ಇಪಿಎಫ್ ಖಾತೆಗೆ ಬಡ್ಡಿ ಕ್ರೆಡಿಟ್ ಆಗುವುದು ಪ್ರತಿ ವರ್ಷ ಏಕೆ ತಡ?, ಇಲ್ಲಿದೆ ಕಾರಣ
ನೌಕರರ ಭವಿಷ್ಯ ನಿಧಿ ಸಂಸ್ಥೆಯು ಈ ವರ್ಷ 60 ಮಿಲಿಯನ್ ಇಪಿಎಫ್ ಸದಸ್ಯರಿಗೆ ದೀಪಾವಳಿಯ ಉಡುಗೊರೆಯನ್ನು ನೀಡುತ್ತಿದೆ. 2020-21 ರ ಹಣಕಾಸು ವರ್ಷದ ಮಾರ್ಚ್ನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಅನುಮೋದಿಸಿದ 8.5 ಶೇಕಡಾ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ಅನುಮೋದಿಸಿದೆ.
ದೀಪಾವಳಿಗೂ ಮುನ್ನವೇ ಈ ಬಗ್ಗೆ ಘೋಷಣೆಯನ್ನು ಮಾಡಲಾಗಿದೆ. ಆದರೆ ಪಿಎಫ್ ಖಾತೆಗೆ ಈ ಬಡ್ಡಿ ದರವು ಠೇವಣಿ ಆಗಲು ಎರಡು ವಾರಗಳ ಕಾಲ ತಗುಲುತ್ತದೆ ಎಂದು ವರದಿಯು ಹೇಳುತ್ತದೆ. ಸರ್ಕಾರವು ಈ ದೀಪಾವಳಿ ಸಂದರ್ಭದಲ್ಲಿ ಇಪಿಎಫ್ ಸದಸ್ಯರಿಗೆ ಸಿಹಿಸುದ್ದಿ ನೀಡಿದೆಯಾದರೂ ಕೂಡಾ ಪ್ರತಿ ವರ್ಷವು ಇಪಿಎಫ್ಗೆ ಸೇರುವ ಬಡ್ಡಿ ದರವು ತಡವಾಗುವ ಕಾರಣದಿಂದಾಗಿ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಆನ್ಲೈನ್ನಲ್ಲಿ ಇಪಿಎಫ್ ಖಾತೆಗೆ ಇ-ನಾಮಿನೇಷನ್ ಸಲ್ಲಿಸುವುದು ಹೇಗೆ?
ಇಪಿಎಫ್ನ ಟ್ವಿಟ್ಟರ್ನ ಟೈಮ್ಲೈನ್ನ ಮೇಲೆ ನಾವು ಕಣ್ಣಾಡಿಸಿದರೆ, ಈ ಬಡ್ಡಿ ದರವು ಪ್ರತಿ ವರ್ಷ ವಿಳಂಬ ಆಗುವ ಬಗ್ಗೆ ಅನೇಕ ದೂರುಗಳು ಕಂಡು ಬರುತ್ತದೆ. ಪ್ರಸ್ತುತ ಇಪಿಎಫ್ ವ್ಯವಸ್ಥೆಯು ಡಿಜಿಟಲ್ ಆಗಿದೆ. ಎಲ್ಲಾ ಕಾರ್ಯಗಳು ಆನ್ಲೈನ್ ಮೂಲಕ ಸುಲಭವಾಗಿ ನಡೆಯುತ್ತದೆ. ಸುಧಾರಿತ ಫಿನ್ಟೆಕ್ ಪರಿಕರಗಳು ಮತ್ತು ಸ್ವಯಂಚಾಲಿತ ಪಾವತಿಗಳು ಕೂಡಾ ಇದೆ. ಆದರೆ ಹಿಂದಿನ ಹಣಕಾಸು ವರ್ಷದ ಬಡ್ಡಿಯನ್ನು ಪ್ರಸ್ತುತ ಹಣಕಾಸು ವರ್ಷದ ಅರ್ಧ ವರ್ಷ ಕಳೆದರೂ ಕೂಡಾ ಜಮೆ ಮಾಡದಿರವುದು ಆಶ್ಚರ್ಯವನ್ನು ಸೃಷ್ಟಿ ಮಾಡುತ್ತದೆ. ಹಾಗಾದರೆ ಇದಕ್ಕೆ ನಿರ್ದಿಷ್ಟ ಕಾರಣವೇನು? ತಿಳಿಯಲು ಮುಂದೆ ಓದಿ...

ಇಪಿಎಫ್ಗೆ ಬಡ್ಡಿ ಕ್ರೆಡಿಟ್ ಪ್ರತಿ ವರ್ಷ ಏಕೆ ತಡ?
ಇದಕ್ಕೆ ಮುಖ್ಯ ಕಾರಣ ದೀರ್ಘಾವಧಿಯಲ್ಲಿ ಅಧಿಕಾರಿಗಳು ಪ್ರಕ್ರಿಯೆಯನ್ನು ನಡೆಸುವುದು ಹಾಗೂ ಅಧಿಕ ಸಮಯವನ್ನು ತೆಗೆದುಕೊಳ್ಳುವುದು ಆಗಿದೆ. ಹಣಕಾಸು ವರ್ಷದ ಬಡ್ಡಿ ದರವನ್ನು ಘೋಷಿಸಲು ಟ್ರಸ್ಟಿಗಳ ಕೇಂದ್ರ ಮಂಡಳಿಯು ಮಾರ್ಚ್ನಲ್ಲಿ ಸಭೆ ಸೇರುತ್ತದೆ. ಬಳಿಕ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗುತ್ತದೆ. ಅನುಮೋದನೆ ದೊರೆತ ಬಳಿಕ ಕಾರ್ಮಿಕ ಸಚಿವಾಲಯವು ಬಡ್ಡಿದರವನ್ನು ಗೊತ್ತು ಮಾಡುತ್ತದೆ. ಬಳಿಕ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
ಆನ್ಲೈನ್ ಮೂಲಕ ಪಿಎಫ್ ಖಾತೆಯಲ್ಲಿ ಜನ್ಮ ದಿನ ಅಪ್ಡೇಟ್ ಮಾಡುವುದು ಹೇಗೆ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು, "ಅಗತ್ಯ ದಾಖಲೆಗಳನ್ನು ನಮಗೆ ರವಾನಿಸುವಲ್ಲಿ ಕಾರ್ಮಿಕ ಸಚಿವಾಲಯವು ವಿಳಂಬ ಮಾಡಿದೆ. ಇದರಿಂದಾಗಿ ಈ ವರ್ಷ ಅನುಮೋದನೆಯಲ್ಲಿ ವಿಳಂಬವಾಗಿದೆ," ಎಂದು ಹೇಳಿದ್ದಾರೆ. "ಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಕ್ರೆಡಿಟ್ ಮಾಡುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣದ ಹರಿವು ಆಗಿದೆ. ಹಣಕಾಸು ಸಚಿವಾಲಯವು ಸಲ್ಲಿಸಿದ ಡೇಟಾವನ್ನು ಮೌಲ್ಯೀಕರಿಸುವ ವ್ಯವಸ್ಥೆಯನ್ನು ಹೊಂದಿದೆ. ಸದಸ್ಯರ ಖಾತೆಗೆ ಬಡ್ಡಿಯನ್ನು ಜಮಾ ಮಾಡುವ ಮೊದಲು ಅಗತ್ಯವಿರುವ ಹಣವನ್ನು ಮತ್ತು ಇತರ ಕಾರ್ಯವಿಧಾನದ ವ್ಯವಸ್ಥೆಗಳನ್ನು ಹಣಕಾಸು ಸಚಿವಾಲಯವು ತಿಳಿಸುತ್ತದೆ," ಎಂದು ಟೀಮ್ಲೀಸ್ ಸರ್ವಿಸಸ್ನ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್-ಸಿಪಿಒ ಪ್ರಶಾಂತ್ ಸಿಂಗ್ ಹೇಳಿದ್ದಾರೆ.
ಭಾರತೀಯ ಅಂಚೆ ಇಲಾಖೆಯ ಉಳಿತಾಯ ಖಾತೆಗೆ, ಹಿರಿಯ ನಾಗರಿಕೆ ಖಾತೆಗೆ, ಸುಕನ್ಯಾ ಸಮೃದ್ದಿ ಖಾತೆಗೆ, ಪಿಪಿಎಫ್ಗೆ ಬಡ್ಡಿದರವನ್ನು ಜಮೆ ಮಾಡುವುದು ದೊಡ್ಡ ತೊಂದರೆಯ ವಿಷಯ ಏನಲ್ಲ. ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕಕ್ಕೆ ಪ್ರತಿ ವರ್ಷ ಬಡ್ಡಿ ದರಗಳನ್ನು ಅನುಮೋದಿಸುತ್ತದೆ. ಇದು ಕಾಲ ಕಾಲಕ್ಕೆ ಜಮೆ ಮಾಡಲಾಗುತ್ತದೆ. ಯಾವುದೇ ಅಡೆ ತಡೆ ಇಲ್ಲದೆ ಜಮೆ ಮಾಡಲಾಗುತ್ತದೆ. ಆದರೆ ಇಲ್ಲಿ ತೊಂದರೆ ಉಂಟಾಗುವುದು ಇಪಿಎಫ್ ಖಾತೆಯದ್ದು.
ಇಪಿಎಫ್: ತೆರಿಗೆ ಸಂಬಂಧಿತ ಹಲವು ನಿಯಮಗಳ ಬದಲಾವಣೆ!
ಈ ವಿಳಂಬಕ್ಕೆ ಸರಿಯಾದ ಕಾರಣವೇ ಇಲ್ಲ!
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರ್ಸರ್ ಇಂಡಿಯಾದ ಆರೋಗ್ಯ ಮತ್ತು ಪ್ರಯೋಜನಗಳು ವಿಭಾಗದ ನಿವೃತ್ತಿ ಬಿಜಿನೆಜ್ ಲೀಡರ್ ಪ್ರೀತಿ ಚಂದ್ರಶೇಖರ್, "ಈ ವಿಳಂಬ ಪ್ರತಿ ವರ್ಷ ಯಾಕೆ ಆಗುತ್ತದೆ ಎಂಬುದಕ್ಕೆ ಯಾವುದೇ ಒಂದು ನಿರ್ದಿಷ್ಟ ಕಾರಣ ಇಲ್ಲ. ಭವಿಷ್ಯ ನಿಧಿಯ ದರವು ಇತರ ಉಳಿತಾಯ ಯೋಜನೆಗಳ ದರಗಳಿಗಿಂತ ಹೆಚ್ಚು ಇರುವ ಕಾರಣದಿಂದಾಗಿ ಈ ವಿಳಂಬ ಕಾರಣವಾಗಿರಬಹುದು," ಎಂದು ತಿಳಿಸಿದ್ದಾರೆ.