For Quick Alerts
ALLOW NOTIFICATIONS  
For Daily Alerts

ನಿಮಗೆ ಮೊದಲ ಕೆಲಸ ಸಿಕ್ಕಿದೆಯೇ? ಹಣವನ್ನು ಮ್ಯಾನೇಜ್ ಮಾಡಲು ಈ ಸೂತ್ರಗಳನ್ನು ಅನುಸರಿಸಿ

|

ಚೆನ್ನಾಗಿ ಓದಿ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು ಎನ್ನುವುದು ಕೋಟ್ಯಾಂತರ ವಿದ್ಯಾರ್ಥಿಗಳ ಕನಸಾಗಿರುತ್ತೆ. ಅಂತೆಯೇ ಓದಿ ಉತ್ತೀರ್ಣರಾದ ಬಳಿಕ ಎದುರಾಗುವ ಸವಾಲು ಕೆಲಸ ಗಿಟ್ಟಿಸುವುದು. ಕೆಲವರಿಗೆ ಓದು ಮುಗಿದ ತಕ್ಷಣ ಕೆಲಸ ಸಿಕ್ಕರೆ, ಮತ್ತೆ ಕೆಲವರು ಸ್ವಲ್ಪ ಪರಿಶ್ರಮ ಪಟ್ಟು ಹುಡುಕಿದ ಬಳಿಕ ಕೆಲಸ ಸಿಗುತ್ತದೆ. ಮತ್ತೆ ಕೆಲವರು ಕೆಲಸ ಹುಡುಕುವುದರಲ್ಲೇ ವರ್ಷ ಕಳೆದು ಬಿಡುತ್ತಾರೆ.

ಮೊದಲ ಕೆಲಸ ಸಿಕ್ಕಾಗ ಆಗುವ ಸಂತೋಷ ಮಾತ್ರ ಅಷ್ಟಿಷ್ಟಲ್ಲ. ಜೀವನದಲ್ಲಿ ಶೈಕ್ಷಣಿಕ ಹಂತವನ್ನು ಮುಗಿಸಿ ಉದ್ಯೋಗದ ಮೆಟ್ಟಿಲನ್ನು ತುಳಿದ ಕ್ಷಣವದು. ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಕಷ್ಟ ಪಟ್ಟು ಓದಿಸಿರುತ್ತಾರೆ. ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳ ಶಾಲಾ-ಕಾಲೇಜುಗಳ ಶುಲ್ಕ ಪಾವತಿಸಿರುತ್ತಾರೆ. ಮೊದಲ ಕೆಲಸ ಸಿಕ್ಕ ತಕ್ಷಣ ಬಹುತೇಕರು ಮನೆಯ ಹಣಕಾಸಿನ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವುದು ಇದೆ. ಆದರೆ ಹಣಕಾಸನ್ನು ಸರಿಯಾಗಿ ಹೊಂದಾಣಿಕೆ ಮಾಡದಿದ್ದರೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

 

ಮೊದಲ ಕೆಲಸ ಪಡೆದ ಉದ್ಯೋಗಿಗಳು ಹೇಗೆ ಹಣದ ನಿರ್ವಹಣೆಯನ್ನು ಸಮತೋಲನದಲ್ಲಿ ನಿಭಾಯಿಸಬೇಕು ಎಂಬುದಕ್ಕೆ ಸಲಹೆಗಳು ಈ ಕೆಳಗಿವೆ ಓದಿ.

ನಿಧಿ ಮತ್ತು ಹೂಡಿಕೆ ಯೋಜನೆ

ನಿಧಿ ಮತ್ತು ಹೂಡಿಕೆ ಯೋಜನೆ

ಕೆಲಸ ಸಿಕ್ಕಿದ ಆರಂಭದಲ್ಲಿ ಯಾರಿಗೂ ದಿಢೀರ್ ಎಂದು ಹಣಕಾಸನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿದುಬರುವುದಿಲ್ಲ. ಕೆಲವೊಮ್ಮೆ ಅನಾವಶ್ಯಕ ಖರ್ಚುಗಳನ್ನೇ ಹೆಚ್ಚು ಮಾಡುತ್ತಿರುತ್ತಾರೆ. ಉದಾಹರಣೆಗೆ ಬೆಂಗಳೂರಿನಲ್ಲಿ ವಿವೇಕ್‌ ಎಂಬ 25 ವರ್ಷದ ಯುವಕನಿಗೆ ಶಿಕ್ಷಣ ಮುಗಿಸದ ತಕ್ಷಣ ಕೆಲಸ ಸಿಕ್ಕಿಬಿಟ್ಟಿತು. ಕೆಲಸದ ಆರಂಭದ ದಿನಗಳಲ್ಲಿ ಆತನಿಗೆ ಹಣವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿದಿರಲಿಲ್ಲ ಹೀಗಾಗಿ ಆರಂಭಿಕ ಕೆಲ ತಿಂಗಳುಗಳು ಗೊತ್ತಾಗದೇ ಅನೇಕ ಖರ್ಚುಗಳು ಆಗಿ ಹೋಗುತ್ತಿದ್ದವರು. ಆತನ ಪೋಷಕರು ಸ್ವಲ್ಪ ಬುದ್ದಿ ಹೇಳಿ ಹಣವನ್ನು ಫಿಕ್ಸೆಡ್ ಡೆಪಾಟಿಸ್ ಮಾಡುವಂತೆ ಸಲಹೆ ನೀಡಿದರು. ಅಂತೆಯೇ ಆತ ಹಣವನ್ನು ಸ್ವಲ್ಪ ಉಳಿತಾಯ ಮಾಡುವುದಕ್ಕೆ ಶುರುಮಾಡಿದ.

ಈ ವಿವೇಕ್‌ನ ಫಿಕ್ಸೆಡ್ ಡೆಪಾಸಿಟ್ ಮಾರ್ಗ ಚೆನ್ನಾಗಿಯೇ ಇದೆ. ಆದರೆ ಇದು ಭವಿಷ್ಯದ ದೃಷ್ಠಿಯಲ್ಲಿ ಸ್ವಲ್ಪ ಪ್ರಯೋಜನವಾಗುವುದೇ ವಿನಃ ದೊಡ್ಡ ಮಟ್ಟದ ಹೆಜ್ಜೆ ಇಡಲು ಸಾಧ್ಯವಾಗುವುದಿಲ್ಲ. ಹಣ ಉಳಿತಾಯದ ಜೊತೆಗೆ ಅದರಲ್ಲಿ ಅರ್ಧ ಪಾಲನ್ನು ಹೂಡಿಕೆ ಮಾಡಬೇಕು. ಅಂದರೆ ಹಣವನ್ನು ಹಾಕಿ ಅದರ ಮೂಲಕವೇ ಮತ್ತಷ್ಟು ಹಣ ಗಳಿಸಬೇಕು. ಲಿಕ್ವಿಡಿಟಿ, ಮ್ಯೂಚುವಲ್ ಫಂಡ್ಸ್ ಹೀಗೆ ನಾನಾ ರೀತಿಯ ಮಾರ್ಗಗಳಿದ್ದು ಅವುಗಳನ್ನ ಅರಿತು ಹೂಡಿಕೆ ಮಾಡಬೇಕು

ಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸ್‌ನ ಹಣಕಾಸು ನಿರ್ವಹಣೆಯ ಮುಖ್ಯಸ್ಥ ಸೌರವ್ ಬಾಸು ಪ್ರಕಾರ ಆರಂಭಿಕ ಉದ್ಯೋಗಿಗಳು 50:20:30 ನಿಯಮವನ್ನು ಪಾಲಿಸಿದರೆ ಉತ್ತಮವಂತೆ. ಬರುವ ವೇತನದಲ್ಲಿ 50ರಷ್ಟು ಹಣವನ್ನು ಎಲ್ಲಾ ರೀತಿಯ ಖರ್ಚುಗಳಿಗೆ ಉಪಯೋಗಿಸಬೇಕು. ಉದಾಹರಣೆಗೆ ಆಹಾರ, ಓಡಾಟ, ಇತ್ಯಾದಿ. 20 ಪರ್ಸೆಂಟ್ ಹಣವನ್ನು ಉಳಿತಾಯ ಯೋಜನೆಗಳಿಗೆ ಬಳಸಬೇಕು. ಅಥವಾ ಫಿಕ್ಸೆಡ್ ಡೆಪಾಸಿಟ್ ಇತ್ಯಾದಿ. ಇನ್ನುಳಿದ 30 ಪರ್ಸೆಂಟ್ ಹಣವನ್ನು ಭವಿಷ್ಯದ ದೃಷ್ಠಿಯಿಂದ ದೀರ್ಘಾವಧಿಯ ಗುರಿಗಳತ್ತ ಅಂದರೆ ಮದುವೆ, ಮಕ್ಕಳ ಶಿಕ್ಷಣ, ನಿವೃತ್ತಿ ಈ ರೀತಿಯಾಗಿ ಈಗಿನಿಂದಲೇ ಯೋಜಿಸಿ ಹೂಡಿಕೆ ಮಾಡಬೇಕು.

ಈಗತಾನೇ ಉದ್ಯೋಗಕ್ಕೆ ಸೇರಿದವರಿಗೆ ನಿವೃತ್ತಿ ಯೋಜನೆಗಳು ಬಹಳ ದೂರದಲ್ಲಿವೆ ಎಂದು ಅನಿಸಿದರೆ ವಯಸ್ಸು ಅವರ ಕಡೆಯೇ ಇರುತ್ತದೆ. ಹೀಗಾಗಿ ನಿವೃತ್ತಿಗಾಗಿ ಅವರು ಪ್ರತಿ ತಿಂಗಳು ಉಳಿಸಬೇಕಾದ ಮೊತ್ತವು ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಹೀಗಾಗಿ ಈಗಿನಿಂದಲೇ ಮಾಡಿದರೆ ಉತ್ತಮ.

ಉದ್ಯೋಗದಾತರ ವಿಮೆ ಮೇಲೆ ಅವಲಂಬಿತರಾಗದಿರಿ
 

ಉದ್ಯೋಗದಾತರ ವಿಮೆ ಮೇಲೆ ಅವಲಂಬಿತರಾಗದಿರಿ

ನೀವು ಯಾವುದಾದರೂ ಉದ್ಯೋಗಕ್ಕೆ ಸೇರಿಕೊಂಡರೆ ಉದ್ಯೋಗದಾತರು ಅಥವಾ ಕಂಪನಿಯೇ ನಿಮಗೆ ಇನ್ಷೂರೆನ್ಸ್ ಆಫರ್ ನೀಡುತ್ತದೆ. ಅಂದರೆ ಇಂತಿಷ್ಟು ಎಂದು ತಿಂಗಳ ಸಂಬಳದಲ್ಲಿ ಹಿಡಿದುಕೊಂಡು ನಿಮ್ಮ ಕುಟುಂಬಕ್ಕೆ ವಿಮೆ ಮಾಡಿಸುತ್ತದೆ. ಆದರೆ ಈ ವಿಮೆಗಳು ಈಗಿನ ಆಧುನಿಕ ದುಬಾರಿ ಚಿಕಿತ್ಸಾ ವೆಚ್ಚಗಳಿಗೆ ಸಾಲದೇ ಹೋಗಬಹುದು. ಸಾಮಾನ್ಯವಾಗಿ ಕಂಪನಿಗಳು ಮಾಡಿಸುವ ಆರೋಗ್ಯ ವಿಮೆಗಳು ಕುಟುಂಬಕ್ಕೆ 4 ಲಕ್ಷದವರೆಗೂ ಕವರ್ ಮಾಡುತ್ತವೆ. ಇಂದಿನ ವೈದ್ಯಕೀಯ ಹಣದುಬ್ಬರದವನ್ನು ಪರಿಗಣಿಸಿ, ಈ ಮೊತ್ತವು ನಿಮ್ಮ ಅಥವಾ ನಿಮ್ಮ ಹೆತ್ತವರಿಗೆ ಕಡಿಮೆಯೇ ಸರಿ.

ಹೀಗಾಗಿ ಯಾರಾದರೂ ಹಣಕಾಸು ಸಲಹೆಗಾರರಿಂದ ಮಾಹಿತಿ ಪಡೆದು 10 ಲಕ್ಷದವರೆಗೂ ಕವರ್ ಆಗುವು ಆರೋಗ್ಯ ವಿಮೆಯನ್ನು ಮಾಡಿಸಿದರೆ ಉತ್ತಮ.

ಶೈಕ್ಷಣಿಕ ಸಾಲವನ್ನು ಬೇಗ ತೀರಿಸಿ

ಶೈಕ್ಷಣಿಕ ಸಾಲವನ್ನು ಬೇಗ ತೀರಿಸಿ

ಶೈಕ್ಷಣಿಕ ಕೋರ್ಸ್‌ಗಳು ಮುಗಿದ ತಕ್ಷಣ ಉದ್ಯೋಗ ಸಿಕ್ಕಿತೆಂದುಕೊಂಡರೆ, ಕೋರ್ಸ್‌ಗಳಿಗೆ ಮಾಡಿದ ಸಾಲವನ್ನು ಹಿಂದಿರುಗಿಸಲು ಕೆಲವರು ಉದಾಸೀನತೆ ತೋರುವುದು ನೋಡಿದ್ದೇವೆ. ಅಂದರೆ ಸಾಲ ಕಟ್ಟಿದರಾಯ್ತು ಬಿಡು ಇನ್ನೂ ಸಮಯವಿದೆ ಎಂದು ಸುಮ್ಮನಾಗಬಹುದು. ಆದರೆ ಇದು ಹೆಚ್ಚು ಕಾಲ ಉಳಿಸಿಕೊಳ್ಳುವುದರಿಂದ ಹೆಚ್ಚಿನ ಆರ್ಥಿಕ ಹೊರೆಯಾಗಿ ಪರಿಣಮಿಸಬಹುದು. ಅಲ್ಲದೆ ನಿಮ್ಮ ಉಳಿತಾಯವನ್ನು ಹೆಚ್ಚು ಪ್ರಮಾಣದಲ್ಲಿ ನುಂಗಿಬಿಡುತ್ತದೆ.

ಶಿಕ್ಷಣದ ಸಾಲವನ್ನು ಮೊದಲೇ ಪಾವತಿಸಬೇಕೆ ಅಥವಾ ಪೂರ್ಣ ಅವಧಿಗೆ ಮುಂದುವರಿಯಬೇಕೆ ಎಂದು ನೀವು ಪರಿಗಣಿಸಬೇಕು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಇ ಅಡಿಯಲ್ಲಿ ಶಿಕ್ಷಣ ಸಾಲದ ಮೇಲೆ ನೀವು ಪಾವತಿಸುವ ಸಂಪೂರ್ಣ ಬಡ್ಡಿ ಕಡಿತಕ್ಕೆ ಅರ್ಹರಾಗಿರುತ್ತದೆ. ಈ ಆದಾಯ ತೆರಿಗೆ ಕಡಿತವನ್ನು 8 ವರ್ಷದವರೆಗೂ ಪಡೆಯಬಹುದು.

ಆದರೆ ಸಾಲವನ್ನು ಬೇಗನೆ ತೀರಿಸುವುದು ಯಾವಾಗಲೂ ಸೂಕ್ತವಾಗಿರುತ್ತದೆ. ನಿಮ್ಮ ವಾರ್ಷಿಕ ಆದಾಯವು ಸಾಲ ಮರುಪಾವತಿಯಿಂದ ಕಡಿಮೆಯಾಗಬಹುದು. ಆದರೆ ಆ ಮೂಲಕ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇಲ್ಲದೆ ಹೋದಲ್ಲಿ ಯಾವುದೇ ರೀತಿಯ ತೆರಿಗೆ ಪ್ರಯೋಜನಗಳು ಸಿಗುವುದಿಲ್ಲ. ಹೀಗಾಗಿ ಶಿಕ್ಷಣ ಸಾಲವನ್ನು ತ್ವರಿತವಾಗಿ ಪಾವತಿಸುವುದು ಉತ್ತಮ.

ಹಣದ ಜೊತೆ ಚೆಲ್ಲಾಟ ಹಾಗೂ ಹೆಚ್ಚು ಸಾಲ ಮಾಡುವುದು ಬೇಡ

ಹಣದ ಜೊತೆ ಚೆಲ್ಲಾಟ ಹಾಗೂ ಹೆಚ್ಚು ಸಾಲ ಮಾಡುವುದು ಬೇಡ

ಹಣವನ್ನು ಸರಿಯಾಗಿ ನಿಭಾಯಿಸಲು ತಿಳಿಯದೇ ಆರಂಭದಲ್ಲೇ ಉದ್ಯೋಗಿಗಳು ಹೆಚ್ಚು ಖರ್ಚುಗಳಿಗೆ ಮುಂದಾಗಬಹುದು. ಅದರಲ್ಲೂ ಅನವಶ್ಯಕ ಕರ್ಚುಗಳು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು. ಅನೇಕರು ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುವುದು ಸಹ ಇದೆ. ಆದರೆ ಹಣದ ಜೊತೆಗೆ ಚೆಲ್ಲಾಟವು ಒಳ್ಳೆಯದಲ್ಲ. ಅಂದರೆ ಸಾಲ ಮಾಡಿ ಖರ್ಚು ಮಾಡುವುದು ಒಳಿತಲ್ಲ. ಅದರಲ್ಲೂ ಕ್ರೆಡಿಟ್ ಕಾರ್ಡ್‌ಗಳು ರಿವಾರ್ಡ್ ಪಾಯಿಂಟ್ಸ್, ಕ್ಯಾಶ್‌ಬ್ಯಾಕ್ ಆಫರ್ ಸಿಗುತ್ತವೆ ಎಂದು ಪಡೆದುಕೊಳ್ಳುವುದು ಬೇಡ. ಮೊದಲ ಕೆಲಸ ಸಿಕ್ಕ 15 ತಿಂಗಳಲ್ಲಿ ಯಾವುದೇ ಕ್ರೆಡಿಟ್‌ ಕಾರ್ಡ್ ಅಪ್ಲೈ ಮಾಡಲು ಹೋಗದಿರಿ. ಇದರಿಂದ ನಿಮಗೆ ತಿಳಿಯದೇ ಖರ್ಚುಗಳ ಸಹ ಆಗಿಬಿಡುತ್ತವೆ.

ಒಂದು ವೇಳೆ ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದೇ ಆದರೆ ನಿಮ್ಮ ಕಾರ್ಡ್‌ನ ಬಿಲ್ ಮಾಡದ ಬಾಕಿಗಳನ್ನು ಗಮನದಲ್ಲಿರಿಸಿಕೊಂಡು ಮತ್ತು ಬಿಲ್‌ ದಿನಾಂಕಕ್ಕೆ ಮರುಪಾವತಿಸಬಹುದಾದ ಖರ್ಚನ್ನು ಮಾತ್ರ ಮಾಡುವುದು ಅತಿಯಾದ ಖರ್ಚನ್ನು ಕೊಡುವ ವ್ಯಕ್ತಿ ತಪ್ಪಿಸುವ ಅತ್ಯುತ್ತಮ ಮಾರ್ಗವಾಗಿದೆ.

ಇನ್ನು ಅಂತಿಮ ವರ್ಷದ ಕಾಲೇಜು ಪದವೀಧರರು ಯಾರಾದರೂ ಈ ಲೇಖನವನ್ನು ಓದುತ್ತಿದ್ದರೆ, ನೀವು ಉದ್ಯೋಗ ಮಾರುಕಟ್ಟೆಗೆ ಕಾಲಿಡಲು ಇನ್ನೊಂದು ತುದಿಯಲ್ಲಿದ್ದೀರ. ನೀವು ಕೂಡ ಹಣ ನಿರ್ವಹಣೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಯತ್ನಿಸಿ. ಮೂಲಭೂತ ಹಣಕಾಸು ಯೋಜನೆಗಳನ್ನು ರೂಪಿಸಿ.

English summary

Tips For To have A Balanced Money Life

Got your first Job? Follow These steps to have a balanced money life
Story first published: Saturday, January 11, 2020, 16:21 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more