರಕ್ರಿಯೆಯು ಕಂಪೆನಿಯಿಂದ ಕಂಪೆನಿಗೆ ಬದಲಾಗುತ್ತದೆ. ಇನ್ನು ಟರ್ಮ್ ಇನ್ಷೂರೆನ್ಸ್ ಪ್ರೀಮಿಯಂ ಪಾವತಿ ಕೂಡ ಅಂಥ ಸಮಸ್ಯೆ ಏನಲ್ಲ. ಮಾಸಿಕ ಕಂತಾಗಿ, ತ್ರೈಮಾಸಿಕವಾಗಿ ಪ್ರೀಮಿಯಂ ಪಾವತಿಸಬಹುದು. ಆರಂಭದ ಕೆಲ ವರ್ಷಗಳಲ್ಲಿ ಮಾತ್ರ ಆಯ್ಕೆಗೆ ಅವಕಾಶ ಇರುತ್ತದೆ. ಇನ್ನೂ ಕೆಲ ಟರ್ಮ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಒಮ್ಮೆ ಪ್ರೀಮಿಯಂ ಪಾವತಿಸಿದರೆ ಸಾಕು. ಇದರಿಂದ ಭವಿಷ್ಯದಲ್ಲಿ ಏನೋ ಆರ್ಥಿಕ ಸಮಸ್ಯೆ ಅಯಿತು, ಪ್ರೀಮಿಯಂ ಕಟ್ಟಲು ಆಗಲಿಲ್ಲ ಎಂದು ಚಿಂತಿಸುವ ಅಗತ್ಯ ಇರುವುದಿಲ್ಲ.

ಟರ್ಮ್ ಇನ್ಷೂರೆನ್ಸ್ ಪಾಲಿಸಿದಾರರ ಕುಟುಂಬದ ರಿಸ್ಕ್ ಕವರ್ ಮಾಡುವುದಷ್ಟೇ ಅಲ್ಲ, ಇದು ಪಾಲಿಸಿದಾರರಿಗೆ ತೆರಿಗೆ ಅನುಕೂಲ ಕೂಡ ಒದಗಿಸುತ್ತದೆ. ಟರ್ಮ್ ಇನ್ಷೂರೆನ್ಸ್ ಪ್ರೀಮಿಯಂ ಮೊತ್ತವನ್ನು ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ಕ್ಲೇಮ್ ಮಾಡಬಹುದು. ಇದರ ಅಡಿಯಲ್ಲಿ 1.5 ಲಕ್ಷ ರುಪಾಯಿ ತನಕ ಕ್ಲೇಮ್ ಮಾಡಬಹುದು. ಟ್ಯಾಕ್ಸ್ ಸ್ಲ್ಯಾಬ್ 30% ಅಡಿ ಬರುವವರಿಗೆ ಒಂದು ವರ್ಷದಲ್ಲಿ ಇದರ ಆರ್ಥಿಕ ಅನುಕೂಲ 45,000 ರುಪಾಯಿಗೂ ಹೆಚ್ಚು ದೊರೆಯುತ್ತದೆ. ಆರ್ಥಿಕ ಅವಲಂಬಿತರು ಇರುವವರು ಟರ್ಮ್ ಇನ್ಷೂರೆನ್ಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕು. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಟರ್ಮ್ ಇನ್ಷೂರೆನ್ಸ್ ಖರೀದಿ ಮಾಡಬಹುದು ಎಂಬುದು ನೆನಪಿರಲಿ. ಇದು ಲೈಫ್ ಇನ್ಷೂರೆನ್ಸ್ ಅಲ್ಲ. ಅದರ ಉದ್ದೇಶ ಹಾಗೂ ಅನುಕೂಲಗಳೇ ಬೇರೆ. ಟರ್ಮ್ ಇನ್ಷೂರೆನ್ಸ್ ಉದ್ದೇಶ ಹಾಗೂ ಅನುಕೂಲಗಳೇ ಬೇರೆ.

English summary

Term Insurance Benefits; How It Is Different From Life Insurance?

Term insurance benefits, premiums other details are here. How it is different from life insurance? Here is an explainer.
Story first published: Saturday, January 25, 2020, 14:45 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more