ಗಮನಿಸಿ: 75 ವರ್ಷಕ್ಕಿಂತ ಮೇಲ್ಪಟ್ಟವರು ತೆರಿಗೆ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ, ಷರತ್ತು ಅನ್ವಯ
ಈ ವರ್ಷದ ಆರಂಭದಿಂದ ((2021-22) 75 ವರ್ಷಕ್ಕಿಂತ ಮೇಲ್ಪಟ್ಟವರು ತೆರಿಗೆ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ. ಆದರೆ ಇದಕ್ಕೆ ಷರತ್ತು ಇದೆ. 75 ವರ್ಷಕ್ಕಿಂತ ಮೇಲ್ಪಟ್ಟವರು ಪಿಂಚಣಿ ಹಾಗೂ ಪಿಕ್ಸಿಡ್ ಡೆಪಾಸಿಟ್ನಿಂದ ಮಾತ್ರ ಯಾರೂ ಆದಾಯ ಗಳಿಸುತ್ತಾರೋ ಅವರು, ಈ ವರ್ಷದ ಆರಂಭದಿಂದ ತೆರಿಗೆ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ.
ಆದರೆ ಇದರ ಬದಲಾಗಿ, ಪಿಂಚಣಿ ಹಾಗೂ ಪಿಕ್ಸಿಡ್ ಡೆಪಾಸಿಟ್ನಿಂದ ಮಾತ್ರ ಯಾರೂ ಆದಾಯ ಗಳಿಸುವ 75 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಆದಾಯವನ್ನು ಫಾರ್ಮ್ 12ಬಿಬಿಎ ನಲ್ಲಿ ನೋಂದಯಿಸಿಕೊಳ್ಳಬೇಕು. ಫಾರ್ಮ್ 12ಬಿಬಿಎ ಅನ್ನು ಸೆಂಟ್ರಲ್ ಬೋರ್ಡ್ ಆಫ್ ಇನ್ಕಮ್ ಟ್ಯಾಕ್ಸ್ (ಸಿಬಿಡಿಟಿ) ಅಡಿಯಲ್ಲಿ ಬರುವಂತದ್ದು ಆಗಿದೆ. ಈ 75 ವರ್ಷಕ್ಕಿಂತ ಮೇಲ್ಪಟ್ಟವರು ತಾವು ಪಿಂಚಣಿಯನ್ನು ಪಡೆಯುವ ತಮ್ಮ ಬ್ಯಾಂಕುಗಳಿಗೆ ಈ ಫಾರ್ಮ್ 12ಬಿಬಿಎ ಅನ್ನು ಸಲ್ಲಿಕೆ ಮಾಡಬೇಕು. ಸಿಬಿಡಿಟಿ ಯ ಅಧಿಸೂಚನೆ ಪ್ರಕಾರ, ಹೆಚ್ಚಿನ ನಿಗದಿತ ಬ್ಯಾಂಕುಗಳು ಇದಕ್ಕೆ ಅರ್ಹತೆ ಪಡೆಯುತ್ತವೆ.
ಆನ್ಲೈನ್ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?
ಈ ವರ್ಷದ ಆರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತನ್ನ 2021 ರ ಬಜೆಟ್ ಭಾಷಣದಲ್ಲಿ, ಹಿರಿಯ ನಾಗರಿಕರಿಗೆ ಈ ವಿನಾಯಿತಿಯನ್ನು ಘೋಷಿಸಿದ್ದರು. ಸೆಕ್ಷನ್ 80 ಸಿ ಮತ್ತು 80 ಡಿ ಸೇರಿದಂತೆ ಅಧ್ಯಾಯ VI-A ಕಡಿತಗಳನ್ನು ಗಣನೆಗೆ ತೆಗೆದುಕೊಂಡ ನಂತರ ಅನ್ವಯವಾಗುವ ತೆರಿಗೆಯನ್ನು ಕಡಿತಗೊಳಿಸುವುದು ಬ್ಯಾಂಕಿನ ಜವಾಬ್ದಾರಿಯಾಗಿದೆ. ಹಾಗಾಗಿ ಹಿರಿಯ ನಾಯಕರುಗಳು ಬೇರೆಯಾಗಿಯೇ ತೆರಿಗೆಯನ್ನು ಪಾವತಿ ಮಾಡಬೇಕಾಗಿ ಬರುವುದಿಲ್ಲ. ಹಾಗೆಯೇ ಈ ಹಿರಿಯ ನಾಗರಿಕರು ದಾಖಲೆಗಳಿಗಾಗಿ ಓಡಾಟ ಮಾಡಬೇಕಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ Taxspanner.com. ನ ಸಹ ಸಂಸ್ಥಾಪಕರ ಹಾಗೂ ಸಿಇಒ ಸುಧೀರ್ ಕೌಶಿಕ್ ಈ ಬಗ್ಗೆ ಮಾತನಾಡಿ, "ಇದು ಉತ್ತಮ ಹೆಜ್ಜೆ. ಹಿರಿಯ ನಾಗರಿಕರು ತಮ್ಮ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ, ವಿಶ್ವಾಸವನ್ನು ಕೂಡಾ ಹೊಂದಿರುವುದು ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇ-ಫೈಲಿಂಗ್ ಅನುಕೂಲಕರವಾಗಿರುತ್ತದೆಯೋ ಹಲವಾರು ಮಂದಿಗೆ ಆನ್ಲೈನ್ ಪ್ರಕ್ರಿಯೆಯು ಸುಲಭ ಎಂದು ಅನಿಸುವುದಿಲ್ಲ. ಇನ್ನು ಭವಿಷ್ಯದಲ್ಲಿ ಇದು ಕೂಡಾ ಸಾಮಾನ್ಯವಾಗಬಹುದು," ಎಂದು ಹೇಳಿದ್ದಾರೆ. ಇನ್ನು ಬ್ಯಾಂಕುಗಳು ತಮ್ಮ ಎಲ್ಲ ಮಾಹಿತಿಯನ್ನು ಹೆಚ್ಚಾಗಿ ಹೊಂದಿರುವುದರಿಂದ, ಇಡೀ ಪ್ರಕ್ರಿಯೆಯು ಸುಗಮವಾಗಬಹುದು ಎಂದು ತೆರಿಗೆ ತಜ್ಞರು ಹೇಳುತ್ತಾರೆ.
ಕೋವಿಡ್ ಲಸಿಕೆಯಿಂದಾಗಿ ಕಾರ್ಯ ನಿರ್ವಹಿಸುತ್ತಿದೆ ಈ ಸಂಸ್ಥೆಗಳ ಸ್ಟಾಕ್ಗಳು!
"ಅನೇಕ ಹಿರಿಯ ನಾಗರಿಕರು ಆದಾಯ ತೆರಿಗೆ ಕಾನೂನುಗಳ ಬಗ್ಗೆ ಅಧಿಕವಾಗಿ ತಿಳಿದಿರುವುದಿಲ್ಲ ಹಾಗೆಯೇ ಇ-ಫೈಲಿಂಗ್ ಅವರಿಗೆ ತೊಂದರೆಯಾಗಿದೆ. ಈ ವಿನಾಯಿತಿ ಅಂತಹ ಹಿರಿಯ ನಾಗರಿಕರ ಜೀವನವನ್ನು ಸುಲಭಗೊಳಿಸುತ್ತದೆ," ಎಂದು ಚಾರ್ಟಡ್ ಕ್ಲಬ್ನ ಸ್ಥಾಪಕ ಕರಣ್ ಭತ್ರಾ ಹೇಳಿದ್ದಾರೆ.
ಇದು ಹಿರಿಯ ನಾಗಕರಿಗೆ ಸಹಕಾರಿಯಾಗಿದೆ. ಉದಾಹರಣೆಗೆ ಹಿರಿಯ ನಾಗರಿಕರ ವಾರ್ಷಿಕ ಆದಾಯ ಆರು ಲಕ್ಷ ಎಂದಾದರೆ, ಬ್ಯಾಂಕುಗಳು ಶೇಕಡ ಹತ್ತರಷ್ಟು ಟಿಡಿಎಸ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ತೆರಿಗೆಯು ಶೇಕಡ 5.6 ಆಗಿರುತ್ತದೆ. ಆದರೆ ಅದರ ಬದಲಾಗಿ ಹಿರಿಯ ನಾಗರಿಕರು ಫಾರ್ಮ್ 12ಬಿಬಿಎ ಫೈಲ್ ಮಾಡಲು ಮುಂದಾದರೆ, ಕೇವಲ ಶೇಕಡ 5.6 ತೆರಿಗೆ ಮಾತ್ರ ಕಡಿತವಾಗುತ್ತದೆ ಹಾಗೂ ಹಿರಿಯ ನಾಗರಿಕರು ಆದಾಯ ತೆರಿಗೆ ರಿಟರ್ನ್ ಪ್ರಕ್ರಿಯೆಯನ್ನು ಪಾಲಿಸಬೇಕಾಗಿಲ್ಲ," ಎಂದು ಕೂಡಾ ಕರಣ್ ಭತ್ರಾ ತಿಳಿಸಿದ್ದಾರೆ.

ಹಲವಾರು ಷರತ್ತುಗಳಿವೆ!
ಈ ಹೊಸ ನಿಯಮವು ಹಿರಿಯ ನಾಗರಿಕರಿಗೆ ಸಹಕಾರಿ ಆಗಲಿ ಎಂಬ ನಿಟ್ಟಿನಲ್ಲಿ ಮಾಡಿದ್ದರೂ ಕೂಡಾ ಇದರ ಹಲವಾರು ಷರತ್ತುಗಳು ಈ ಹೊಸ ಯೋಜನೆಯಡಿ ಗರಿಷ್ಠ ಹಿರಿಯ ನಾಗರಿಕರು ಒಳಗೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ. ಮೊದಲ ಷರತ್ತು, ಈ ಹಿರಿಯ ನಾಗರಿಕರಿಗೆ ಬಡ್ಡಿದರ ಹಾಗೂ ಪಿಂಚಣಿ ಹೊರತು ಪಡಿಸಿ ಬೇರೆ ಯಾವುದೇ ಆದಾಯವಿರಬಾರದು. ಆದರೆ ಹಲವಾರು ಹಿರಿಯ ನಾಗರಿಕರಿಗೆ ಪಿಂಚಣಿ ಹಾಗೂ ಫಿಕ್ಸಿಡ್ ಡೆಪಾಸಿಟ್ನಿಂದ ಆದಾಯ ದೊರೆಯುತ್ತದೆ.
ಹಾಗೆಯೇ ಹಲವಾರು ಹಿರಿಯ ನಾಗರಿಕರಲ್ಲಿ ಒಂದಕ್ಕಿಂತ ಅಧಿಕ ಪೋಸ್ಟ್ ಆಫಿಸ್ ಖಾತೆ ಅಥವಾ ಬ್ಯಾಂಕು ಖಾತೆಗಳು ಇದೆ. ಈ ಹಿರಿಯ ನಾಗರಿಕರು ಈ ಪ್ರಯೋಜನವನ್ನು ಪಡೆಯಲು ಅರ್ಹರಾಗುವುದಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ Taxspanner.com. ನ ಸಹ ಸಂಸ್ಥಾಪಕರ ಹಾಗೂ ಸಿಇಒ ಸುಧೀರ್ ಕೌಶಿಕ್, "ಎರಡು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಅವರು ಆದಾಯ ತೆರಿಗೆ ರಿಟರ್ನ್ ಅಪ್ಲೈನಲ್ಲಿ ವಿನಾಯತಿ ಪಡೆಯಲು ಸಾಧ್ಯವಿಲ್ಲ," ಎಂದಿದ್ದಾರೆ. ಇನ್ನು ಈಗ ಹಲವಾರು ಹಿರಿಯ ನಾಗರಿಕರು ಫಿಕ್ಸಿಡ್ ಡೆಪಾಸಿಟ್, ಫಂಡ್ ಹಾಗೂ ಇತರೆ ಕಡೆಗಳಲ್ಲಿ ಹೂಡಿಕೆ ಮಾಡಿ ಹಣವನ್ನು ಪಡೆಯುತ್ತಾರೆ. ಆ ಹಿರಿಯ ನಾಗರಿಕರು ಕೂಡಾ ಈ ಷರತ್ತಿನ ಪ್ರಕಾರವಾಗಿ ಈ ವಿನಾಯತಿ ಪಡೆಯಲು ಅರ್ಹರಾಗಿರುವುದಿಲ್ಲ.
ಇನ್ನು ಹಿರಿಯ ನಾಗರಿಕರು ಸೆಕ್ಷನ್ 80 ಸಿ ಮತ್ತು 80 ಡಿ ಕಡಿತವನ್ನು ಪಡೆಯಲು ಬಯಸಿದರೆ, ಅವರು ಬ್ಯಾಂಕುಗಳಿಗೆ ದಾಖಲೆಗಳನ್ನು ನೀಡಬೇಕಾಗುತ್ತದೆ. ಇನ್ನು ಈ ಬಗ್ಗೆ ತನ್ನ ಅಧಿಕೃತ ಪ್ರಕಟಣೆಯಲ್ಲಿ, "ಹಿರಿಯ ನಾಗರಿಕರು ಕಳೆದ ವರ್ಷ ನೀಡಿದ ದಾಖಲೆಗಳ ಆಧಾರದಲ್ಲಿ ಸೆಕ್ಷನ್ 80 ಸಿ ಮತ್ತು 80 ಡಿ ಸೇರಿದಂತೆ ಅಧ್ಯಾಯ VI-A ಕಡಿತಗಳನ್ನು ಮಾಡಲಾಗುತ್ತದೆಯೇ ಎಂದು ಪರಿಶೀಲಿಸಲಾಗುವುದು," ಎಂದು ತಿಳಿಸಿದೆ.