For Quick Alerts
ALLOW NOTIFICATIONS  
For Daily Alerts

ಪರ್ಸನಲ್ ಲೋನ್ ಕಡಿಮೆ ಬಡ್ಡಿದರಕ್ಕೆ ನೀಡುವ ಟಾಪ್ 10 ಬ್ಯಾಂಕ್ ಗಳಿವು

By ಅನಿಲ್ ಆಚಾರ್
|

ಉದ್ಯೋಗ ನಷ್ಟ, ವೇತನ ಕಡಿತ ಹೀಗೆ ಕೊರೊನಾ ಕಾರಣಕ್ಕೆ ಹಣಕಾಸು ಸಮಸ್ಯೆ ಎದುರಿಸುತ್ತಿರುವವರಿಗೆ ಸಾಲದ ಅಗತ್ಯ ಕಂಡುಬರುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹಲವರ ಪಾಲಿನ ಆಯ್ಕೆಯಾಗಿದೆ. ಹೀಗೆ ಪರ್ಸನಲ್ ಲೋನ್ ಪಡೆದುಕೊಳ್ಳುವಾಗ ಬಡ್ಡಿ ದರ ಬಹಳ ಮುಖ್ಯ.

 

ನಿಮಗೆ ನೆನಪಿರಲಿ, ಪರ್ಸನಲ್ ಲೋನ್ ಎಂಬುದು ಅನ್ ಸೆಕ್ಯೂರ್ಡ್. ಅಂದರೆ ಯಾವುದೇ ಸೆಕ್ಯೂರಿಟಿ ಅಥವಾ ಅಡಮಾನ ಪಡೆದುಕೊಳ್ಳದೆ ಸಾಲ ನೀಡುವುದರಿಂದ ಬಡ್ಡಿ ದರ ಸಾಮಾನ್ಯವಾಗಿ ಹೆಚ್ಚೇ ಇರುತ್ತದೆ. ಅಂಥದ್ದರಲ್ಲಿಯೂ ಕೆಲವು ಬ್ಯಾಂಕ್ ಗಳು ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುತ್ತಿವೆ.

ಜನ್ ಧನ್ ಖಾತೆದಾರರಿಗೆ 5,000 ರುಪಾಯಿ ಓವರ್ ಡ್ರಾಫ್ಟ್; ನಿಯಮಗಳೇನು?

ಪರ್ಸನಲ್ ಲೋನ್ ವಿತರಣೆ ಮಾಡುವಾಗ ಕ್ರೆಡಿಟ್ ಸ್ಕೋರ್ ಮುಖ್ಯ ಪಾತ್ರ ವಹಿಸುತ್ತದೆ. ಸಾಲ ಪಡೆದುಕೊಳ್ಳುವ ವ್ಯಕ್ತಿಯ ಮರುಪಾವತಿ ಸಾಮರ್ಥ್ಯ ಹಾಗೂ ಗುಡ್ ವಿಲ್ ನಿರ್ಧಾರ ಆಗುವುದು ಕ್ರೆಡಿಟ್ ಸ್ಕೋರ್ ಆಧಾರದಲ್ಲಿ. ಅಂದ ಹಾಗೆ ಯಾವ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಬಡ್ಡಿ ದರ ಕಡಿಮೆ ಎಂಬುದರ ವಿವರ ಹೀಗಿದೆ.

ಪರ್ಸನಲ್ ಲೋನ್ ಕಡಿಮೆ ಬಡ್ಡಿದರಕ್ಕೆ ನೀಡುವ ಟಾಪ್ 10 ಬ್ಯಾಂಕ್ ಗಳಿವು

* ಪಂಜಾಬ್ ನ್ಯಾಷನಲ್ ಬ್ಯಾಂಕ್ 8.80% ಮತ್ತು ಮೇಲ್ಪಟ್ಟು (84 ತಿಂಗಳ ತನಕ ಸಾಲ ಮರುಪಾವತಿ ಅವಧಿ)

* ಐಡಿಬಿಐ ಬ್ಯಾಂಕ್ 8.90% (12ರಿಂದ 60 ತಿಂಗಳ ತನಕ)

* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9.60% ಮತ್ತು ಮೇಲ್ಪಟ್ಟು (6ರಿಂದ 72 ತಿಂಗಳು ತನಕ)

* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 9.85% ಮತ್ತು ಮೇಲ್ಪಟ್ಟು ( 48 ತಿಂಗಳ ತನಕ)

* ಸಿಟಿ ಬ್ಯಾಂಕ್ 9.99% ಮತ್ತು ಮೇಲ್ಪಟ್ಟು (12ರಿಂದ 60 ತಿಂಗಳ ತನಕ)

* ಸೌತ್ ಇಂಡಿಯನ್ ಬ್ಯಾಂಕ್ 10.15% ಮತ್ತು ಮೇಲ್ಪಟ್ಟು (60 ತಿಂಗಳ ತನಕ)

* ಬ್ಯಾಂಕ್ ಆಫ್ ಬರೋಡಾ 10.25% ಮತ್ತು ಮೇಲ್ಪಟ್ಟು (12ರಿಂದ 60 ತಿಂಗಳ ತನಕ)

* ಬ್ಯಾಂಕ್ ಆಫ್ ಇಂಡಿಯಾ 10.35% (60 ತಿಂಗಳ ತನಕ)

 

* ನೈನಿತಾಲ್ ಬ್ಯಾಂಕ್ 10.40% (36 ತಿಂಗಳ ತನಕ)

* HSBC ಬ್ಯಾಂಕ್ 10.50% ಮತ್ತು ಮೇಲ್ಪಟ್ಟು (12ರಿಂದ 60 ತಿಂಗಳ ತನಕ)

ಕಡಿಮೆ ಬಡ್ಡಿ ದರಕ್ಕೆ ಪರ್ಸನಲ್ ಲೋನ್ ಪಡೆಯುವುದು ಹೇಗೆ?
* ಉತ್ತಮವಾದ ಕ್ರೆಡಿಟ್ ಸ್ಕೋರ್ ಹೊಂದಿರಬೇಕು.

* ಸಾಲ ಬಳಕೆ ಕಡಿಮೆ ನಿರ್ವಹಣೆ ಮಾಡಿರಬೇಕು.

* ಆದಾಯ ಅನುಪಾತಕ್ಕೆ ಹೋಲಿಸಿದಲ್ಲಿ ನಿಶ್ಚಿತ ಜವಾಬ್ದಾರಿಗಳು ಕಡಿಮೆ ಇರಬೇಕು.

* ವಿವಿಧ ಸಾಲ ಸಂಸ್ಥೆಗಳಿಂದ ಏಕಕಾಲಕ್ಕೆ ಪರ್ಸನಲ್ ಲೋನ್ ಪಡೆಯಬಾರದು.

* ಈಗಾಗಲೇ ನಿಮ್ಮ ಉಳಿತಾಯ ಖಾತೆ ಅಥವಾ ಎಫ್.ಡಿ. ಇರುವ ಬ್ಯಾಂಕ್/ಎನ್ ಬಿಎಫ್ ಸಿ ಬಳಿ ಪರ್ಸನಲ್ ಲೋನ್ ಪಡೆದುಕೊಳ್ಳಿ.

English summary

Top 10 Banks Offer Attractive Interest Rate On Personal Loan

Here is the list of 10 banks which provide personal loan at attractive interest rate.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X