For Quick Alerts
ALLOW NOTIFICATIONS  
For Daily Alerts

ಮೆಡಿಕಲ್ ಶಾಪ್‌ಗಳಲ್ಲಿ ಔಷಧಿಗಳ ಮೇಲಿನ ಲಾಭ ಎಷ್ಟು? ಮಾರ್ಜಿನ್ ಎಷ್ಟಿರುತ್ತೆ?

|

ಮೆಡಿಕಲ್ ಶಾಪ್ ಅಂದಕೂಡಲೇ ಕಣ್ಣ ಮುಂದೆ ಬರೋದು ಅದೇ ದುಬಾರಿ ಮೆಡಿಸಿನ್‌ಗಳು, ಸೌಂದರ್ಯವರ್ಧಕಗಳು. ಆರೋಗ್ಯ ಚೆನ್ನಾಗಿದ್ರೆ ಎಲ್ಲವೂ ಸರಿಯಿರುತ್ತೆ, ಅನಾರೋಗ್ಯ ಕಾಡಿದ್ರೆ ಆಸ್ಪತ್ರೆ, ಮೆಡಿಕಲ್ ಶಾಪ್‌ಗಳ ಮೇಲೆ ಅವಲಂಭನೆ ಹೆಚ್ಚಾಗುತ್ತೆ. ರೋಗಿಗಳಿಗೆ ಈ ಮೆಡಿಕಲ್ ಶಾಪ್‌ಗಳು ಒಂದು ರೀತಿಯಲ್ಲಿ ಸಂಜೀವಿನಿ ಬೆಟ್ಟದಂತೆ ಗೋಚರಿಸುತ್ತೆ. ಮಾತ್ರೆ, ಔ‍ಷಧಿ ತೆಗೆದುಕೊಂಡ್ರೆ ಎಲ್ಲವೂ ಸರಿಹೋಗುತ್ತೆ ಎನ್ನುವ ನಂಬಿಕೆ.

 

ನೀವು ಯಾವುದೇ ಉತ್ಪನ್ನಗಳನ್ನು ಖರೀದಿಸುವಾಗಲೂ ಚೌಕಾಸಿ ಮಾಡಿರಬಹುದು. ಆದರೆ ಎಷ್ಟೋ ಗ್ರಾಹಕರು ಮೆಡಿಕಲ್‌ ಶಾಪ್‌ಗಳಲ್ಲಿ ಮಾತ್ರೆಗಳಿಗೆ , ಔಷಧಿ ಮೇಲಿನ ದರಗಳಿಗೆ ಚೌಕಾಸಿ ಮಾಡೋದನ್ನು ನೀವು ನೋಡಿದ್ದೀರಾ? ಬಹುತೇಕ ಕಡಿಮೆ ಅಲ್ಲವೆ! ಹಾಗಿದ್ದರೆ ನೀವು ಕಡಿಮೆ ಔಕಾಸಿ ಮಾಡುವ ಮೆಡಿಕಲ್‌ನ ಮೆಡಿಸಿನ್‌ಗಳ ಮೇಲೆ ಎಷ್ಟು ಮಾರ್ಜಿನ್ ಇದೆ? ಹಾಗೂ ಮಾರಾಟಗಾರರಿಗೆ ಏನೆಲ್ಲಾ ಸವಾಲುಗಳು ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಓದಿ

ರಿಟೈಲ್ ಮಾರ್ಜಿನ್ 20 ಪರ್ಸೆಂಟ್

ರಿಟೈಲ್ ಮಾರ್ಜಿನ್ 20 ಪರ್ಸೆಂಟ್

ರಾಜ್ಯ, ರಾಷ್ಟ್ರಾದ್ಯಂತ ಸಾವಿರಾರು ಮೆಡಿಕಲ್ ಶಾಪ್‌ಗಳಿವೆ. ಹಾಗೆಯೇ ಲೆಕ್ಕವೇ ಇಲ್ಲದಷ್ಟು ಮೆಡಿಸಿನ್‌ಗಳು ಸಹ ಇವೆ. ಅನೇಕ ಸ್ಟ್ಯಾಂಡರ್ಡ್ ಕಂಪನಿಗಳು ಇದ್ದು, ಹೊಸ ಕಂಪನಿಗಳನ್ನು ಕಾಣಬಹುದು. ಮೆಡಿಕಲ್‌ಗಳಲ್ಲಿ ರಿಟೈಲ್ ಮಾರ್ಜಿನ್ 20 ಪರ್ಸೆಂಟ್‌ವರೆಗೂ ಇರುತ್ತದೆ. ಸ್ಟಾಕಿಸ್ಟ್‌ಗಳು(ಮೆಡಿಕಲ್‌ಗಳಿಗೆ ಔ‍ಷಧಿ ವಿತರಕರು) ಕಂಪನಿಯ ಆಫರ್‌ಗಳಿಗೆ ಔ‍ಷಧಿಗಳನ್ನು ನೀಡುತ್ತಾರೆ..

ಕೆಲವೊಂದು ಕಂಪನಿಗಳಿಂದ ಸಿಗುತ್ತೆ ಹೆಚ್ಚು ಮಾರ್ಜಿನ್ ರೇಟ್

ಕೆಲವೊಂದು ಕಂಪನಿಗಳಿಂದ ಸಿಗುತ್ತೆ ಹೆಚ್ಚು ಮಾರ್ಜಿನ್ ರೇಟ್

ಸ್ಟಾಂಡರ್ಡ್ ಕಂಪನಿಗಳು ಮಾರ್ಜಿನ್ ದರದಲ್ಲಿ ಹೆಚ್ಚು ಬದಲಾವಣೆ ಮಾಡುವುದಿಲ್ಲ. ಬಹುತೇಕ 20 ಪರ್ಸೆಂಟ್‌ವರೆಗೂ ಮಾರ್ಜಿನ್ ಬಿಟ್ಟುಕೊಡುತ್ತವೆ. ಆದರೆ ಕೆಲವೊಂದು ಕಂಪನಿಗಳು ಅಂದರೆ ಹೊಸ ಕಂಪನಿಗಳು ಮಾರ್ಕೆಂಟಿಗ್ ಮಾಡುವುದಕ್ಕಾಗಿ ‌50 ಪರ್ಸೆಂಟ್ ವರೆಗೂ ಮಾರ್ಜಿನ್ ಕೊಡುತ್ತವೆ. ಅದರಲ್ಲೂ ಮೆಡಿಸಿನ್‌ಗಳನ್ನು ಬಲ್ಕ್ ಆಗಿ ಖರೀದಿ ಮಾಡಿದ್ರೆ ಹೆಚ್ಚುವರಿ 10 ಪರ್ಸೆಂಟ್ ನೀಡುತ್ತವೆ.

ಸ್ಟ್ಯಾಂಡರ್ಡ್ ಕಂಪನಿಗಳು ಸೌಂದರ್ಯವರ್ಧಕ ಉತ್ಪನ್ನಗಳ ಮೇಲೆ 10 ರಿಂದ 15 ಪರ್ಸೆಂಟ್‌ವರೆಗಷ್ಟೇ ಮಾರ್ಜಿನ್ ನೀಡುತ್ತವೆ. ಉದಾಹರಣೆಗೆ ಸೋಪು, ಕ್ರೀಮ್‌ಗಳು, ಎನರ್ಜಿ ಡ್ರಿಂಕ್ ಇತ್ಯಾದಿ.

ಸ್ಕೀಂಗಳ ಮೂಲಕವೂ ಸಿಗುತ್ತೆ ಆಫರ್
 

ಸ್ಕೀಂಗಳ ಮೂಲಕವೂ ಸಿಗುತ್ತೆ ಆಫರ್

ಈ ಮೇಲೆ ತಿಳಿಸಿದಂತೆ ಮಾರ್ಜಿನ್ ಪರ್ಸೆಂಟ್ ಸಿಗುವ ಜೊತೆಗೆ ಕೆಲವು ಸ್ಕೀಂಗಳನ್ನು ಕಂಪನಿಗಳು ಹೊಂದಿರುತ್ತವೆ. ಉದಾಹರಣೆಗೆ ಐದು ಎನರ್ಜಿ ಡ್ರಿಂಕ್‌ಗಳನ್ನು ಖರೀದಿಸಿದರೆ ಒಂದು ಎನರ್ಜಿ ಡ್ರಿಂಕ್ ಫ್ರೀ, ಹೀಗೆ ವಿವಿಧ ಉತ್ಪನ್ನಗಳ ಮೇಲೆ ಆಫರ್ ಕೂಡ ಇರುತ್ತದೆ.

ಲಾಭ ಎಷ್ಟು ಸಿಗುತ್ತೆ?

ಲಾಭ ಎಷ್ಟು ಸಿಗುತ್ತೆ?

ಇಷ್ಟೆಲ್ಲಾ ಮಾರ್ಜಿನ್ ರೇಟ್, ಸ್ಕೀಂ ಆಫರ್‌ಗಳಿದ್ದು ಮೆಡಿಕಲ್ ಶಾಪ್‌ಗಳ ಮಾಲೀಕರು ಎಷ್ಟು ಲಾಭ ಮಾಡಬಹುದು ಎಂದು ನೀವು ಅಂದುಕೊಳ್ಳಬಹುದು. ಸುಮಾರು ಅಂದಾಜಿನಲ್ಲಿ 1 ಲಕ್ಷದ ಉತ್ಪನ್ನಗಳನ್ನು ಖರೀದಿಸಿದರೆ , 20,000 ರುಪಾಯಿ ಉಳಿಯಬಹುದು. ಇದರಲ್ಲಿ ಖರ್ಚು ವೆಚ್ಚಗಳನ್ನು ತಗ್ಗಿಸಿದರೆ 5,000 ರುಪಾಯಿಗಳವರೆಗೆ ಲಾಭ ಆಗಬಹುದು.

ಹೆಚ್ಚಾದ ಪೈಪೋಟಿ, ಇ-ಫಾರ್ಮಸಿ ಕಿರಿಕಿರಿ

ಹೆಚ್ಚಾದ ಪೈಪೋಟಿ, ಇ-ಫಾರ್ಮಸಿ ಕಿರಿಕಿರಿ

ಇತ್ತೀಚಿನ ಆಧುನಿಕ ದಿನಗಳಲ್ಲಿ ಅನೇಕ ಮೆಡಿಕಲ್ ಶಾಪ್‌ಗಳು ಬಾಗಿಲು ಮುಚ್ಚುವಂತಾಗಿದೆ. ಆನ್‌ಲೈನ್ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ ಮೇಲೆ ಕಳೆದ ಎರಡು ಮೂರು ವರ್ಷಗಳಲ್ಲಿ ಮೆಡಿಕಲ್‌ಗಳ ಮಾರಾಟ ಸ್ವಲ್ಪ ಮಟ್ಟಿಗೆ ತಗ್ಗಿದೆ.

ಆಸ್ಪತ್ರೆ ಹತ್ತಿರುವ ಇರುವ ಮೆಡಿಕಲ್‌ಗಳಿಗೆ ವ್ಯಾಪಾರ ಚೆನ್ನಾಗಿಯೇ ಆಗುತ್ತಿದ್ದು, ಖಾಲಿ ಜನರಲ್ ಸ್ಟೋರ್‌ ಮೆಡಿಕಲ್ ಶಾಪ್‌ಗಳ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಇ-ಫಾರ್ಮಸಿಯಲ್ಲಿ 20 ರಿಂದ 25 ಪರ್ಸೆಂಟ್ ವರೆಗೆ ಆಫರ್ ಮಾಡುತ್ತಿದ್ದು, ಸಾಮಾನ್ಯ ಮೆಡಿಕಲ್‌ಗಳು ಬಾಗಿಲು ಮುಚ್ಚಿಕೊಂಡು ಹೋಗುತ್ತಿವೆ.

ಮಾರುಕಟ್ಟೆಯಲ್ಲಿ ಹೆಚ್ಚಾದ ಉತ್ಪನ್ನಗಳು ಆದರೆ, ಹೆಚ್ಚಾಗುತ್ತಿಲ್ಲ ಮಾರಾಟ

ಮಾರುಕಟ್ಟೆಯಲ್ಲಿ ಹೆಚ್ಚಾದ ಉತ್ಪನ್ನಗಳು ಆದರೆ, ಹೆಚ್ಚಾಗುತ್ತಿಲ್ಲ ಮಾರಾಟ

ಈಗಿನ ಪೈಪೋಟಿಯ ಯುಗದಲ್ಲಿ ಮಾರ್ಕೆಟ್‌ಗೆ ಹೊಸ ಹೊಸ ಉತ್ಪನ್ನಗಳು ಕಾಲಿಡುತ್ತಿವೆ. ಉದಾಹರಣೆಗೆ ಸೌಂದರ್ಯವರ್ಧಕಗಳನ್ನೇ ತೆಗೆದುಕೊಂಡ್ರೆ ಅದೆಷ್ಟೋ ಉತ್ಪನ್ನಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಆದರೆ ಇದರ ಮಾರಾಟ ಹೆಚ್ಚಾಗದೇ ಸ್ಥಿರವಾಗಿಯೇ ಉಳಿದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿ ಆದಾಯವು ತಗ್ಗುತ್ತಿದೆ.

ಇನ್ನು ಔ‍ಷಧಿ ತಯಾರಕರಿಗೇನು ಲಾಭದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ. ಆದರೆ ಔಷಧಿ ಮಾರಾಟಗಾರರ ಆದಾಯ ತಗ್ಗುತ್ತಾ ಸಾಗಿದೆ. ಹೀಗಾಗಿ ಅನೇಕ ಬಾರಿ ಆನ್‌ಲೈನ್‌ ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರದ ಅನುಮತಿ ವಿರೋಧಿಸಿ ಪ್ರತಿಭಟನೆಗಳು ಸಹ ನಡೆದಿವೆ.

English summary

What Is Medical Shops Profit Margin On Medicines

In this article explained the rate of profit margin on medicines in medical shops
Story first published: Saturday, February 29, 2020, 16:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X