For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಏಕಿಷ್ಟು ದುಬಾರಿ ಜೀವನ, ಹಣದುಬ್ಬರಕ್ಕೆ ಇದೆಯೇ ಅಂತ್ಯ?

|

ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕು ಒಂದು ದೇಶದ ಬಳಿಕ ಮತ್ತೊಂದು ದೇಶದಲ್ಲಿ ಕಾಣಿಸಿಕೊಳ್ಳಲು ಆರಂಭವಾದ ಬಳಿಕ ಎಲ್ಲಾ ದೇಶಗಳ ಆಡಳಿತಕ್ಕೆ ಎರಡು ಸವಾಲುಗಳು ಮುಂದೆ ಇದ್ದವು. ಎಲ್ಲಾ ದೇಶದ ಆಡಳಿತವು ತಮ್ಮ ದೇಶದ ಜನರ ಜೀವವನ್ನು ಉಳಿಸುವುದು ಮಾತ್ರವಲ್ಲದೇ ಈ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್ಥಿಕ ಹಿಂಜರಿತ ಆಗದಂತೆ ಕಾಣುವುದು ಕೂಡಾ ಅತೀ ಮುಖ್ಯವಾಯಿತು. ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕವಾಗಿ ಹರಡುವ ಸಂದರ್ಭದಲ್ಲಿ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವುದು ಹಾಗೂ ಸಾಂಕ್ರಾಮಿಕ ಹರಡುವಿಕೆಯನ್ನು ತಡೆಯುವುದು ಎರಡೂ ಕೂಡಾ ಆಡಳಿತಕ್ಕೆ ಒಂದು ಸವಾಲು ಆಗಿತ್ತು.

 

ಆದರೆ ಕಳೆದ ಕೆಲವು ತಿಂಗಳುಗಳ ಘಟನೆಗಳನ್ನು ನಾವು ನೋಡಿದಾಗ, ನಮ್ಮ ದೇಶದ ಆಡಳಿತಗಾರರನ್ನು ಹಾಗೂ ಅರ್ಥಶಾಸ್ತ್ರಜ್ಞರು ಹಣದುಬ್ಬರದ ಏರಿಕೆಯು ಆಶ್ಚರ್ಯಚಕಿತರನ್ನಾಗಿಸಿದೆ. ಇನ್ನು ಕೆಲವು ದೇಶಗಳಲ್ಲಿ ಆರ್ಥಿಕತೆಯು ಕೆಲವೇ ತ್ರೈಮಾಸಿಕದಲ್ಲಿ ಮತ್ತೆ ಪುಟಿದೆದ್ದಿದೆ. ಬೆಳವಣಿಗೆಯು ಕೊಂಚ ನಿಧಾನವಾಗಿ ಆದರೂ ಕೂಡಾ ಆರ್ಥಿಕತೆಯು ಕೊಂಚ ಚೇತರಿಕೆಯನ್ನು ಕಂಡಿದ್ದವು. ಇನ್ನು ಈ ನಡುವೆ ಉತ್ಪಾದನೆ ಸರಬರಾಜು ಹಾಗೂ ಬೇಡಿಕೆಯ ನಡುವಿನ ಅಸಮಾನತೆಯೂ ಕೂಡಾ ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಂಡಿದೆ. ಕೋವಿಡ್‌ ಸಂದರ್ಭದಲ್ಲಿದ್ದ ಬೇಡಿಕೆಯು ಅನಿರೀಕ್ಷಿತವಾಗಿಯೇ ಇದ್ದವೂ ಎಂದರೂ ಸುಳ್ಳಾಗದು.

ಅಂತಾರಾಷ್ಟ್ರೀಯ ಕಚ್ಚಾ ತೈಲ ದರ 3 ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ

ಯುಎಸ್‌ನಲ್ಲಿ ಅಕ್ಟೋಬರ್‌ನ ಡೇಟಾ ಪ್ರಕಾರ ಮೂರು ದಶಕಗಳಲ್ಲಿ ಅತ್ಯಧಿಕ ಹಣದುಬ್ಬರ ದರವು ಕಂಡು ಬಂದಿದೆ. ಆದರೆ ಯುಎಸ್‌ ಮಾತ್ರವಲ್ಲ. ಹಲವಾರು ದೇಶಗಳಲ್ಲಿ ಹಣದುಬ್ಬರವು ತೀರಾ ಅಧಿಕವಾಗಿದೆ. ಜರ್ಮನಿಯಲ್ಲಿ ಶೇಕಡ 4.5, ರಷ್ಯಾ ಶೇಕಡ 7, ಬ್ರೆಜಿಲ್ ಶೇಕಡ 10, ಟರ್ಕಿ ಶೇಕಡ 20 ಮತ್ತು ಅರ್ಜೆಂಟೀನಾ ಶೇಕಡ 50 ಕ್ಕಿಂತ ಹೆಚ್ಚು ಆಗಿದೆ. ಜಾಗತಿಕವಾಗಿ , 1960 ಮತ್ತು 70 ರ ದಶಕದಲ್ಲಿ ಜನಪ್ರಿಯವಾಗಿದ್ದ ನಿಶ್ಚಲತೆ (stagflation) ಪದವು ಈಗ ಮತ್ತೆ ನಾವು ನೆನಪಿಸಿಕೊಳ್ಳಬಹುದು.

 ಹಣದುಬ್ಬರ: ಭಾರತದ ಪರಿಸ್ಥಿತಿ ಏನು?
 

ಹಣದುಬ್ಬರ: ಭಾರತದ ಪರಿಸ್ಥಿತಿ ಏನು?

ಭಾರತದ ಆರ್ಥಿಕತೆಯು ನಿಶ್ಚಲವಾಗಿರದೆ ಇರಬಹುದು. ಆದರೆ ಭಾರತಕ್ಕೆ ಹಣದುಬ್ಬರವು ಒಂದು ಚಿಂತೆಯಾಗಿಯೇ ಇದೆ. ಗ್ರಾಹಕ ಬೆಲೆ ಸೂಚ್ಯಂಕ ಅಥವಾ ಸಿಪಿಐ (ಗೃಹಸ್ಥರು ಖರೀದಿಸಿದ ಗ್ರಾಹಕ ಸರಕುಗಳು ಮತ್ತು ಪಡೆದ ಸೇವೆಗಳ ಅಂದಾಜು ಬೆಲೆಯ ಅಳತೆ) ನಿಂದ ಅಳೆಯಲಾಗುವ ಮುಖ್ಯ ಚಿಲ್ಲರೆ ಹಣದುಬ್ಬರವು ಮತ್ತಷ್ಟಿ ಕುಸಿತ ಕಂಡಿದೆ. ಆದರೆ ಭಾರತೀಯರು ಈ ಹಣದುಬ್ಬರವನ್ನು ಎದುರಿಸಲು ಕಾರಣವಿದೆ. ಈ ನಡುವೆ ನಾವು ನಿಮಗೆ ತಿಳಿಸಬೇಕಾದ ಮುಖ್ಯ ಅಂಶವೆಂದರೆ ಈ ಹಣದುಬ್ಬರವು ಈ ಮುಂದಿನ ಆರು ತಿಂಗಳಲ್ಲಿ ಕೊನೆಯಾಗುವಂತದ್ದು ಅಲ್ಲ, ಬದಲಾಗಿ ಮುಂದಿನ ಹಣಕಾಸು ವರ್ಷದಲ್ಲೂ ಈ ಹಣದುಬ್ಬರ ಇರಲಿದೆ. ಅಷ್ಟೇ ಏನೂ 2022-23 ರ ಹಣಕಾಸು ವರ್ಷದಲ್ಲೂ ಈ ಹಣದುಬ್ಬರ ಇರಲಿದೆ ಎಂದು ತಜ್ಞರು ಹೇಳುತ್ತಾರೆ.

ಇನ್ನು ನಾವು ಈ ಸಂದರ್ಭದಲ್ಲಿ ಗಮನಿಸಬೇಕಾದುದ್ದು ಈ ಹಣದುಬ್ಬರವು ದೇಶದಲ್ಲಿ ಕೊರೊನಾ ವೈರಸ್‌ ಲಾಕ್‌ಡೌನ್‌ ಆರಂಭ ಆಗುವುದಕ್ಕೂ ಮೊದಲೇ ಇತ್ತು ಎಂಬುವುದನ್ನು. ಈ ಹಣದುಬ್ಬರಕ್ಕೆ ಕೊರೊನಾ ವೈರಸ್‌ ಕಾರಣ ಎಂದು ಕೊಂಡಿರುವ ಅದೇಷ್ಟೋ ಮಂದಿ ಜನಸಾಮಾನ್ಯರು ಇದ್ದಾರೆ. ಆದರೆ ಈ ಹಣದುಬ್ಬರವು ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಲಾಕ್‌ಡೌನ್‌ ಮಾಡುವುದಕ್ಕೂ ಮೊದಲೇ ದೇಶದಲ್ಲಿ ಇತ್ತು ಎಂದು ತಜ್ಞರು ಹೇಳಿದ್ದಾರೆ. 2019 ರ ಅಂತ್ಯದಿಂದಲೇ ಚಿಲ್ಲರೆ ಹಣದುಬ್ಬರವು ಆರ್‌ಬಿಐನ ಸೌಕರ್ಯ ಮಿತಿಗಿಂತ ಮೇಲಿದೆ ಅಥವಾ ಹತ್ತಿರಲಿದ್ದರೆ ಎಂದು ಡೇಟಾವು ಉಲ್ಲೇಖ ಮಾಡಿದೆ. ಬೇಡಿಕೆಯ ಸಂಪೂರ್ಣ ಕುಸಿತ ಇದ್ದರೂ ಕೂಡಾ ಕೊರೊನಾ ವೈರಸ್‌ ಸಾಂಕ್ರಾಮಿಕದ ಸಮಯದಲ್ಲಿ ಈ ಬೆಲೆ ಒತ್ತಡ ಮಾತ್ರ ನಿರಂತರ ಹೆಚ್ಚಳ ಕಾಣುತ್ತಲೇ ಇದ್ದವು.

ಇನ್ನು ಹೆಚ್ಚಾಗಿ ಆಹಾರ ಹಾಗೂ ಇಂಧನ ಬೆಲೆಗಳಲ್ಲಿ ಹೆಚ್ಚಿನ ಹಣದುಬ್ಬರ ಉಂಟಾಗಿದೆ. ಸಾಮಾನ್ಯವಾಗಿ ಆಹಾರ ಹಾಗೂ ಇಂಧನ ಬೆಲೆಗಳಲ್ಲಿನ ಹಣದುಬ್ಬರವನ್ನು ತಾತ್ಕಾಲಿಕವೆಂಬಂತೆ ನೋಡಲಾಗುತ್ತದೆ. ಏಕೆಂದರೆ ಈ ಹಣದುಬ್ಬರವು ಅಲ್ಪಾವಧಿಯ ಅಥವಾ ಸೀಸನ್‌ ಸಂದರ್ಭದಲ್ಲಿ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಬೆಲೆಗಳು ಒಟ್ಟಾರೆಯಾಗಿ ಏರಿಳಿತಗೊಳ್ಳುತ್ತದೆ. ಈ ಹಣದುಬ್ಬರವು ಅಲ್ಪಾವಧಿಯಲ್ಲಿ ಏರಿಕೆ ಕಾಣುತ್ತದೆ, ಮತ್ತೆ ಕಡಿಮೆ ಆಗುತ್ತದೆ. ಉದಾಹರಣೆಗೆ ಹೇಳಬೇಕಾದರೆ, ಅಕ್ಟೋಬರ್ ಅಂತ್ಯದಲ್ಲಿ ಮತ್ತು ನವೆಂಬರ್ ಆರಂಭದಲ್ಲಿ ಅಕಾಲಿಕ ಮಳೆಯ ಕಾರಣದಿಂದಾಗಿ ಉಂಟಾದ ನಷ್ಟದಿಂದಾಗಿ ತರಕಾರಿ ಬೆಲೆಗಳು ಹೆಚ್ಚಳವಾಯಿತು. ಇದಕ್ಕಾಗಿ ನಾವು ಈ ಬಾರಿಯ ಈರುಳ್ಳಿ, ಟೊಮೊಟೊಗಳ ಬೆಲೆಗಳನ್ನು ಗಮನಿಸಬಹುದು.

ಆದರೆ ಈ ಹಣದುಬ್ಬರವು ದೀರ್ಘಕಾಲದವರೆಗೆ ಇದ್ದರೆ ಅದನ್ನು ಕೋರ್‌ ಹಣದುಬ್ಬರ ಎಂದು ಕರೆಯಲಾಗುತ್ತದೆ. ಕೋರ್‌ ಹಣದುಬ್ಬರವು ಚಿಲ್ಲರೆ ಹಣದುಬ್ಬರದ ಅಳತೆಯಾಗಿದೆ. ಈ ಕೋರ್‌ ಹಣದುಬ್ಬರವು ಆಡಳಿತಗಾರರಿಗೆ ಹಾಗೂ ಅರ್ಥಶಾಸ್ತ್ರಜ್ಞರಿಗೆ ಹಣದುಬ್ಬರವನ್ನು ಸರಿಯಾಗಿ ಅಳತೆ ಮಾಡಲು ಅವಕಾಶ ನೀಡುತ್ತದೆ. ಇದನ್ನು ನಾವು ಹೆಚ್ಚು ವಿಶ್ವಾಸಾರ್ಹವಾದ ಅಳತೆ ಎಂದು ಕೂಡಾ ಹೇಳಬಹುದು. ಆದರೆ ಈಗ ಆಡಳಿತಗಾರರಿಗೆ ಮುಖ್ಯವಾಗಿ ತಲೆ ಬಿಸಿ ಉಂಟು ಮಾಡಿರುವ ಅಂಶ ಏನೆಂದರೆ ಈ ಮುಖ್ಯ ಹಣದುಬ್ಬರಕ್ಕಿಂತ ಕೋರ್‌ ಹಣದುಬ್ಬರವು ಅಧಿಕವಾಗಿರುವುದು. ಕೋರ್‌ ಹಣದುಬ್ಬರವು ಸರಕು ಮತ್ತು ಸೇವೆಗಳ ವೆಚ್ಚದಲ್ಲಿನ ಬದಲಾವಣೆಯಾಗಿದೆ. ಆದರೆ ಇದರಲ್ಲಿ ಆಹಾರ ಹಾಗೂ ಇಂಧನ ವಲಯಗಳು ಒಳಪಟ್ಟಿರುವುದಿಲ್ಲ.

 

 ಕೋರ್‌ ಹಣದುಬ್ಬರ ಏಕೆ ಅಧಿಕ, ಇದು ಹೇಗೆ ಪರಿಣಾಮ ಬೀರುತ್ತದೆ?

ಕೋರ್‌ ಹಣದುಬ್ಬರ ಏಕೆ ಅಧಿಕ, ಇದು ಹೇಗೆ ಪರಿಣಾಮ ಬೀರುತ್ತದೆ?

ಭಾರತದಲ್ಲಿ ಹಣದುಬ್ಬರ ಅಧಿಕವಾಗಲು ಮುಖ್ಯ ಕಾರಣವೆಂದರೆ ಆಹಾರದ ಬೆಲೆಗಳಲ್ಲಿ ಹೆಚ್ಚಿದ ಹಣದುಬ್ಬರ. ಆಹಾರದ ಬೆಲೆ ಹೆಚ್ಚಳವು ದೇಶದಲ್ಲಿ ಹಣದುಬ್ಬರಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳುತ್ತಾರೆ ತಜ್ಞರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಆಹಾರ ಬೆಲೆಯಲ್ಲಿನ ಹಣದುಬ್ಬರವು ಕೊಂಚ ತಗ್ಗಿದೆ. ಇದರಿಂದಾಗಿ ಕೆಲವು ಆಹಾರ ವಸ್ತುಗಳ ಬೆಲೆಯು ಕೊಂಚ ಇಳಿಕೆ ಆಗಿದೆ. ಆದರೆ ಈ ಸಂದರ್ಭದಲ್ಲೇ ಕೋರ್‌ ಹಣದುಬ್ಬರವು ತೀವ್ರತರವಾಗಿ ಹೆಚ್ಚಳ ಆಗಿದೆ. ಕೋರ್‌ ಹಣದುಬ್ಬರದ ಸಮಸ್ಯೆ ಎಂದರೆ ಅದು ಒಮ್ಮೆ ಆರಂಭವಾದರೆ ಅಂಟುಹುಳದಂತೆ. ಅದು ಹಾಗೆಯೇ ಉಳಿಯುತ್ತದೆ. ಪ್ರಸ್ತುತ ಕೋರ್‌ ಹಣದುಬ್ಬರವು ಶೇಕಡ 6 ಸಮೀಪದಲ್ಲಿ ಇದೆ. ಇನ್ನೂ ಸ್ವಲ್ಪ ಸಮಯದವರೆಗೆ ಇದು ಹೆಚ್ಚಾಗಿಯೇ ಇರಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.ಇನ್ನು ಐಸಿಐಸಿಐ ವಿಶ್ಲೇಷಕರ ಪ್ರಕಾರ, ಅಂತರರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯು ತೀವ್ರವಾಗಿ ಇಳಿಯದ ಹೊರತಾಗಿ, ಪ್ರಮುಖ ಸರಕುಗಳ ಹಣದುಬ್ಬರವು ಹೆಚ್ಚಾಗಬಹುದು. ಐಸಿಐಸಿಐ ಸೆಕ್ಯುರಿಟೀಸ್‌ನ ಪ್ರಸನ್ನ ಎ, ಅಭಿಷೇಕ್ ಉಪಾಧ್ಯಾಯ ಮತ್ತು ತದಿತ್‌ ಕುಂದು, "ನವೆಂಬರ್-ಮಾರ್ಚ್‌ನಲ್ಲಿ ಕೋರ್ ಹಣದುಬ್ಬರ ಸರಾಸರಿ ಶೇಕಡ ಆರು ಆಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಇದು ಶೇಕಡ 5.5 ಎಂಬ ನಿರೀಕ್ಷೆಯಿದೆ," ಎಂದು ಅಭಿಪ್ರಾಯಿಸಿದ್ದಾರೆ.

ಈ ಋತುವಿನಲ್ಲಿ ಸಕ್ಕರೆ ಉತ್ಪಾದನೆ ಶೇ. 24 ರಷ್ಟು ಹೆಚ್ಚಳ: 25 ಲಕ್ಷ ಟನ್‌ಗೆ ರಫ್ತು ಒಪ್ಪಂದ

 ಅಧಿಕ ಹಣದುಬ್ಬರ ಯಾರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ?

ಅಧಿಕ ಹಣದುಬ್ಬರ ಯಾರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ?

ಈ ಅಧಿಕವಾದ ಹಣದುಬ್ಬರವು ಭಾರತದ ವಿವಿಧ ವಿಭಾಗದ ಜನರಿಗೆ ಹೇಗೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಕಳೆದ ತಿಂಗಳು ಕ್ರಿಸಿಲ್ ರಿಸರ್ಚ್ ಒಂದು ವಿವರವಾದ ಸಂಶೋಧನೆಯನ್ನು ಪ್ರಕಟ ಮಾಡಿದೆ. ಕ್ರಿಸಿಲ್ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ (ಎನ್‌ಎಸ್‌ಎಸ್‌ಒ) ದತ್ತಾಂಶವನ್ನು ಬಳಸಿಕೊಂಡು ಕೆಳಸ್ಥರದ ಶೇಕಡ 20, ಮಧ್ಯಮ ಶೇಕಡ 60 ಮತ್ತು ಉನ್ನತ ಶೇಕಡ 20 ಎಂದು ವಿಭಾಗ ಮಾಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇದೇ ರೀತಿಯಾಗಿ ವಿಭಾಗ ಮಾಡಲಾಗಿದೆ. 2021 ರ ಆರ್ಥಿಕ ವರ್ಷದಲ್ಲಿ ಶೇಕಡ 20 ರಷ್ಟು ಉನ್ನತ ವಿಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ಶೇಕಡ 5.9, ನಗರ ಪ್ರದೇಶದಲ್ಲಿ ಶೇಕಡ 6.4 ಹಣದುಬ್ಬರ ಇದೆ. ಶೇಕಡ 60 ರಷ್ಟು ಮಧ್ಯಮ ವಿಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ಶೇಕಡ 5.9 ನಗರ ಪ್ರದೇಶದಲ್ಲಿ ಶೇಕಡ 6.8 ಹಣದುಬ್ಬರ ಇದೆ. ಇನ್ನು ಕೆಳಸ್ಥರದ ಶೇಕಡ 20 ರಷ್ಟು ವಿಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ಶೇಕಡ 5.9 ನಗರ ಪ್ರದೇಶದಲ್ಲಿ ಶೇಕಡ 7.0 ಹಣದುಬ್ಬರ ಇದೆ.

ಇನ್ನು 2022 ರ ಹಣಕಾಸು ವರ್ಷದಲ್ಲಿ ಶೇಕಡ 20 ರಷ್ಟು ಉನ್ನತ ವಿಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ಶೇಕಡ 5.4, ನಗರ ಪ್ರದೇಶದಲ್ಲಿ ಶೇಕಡ 5.4 ಹಣದುಬ್ಬರ ಇದೆ. ಶೇಕಡ 60 ರಷ್ಟು ಮಧ್ಯಮ ವಿಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ಶೇಕಡ 5.2 ನಗರ ಪ್ರದೇಶದಲ್ಲಿ ಶೇಕಡ 5.5 ಹಣದುಬ್ಬರ ಇದೆ. ಇನ್ನು ಕೆಳಸ್ಥರದ ಶೇಕಡ 20 ರಷ್ಟು ವಿಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲಿ ಶೇಕಡ 5.2 ನಗರ ಪ್ರದೇಶದಲ್ಲಿ ಶೇಕಡ 5.6 ಹಣದುಬ್ಬರ ಇದೆ. ಕಳೆದ ಹಣಕಾಸು ವರ್ಷದಲ್ಲಿ ಹಾಗೂ ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ನಗರ ಪ್ರದೇಶದ ಬಡವರು ಅತಿ ಹೆಚ್ಚು ಹಣದುಬ್ಬರ ಸಮಸ್ಯೆಯನ್ನು ಎದುರಿಸಿದ್ದಾರೆ. ಇನ್ನು ಹಣದುಬ್ಬರದ ವಿಷಯಕ್ಕೆ ಬಂದಾಗ ನಗರದ ಬಡವರು ಗ್ರಾಮೀಣ ಬಡವರಿಗಿಂತ ಅತೀ ಹೆಚ್ಚು ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಆದರೆ ಎಪ್ರಿಲ್‌ ಆರಂಭದಲ್ಲಿ ಹಣದುಬ್ಬರವು ವಿಭಿನ್ನವಾಗಿ ಕಂಡು ಬಂದಿದೆ. ಉದಾಹರಣೆಗೆ ಹೇಳುವುದಾದರೆ ಆಹಾರದ ಬೆಲೆಗಳ ಮೇಲಿನ ಹಣದುಬ್ಬರವು ತೀವ್ರವಾಗಿ ಇಳಿಕೆ ಕಂಡಿದೆ. ಆದರೆ ಇಂಧನ ಹಣದುಬ್ಬರವು ಗಗನಕ್ಕೆ ಏರಿದೆ. ಈ ನಡುವೆ ಪ್ರಮುಖ ಹಣದುಬ್ಬರವು ಅಧಿಕವಾಗಿದೆ.

 

 ಇದೇ ರೀತಿ ಹಣದುಬ್ಬರ ಮುಂದುವರಿದರೆ ಏನಾಗಬಹುದು ಜನರ ಸ್ಥಿತಿ?

ಇದೇ ರೀತಿ ಹಣದುಬ್ಬರ ಮುಂದುವರಿದರೆ ಏನಾಗಬಹುದು ಜನರ ಸ್ಥಿತಿ?

ಗ್ರಾಮೀಣ ಪ್ರದೇಶದಲ್ಲಿ ಶೇಕಡ 3.5 ರಷ್ಟು ಆಹಾರ ಹಾಗೂ ಪಾನೀಯ ಹಣದುಬ್ಬರ ಇದೆ. ಹಾಗೆಯೇ ಇಂಧನ ಹಾಗೂ ವಿದ್ಯುತ್‌ ವಿಭಾಗದಲ್ಲಿ ಶೇಕಡ 10.3 ರಷ್ಟು ಹಣದುಬ್ಬರ ಇದೆ. ಇನ್ನು ಒಟ್ಟಾಗಿ ಗ್ರಾಮೀಣ ಪ್ರದೇಶದಲ್ಲಿ ಶೇಕಡ 6.6 ರಷ್ಟು ಹಣದುಬ್ಬರ ಇದೆ. ಗ್ರಾಮೀಣ ಪ್ರದೇಶದ ಕೆಳಸ್ಥರದ ಜನರಲ್ಲಿ ಶೇಕಡ 60.3, ಮಧ್ಯಮ ವರ್ಗದಲ್ಲಿ ಶೇಕಡ 57.2 ಹಾಗೂ ಉನ್ನತ ವರ್ಗದ ಜನರಲ್ಲಿ ಅಂದರೆ ಶ್ರೀಮಂತರದಲ್ಲಿ ಶೇಕಡ 46.3 ಆಹಾರ ಹಾಗೂ ಪಾನೀಯ ಹಣದುಬ್ಬರ ಇದೆ. ಗ್ರಾಮೀಣ ಪ್ರದೇಶದ ಕೆಳಸ್ಥರದ ಜನರಲ್ಲಿ ಶೇಕಡ 11.5 ಮಧ್ಯಮ ವರ್ಗದಲ್ಲಿ ಶೇಕಡ 9.0 ಹಾಗೂ ಉನ್ನತ ವರ್ಗದ ಜನರಲ್ಲಿ ಅಂದರೆ ಶ್ರೀಮಂತರದಲ್ಲಿ ಶೇಕಡ 6.2 ಇಂಧನ ಹಾಗೂ ವಿದ್ಯುತ್‌ ಶಕ್ತಿಯ ಹಣದುಬ್ಬರ ಇದೆ. ಇನ್ನು ಒಟ್ಟಾಗಿ ಗ್ರಾಮೀಣ ಪ್ರದೇಶದ ಕೆಳಸ್ಥರದ ಜನರಲ್ಲಿ ಶೇಕಡ 28.2 ಮಧ್ಯಮ ವರ್ಗದಲ್ಲಿ ಶೇಕಡ 33.9 ಹಾಗೂ ಉನ್ನತ ವರ್ಗದ ಜನರಲ್ಲಿ ಅಂದರೆ ಶ್ರೀಮಂತರದಲ್ಲಿ ಶೇಕಡ 47.5 ಕೋರ್‌ ಹಣದುಬ್ಬರ ಇದೆ. ಇನ್ನು ಈ ಅಂಕಿ ಅಂಶಗಳ ಪ್ರಕಾರ ಶ್ರೀಮಂತರು ಅಧಿಕ ಆಹಾರ ಹಾಗೂ ಪಾನೀಯದ ಮೇಲೆ ಖರ್ಚು ಮಾಡುತ್ತಾರೆ ಎಂದು ತಿಳಿದು ಬರುತ್ತದೆ. ಆಹಾರ ಅಥವಾ ಇಂಧನವಲ್ಲದ ಸರಕು ಮತ್ತು ಸೇವೆಗಳ ಮೇಲೆ ತಮ್ಮ ಒಟ್ಟು ಬಳಕೆಯ ಶೇಕಡ 48 ರಷ್ಟು ಖರ್ಚು ಮಾಡುವ ಶ್ರೀಮಂತರು ಕೋರ್‌ ಹಣದುಬ್ಬರವು ಶೇಕಡ 6.6 ಆಗಿರುವುದರಿಂದ ಮತ್ತು ಸ್ವಲ್ಪ ಸಮಯದವರೆಗೆ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ ಉಳಿಯುವ ಸಾಧ್ಯತೆಯಿರುವುದರಿಂದ ಕಠಿಣ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಇನ್ನು ನಗರ ಪ್ರದೇಶದಲ್ಲಿ ಶೇಕಡ 4.4 ರಷ್ಟು ಆಹಾರ ಹಾಗೂ ಪಾನೀಯ ಹಣದುಬ್ಬರ ಇದೆ. ಹಾಗೆಯೇ ಇಂಧನ ಹಾಗೂ ವಿದ್ಯುತ್‌ ವಿಭಾಗದಲ್ಲಿ ಶೇಕಡ 14.6 ರಷ್ಟು ಹಣದುಬ್ಬರ ಇದೆ. ಇನ್ನು ಒಟ್ಟಾಗಿ ನಗರ ಪ್ರದೇಶದಲ್ಲಿ ಶೇಕಡ 5.4 ರಷ್ಟು ಹಣದುಬ್ಬರ ಇದೆ. ನಗರ ಪ್ರದೇಶದ ಕೆಳಸ್ಥರದ ಜನರಲ್ಲಿ ಶೇಕಡ 58.0, ಮಧ್ಯಮ ವರ್ಗದಲ್ಲಿ ಶೇಕಡ 49.3 ಹಾಗೂ ಉನ್ನತ ವರ್ಗದ ಜನರಲ್ಲಿ ಅಂದರೆ ಶ್ರೀಮಂತರದಲ್ಲಿ ಶೇಕಡ 34.9 ಆಹಾರ ಹಾಗೂ ಪಾನೀಯ ಹಣದುಬ್ಬರ ಇದೆ. ನಗರ ಪ್ರದೇಶದ ಕೆಳಸ್ಥರದ ಜನರಲ್ಲಿ ಶೇಕಡ 10.5 ಮಧ್ಯಮ ವರ್ಗದಲ್ಲಿ ಶೇಕಡ 7.8 ಹಾಗೂ ಉನ್ನತ ವರ್ಗದ ಜನರಲ್ಲಿ ಅಂದರೆ ಶ್ರೀಮಂತರದಲ್ಲಿ ಶೇಕಡ 5.3 ಇಂಧನ ಹಾಗೂ ವಿದ್ಯುತ್‌ ಶಕ್ತಿಯ ಹಣದುಬ್ಬರ ಇದೆ. ಇನ್ನು ಒಟ್ಟಾಗಿ ನಗರ ಪ್ರದೇಶದ ಕೆಳಸ್ಥರದ ಜನರಲ್ಲಿ ಶೇಕಡ 31.5 ಮಧ್ಯಮ ವರ್ಗದಲ್ಲಿ ಶೇಕಡ 42.8 ಹಾಗೂ ಉನ್ನತ ವರ್ಗದ ಜನರಲ್ಲಿ ಅಂದರೆ ಶ್ರೀಮಂತರದಲ್ಲಿ ಶೇಕಡ 59.9 ಕೋರ್‌ ಹಣದುಬ್ಬರ ಇದೆ. ನಗರ ಪ್ರದೇಶದಲ್ಲಿ ಇಂಧನ ಬೆಲೆ ಹಣದುಬ್ಬರವು ಸುಮಾರು ಶೇಕಡ 15 ರಷ್ಟು ಏರಿಕೆಯಾಗಿದೆ. ಇದರಲ್ಲಿ ಹೆಚ್ಚು ಸಮಸ್ಯೆ ಅನುಭವಿಸಿದವರು ಬಡವರು. ಬಡವರು ತಮ್ಮ ಆದಾಯದ ಶೇಕಡ 11 ರಷ್ಟು ಇಂಧನವನ್ನು ಖರೀದಿಸಲು ಖರ್ಚು ಮಾಡುತ್ತಾರೆ.

 

English summary

Why high prices are here to stay, Explained In Kannada

Why high prices are here to stay, Explained In Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X