ಸೆನ್ಸೆಕ್ಸ್ ಇಂದು 1,700 ಅಂಕ ಕುಸಿಯಲು ಕಾರಣವೇನು?
ತಂತ್ರಜ್ಞಾನ ಮತ್ತು ಲೋಹದ ಷೇರುಗಳು ತೀವ್ರವಾಗಿ ಕುಸಿತ ಕಂಡ ಕಾರಣದಿಂದಾಗಿ ಸತತ ಐದನೇ ದಿನವೂ ಷೇರು ಮಾರುಕಟ್ಟೆ ದುರ್ಬಲವಾಗಿದೆ. ಕೇಂದ್ರ ಸರ್ಕಾರವು ಬಜೆಟ್ ಮಂಡನೆ ಮಾಡಲು ಇನ್ನು ಕೆಲವೇ ದಿನಗಳು ಇರುವಾಗ ಷೇರು ಮಾರುಕಟ್ಟೆಯಲ್ಲಿ ಈ ಬೆಳವಣಿಗೆ ಕಂಡು ಬಂದಿದೆ.
ಹೂಡಿಕೆದಾರರು ನಾಳೆಯಿಂದ ಪ್ರಾರಂಭವಾಗುವ ಎರಡು ದಿನಗಳ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಸಭೆಯ ನಿರ್ಧಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ಕೆಲವು ಅವಧಿಗಳಲ್ಲಿ ವೇಗವನ್ನು ಕಳೆದುಕೊಳ್ಳುತ್ತಿದೆ ಎಂದು ವರದಿಯು ಹೇಳಿದೆ.
ಈ ಟಾಟಾ ಸ್ಟಾಕ್ನಿಂದ 1 ವರ್ಷದಲ್ಲಿ ಅತ್ಯುತ್ತಮ ಆದಾಯ!, ರಾಕೇಶ್ ಜುಂಜುನ್ವಾಲಾರ 3.92 ಕೋಟಿ ಷೇರು
ಜಾಗತಿಕ ಮಾರುಕಟ್ಟೆಯಲ್ಲಿ ನೀರಸವಾಗಿ ವಹವಾಟು ನಡೆದಿದ್ದು ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಭಾರೀ ಕುಸಿತವನ್ನು ಕಂಡಿದೆ. ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಇನ್ನು ಇಂದು ಮಧ್ಯಾಹ್ನದ ವೇಳೆಗೆ ಮುಂಬಯಿ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 1950.05 ಅಂಕಗಳನ್ನು ಕುಸಿತ ಕಂಡಿದೆ.
ಸುಮಾರು 57082 ಅಂಕಗಳಲ್ಲಿ ವಹಿವಾಟು ನಡೆಸಿದೆ. ಇನ್ನು ಎನ್ಎಸ್ಇ ನಿಫ್ಟಿಯು ಕೂಡಾ 596 ಅಂಕ ಪಾತಾಳಕ್ಕೆ ಇಳಿದಿದೆ, 17021 ಅಂಕಗಳಷ್ಟು ಕುಸಿದಿದೆ. ಹಾಗಾದರೆ ಈ ಸೆನ್ಸೆಕ್ಸ್, ನಿಫ್ಟಿ ಇಂದು ಈ ಪ್ರಮಾಣದಲ್ಲಿ ಕುಸಿತ ಕಾಣಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ...

ಸೆನ್ಸೆಕ್ಸ್, ನಿಫ್ಟಿ ಇಂದು ಏಕೆ ಕುಸಿತ ಕಾಣಲು ಕಾರಣವೇನು?
ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ತೀವ್ರವಾಗಿ ಕುಸಿತ ಕಂಡಿದೆ. ಮಧ್ಯಾಹ್ನದ ವಹಿವಾಟಿನಲ್ಲಿಯೂ ಕುಸಿತ ಮುಂದುವರೆದಿದೆ. 30-ಸ್ಕ್ರಿಪ್ ಸೂಚ್ಯಂಕವು ಮಧ್ಯಾಹ್ನ 2:41 ಕ್ಕೆ 1,727 ಪಾಯಿಂಟ್ಗಳು ಅಥವಾ 2.93 ರಷ್ಟು ಕುಸಿತ ಕಂಡಿದೆ. ಆದರೆ ನಿಫ್ಟಿ 50 560 ಪಾಯಿಂಟ್ಗಳು ಅಥವಾ 3.18 ಶೇಕಡಾ ಕುಸಿತವಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಒಂಬತ್ತು ತಿಂಗಳುಗಳಲ್ಲಿ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಷೇರುಪೇಟೆಯಲ್ಲಿ ಐಟಿ, ಲೋಹ, ರಿಯಾಲ್ಟಿ ಷೇರುಗಳು ಕುಸಿತ
ಮುಂದಿನ ಕೆಲವು ವಾರಗಳವರೆಗೆ ಈ ರೀತಿಯಲ್ಲಿಯೇ ಕುಸಿತ ಇರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಹೂಡಿಕೆದಾರರಲ್ಲಿನ ಪೂರ್ವ-ಬಜೆಟ್ನ ಕೆಲವು ವದಂತಿಗಳ ಹಿನ್ನೆಲೆ ಹಾಗೂ ದುರ್ಬಲ ತ್ರೈಮಾಸಿಕ ಫಲಿತಾಂಶಗಳ ಕಾರಣದಿಂದಾಗಿ ಈ ಕುಸಿತವು ಕಂಡು ಬಂದಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 2.22 ಕ್ಕಿಂತ ಹೆಚ್ಚು ಇಳಿಕೆಗೊಂಡಿದೆ. ಇಂದು ತಂತ್ರಜ್ಞಾನದ ಷೇರುಗಳು ಹೆಚ್ಚು ಇಳಿಕೆ ಕಂಡಿದೆ. ಮುಖ್ಯವಾಗಿ ಜೊಮಾಟೋ, ಪೇಟಿಎಂ ಹಾಗೂ Nykaa ಇಂದಿನ ವಹಿವಾಟಿನ ಅವಧಿಯಲ್ಲಿ ತೀವ್ರ ನಷ್ಟವನ್ನು ಅನುಭವಿಸಿದ ಕೆಲವು ಟೆಕ್ ಕಂಪನಿಗಳಾಗಿವೆ. ಜೊಮಾಟೋ ಸುಮಾರು 19 ಶೇಕಡ ಕುಸಿತ ಕಂಡಿದೆ. ಆದರೆ ಪೇಟಿಎಂ ಸುಮಾರು 8 ಶೇಕಡಾ ಮತ್ತು Nykaa 10 ಶೇಕಡ ಕುಸಿತ ಕಂಡು ಬಂದಿದೆ.
ಹಲವು ಸಂಸ್ಥೆಗಳ ಷೇರುಗಳು ಕುಸಿತ
ತಂತ್ರಜ್ಞಾನದ ಷೇರುಗಳು ಮಾತ್ರವಲ್ಲ, ವೊಡಾಫೋನ್ ಐಡಿಯಾ ಮತ್ತು ಜೆಎಸ್ಡಬ್ಲ್ಯೂ ಸ್ಟೀಲ್ ಸೇರಿದಂತೆ ಇತರ ಹಲವು ಸಂಸ್ಥೆಗಳ ಷೇರುಗಳು ಕುಸಿತ ಕಂಡು ಬಂದಿದೆ. ತಜ್ಞರು ಹೂಡಿಕೆದಾರರನ್ನು ಎಚ್ಚರಿಕೆಯಿಂದ ವ್ಯಾಪಾರ ಮಾಡಲು ಮನವಿ ಮಾಡಿದ್ದಾರೆ.
2022-23ರ ಕೇಂದ್ರ ಬಜೆಟ್ಗಿಂತ ಮುಂಚಿತವಾಗಿ ಮಾರುಕಟ್ಟೆಗಳು ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ಕೂಡಾ ತಜ್ಞರು ಊಹಿಸಿದ್ದಾರೆ. ಇನ್ನು ಜನವರಿ 27 ರಂದು ಮಾರುಕಟ್ಟೆಗಳು ಸ್ವಲ್ಪ ಸಮತೋಲನವನ್ನು ಪಡೆಯಬಹುದು. ಆದರೆ ಫೆಬ್ರವರಿ 1, 2022 ರಂದು ಬಜೆಟ್ ಅನ್ನು ಘೋಷಿಸುವವರೆಗೆ ಕೆಲವು ಮಾರುಕಟ್ಟೆಗಳಲ್ಲಿ ಕುಸಿತ ಕಂಡು ಬರಲಿದೆ ಎಂದು ತಜ್ಞರು ಹೇಳುತ್ತಾರೆ.