ಯುಪಿಐನಲ್ಲಿ ದಾಖಲೆಯ 7.7 1 ಟ್ರಿಲಿಯನ್ ಮೌಲ್ಯದ 4.21 ಬಿಲಿಯನ್ ವಹಿವಾಟು
ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ ಯುಪಿಐ ಮೂಲಕ ಅಕ್ಟೋಬರ್ನಲ್ಲಿ ಸುಮಾರು 4 ಬಿಲಿಯನ್ ವಹಿವಾಟುಗಳು ನಡೆದಿದೆ. ಈ ವಹಿವಾಟು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಪ್ರಾರಂಭದಿಂದಲೂ ಈ ಪ್ಲಾಟ್ಫಾರ್ಮ್ನಲ್ಲಿ ನಡೆದ ವಹಿವಾಟುಗಳ ಪೈಕಿ ಇದು ಗರಿಷ್ಠ ವಹಿವಾಟು ಆಗಿದೆ.
ಈ ಹಬ್ಬಗಳ ನಡುವೆ ಈ ವಹಿವಾಟು ದಾಖಲೆಯ ಮಟ್ಟಕ್ಕೆ ಏರಿದೆ. ಅಕ್ಟೋಬರ್ನಲ್ಲಿ ಯುಪಿಐನಲ್ಲಿ 7.7 1 ಟ್ರಿಲಿಯನ್ ಮೌಲ್ಯದ ದಾಖಲೆಯ 4.21 ಬಿಲಿಯನ್ ವಹಿವಾಟು ಮಾಡಲಾಗಿದೆ. ಸೆಪ್ಟೆಂಬರ್ನಲ್ಲಿ ಯುಪಿಐನಲ್ಲಿ 650 ಕೋಟಿ ರೂಪಾಯಿ ಮೌಲ್ಯದ 3.65 ಬಿಲಿಯನ್ ವಹಿವಾಟು ನಡೆದಿತ್ತು. ಒಂದು ತಿಂಗಳಿನಲ್ಲೇ ಯುಪಿಐ ವಹಿವಾಟಿನಲ್ಲಿ ಶೇಕಡ 15 ರಷ್ಟು ಏರಿಕೆ ಕಂಡು ಬಂದಿದೆ. ಹಾಗೆಯೇ ಯುಪಿಐ ವಹಿವಾಟಿನ ಮೌಲ್ಯವನ್ನು ನೋಡುವುದಾದರೆ ಸೆಪ್ಟೆಂಬರ್ಗಿಂತ ಅಕ್ಟೋಬರ್ನಲ್ಲಿ ಶೇಕಡ 18.5 ರಷ್ಟು ಏರಿಕೆ ಆಗಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕ ಹಾಕಲಾಗುವ ಯುಪಿಐನ ವಹಿವಾಟು ಲೆಕ್ಕಾಚಾರದ ಸಂದರ್ಭದಲ್ಲಿ ವಹಿವಾಟು ದ್ವಿಗುಣಗೊಂಡಿರುವುದು ಕಂಡು ಬಂದಿದೆ. ವಹಿವಾಟಿನ ಮೌಲ್ಯವು ಶೇಕಡ ನೂರರಷ್ಟು ಜಿಗಿದಿದೆ.
ವಾಟ್ಸಾಪ್ ಗ್ರಾಹಕರಿಗೆ ₹51 ಕ್ಯಾಶ್ಬ್ಯಾಕ್ ನೀಡುತ್ತಿದೆ, ಏಕೆ?
2016 ರಲ್ಲಿ ಮೊದಲು ಪ್ರಾರಂಭವಾದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ ಯುಪಿಐ ಶೀಘ್ರದಲ್ಲೇ ವ್ಯಾಪಕವಾಗಿ ಬಳಕೆಯನ್ನು ಮಾಡಲು ಸೂಕ್ತವಾದ ವೇದಿಕೆಯಾಗಿ ಮಾರ್ಪಟ್ಟಿದೆ. ಯುಪಿಐ ಬಳಕೆಯ ಮೂಲಕ ಆರ್ಥಿಕ ವ್ಯವಹಾರವನ್ನು ನಡೆಸುವ ವೇದಿಕೆಯನ್ನು ಜನರು ಅಧಿಕವಾಗಿ ಅವಲಂಬಿಸಲು ಆರಂಭ ಮಾಡಿದ್ದಾರೆ. ಅದರಲ್ಲೂ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಬಳಿಕ ಜನರು ಆನ್ಲೈನ್ ವಹಿವಾಟಿಗೆ ಜೋತು ಬಿದ್ದಿರುವ ಹಿನ್ನೆಲೆಯಲ್ಲಿ ಈಗ ಯುಪಿಐ ವಹಿವಾಟು ಅಧಿಕವಾಗಿದೆ.

ಯುಪಿಐ ವಹಿವಾಟು ಹೇಗೆ ಏರಿಕೆ ಕಂಡಿದೆ ನೋಡಿ
ಯುಪಿಐ ಅಕ್ಟೋಬರ್ನಲ್ಲಿ 2019 ರಲ್ಲಿ ಮೊದಲ ಬಾರಿಗೆ 1 ಬಿಲಿಯನ್ ವಹಿವಾಟುಗಳನ್ನು ದಾಟಿದೆ. ಬಳಿಕ ಒಂದು ವರ್ಷದಲ್ಲೇ 1 ಬಿಲಿಯನ್ ವಹಿವಾಟುಗಳು ನಡೆದಿದೆ. ಅಕ್ಟೋಬರ್ 2020 ರಲ್ಲಿ, ಯುಪಿಐ ಮೊದಲ ಬಾರಿಗೆ 2 ಶತಕೋಟಿಗೂ ಹೆಚ್ಚು ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ. ಇದಲ್ಲದೆ, ತಿಂಗಳಿಗೆ 2 ಶತಕೋಟಿ ವಹಿವಾಟುಗಳಿಂದ 3 ಶತಕೋಟಿವರೆಗಿನ ವಹಿವಾಟು ಹತ್ತು ತಿಂಗಳಿನಲ್ಲೇ ಏರಿದೆ. ಗ್ರಾಹಕರು ಚಿಲ್ಲರೆ ವ್ಯಾಪಾರಕ್ಕೂ ಡಿಜಿಟಲ್ ಪಾವತಿಗಳ ವೇದಿಕೆಯನ್ನೇ ಬಳಸುತ್ತಿರುವುದು ಈಗ ಯುಪಿಐನ ನಂಬಲಾಗದ ಜನಪ್ರಿಯತೆಯನ್ನು ಸೂಚಿಸಿದೆ. ಇನ್ನು ಈ ವಹಿವಾಟು 3 ಬಿಲಿಯನ್ಗಳಿಂದ 4 ಶತಕೋಟಿಗೆ ತಲುಪಲು ಯುಪಿಐ ಕೇವಲ ಮೂರು ತಿಂಗಳುಗಳನ್ನು ಪಡೆದುಕೊಂಡಿದೆ. ಕಳೆದ 18 ತಿಂಗಳುಗಳಲ್ಲಿ ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಜನರು ಅಧಿಕವಾಗಿ ಬಳಸುತ್ತಿದ್ದಾರೆ. ಜುಲೈನಿಂದ ಆರಂಭಗೊಂಡು ಯುಪಿಐ ಸತತ ಮೂರು ತಿಂಗಳುಗಳವರೆಗೆ ತಿಂಗಳಿಗೆ ಮೂರು ಬಿಲಿಯನ್ ವಹಿವಾಟುಗಳನ್ನು ದಾಖಲು ಮಾಡಿದೆ. ಹಬ್ಬದ ಈ ಸೀಸನ್ನಲ್ಲಿ ಈಗ ಆರ್ಥಿಕತೆಯು ಕೊಂಚ ಪುನಶ್ಚೇತನ ಕಾಣುತ್ತಿದೆ. ಯುಪಿಐ ಶೀಘ್ರದಲ್ಲೇ ತಿಂಗಳಿಗೆ ನಾಲ್ಕು ಬಿಲಿಯನ್ ವಹಿವಾಟುಗಳನ್ನು ತಲುಪುವ ನಿರೀಕ್ಷೆ ಇದೆ.

ಯುಪಿಐ ವಹಿವಾಟು 40-42 ಕ್ಕೆ ಏರಿಕೆ ಸಾಧ್ಯತೆ
ಈ ಬಗ್ಗೆ ಮಾಹಿತಿ ನೀಡಿರುವ ಎನ್ಪಿಸಿಐ ಸಿಇಒ ದಿಲೀಪ್ ಅಸ್ಬೆ, "ಕಳೆದ ವರ್ಷ ಯುಪಿಐ ವಹಿವಾಟು 22 ಬಿಲಿಯನ್ ಆಗಿತ್ತು. ಆದರೆ ಈ ವರ್ಷ ಯುಪಿಐ ವಹಿವಾಟು 40-42 ಕ್ಕೆ ಏರಿಕೆ ಆಗುವ ಸಾಧ್ಯತೆ ಇದೆ. ಈ ವರ್ಷದಲ್ಲಿ ಇಲ್ಲಿಯವರೆಗೆ, ಯುಪಿಐ ಮೂಲಕ 57.71 ಟ್ರಿಲಿಯನ್ ಮೌಲ್ಯದ 29.94 ಬಿಲಿಯನ್ ವಹಿವಾಟುಗಳನ್ನು ನಡೆಸಲಾಗಿದೆ. ಇದಲ್ಲದೆ, ವಾರ್ಷಿಕ ಆಧಾರದ ಮೇಲೆ ಯುಪಿಐ ಮೂಲಕ 1 ಟ್ರಿಲಿಯನ್ ಡಾಲರ್ ಮೌಲ್ಯದ ವಹಿವಾಟುಗಳತ್ತ ಎನ್ಪಿಸಿಐ ಚಿತ್ತ ನೆಟ್ಟಿದೆ. "ಯುಪಿಐ ನ ಆಟೋಪೇ ವೈಶಿಷ್ಟ್ಯವು ರೂಪಾಯಿ ಐದು ಸಾವಿರದವರೆಗೆ ಪಾವತಿಯನ್ನು ನಡೆಸಲು ಅನುಮತಿ ನೀಡುತ್ತದೆ. ಇದು ಜನರು ಅಧಿಕವಾಗಿ ಬಳಕೆ ಮಾಡಲು ಸಹಕಾರಿ ಆಗಿದೆ. ಗ್ರಾಹಕರು ತಮ್ಮ ಆದೇಶದ 24*7*365 ಪ್ರಕಾರ ಆಡ್, ಡಿಲೀಟ್ ಮೊದಲಾದವುಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ," ಎಂದು ಕೂಡಾ ಎನ್ಪಿಸಿಐ ಸಿಇಒ ದಿಲೀಪ್ ಅಸ್ಬೆ ತಿಳಿಸಿದ್ದಾರೆ.
ನೀವು ತಪ್ಪಾಗಿ ಬೇರೆ ಅಕೌಂಟ್ಗೆ ಹಣ ವರ್ಗಾಯಿಸಿದ್ರೆ, ವಾಪಸ್ ಪಡೆಯುವುದು ಹೇಗೆ?

ಐಎಂಪಿಎಸ್ನಲ್ಲೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ
ಇನ್ನು ಈ ಸಂದರ್ಭದಲ್ಲೇ ಇನ್ನೊಂದು ಆನ್ಲೈನ್ ಪಾವತಿ ವೇದಿಕೆಯಾದ ಇಮಿಡಿಯಟ್ ಪೇಮೆಂಟ್ ಸರ್ವಿಸ್ನ (ಐಎಂಪಿಎಸ್) ವಹಿವಾಟು ಹಾಗೂ ಅದರ ಮೌಲ್ಯವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಅಕ್ಟೋಬರ್ನಲ್ಲಿ ಐಎಂಪಿಎಸ್ ಮೂಲಕ 3.70 ಟ್ರಿಲಿಯನ್ ಮೌಲ್ಯದ 430.67 ಮಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ. ಸೆಪ್ಟೆಂಬರ್ನಲ್ಲಿ, ಐಎಂಪಿಎಸ್ ಮೂಲಕ 3.24 ಟ್ರಿಲಿಯನ್ ಮೌಲ್ಯದ 384.88 ಮಿಲಿಯನ್ ವಹಿವಾಟುಗಳನ್ನು ನಡೆಸಲಾಗಿದೆ. ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಐಎಂಪಿಎಸ್ ವಹಿವಾಟುಗಳ ಪ್ರತಿ ವಹಿವಾಟಿನ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದೆ. ಇದು ದೇಶದಲ್ಲಿ ಈಗಾಗಲೇ ಬೆಳೆಯುತ್ತಿರುವ ಡಿಜಿಟಲ್ ಪಾವತಿಗಳಿಗೆ ಇನ್ನಷ್ಟು ಉತ್ತೇಜನವನ್ನು ನೀಡಿದೆ ಎಂದು ಆನ್ಲೈನ್ ವಹಿವಾಟುಗಳ ಬಗ್ಗೆ ಅಧ್ಯಯನ ಮಾಡುವ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ
ಗಮನಿಸಿ: ಎಸ್ಬಿಐನ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ, ಎಟಿಎಂ ಸೇರಿ ಹಲವು ಸೇವೆ ಸ್ಥಗಿತ

ಐಎಂಪಿಎಸ್ ವಹಿವಾಟಿನ ಮಿತಿ ಹೆಚ್ಚಳ
ಐಎಂಪಿಎಸ್ನ ವಹಿವಾಟು ಮೊದಲು 5 ಲಕ್ಷ ರೂಪಾಯಿ ಮಿತಿಯೊಂದಿಗೆ ಆರಂಭ ಆಗಿದೆ. ಆದರೆ ಫಲಾನುಭವಿ ಬ್ಯಾಂಕ್ ಫ್ಲೋಟ್ ನಷ್ಟವನ್ನು ಅನುಭವಿಸುವ ಕಾರಣ ಈ ಮಿತಿಯನ್ನು ಎರಡು ಲಕ್ಷಗಳಿಗೆ ಇಳಿಕೆ ಮಾಡಲಾಗಿದೆ. ಈಗ ಒಂದು ದಿನದಲ್ಲೇ ಹಲವಾರು ಐಎಂಪಿಎಸ್ನ ವಹಿವಾಟುಗಳು ನಡೆಯುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಐಎಂಪಿಎಸ್ ವಹಿವಾಟುಗಳ ಪ್ರತಿ ವಹಿವಾಟಿನ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದೆ. ಇದು ವಹಿವಾಟುಗಳಿಗೆ ನೆಫ್ಟ್ ಅನ್ನು ಬಳಸುವ ಜನರಿಗೆ ಸಹಾಯ ಮಾಡಲಿದೆ ಎಂದು ತಜ್ಞರು ಹೇಳಿದ್ದಾರೆ.