For Quick Alerts
ALLOW NOTIFICATIONS  
For Daily Alerts

ಮಾಸ್ಟರ್‌ ಕಾರ್ಡ್‌ ಮೇಲೆ RBI ನಿರ್ಬಂಧ: ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾನ್ಯವಿದೆಯೇ?

|

ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಯಾರೂ ಊಹಿಸದ ರೀತಿಯಲ್ಲಿ ಖ್ಯಾತ ಹಣಕಾಸು ಸಂಸ್ಥೆ ಮಾಸ್ಟರ್‌ಕಾರ್ಡ್‌ಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಗ್ರಾಹಕರ ಡೇಟಾವನ್ನು ಸಂಗ್ರಹಿಸುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾವತಿ ವ್ಯವಸ್ಥೆ ಆಪರೇಟರ್ ಮಾಸ್ಟರ್‌ಕಾರ್ಡ್‌ ವಿರುದ್ಧ ಆರ್‌ಬಿಐ ನಿಷೇಧ ಹೇರಿದೆ.

 

ಈಗಾಗಲೇ ಮಾಸ್ಟರ್‌ ಕಾರ್ಡ್ ಹಲವು ರೀತಿಯ ಸೇವೆಯನ್ನ ಒದಗಿಸುತ್ತಿದ್ದು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಇತರೆ ಪಾವತಿ ವ್ಯವಸ್ಥೆಯಲ್ಲಿ ತನ್ನದೇ ಆದ ಪಾತ್ರವನ್ನ ಹೊಂದಿದೆ. ಹಣ ಪಾವತಿಗೆ ಸೇರಿದ ವಹಿವಾಟುಗಳಲ್ಲಿ ಬಹುತೇಕರು ಮಾಸ್ಟರ್‌ಕಾರ್ಡ್ ಬಳಕೆ ಮಾಡುತ್ತಾರೆ.

ಹೀಗಿರುವಾಗ ಮಾಸ್ಟರ್‌ಕಾರ್ಡ್‌ ಹೊಂದಿರುವ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ ಆರ್‌ಬಿಐ ನಿಷೇಧದಿಂದ ಮುಕ್ತವಾಗಿದೆಯೇ, ಇನ್ಮುಂದೆ ಮಾನ್ಯವಾಗಿರುತ್ತದೆಯೇ ಎಂಬ ಗೊಂದಲವಿದ್ದರೆ ಈ ಕೆಳಗಿನ ಮಾಹಿತಿ ಓದಿ.

ಜುಲೈ 22ರಿಂದ ಮಾಸ್ಟರ್‌ಕಾರ್ಡ್ ಬ್ಯಾನ್‌!

ಜುಲೈ 22ರಿಂದ ಮಾಸ್ಟರ್‌ಕಾರ್ಡ್ ಬ್ಯಾನ್‌!

ಜುಲೈ 22 ರಿಂದ ಹೊಸ ಗ್ರಾಹಕರಿಗೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಪ್ರಿಪೇಯ್ಡ್ ಕಾರ್ಡ್‌ಗಳನ್ನು ನೀಡುವುದನ್ನು ರಿಸರ್ವ್ ಬ್ಯಾಂಕ್ ನಿಷೇಧಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್ ಸೇರಿದಂತೆ ಹಲವಾರು ಖಾಸಗಿ ವಲಯದ ಬ್ಯಾಂಕ್‌ಗಳು ಡೆಬಿಟ್‌ಗಾಗಿ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಮಾಸ್ಟರ್‌ಕಾರ್ಡ್ ರೂಪದಲ್ಲಿ ಹೊಂದಿವೆ. ಆದ್ದರಿಂದ ಬ್ಯಾಂಕುಗಳು ಇನ್ನು ಮುಂದೆ ಮಾಸ್ಟರ್‌ಕಾರ್ಡ್ ನೆಟ್‌ವರ್ಕ್‌ನಲ್ಲಿ ಹೊಸ ಕಾರ್ಡ್‌ಗಳನ್ನು ನೀಡಲು ಸಾಧ್ಯವಾಗುವುದಿಲ್ಲ.

ಮಾಸ್ಟರ್‌ಕಾರ್ಡ್‌ನ ಡೆಬಿಟ್ & ಕ್ರೆಡಿಟ್ ಕಾರ್ಡ್‌ಗಳು ಭಾರತದಲ್ಲಿ ಮಾನ್ಯವಿದೆಯೇ?

ಮಾಸ್ಟರ್‌ಕಾರ್ಡ್‌ನ ಡೆಬಿಟ್ & ಕ್ರೆಡಿಟ್ ಕಾರ್ಡ್‌ಗಳು ಭಾರತದಲ್ಲಿ ಮಾನ್ಯವಿದೆಯೇ?

ಮಾಸ್ಟರ್‌ಕಾರ್ಡ್ ಎನ್ನುವುದು ಪಾವತಿ ವ್ಯವಸ್ಥೆ ಆಪರೇಟರ್ ಆಗಿದ್ದು, ಪಾವತಿ ಮತ್ತು ವಸಾಹತು ಕಾಯ್ದೆ ವ್ಯವಸ್ಥೆಯ ಕಾಯ್ದೆಯಡಿಯಲ್ಲಿ ದೇಶದಲ್ಲಿ ಕಾರ್ಡ್ ನೆಟ್‌ವರ್ಕ್ ನಿರ್ವಹಿಸಲು ಅಧಿಕಾರ ಹೊಂದಿದೆ. 2019 ರಲ್ಲಿ, ಲಂಡನ್ ಮೂಲದ ಪಿಪಿಆರ್‌ಒ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಮಾಸ್ಟರ್‌ಕಾರ್ಡ್ ಭಾರತದಲ್ಲಿನ ಎಲ್ಲಾ ಕಾರ್ಡ್ ಪಾವತಿಗಳಲ್ಲಿ ಶೇಕಡಾ 30 ಕ್ಕಿಂತಲೂ ಹೆಚ್ಚಿನ ಪಾಲನ್ನು ಹೊಂದಿದೆ.

ನೀವು ಮಾಸ್ಟರ್ ಕಾರ್ಡ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದರೆ, ನೀವು ಚಿಂತಿಸಬೇಕಾಗಿಲ್ಲ. ಆರ್‌ಬಿಐನ ಆದೇಶವು ದೇಶದಲ್ಲಿ ಮಾಸ್ಟರ್‌ಕಾರ್ಡ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಿರುವವರ ಮೇಲೆ ಪರಿಣಾಮ ಬೀರುವುದಿಲ್ಲ. ಈಗಾಗಲೇ ಮಾಸ್ಟರ್‌ಕಾರ್ಡ್ ಬಳಕೆ ಮಾಡುತ್ತಿರುವ ಗ್ರಾಹಕರು ಆತಂಕ ಪಡಬೇಕಿಲ್ಲ.

ಮಾಸ್ಟರ್‌ಕಾರ್ಡ್‌ ನಿಷೇಧದ ಕುರಿತು ಆರ್‌ಬಿಐ ಸಮರ್ಥನೆ
 

ಮಾಸ್ಟರ್‌ಕಾರ್ಡ್‌ ನಿಷೇಧದ ಕುರಿತು ಆರ್‌ಬಿಐ ಸಮರ್ಥನೆ

ಮಾಸ್ಟರ್‌ ಕಾರ್ಡ್‌ಗೆ ಸಾಕಷ್ಟು ಸಮಯ ಮತ್ತು ಸಾಕಷ್ಟು ಅವಕಾಶಗಳನ್ನು ನೀಡಲಾಗಿದ್ದರೂ, "ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹಣೆ" ಕುರಿತ ನಿರ್ದೇಶನಗಳನ್ನು ಪಾಲನೆ ಮಾಡಿಲ್ಲ ಎಂದು ಆರ್ ಬಿಐ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಆರ್‌ಬಿಐ ನಿಷೇಧ ಇದೇ ಮೊದಲೇನಲ್ಲ!

ಆರ್‌ಬಿಐ ನಿಷೇಧ ಇದೇ ಮೊದಲೇನಲ್ಲ!

ಹೌದು, ಮಾಸ್ಟರ್‌ಕಾರ್ಡ್‌ ಅನ್ನು ಆರ್‌ಬಿಐ ನಿಷೇಧಿಸಿರುವುದು ದೇಶದಲ್ಲಿ ಮೊದಲೇನಲ್ಲ. ಆರ್‌ಬಿಐ ಮಾನದಂಡಗಳನ್ನು ಪಾಲಿಸದ ಕಾರಣಕ್ಕಾಗಿ ವಿದೇಶಿ ನೆಟ್‌ವರ್ಕ್ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದು ಇದೇ ಮೊದಲಲ್ಲ. ಈ ಮೊದಲು, ಅಮೆರಿಕನ್ ಎಕ್ಸ್‌ಪ್ರೆಸ್ ಬ್ಯಾಂಕಿಂಗ್ ಕಾರ್ಪ್ ಮತ್ತು ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ಲಿಮಿಟೆಡ್ ಅನ್ನು ಮೇ 1 ರಿಂದ ಹೊಸ ಜಾರಿಗೆ ಬರುವಂತೆ, ಹೊಸ ಕಾರ್ಡ್‌ ನೀಡದಂತೆ ಆರ್‌ಬಿಐ ನಿರ್ಬಂಧಿಸಿದೆ.

ಆರ್‌ಬಿಐ ನಿಯಮ ಏನು ಹೇಳುತ್ತದೆ?

ಆರ್‌ಬಿಐ ನಿಯಮ ಏನು ಹೇಳುತ್ತದೆ?

2018 ರಲ್ಲಿ, ಎಲ್ಲಾ ಸೇವಾ ಪೂರೈಕೆದಾರರು ಭಾರತದಲ್ಲಿ ಪ್ರತ್ಯೇಕವಾಗಿ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸಿ ಪ್ರಕ್ರಿಯೆಗೊಳಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಿಸಿದೆ.

ಇದರರ್ಥ ಎಲ್ಲಾ ನೆಟ್‌ವರ್ಕ್‌ ಪೂರೈಕೆದಾರರು ತಾವು ನಿರ್ವಹಿಸುವ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಂಪೂರ್ಣ ಡೇಟಾವನ್ನು ಭಾರತದಲ್ಲಿ ಮಾತ್ರ ವ್ಯವಸ್ಥೆಯಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಆರ್‌ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ. ಆದರೆ ಕಂಪೆನಿಗಳಿಗೆ ಭಾರತದ ಹೊರಗಿನ ವಹಿವಾಟಿನ ವಿವರಗಳನ್ನು ವಿದೇಶಗಳಲ್ಲಿ ಸಂಗ್ರಹಿಸಲು ಅವಕಾಶವಿದೆ.

English summary

Will debit and credit cards become valid India after RBI bans Mastercard? Know Here

Reserve Bank of India has prohibited Mastercard from on-boarding new domestic customers onto its network. Will it affect existing debit and credit card users?
Story first published: Thursday, July 15, 2021, 17:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X