ಈ ಧನತ್ರಯೋದಶಿ ಸಂದರ್ಭ ಚಿನ್ನ ಖರೀದಿ ಸೂಕ್ತವೇ?
ಮುಂದಿನ ವಾರದಲ್ಲೇ ಎಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಲಿದೆ. ಈ ನಿಟ್ಟಿನಲ್ಲಿ ಜನರು ಈಗಲೇ ತಯಾರಿಯನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಅಲಂಕಾರ ಮಾಡಲು ಈಗಲೇ ಬೇಕಾದ ಅಗತ್ಯ ವಸ್ತುಗಳ ಖರೀದಿಯನ್ನು ಕೆಲ ಜನರು ತೊಡಗಿದ್ದರೆ, ಇನ್ನು ಕೆಲವರು ಈಗಾಗಲೇ ಖರೀದಿ ಮಾಡಿದ್ದಾರೆ. ಧನತ್ರಯೋದಶಿ ಅಥವಾ ಧನ್ತೇರಸ್ ಎಂದು ಕರೆಯಲ್ಪಡುವ ಆಚರಣೆಯನ್ನು ದೀಪಾವಳಿ ಹಬ್ಬದ ಮೊದಲ ದಿನದಂದು ಆಚರಣೆ ಮಾಡಲಾಗುತ್ತದೆ.
ಈ ದಿನ ಮನೆಗೆ ಕೆಲವು ವಸ್ತುಗಳನ್ನು ತರುವುದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಈ ವರ್ಷ ಅಂದರೆ 2021 ರಲ್ಲಿ ನವೆಂಬರ್ 2 ರಂದು ಧನತ್ರಯೋದಶಿ ಅಥವಾ ಧನ್ತೇರಸ್ ಅನ್ನು ಆಚರಣೆ ಮಾಡಲಾಗುತ್ತಿದೆ. ಈ ದಿನವನ್ನು ಚಿನ್ನ ಅಥವಾ ಸ್ಟಾಕ್ ಹೂಡಿಕೆದಾರರು, ಖರೀದಿದಾರರು ಶುಭದಿನ ಎಂದು ಪರಿಗಣಿಸುತ್ತಾರೆ. ಈ ನಿಟ್ಟಿನಲ್ಲಿ ಚಿನ್ನ ಖರೀದಿಯನ್ನು ಮಾಡುತ್ತಾರೆ.
ಚಿನ್ನದ ದರ ಸ್ಥಿರ : ಅ.30ರಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?
ಆದರೆ ಈ ದಿನ ಶುಭವಾದರೂ ಪ್ರಸ್ತುತ ಚಿನ್ನದ ಬೆಲೆಯನ್ನು ನೋಡಿದಾಗ ಧನತ್ರಯೋದಶಿ ಅಥವಾ ಧನ್ತೇರಸ್ ದಿನದಂದು ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ, ಈ ಬಗ್ಗೆ ನಿಮಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಮುಂದೆ ಓದಿ.

ಪ್ರಸ್ತುತ ಚಿನ್ನದ ಬೆಲೆ ಎಷ್ಟಿದೆ?
ಚಿನ್ನದ ಬೆಲೆಯು ಪ್ರಸ್ತುತ ಕಡಿಮೆ ಆಗಿದೆ ಮತ್ತು ಅಂತಾರಾಷ್ಟ್ರೀಯ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಕ್ಟೋಬರ್ನ ಕೊನೆಯ ವ್ಯಾಪಾರ ದಿನದಂದು ಶೇಕಡ 0.82 ಪ್ರತಿಶತದಷ್ಟು ಕುಸಿತ ಕಂಡು ಬಂದಿದೆ. ಪ್ರತಿ ಔನ್ಸ್ಗೆ 1784.3 ಡಾಲರ್ ಆಗಿದೆ. ಜಾಗತಿಕ ಬ್ಯಾಂಕರ್ಗಳ ನೀತಿ ನಿಲುವಿನ ನಡುವೆ ಈ ಕುಸಿತ ಕಂಡುಬಂದಿದೆ. ಭವಿಷ್ಯದಲ್ಲಿ ಮಾರುಕಟ್ಟೆಯಲ್ಲಿ ಡಿಸೆಂಬರ್ನಲ್ಲಿ ಚಿನ್ನದ ಬೆಲೆಯು 354 ರೂಪಾಯಿ ಇಳಿಯುವ ನಿರೀಕ್ಷೆ ಇದೆ. ಅಂಧರೆ 10 ಗ್ರಾಂಗೆ 47607 ರೂಪಾಯಿಯಷ್ಟು ಆಗಿದೆ ಎಂದು ವರದಿಯು ಹೇಳಿದೆ. ಅದೇ ರೀತಿ ಬೆಳ್ಳಿ ಬೆಲೆಯೂ 400 ರಿಂದ ರೂ. 64,540. ರೂಪಾಯಿಗೂ ಅಧಿಕ ಕುಸಿತ ಕಂಡಿದೆ.

ಚಿನ್ನದ ಮುಂದಿನ ನಿರೀಕ್ಷೆಗಳು ಏನು?
ಯುಎಸ್ ಫೆಡ್ ನವೆಂಬರ್ 2 ಮತ್ತು ನವೆಂಬರ್ 3 ರಂದು ಸಭೆಗೆ ಭೇಟಿಯಾಗಲಿದೆ. ಅದರಲ್ಲಿ ಅದು ತನ್ನ ಬಾಂಡ್ ಖರೀದಿ ಟೈಮ್ಲೈನ್ ಅನ್ನು ಒದಗಿಸುತ್ತದೆ. ಒಂದು ವೇಳೆ ಯುಎಸ್ ಫೆಡ್ ತನ್ನ ಆಸ್ತಿ ಖರೀದಿಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿದರೆ, ಇದರಿಂದಾಗಿ ದ್ರವ್ಯತೆ ಮೇಲೆ ಪರಿಣಾಮ ಬೀರುತ್ತದೆ. ಇದು ಚಿನ್ನದ ಬೆಲೆಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಭವಿಷ್ಯದಲ್ಲಿ ಆಗುವ ಬೆಲೆ ಏರಿಕೆಯು ಇನ್ನಷ್ಟು ಹಾನಿಕಾರವಾಗಲಿದೆ. ಇನ್ನು ಈ ಸಂದರ್ಭದಲ್ಲಿ ಗುರುವಾರ ಬಾಹ್ಯ ವಾಣಿಜ್ಯ ಸಾಲಗಳು (ಇಸಿಬಿ) ಬಡ್ಡಿದರದ ಮೇಲೆ ವಿರುದ್ಧವಾಗಿ ನಿಂತಿದೆ. ಅನುಕೂಲಕರ ಹಣಕಾಸು ಪರಿಸ್ಥಿತಿಗಳನ್ನು ನಿರ್ವಹಿಸಲು ಯುಎಸ್ ಫೆಡ್ ಕ್ರಮವು ಇತರ ಕೇಂದ್ರೀಯ ಬ್ಯಾಂಕುಗಳಿಗೆ ವ್ಯತಿರಿಕ್ತವಾಗಿದೆ.

ಹೂಡಿಕೆದಾರರೇ ಇಲ್ಲಿ ಗಮನಿಸಿ
ಈ ಸಂದರ್ಭದಲ್ಲಿ ಹೂಡಿಕೆದಾರರು ಚಾಣಕ್ಷ ನಡೆಯನ್ನು ತೋರುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಬೈ ಆಂಡ್ ಡಿಪ್ ಸ್ಟ್ರಟೆರ್ಜಿ ನಿಮಗೆ ತಿಳಿದಿರಬಹುದು ಅಲ್ಲವೇ?. ಬೈ ಆಂಡ್ ಡಿಪ್ ಸ್ಟ್ರಟೆರ್ಜಿ ಅಂದರೆ ಬೆಲೆಯು ಕಡಿಮೆ ಆಗಿರುವಾಗ ಖರೀದಿ ಮಾಡಿ ಬೆಲೆ ಹೆಚ್ಚಳವಾಗುವಾಗ ಮಾರಾಟ ಮಾಡಲು ಕಾಯುವುದು ಆಗಿದೆ. ಅದೇನೇ ಇದ್ದರೂ ಕೂಡಾ ಹಣದುಬ್ಬರ, ಅನಿಶ್ಚಿತ ಮಾರುಕಟ್ಟೆ ಹಾಗೂ ಈಗಿ ಕೊರೊನಾ ವೈರಸ್ ಸೋಂಕು ಪರಿಸ್ಥಿತಿಯು ಚಿನ್ನದ ಬೆಲೆಗಳ ಮೇಲೆ ಬೀರುತ್ತಿರುವ ಪ್ರಭಾವವನ್ನು ಮುಂದುವರಿಸುವ ಎಲ್ಲಾ ಸೂಚನೆಗಳೂ ಇದೆ. ಇನ್ನು ಈ ಸಂದರ್ಭದಲ್ಲಿ ನಾವು ಧನತ್ರಯೋದಶಿ ಅಥವಾ ಧನ್ತೇರಸ್ ಬಗ್ಗೆ ಹೇಳುವುದಾದರೆ. ಈ ದಿನದಂದು ನೀವು ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಖರೀದಿ ಮಾಡಬಹುದು. ಸಂಗ್ರಹಣೆ, ತಯಾರಿಕೆ ಅಥವಾ ಬೇರೆ ಶುಲ್ಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೀವು ಈ ಹಬ್ಬದ ಸಂದರ್ಭದಲ್ಲಿ ಈ ನಿರ್ದಿಷ್ಟ ದಿನದಂದು ಡಿಜಿಟಲ್ ರೂಪದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂಬುವುದು ತಜ್ಞರ ಅಭಿಪ್ರಾಯ.

ಚಿನ್ನದ ಬೆಲೆಯ ಮೇಲಿನ ದೃಷ್ಟಿಕೋನ..
"ಬಲವಾದ ಡಾಲರ್ ಮತ್ತು ಮಿಶ್ರ ಜಾಗತಿಕ ಸೂಚನೆಗಳಿಂದ ಉಂಟಾಗುವ ಒತ್ತಡದ ಮೇಲೆ ಚಿನ್ನದ ಬೆಲೆಯು ನಿಂತಿದೆ. ಮುಂದಿನ ವಾರ ಯುಎಸ್ ಎಫ್ಒಎಂಸಿ ಸಭೆಯು ಮುಂದೆ ನಡೆಯಲಿದೆ. ಈ ನಡುವೆ ಬೆಲೆಬಾಳುವ ಲೋಹಕಗಳು ಸ್ಥಿರವಾದ ವ್ಯಾಪಾರವನ್ನು ಹೊಂದುವ ಸಾಧ್ಯತೆಗಳು ಇದೆ. ಹಣದುಬ್ಬರದ ಒತ್ತಡಗಳು 2022 ರ ಹೊತ್ತಿಗೆ ಬಡ್ಡಿದರ ಹೆಚ್ಚಳವನ್ನು ಪ್ರಚೋದಿಸುತ್ತದೆ ಎಂದು ಇಸಿಬಿ ಅಧ್ಯಕ್ಷ ಕ್ರಿಸ್ಟೀನ್ ಲಗಾರ್ಡೆ ಹೇಳಿದ್ದಾರೆ. ಹಾಗೆಯೇ ಈ ಸಂದರ್ಭದಲ್ಲೇ "ಹಣದುಬ್ಬರದ ಹೆಚ್ಚಳವನ್ನು ಒಪ್ಪಿಕೊಂಡಿದ್ದಾರೆ ಎಂದು ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದರು.