For Quick Alerts
ALLOW NOTIFICATIONS  
For Daily Alerts

ಈ ಡೆಬಿಟ್‌ ‌ಕಾರ್ಡ್‌‌ ಉಪಯೋಗಿಸಿ ಖರೀದಿ ಮಾಡಿದ್ರೆ ಪ್ರತಿ ಬಾರಿಯೂ ಶೇ.1 ಕ್ಯಾಶ್‌ಬ್ಯಾಕ್!

|

ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಐಡಿಎಫ್‌ಸಿ ಫಸ್ಟ್‌ ಬ್ಯಾಂಕು, ಐಡಿಎಫ್‌ಸಿ ಫಸ್ಟ್‌ ಬ್ಯಾಂಕಿನ ಡೆಬಿಟ್‌ ಕಾರ್ಡ್ ಉಪಯೋಗಿಸಿಕೊಂಡು ಆಫ್‌ಲೈನ್‌ ಅಥವಾ ಆನ್‌ಲೈನ್‌ ಖರೀದಿ ಮಾಡಿದರೆ, ಶೇಕಡ 1 ರಷ್ಟು ಕ್ಯಾಶ್‌ಬ್ಯಾಕ್ ನೀಡಲಿದೆ. ಐಡಿಎಫ್‌ಸಿ ಫಸ್ಟ್‌ ಬ್ಯಾಂಕಿನ ಡೆಬಿಟ್‌ ಕಾರ್ಡ್ ಉಪಯೋಗಿಸಿಕೊಂಡು ಗ್ರಾಹಕರು ಸುಮಾರು 10 ಸಾವಿರದವರೆಗೆ ಕ್ಯಾಶ್‌ಬ್ಯಾಕ್ ಅನ್ನು ಪಡೆಯಬಹುದು.

 

ಐಡಿಎಫ್‌ಸಿ ಫಸ್ಟ್‌ ಬ್ಯಾಂಕಿನ ಡೆಬಿಟ್‌ ಕಾರ್ಡ್ ಉಪಯೋಗಿಸಿಕೊಂಡು ನೀವೇ ವೈಯಕ್ತಿಕವಾಗಿ ತೆರಳಿ ಶಾಪಿಂಗ್‌ ಮಾಡಿದರೆ ಅಥವಾ ಆನ್‌ಲೈನ್‌ ಮೂಲಕ ಶಾಪಿಂಗ್‌ ಮಾಡಿದರೆ ತಮ್ಮ ಗ್ರಾಹಕರಿಗೆ ಐಡಿಎಫ್‌ಸಿ ಫಸ್ಟ್‌ ಬ್ಯಾಂಕು ಸುಮಾರು 10 ಸಾವಿರದವರೆಗೆ ಕ್ಯಾಶ್‌ಬ್ಯಾಕ್ ನೀಡಲಿದೆ. ಅದು ಕೂಡಾ ಯಾವುದೇ ನಿರ್ದಿಷ್ಟ ಖರೀದಿ ಗುರಿ ಇಲ್ಲದೆ. ಅಂದರೆ ನೀವು ಎಷ್ಟೇ ಖರೀದಿ ಮಾಡಿದರೂ ಸುಮಾರು 10 ಸಾವಿರದವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವನ್ನು ಐಡಿಎಫ್‌ಸಿ ಫಸ್ಟ್‌ ಬ್ಯಾಂಕು ನೀಡಿದೆ.

ಅಂತಾರಾಷ್ಟ್ರೀಯ ಬೆಲೆಯತ್ತ ಏಕಿದೆ ಭಾರತೀಯ ಚಿನ್ನದ ಹೂಡಿಕೆದಾರರ ಚಿತ್ತ?

ಇನ್ನು ಈ ಆಫರ್‌ ಸೆಪ್ಟೆಂಬರ್‌ 17 ರಂದು ನೀಡಲಾಗಿತ್ತು. ಇನ್ನು ನವೆಂಬರ್‌ 4 ರಂದು ಕೂಡಾ ಈ ಆಫರ್‌ ನೀಡಲಾಗಿದೆ. ಇನ್ನು ಈ ಆಫರ್‌ ಎಟಿಎಂ ನಿಂದ ಹಣವನ್ನು ವಿತ್‌ಡ್ರಾ ಮಾಡುವುದಕ್ಕೆ, ವಾಲೆಟ್‌ ಅಪ್‌ಲೋಡ್‌ ಮಾಡುವುದಕ್ಕೆ, ಡಿಸಿ ಇಎಂಐ ವಹಿವಾಟಿಗಳಿಗೆ ಹಾಗೂ ಹಣ ವರ್ಗಾವಣೆ ಮಾಡುವುದಕ್ಕೆ ಅನ್ವಯ ಆಗುವುದಿಲ್ಲ.

 ಒಂದಕ್ಕಿಂತ ಅಧಿಕ ಡೆಬಿಟ್‌ ಕಾರ್ಡ್ ಇದ್ದರೆ ಏನು ಮಾಡುವುದು?

ಒಂದಕ್ಕಿಂತ ಅಧಿಕ ಡೆಬಿಟ್‌ ಕಾರ್ಡ್ ಇದ್ದರೆ ಏನು ಮಾಡುವುದು?

ಐಡಿಎಫ್‌ಸಿ ಫಸ್ಟ್‌ ಬ್ಯಾಂಕು ತನ್ನ ಗ್ರಾಹಕರಿಗೆ ಈ ಉತ್ತಮ ಆಫರ್‌ ಅನ್ನು ನೀಡಿದೆ. ಈ ಹಿಂದೆ ಪ್ಟೆಂಬರ್‌ 17 ರಂದು ಐಡಿಎಫ್‌ಸಿ ಫಸ್ಟ್‌ ಬ್ಯಾಂಕಿನ ಡೆಬಿಟ್‌ ಕಾರ್ಡ್ ಉಪಯೋಗ ಮಾಡುವ ಗ್ರಾಹಕರು ಸುಮಾರು ಹತ್ತು ಸಾವಿರದವರೆಗೆ ಹಣವನ್ನು ಕ್ಯಾಶ್‌ಬ್ಯಾಕ್ ಆಗಿ ಪಡೆಯಲು ಸಾಧ್ಯವಾಗಿತ್ತು. ಹಲವಾರು ಮಂದಿ ಈ ಆಫರ್‌ನ ಪ್ರಯೋಜನ ಪಡೆದು ಕೊಂಡಿದ್ದರು, ಒಬ್ಬ ಗ್ರಾಹಕ ಅಥವಾ ಖಾತೆದಾರ ಒಂದೇ ಕಸ್ಟಮರ್ ಐಡಿಯಿಂದ ಒಂದಕ್ಕಿಂತ ಹೆಚ್ಚು ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ಆ ಎಲ್ಲಾ ಕಾರ್ಡ್‌ಗಳಲ್ಲಿ ಆದ ವಹಿವಾಟಿನ ಲೆಕ್ಕಾಚಾರ ಮಾಡಿಕೊಂಡು ಗ್ರಾಹಕರ ಖಾತೆಗೆ ಜಮಾ ಆಗುವ ಒಟ್ಟಾರೆ ಕ್ಯಾಶ್‌ಬ್ಯಾಕ್ ಮೊತ್ತವನ್ನು ನಿರ್ಧರಿಸಲಾಗುತ್ತದೆ. 48 ಗಂಟೆಗಳ ಒಳಗೆ ಕ್ಯಾಶ್‌ಬ್ಯಾಕ್ ಆಗಲಿದೆ.

 ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ನಲ್ಲಿ ಏನು ಲಾಭ?
 

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ನಲ್ಲಿ ಏನು ಲಾಭ?

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ ಅಧಿಕ ಲಾಭವನ್ನು ಜನರಿಗೆ ನೀಡಲಿದೆ. ಅವು ಯಾವುದು ಎಂದು ಈ ಕೆಳಗೆ ಪಟ್ಟಿ ಮಾಡಲಾಗಿದೆ.

* ಸಣ್ಣ ಖಾತೆಯ ಎಟಿಎಂ ವಿತ್‌ಡ್ರಾ ಹಾಗೂ ಖರೀದಿ ಮಿತಿಯನ್ನು ಅಧಿಕ ಮಾಡಲಾಗಿದೆ.

* ವಿಮಾನ ನಿಲ್ದಾಣ ಒಳ ಆಕ್ಸಸ್‌

* BookMyShow ನಲ್ಲಿ ಅದ್ಭುತ ಕ್ಯಾಷ್‌ಬ್ಯಾಕ್ ಆಫರ್‌

* ವಿಮಾ ರಕ್ಷಣೆ

* ಅರ್ಲಿ ಆಕ್ಟಿವೇಷನ್‌ ಕ್ಯಾಶ್‌ಬ್ಯಾಕ್ ಆಫರ್‌

* ನಿಮ್ಮ ನೆಟ್‌ ಬ್ಯಾಂಕಿಂಗ್‌ಗೆ ಸೈನ್‌ ಇನ್‌ ಆಗುವ ಮೂಲಕ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಅಕೌಂಟ್‌ಗೆ ಸೈನ್‌ ಇನ್‌ ಮಾಡುವ ಮೂಲಕ ನೀವು ಹೊಂದಿರುವ ಸಿಗ್ನೇಚರ್ ಡೆಬಿಟ್ ಕಾರ್ಡ್‌ ಮೇಲಿನ ಮಿತಿಯನ್ನು ನಿರ್ದಿಷ್ಟಪಡಿಸಬಹುದು.

* ನಿಮ್ಮ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ ಮೂಲಕ ಕ್ಯಾಷ್‌ ವಿತ್‌ಡ್ರಾ ಹಾಗೂ ಖರೀದಿ ನಿರ್ಬಂಧವನ್ನು ಮಾಡಿಕೊಳ್ಳಬಹುದು.

* ನೀವು ಪ್ರತಿ ದಿನ ಸುಮಾರು ಎರಡು ಲಕ್ಷದಷ್ಟು ಹಣವನ್ನು ವಿತ್‌ಡ್ರಾ ಮಾಡಬಹುದು ಹಾಗೂ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ ಬಳಸಿ ಆರು ಲಕ್ಷದಷ್ಟು ಖರೀದಿ ಮಾಡಬಹುದು.

* ಸಣ್ಣ ಉಳಿತಾಯ ಖಾತೆಗೆ ದಿನಕ್ಕೆ ಹಣವನ್ನು ವಿತ್‌ಡ್ರಾ ಮಾಡುವ ಮಿತಿ ಹತ್ತು ಸಾವಿರ ಆಗಿದೆ. ಹಾಗೆಯೇ ಖರೀದಿ ಮಿತಿಯು ಹತ್ತು ಸಾವಿರವಾಗಿದೆ.

* ಸಣ್ಣ ಉಳಿತಾಯ ಖಾತೆಗೆ ಸ್ಥಳೀಯ ನಿರ್ಬಂಧಗಳು ಮಾತ್ರ ಅನ್ವಯವಾಗಲಿದೆ.

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಬದಲಾಯಿಸುವುದು, ಜೆನರೇಟ್‌ ಮಾಡುವುದು ಹೇಗೆ?

 ಐಡಿಎಫ್‌ಸಿ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ನ ಆಕ್ಟಿವೇಷನ್‌ ಆಫರ್‌

ಐಡಿಎಫ್‌ಸಿ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ನ ಆಕ್ಟಿವೇಷನ್‌ ಆಫರ್‌

* ಐಡಿಎಫ್‌ಸಿ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ ಅನ್ನು ಬಳಸಿ ಮಾಡಿದ ಒಂದು ಸಾವಿರ ರೂಪಾಯಿತ ಮೊದಲ ಖರೀದಿಯ ಮೇಲೆ ಸುಮಾರು ಶೇಕಡ 10 ರಷ್ಟು, ಗರಿಷ್ಟ ರೂಪಾಯಿ 250 ರಷ್ಟು ಕ್ಯಾಶ್‌ಬ್ಯಾಕ್ ಆಫರ್‌ ಇದೆ.

* ಇನ್ನು BookMyShow ನಲ್ಲಿ ರೂಪಾಯಿ 250 ರ ಕ್ಯಾಶ್‌ಬ್ಯಾಕ್ ಆಫರ್‌ ಇದೆ. ಈ ಆಫರ್‌ ಸೆಪ್ಟೆಂಬರ್ 30, 2021 ರವರೆಗೆ ಮಾನ್ಯವಾಗಿದೆ.

* 25 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದು ತ್ರೈಮಾಸಿಕದಲ್ಲಿ 2 ಬಾರಿ ವಿಮಾನ ನಿಲ್ದಾಣ ಪ್ರವೇಶ ಅವಕಾಶವಿದೆ.

* ಇನ್ಶುರೆನ್ಸ್‌ ಕವರೇಜ್‌ ಬೆನಿಫಿಟ್‌ ಗ್ರಾಹಕರಿಗೆ ದೊರೆಯಲಿದೆ. ಕಳೆದುಕೊಂಡ ಕಾರ್ಡ್ ಹೊಣೆಗಾರಿಕೆ ಮೇಲೆ ಆರು ಲಕ್ಷದವರೆಗೆ, ವೈಯಕ್ತಿಕ ಅಪಘಾತ ವಿಮೆಗೆ 35 ಲಕ್ಷದವರೆಗೆ, ವಿಮಾನದಲ್ಲಿ ಸಂಭವಿಸುವ ಅಪಘಾತದ ವಿಮೆಗೆ ಒಂದು ಕೋಟಿವರೆಗೆ, ಖರೀದಿ ಸುರಕ್ಷೆ ಒಂದು ಲಕ್ಷದವರೆಗೆ ದೊರೆಯಲಿದೆ.

* ಪೆಟ್ರೋಲ್‌, ಡಿಸೇಲ್‌ನ ಹೆಚ್ಚುವರಿ ಶುಲ್ಕದ ಮೇಲೆ ಶೇಕಡ 2.5 ರಷ್ಟು ಮನ್ನಾ

* ಔಷಾಧಾಲಯ, ಮಾಲ್‌ಗಳಲ್ಲಿ ಅಧಿಕ ಆಫರ್‌

ಅಕ್ಟೋಬರ್‌ನಲ್ಲಿ ಬ್ಯಾಂಕ್ ರಜಾದಿನಗಳು: 21 ದಿನಗಳ ರಜೆ

 ಐಡಿಎಫ್‌ಸಿ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಐಡಿಎಫ್‌ಸಿ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಐಡಿಎಫ್‌ಸಿ ಫಸ್ಟ್‌ ಬ್ಯಾಂಕಿನಲ್ಲಿ ನಿಮ್ಮ ಖಾತೆಯನ್ನು ತೆರೆಯುವ ಮೂಲಕ ನೀವು ಐಡಿಎಫ್‌ಸಿ ವೀಸಾ ಸಿಗ್ನೇಚರ್‌ ಡೆಬಿರ್ಟ್ ಕಾರ್ಡ್‌ನ ಆಫರ್‌ಗಳನ್ನು ಪಡೆಯಬಹುದಾಗಿದೆ. ನಿಮ್ಮ ಉಳಿತಾಯ ಖಾತೆಯಲ್ಲಿ ಅಧಿಕ ಬಡ್ಡಿಯನ್ನು ಪಡೆಯಬೇಕಾದರೆ ಈ ಕೆಳಗಿನ ವಿಧಾನವನ್ನು ಪಾಲಿಸಿ

* https://www.idfcfirstbank.com/content/idfcsecure/en/open-savings-account-online.html ಗೆ ಭೇಟಿ ನೀಡಿ

* ನಿಮ್ಮ ಪೂರ್ತಿ ಹೆಸರು, ಮೊಬೈಲ್‌ ಸಂಖ್ಯೆ, ಇಮೇಲ್‌ ಐಡಿಯನ್ನು ಹಾಕಿ

* ಬಳಿಕ ಕೆವೈಸಿ ಪ್ರಕ್ರಿಯೆ ಪೂರ್ತಿಗೊಳಿಸಿ

* ನೀವು ಯಶಸ್ವಿಯಾಗಿ ನಿಮ್ಮ ಖಾತೆಯನ್ನು ತೆರೆದ ಬಳಿಕ ಈಗಿನ ಆಫರ್‌ಗಳನ್ನು ಪಡೆಯಬೇಕಾದರೆ ನಿಮ್ಮ ಖಾತೆಯಲ್ಲಿ ಕನಿಷ್ಠ ಠೇವಣಿ ಇರಬೇಕಾಗುತ್ತದೆ.

* ಸಿಗ್ನೇಚರ್ ಕಾರ್ಡ್ ಉಳಿತಾಯ ಖಾತೆಗಳಿಗೆ ರೂಪಾಯಿ ಮೂರು ಸಾವಿ ಹಾಗೂ ಕ್ಲಾಸಿಕ್ ಕಾರ್ಡ್ ಉಳಿತಾಯ ಖಾತೆಗಳಿಗೆ ರೂಪಾಯಿ 1,500 ವರೆಗಿನ ಬಹುಮಾನ ದೊರೆಯಲಿದೆ.

English summary

This Bank Offers You 1% Cashback Every Time You Use Your Debit Card, Check details

This Bank Offers You 1% Cashback Every Time You Use Your Debit Card, Read on.
Story first published: Sunday, September 26, 2021, 16:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X