For Quick Alerts
ALLOW NOTIFICATIONS  
For Daily Alerts

ಭಾರತದ ಟಾಪ್‌ 7 ಗೋಲ್ಡ್‌ ಕಂಪನಿಗಳ ಸ್ಟಾಕ್‌ಗಳು, ಇಲ್ಲಿದೆ ಸಂಪೂರ್ಣ ಮಾಹಿತಿ..

|

ಭಾರತದಲ್ಲಿ ಚಿನ್ನ ಎಂದರೆ ಒಂದು ಮೌಲ್ಯಯುತ ಸಂಪತ್ತು. ಹಲವಾರು ಮಂದಿ ಚಿನ್ನವನ್ನು ಒಂದು ಮೌಲ್ಯಯುತವಾದ ಸಂಪತ್ತು ಎಂದು ಮಾತ್ರವಲ್ಲದೇ ಭಾರತದ ಸಂಸ್ಕೃತಿಯ ಪ್ರತೀಕ ಕೂಡಾ ತಿಳಿದಿದ್ದಾರೆ. ಚಿನ್ನವನ್ನು ಸಾಂಪ್ರದಾಯಿಕವಾಗಿ ವಿತ್ತೀಯ ಆಸ್ತಿ ಎಂದು ಭಾರತದಲ್ಲಿ ಪರಿಗಣಿಸಲಾಗುತ್ತದೆ. ಈ ಹಳದಿ ಲೋಹವನ್ನು ಭಾರತೀಯರು ಹೆಚ್ಚಾಗಿ ಶುಭ ಕಾರ್ಯಗಳಲ್ಲಿ ಹಾಗೂ ಹಬ್ಬವಿದ್ದ ಸಂದರ್ಭದಲ್ಲಿ ಖರೀದಿ ಮಾಡುತ್ತಾರೆ.

 

ಇನ್ನು ಈಗ ಚಿನ್ನ ಎಂಬುವುದು ಯಾರು ಹೆಚ್ಚು ರಿಟರ್ನ್ ಅನ್ನು ಬಯಸುತ್ತಾರೋ ಅವರಿಗೆ ಇರುವ ಅತ್ಯುತ್ತಮ ಸಂಪ್ರಾದಾಯಕ ಹೂಡಿಕೆಯ ಆಯ್ಕೆಯಾಗಿದೆ. ನೀವು ಚಿನ್ನವನ್ನು ಯಾವಾಗ ಖರೀದಿ ಮಾಡಬೇಕು ಹಾಗೂ ಯಾವ ಸಂದರ್ಭದಲ್ಲಿ ಚಿನ್ನವನ್ನು ಮಾರಾಟ ಮಾಡಬೇಕು ಎಂದು ತಿಳಿದಿದ್ದರೆ, ನೀವು ಚಿನ್ನದಿಂದ ಸಾಕಷ್ಟು ಲಾಭವನ್ನು ಪಡೆಯಬಹುದು.

ಆರೋಗ್ಯ ವಿಮೆ ವಿಚಾರದಲ್ಲಿ ನೀವು ಈ ತಪ್ಪುಗಳನ್ನು ಎಂದಿಗೂ ಮಾಡದಿರಿ..

ದೇಶದಲ್ಲಿ ಹಲವಾರು ಜ್ಯುವೆಲ್ಲರಿ ಬ್ರಾಂಡ್‌ಗಳು ಈಗ ಇದೆ. ಆದರೆ ಈಗ ಯಾವ ಚಿನ್ನದ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎಂಬುವುದು ಕೂಡಾ ನಿಮ್ಮ ಆಲೋಚನೆ ಆಗಿರಬಹುದು. ನೀವು ಯಾವೆಲ್ಲಾ ಚಿನ್ನದ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು ಎಂಬ ಸಲಹೆಯನ್ನು ನಿಮಗೆ ನೀಡುವ ಟಾಪ್‌ 7 ಗೋಲ್ಡ್‌ ಕಂಪನಿಗಳು ಸ್ಟಾಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...

 ಟೈಟಾನ್‌- ತನಿಷ್ಕ್‌: ಸ್ಟಾಕ್‌ ರಿಟರ್ನ್ ಬಗ್ಗೆ ತಿಳಿಯಿರಿ

ಟೈಟಾನ್‌- ತನಿಷ್ಕ್‌: ಸ್ಟಾಕ್‌ ರಿಟರ್ನ್ ಬಗ್ಗೆ ತಿಳಿಯಿರಿ

ನಿಫ್ಟಿ 100 ಕ್ಕೆ ಶೇಕಡ 70.37 ಕ್ಕೆ ಹೋಲಿಕೆ ಮಾಡಿದಾಗ ಕಳೆದ ಮೂರು ವರ್ಷದಲ್ಲಿ ಶೇಕಡ 191.97 ಸ್ಟಾಕ್‌ ರಿಟರ್ನ್ ಅನ್ನು ಟೈಟಾನ್‌- ತನಿಷ್ಕ್‌ ಹೊಂದಿದೆ. ಟೈಟಾನ್‌ ಬಿಸೆನಸ್‌ ಲಿಮಿಟೆಡ್‌ 1984 ರಲ್ಲಿ ಮೊದಲು ಸ್ಥಾಪನೆ ಮಾಡಲಾಗಿದ್ದು, ಈ ಜ್ಯುವೆಲ್ಲರಿ ಕಂಪನಿಯು ಮಾರುಕಟ್ಟೆಯಲ್ಲಿ 209,357.73 ಕೋಟಿ ಬಂಡವಾಳವನ್ನು ಹೊಂದಿದೆ. 2020 ರ ಜುಲೈ 30 ರವರೆಗೆ ಟೈಟಾನ್‌ ಬಿಸೆನಸ್‌ ಲಿಮಿಟೆಡ್‌ ಒಟ್ಟು 21 ಡಿವಿಡೆಂಟ್‌ (ಲಾಭಾಂಶ) ಅನ್ನು ಘೋಷಣೆ ಮಾಡಿದೆ. ಕಳೆ ಹನ್ನೆರಡು ತಿಂಗಳುಗಳಲ್ಲಿ ಟೈಟಾನ್‌ ಕಂಪನಿ ಲಿಮಿಟೆಡ್‌ ಪ್ರತಿ ಷೇರಿಗೆ ರೂಪಾಯಿ 4 ಇಕ್ವಿಟಿ ಡಿವೆಡೆಂಟ್‌ ಅನ್ನು ಘೋಷಣೆ ಮಾಡಿದೆ. 2358.20 ರೂಪಾಯಿಯ ಪ್ರಸ್ತುತ ಷೇರಿನ ಬೆಲೆಯಲ್ಲಿ 0.17 ಪ್ರತಿಶತದಷ್ಟು ಲಾಭಾಂಶವನ್ನು ಇದು ಹೆಚ್ಚಿಸಿದೆ. ತನಿಷ್ಕ್‌ ಎಂಬುವುದು ಟೈಟಾನ್‌ನ ಬ್ರಾಂಡ್‌ ಆಗಿದ್ದು, ಇದು ಟಾಟಾ ಗುಂಪಿನ ಒಂದು ಭಾಗವಾಗಿದೆ. ಹಾಗೆಯೇ ಭಾರತದ ಅತೀ ದೊಡ್ಡ, ಜನಪ್ರಿಯ ಜ್ಯುವೆಲ್ಲರಿ ಮಳಿಗೆಗಳಲ್ಲಿ ಒಂದಾಗಿದೆ. ತನಿಷ್ಕ್‌ ಅನ್ನು 1994 ರಲ್ಲಿ ಆರಂಭ ಮಾಡಲಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಈ ಕಂಪನಿಯ ಮುಖ್ಯ ಕಚೇರಿ ಇದೆ.

 ಕಲ್ಯಾಣ್‌ ಜ್ಯುವೆಲ್ಲರಿ: ಸ್ಟಾಕ್‌ ರಿಟರ್ನ್ ಎಷ್ಟಿದೆ?
 

ಕಲ್ಯಾಣ್‌ ಜ್ಯುವೆಲ್ಲರಿ: ಸ್ಟಾಕ್‌ ರಿಟರ್ನ್ ಎಷ್ಟಿದೆ?

ಅಕ್ಟೋಬರ್ 7 ರಂದು ಕಲ್ಯಾಣ್ ಜ್ಯುವೆಲ್ಲರ್ಸ್‌ನ ಷೇರು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಸುಮಾರು ಶೇಕಡ 11 ರಷ್ಟು ಏರಿಕೆಯಾಗಿದೆ. ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಲ್ಯಾಣ್‌ ಜ್ಯುವೆಲ್ಲರ್ಸ್‌ ಭಾರತದಲ್ಲಿ ಆದಾಯದಲ್ಲಿ ಶೇಕಡ 60 ರಷ್ಟು ಹೆಚ್ಚಳವನ್ನು ಕಂಡ ಬಳಿಕ ಸ್ಟಾಕ್‌ನಲ್ಲಿ ಸುಮಾರು ಶೇಕಡ 11 ರಷ್ಟು ಏರಿಕೆಯಾಗಿದೆ. ಈ ತ್ರೈಮಾಸಿಕದಲ್ಲಿ, ಸಂಸ್ಥೆಯು ಒಂದು ಹೊಸ ಶೋರೂಂ ಅನ್ನು ಕೂಡಾ ಸ್ಥಾಪನೆ ಮಾಡಿದೆ. ಈ ಮೂಲಕ ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕಲ್ಯಾಣ್‌ ಜ್ಯುವೆಲ್ಲರಿ ತೆರೆದ ಒಟ್ಟು ಮಳಿಗೆಗಳ ಸಂಖ್ಯೆಯು ಹತ್ತಕ್ಕೆ ಏರಿಕೆ ಕಂಡಿದೆ. ಕಲ್ಯಾಣ್‌ ಜ್ಯುವೆಲ್ಲರ್ಸ್‌ನ ಆನ್‌ಲೈನ್‌ ಶಾಪಿಂಗ್‌ ವೆಬ್‌ ಕ್ಯಾಂಡರೆ (Candere) ನಲ್ಲಿ ಅಧಿಕ ಶಾಪಿಂಗ್‌ ನಡೆಯುತ್ತಿದೆ. ಕಳೆದ ವರ್ಷ ಇದೇ ಸಂದರ್ಭಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಆನ್‌ಲೈನ್‌ ಶಾಪಿಂಗ್‌ನಲ್ಲಿ ಶೇಕಡ 45 ರಷ್ಟು ಏರಿಕೆ ಕಂಡು ಬಂದಿದೆ. ಕಲ್ಯಾಣ್‌ ಜ್ಯುವೆಲ್ಲರ್ಸ್‌ 1993 ರಲ್ಲಿ ಸ್ಥಾಪಿಸಲಾಗಿದೆ. ಇದರ ಮುಖ್ಯ ಕಚೇರಿಯು ಕೇರಳದ ತ್ರಿಶೂರಿನಲ್ಲಿ ಇದೆ. ಟಿ ಎಸ್‌ ಕಲ್ಯಾಣರಾಮನ್‌ ಈ ಕಲ್ಯಾಣ್‌ ಜ್ಯುವೆಲ್ಲರ್ಸ್‌ ಅನ್ನು ಸ್ಥಾಪನೆ ಮಾಡಿದರು. ಇದು ಭಾರತದ ಅತೀ ದೊಡ್ಡ ಜನಪ್ರಿಯ ಜ್ಯುವೆಲ್ಲರಿ ಮಳಿಗೆಗಳಲ್ಲಿ ಒಂದಾಗಿದೆ.

ನೀಲಿ ಬಣ್ಣದ ಆಧಾರ್ ಕಾರ್ಡ್‌: ಯಾರಿಗೆ ಸಿಗಲಿದೆ? ಅಪ್ಲೈ ಮಾಡುವುದು ಹೇಗೆ?

 ಪಿಸಿ ಜ್ಯುವೆಲ್ಲರಿ: ಇಲ್ಲಿದೆ ವಿವರ

ಪಿಸಿ ಜ್ಯುವೆಲ್ಲರಿ: ಇಲ್ಲಿದೆ ವಿವರ

2005 ರಲ್ಲಿ ಪಿಸಿ ಜ್ಯುವೆಲ್ಲರಿ ಸ್ಥಾಪನೆ ಆಗಿದೆ. ಇದು ಸಣ್ಣ ಬಂಡವಾಳದ ಮಾರುಕಟ್ಟೆಯಾಗಿದ್ದು, ಇದರ ಮಾರುಕಟ್ಟೆ ಬಂಡವಾಳ 1,319.42 ಕೋಟಿ ರೂಪಾಯಿ ಆಗಿದೆ. ಆದರೆ 100 ನಿಫ್ಟಿಗೆ ಹೋಲಿಕೆ ಮಾಡಿದಾಗ ಇದು ಶೇಕಡ 86.64 ರಿಟರ್ನ್ ಅನ್ನು ಕಳೆದ ಮೂರು ವರ್ಷಗಳಲ್ಲಿ ಹೊಂದಿದೆ. ಸ್ಟಾಕ್‌ ರಿಟರ್ನ್ -55.4 ಆಗಿದೆ. ಈ ಸಂಸ್ಥೆಯು ಹಲವಾರು ಗೌರವವನ್ನು ತನ್ನದಾಗಿಸಿಕೊಂಡಿದೆ. ಬಿ 2 ಸಿ ಕನ್ಸಲ್‌ಟಂಟ್ಸ್‌ ಮತ್ತು ಬ್ರಾಂಡ್‌ ಆರ್‍ಕಿಟೆಕ್ಸ್‌, ಬೆಸ್ಟ್‌ ಶೋರೂಂ ಅವಾರ್ಡ್ ಫಾರ್‌ ಡೈಮಂಟ್‌ ಸೀಸನ್‌ 2006 ಅನ್ನು ಪಿಸಿ ಜ್ಯುವೆಲ್ಲರಿ ಸ್ಥಾಪನೆಯಾದ ಒಂದು ವರ್ಷದಲ್ಲಿ ತನ್ನ ಮುಡಿಗೇರಿಸಿಕೊಂಡಿದೆ. 17 ರಾಜ್ಯಗಳ 47 ನಗರಗಳಲ್ಲಿ 56 ಮಳಿಗೆಗಳನ್ನು ಈ ಸಂಸ್ಥೆಯು ಹೊಂದಿದೆ.

 ಏಷ್ಯನ್‌ ಸ್ಟಾರ್‌ ಕಂಪನಿ: ಸ್ಟಾಕ್‌ ರಿಟರ್ನ್ ಮಾಹಿತಿ

ಏಷ್ಯನ್‌ ಸ್ಟಾರ್‌ ಕಂಪನಿ: ಸ್ಟಾಕ್‌ ರಿಟರ್ನ್ ಮಾಹಿತಿ

ಏಷ್ಯನ್‌ ಸ್ಟಾರ್‌ ಕಂಪನಿಯು ಡೈಮಂಡ್‌ ಉತ್ಪಾದಕರ ಸಂಸ್ಥೆಯಾಗಿದೆ. ಈ ಸಂಸ್ಥೆಯು ಡೈಮೆಂಡ್‌ ಕಟ್ಟಿಂಗ್‌ ಹಾಗೂ ಪಾಲಿಶಿಂಗ್‌ನಲ್ಲಿ ಪ್ರಾವೀಣ್ಯತೆಯನ್ನು ಹೊಂದಿದೆ. ಹಾಗೆಯೇ ಜ್ಯುವೆಲ್ಲರಿಯನ್ನು ಕೂಡಾ ತಯಾರಿ ಮಾಡುತ್ತದೆ. ಗ್ರಾಹಕರು ತಮ್ಮದೇ ಆದ ವಿನ್ಯಾಸವನ್ನು ನೀಡಿ ಆಭರಣವನ್ನು ಮಾಡಿಸಿಕೊಂಡು ಪಡೆಯಬಹುದು. ಈ ಸಂಸ್ಥೆಯ ಸ್ಟಾಕ್‌ ರಿಟರ್ನ್ ಕಳೆದ ಮೂರು ವರ್ಷದಲ್ಲಿ ಶೇಕಡ 22.82 ಆಗಿದೆ. ನಿಫ್ಟಿ 86.64 ಶೇಕಡ ಇದೆ. ಈ ಏಷ್ಯನ್‌ ಸ್ಟಾರ್‌ ಕಂಪನಿಯು 1995 ರಲ್ಲಿ ಆರಂಭ ಮಾಡಲಾಗಿದ್ದು, ಇದರ ಮಾರುಕಟ್ಟೆ ಬಂಡವಾಳ 1,402.60 ಕೋಟಿ ಆಗಿದೆ.

ವಿದ್ಯಾರ್ಥಿಗಳೇ ಖರ್ಚು ಮಿತಿ ಮೀರುತ್ತಿದೆಯೇ?, ಇಲ್ಲಿದೆ ನಿಮಗೆ ಅಗತ್ಯ ಸಲಹೆ

 ರಾಜೇಶ್‌ ಎಕ್ಸ್‌ಪೋರ್ಟ್ ಬಗ್ಗೆ ನಿಮಗೆಷ್ಟು ತಿಳಿದಿದೆ?

ರಾಜೇಶ್‌ ಎಕ್ಸ್‌ಪೋರ್ಟ್ ಬಗ್ಗೆ ನಿಮಗೆಷ್ಟು ತಿಳಿದಿದೆ?

ಕಳೆದ 16 ವರ್ಷಗಳಿಂದ ಕೇವಲ ಶೇಕಡ 4.38 ಟ್ರೆಡಿಂಗ್‌ ಸೆಷನ್‌ಗಳು ಶೇಕಡ ಐದಕ್ಕಿಂತ ಅಧಿಕ ಲಾಭವನ್ನು ಪಡೆದಿದೆ. ತನ್ನ ಅನಿಶ್ಚಿತ ಬಾಧ್ಯತೆಗಳನ್ನು ಸರಿ ಮಾಡಿಕೊಳ್ಳಲು ಈ ಸಂಸ್ಥೆಯಲ್ಲಿ ಸಾಕಷ್ಟು ಬಂಡವಾಳವಿದೆ. ಇದರ ಸ್ಟಾಕ್‌ ರಿಟರ್ನ್ ಕಳೆದ ಮೂರು ವರ್ಷದಲ್ಲಿ ಶೇಕಡ -10.65 ಇದೆ. ನಿಫ್ಟಿ ಶೇಕಡ 88.52 ಆಗಿದೆ. ರಾಜೇಶ್‌ ಎಕ್ಸ್‌ಪೋರ್ಟ್ 1995 ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಇದರ ಮಾರುಕಟ್ಟೆ ಬಂಡವಾಳ 18,217.54 ಕೋಟಿ ಆಗಿದೆ. ಇದರ ಮುಖ್ಯ ಕಚೇರಿಯು ಬೆಂಗಳೂರಿನಲ್ಲಿದೆ. ಇದು ಭಾರತದ ಟಾಪ್‌ 10 ಜ್ಯುವೆಲ್ಲರಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ಜ್ಯುವೆಲ್ಲರಿ ತಯಾರಿ ಮಾಡುತ್ತದೆ ಹಾಗೂ ಅದನ್ನು ಗ್ರಾಹಕರಿಗೆ ಮಾರಾಟವನ್ನು ಕೂಡಾ ಮಾಡುತ್ತದೆ.

 ತ್ರಿಭೋವಂದಾಸ್ ಭೀಮಜೀ ಜವೇರಿ: ಸ್ಟಾಕ್‌ ರಿಟರ್ನ್

ತ್ರಿಭೋವಂದಾಸ್ ಭೀಮಜೀ ಜವೇರಿ: ಸ್ಟಾಕ್‌ ರಿಟರ್ನ್

ಮೂರು ತ್ರೈಮಾಸಿಕಗಳ ನಂತರ, ಕಂಪನಿಯು ಜೂನ್ 30, 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ರೂ. 9.79 ಕೋಟಿ ನಷ್ಟವನ್ನು ಹೊಂದಿದೆ. ನಿಫ್ಟಿ ಸ್ಮಾಲ್ ಕ್ಯಾಪ್ 100 ಕ್ಕೆ 86.64 ಪ್ರತಿಶತಕ್ಕೆ ಹೋಲಿಸಿದರೆ ಮೂರು ವರ್ಷಗಳಲ್ಲಿ 77.65 ಪ್ರತಿಶತದಷ್ಟು ಸ್ಟಾಕ್ ರಿಟರ್ನ್ ಹೊಂದಿದೆ. ಮಾರಾಟದಲ್ಲಿ ಇಳಿಕೆ 25.34 ಶೇಕಡ ಆಗಿದೆ. ಮೂರು ವರ್ಷಗಳಲ್ಲಿ ಮೊದಲ ಬಾರಿಗೆ, ಕಂಪನಿಯ ಆದಾಯ ಕಡಿಮೆಯಾಗಿದೆ. ಕಂಪನಿಯು ಭಾರತದ ಅತ್ಯುತ್ತಮ ಆಭರಣ ತಯಾರಕರಲ್ಲಿ ಒಂದಾಗಿದೆ. ಮುಂಬೈ, ದೆಹಲಿ, ಹೈದರಾಬಾದ್, ಕೋಲ್ಕತಾ ಮತ್ತು ರಾಜ್‌ಕೋಟ್ ಸೇರಿದಂತೆ 11 ರಾಜ್ಯಗಳ 23 ನಗರಗಳಲ್ಲಿ ತಮ್ಮ ಮಳಿಗೆಯನ್ನು ಹೊಂದಿದೆ.

 ವೈಭವ ಗ್ಲೋಬಲ್‌: ಸ್ಟಾಕ್‌ ರಿಟರ್ನ್ ಬಗ್ಗೆ ತಿಳಿಯಿರಿ

ವೈಭವ ಗ್ಲೋಬಲ್‌: ಸ್ಟಾಕ್‌ ರಿಟರ್ನ್ ಬಗ್ಗೆ ತಿಳಿಯಿರಿ

1989 ರಲ್ಲಿ ಸ್ಥಾಪನೆಯಾದ ವೈಭವ್ ಗ್ಲೋಬಲ್ ಲಿಮಿಟೆಡ್, ಜೆಮ್ಸ್ ಮತ್ತು ಆಭರಣ ಉದ್ಯಮದಲ್ಲಿ ಮಧ್ಯಮ ಬಂಡವಾಳ ಹೊಂದಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ರೂ 12,156.71 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಕ್ಕೆ 88.52 ಪ್ರತಿಶತಕ್ಕೆ ಹೋಲಿಸಿದರೆ ಈ ಸ್ಟಾಕ್ ಮೂರು ವರ್ಷಗಳಲ್ಲಿ 485.43 ಪ್ರತಿಶತದಷ್ಟು ಲಾಭವನ್ನು ಹೊಂದಿದೆ. ವಾರ್ಷಿಕ ಮಾರಾಟ ಬೆಳವಣಿಗೆಯು 27.82 ಶೇಕಡಾ ಆಗಿದ್ದು, ಕಂಪನಿಯ ಮೂರು ವರ್ಷದ ಬೆಳವಣಿಗೆ ದರ 17.2 ಶೇಕಡವನ್ನು ಮೀರಿಸಿದೆ. ಕಳೆದ 16 ವರ್ಷಗಳಲ್ಲಿ ಕೇವಲ 7.64 ಪ್ರತಿಶತದಷ್ಟು ಟ್ರೇಡಿಂಗ್ ಸೆಶನ್‌ಗಳು ಶೇಕಡ 5 ಕ್ಕಿಂತ ಹೆಚ್ಚಿನ ಲಾಭಗಳನ್ನು ಹೊಂದಿವೆ.

 ಇಲ್ಲಿ ಗಮನಿಸಿ

ಇಲ್ಲಿ ಗಮನಿಸಿ

ಈ ಮೇಲಿನ ಮಾಹಿತಿಯು ಕೇವಲ ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ ವಿವರಿಸಲಾಗಿದೆ. ಲೇಖಕರಾಗಲಿ ಅಥವಾ ಗ್ರೇನಿಯಮ್‌ ಇನ್ಫಾರ್‍ಮೇಶನ್‌ ಟೆಕ್ನಾಲಜಿಯು ಈ ಲೇಖನದ ಈ ಲೇಖನದ ಆಧಾರದಲ್ಲಿ ಯಾವುದೇ ನಷ್ಟ ಉಂಟಾದರೆ ಅದಕ್ಕೆ ಜವಾಬ್ದಾರಿ ಅಲ್ಲ. ಹೂಡಿಕೆ ಮಾಡುವ ಮೊದಲು ದಯವಿಟ್ಟು ಎಚ್ಚರಿಕೆಯಿಂದಿರಿ ಮತ್ತು ಸಲಹೆಗಾರರನ್ನು ಸಂಪರ್ಕ ಮಾಡಿ.

English summary

Top 7 Popular Gold Company Stocks In India, Explained in Kannada

Top 7 Popular Gold Company Stocks In India, Explained in Kannada. Read on.
Story first published: Monday, October 11, 2021, 19:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X