For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಆಧಾರ್ ಶಿಲಾ ಯೋಜನೆ: ಪ್ರತಿದಿನ 29 ರೂ. ಉಳಿತಾಯ ಮಾಡಿ, 4 ಲಕ್ಷ ರೂಪಾಯಿ ರಿಟರ್ನ್

|

ಭಾರತದ ಜೀವ ವಿಮಾ ನಿಗಮವು (ಎಲ್‌ಐಸಿ) ಕೇವಲ ವಿಮಾ ಪಾಲಿಸಿಗಳನ್ನಷ್ಟೇ ಗ್ರಾಹಕರಿಗೆ ನೀಡದೇ ಅನೇಕ ಹೂಡಿಕೆ ಯೋಜನೆಗಳನ್ನು ಹೊಂದಿದೆ. ನೀವು ಹೂಡಿಕೆ ಮಾಡಿದ ಹಣದ ಭದ್ರತೆಯನ್ನು ನೀಡುತ್ತದೆ. ಇದರಲ್ಲಿ ಮಹಿಳಾ ಉದ್ಯೋಗಿಗಳು ಸಹ ಹೊರತಾಗಿಲ್ಲ, ಮಹಿಳೆಯರನ್ನ ಸ್ವಾವಲಂಬಿಗಳಾಗಿ ಮಾಡುವ ಗುರಿಯನ್ನು ಹೊಂದಿರುವ ಯೋಜನೆಗಳು ಇದೆ.

 

ಹೌದು ಎಲ್‌ಐಸಿ ತ್ವರಿತವಾಗಿ ಹೂಡಿಕೆಯನ್ನ ಪಡೆದು ಉತ್ತಮ ಭವಿಷ್ಯ ನೀಡುವ ಯೋಜನೆ ನೀಡಿದೆ. 8 ರಿಂದ 55 ವರ್ಷದೊಳಗಿನ ಮಹಿಳೆಯರು ಆಧಾರ್ ಶಿಲಾ ಎಂಬ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಮುಕ್ತಾಯದ ಸಮಯದಲ್ಲಿ ಸರಿಸುಮಾರು 4 ಲಕ್ಷ ರೂ.ಗಳನ್ನು ಹಿಂಪಡೆಯಬಹುದಾಗಿದೆ.

ದಿನಕ್ಕೆ 29 ರೂಪಾಯಿ ಉಳಿತಾಯ ಮಾಡಿ

ದಿನಕ್ಕೆ 29 ರೂಪಾಯಿ ಉಳಿತಾಯ ಮಾಡಿ

ಮಹಿಳೆಯರಿಗಾಗಿಯೇ ಹೇಳಿ ಮಾಡಿಸಿರುವಂತಹ ಯೋಜನೆ ಇದಾಗಿದ್ದು, ಪ್ರತಿದಿನ 29 ರೂಪಾಯಿ ಉಳಿತಾಯ ಮಾಡಿದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಗಳ ಮೇಲೆ ಖಚಿತವಾದ ಆದಾಯದ ಜೊತೆಗೆ, ಎಲ್‌ಐಸಿ ಸಹ ಯೋಜನೆಯಲ್ಲಿ ರಕ್ಷಣೆ ವ್ಯಾಪ್ತಿಯನ್ನು ನೀಡುತ್ತಿದೆ.

ಕನಿಷ್ಠ 10 ವರ್ಷದ ಅವಧಿ

ಕನಿಷ್ಠ 10 ವರ್ಷದ ಅವಧಿ

ಮಹಿಳಾ ಹೂಡಿಕೆದಾರರು ಈ ಯೋಜನೆಯಲ್ಲಿ ಕನಿಷ್ಠ 10 ವರ್ಷದಿಂದ ಗರಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಹೂಡಿಕೆದಾರರಿಗೆ ಎಲ್‌ಐಸಿ ಆಧಾರ್ ಶಿಲಾ ಯೋಜನೆಯಲ್ಲಿ ಖಾತೆ ತೆರೆಯಲು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. ಇದು ಖಾತರಿಯ ರಿಟರ್ನ್ ಎಂಡೋಮೆಂಟ್ ಯೋಜನೆಯಾಗಿದೆ. ಆಸಕ್ತರು ಎಲ್‌ಐಸಿ ಏಜೆಂಟರನ್ನು ಸಂಪರ್ಕಿಸುವ ಮೂಲಕ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

LIC ಹೊಸ ಯೋಜನೆ: ಒಂದು ಬಾರಿ ಹಣ ಪಾವತಿ, ತಕ್ಷಣವೇ ಪಿಂಚಣಿ ಸೌಲಭ್ಯ

4 ಲಕ್ಷ ರೂಪಾಯಿ ಹೇಗೆ ಸಿಗಲಿದೆ?
 

4 ಲಕ್ಷ ರೂಪಾಯಿ ಹೇಗೆ ಸಿಗಲಿದೆ?

ಹೂಡಿಕೆ ಮಾಡಿ ಸರಿಸುಮಾರು 4 ಲಕ್ಷ ರೂ. ರಿಟರ್ನ್ ಪಡೆಯಲು, ನಿಮ್ಮ ಉಳಿತಾಯವು ದಿನಕ್ಕೆ ಸುಮಾರು 29 ರೂ. ಆಗಿರುತ್ತದೆ ಮತ್ತು ವರ್ಷಕ್ಕೆ 10,959 ರೂ.ಗಳನ್ನು ಉಳಿಸಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು ಮತ್ತು 20 ವರ್ಷಗಳವರೆಗೆ 4.5% ತೆರಿಗೆಯನ್ನು ಹೊಂದಿರಬೇಕು.

ಮುಂದಿನ 20 ವರ್ಷಗಳಲ್ಲಿ, ನೀವು ಎಲ್‌ಐಸಿಗೆ 2,14,696 ರೂ. ಹೂಡಿಕೆ ಮಾಡಿರುತ್ತೀರಿ, ಮುಕ್ತಾಯದ ನಂತರ, ನಿಮ್ಮ ಹೂಡಿಕೆಗಾಗಿ ಎಲ್ಐಸಿ ನಿಮಗೆ 4 ಲಕ್ಷ ರೂ. ನೀಡಲಿದೆ. ನಿಮ್ಮ ಹೂಡಿಕೆಯ ಹಣವನ್ನು ಪ್ರೀಮಿಯಂ ರೂಪದಲ್ಲಿ ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಆಧಾರದ ಮೇಲೆ ಪಾವತಿಸಲು ಆಯ್ಕೆ ಮಾಡಬಹುದು.

ಅಂಚೆ ಕಚೇರಿ ಉಳಿತಾಯ ಯೋಜನೆಗಳು: ಎಷ್ಟು ತಿಂಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ?

ಯೋಜನೆಯ ಅವಧಿಗೂ ಮುಂಚೆಯೇ ಮರಣ ಹೊಂದಿದರೆ ಪರಿಹಾರ

ಯೋಜನೆಯ ಅವಧಿಗೂ ಮುಂಚೆಯೇ ಮರಣ ಹೊಂದಿದರೆ ಪರಿಹಾರ

ಹೂಡಿಕೆದಾರರು ಯೋಜನೆಯ ಅವಧಿಯ ಮುಕ್ತಾಯಕ್ಕೂ ಮುನ್ನವೇ ಮರಣ ಹೊಂದಿದರೆ, ಸರ್ಕಾರಿ ಸ್ವಾಮ್ಯದ ವಿಮೆದಾರರು ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತಾರೆ. ಎಲ್‌ಐಸಿ ಆಧಾರ್ ಶಿಲಾ ಯೋಜನೆಯಲ್ಲಿ, ಕನಿಷ್ಠ ಮೊತ್ತ 75,000 ರೂ., ಗರಿಷ್ಠ 3,00,000 ರೂ. ಆಗಿದೆ.

English summary

LIC Aadhar Shila Scheme: Women Investors Can Get Rs 4 Lakh By Saving Just Rs 29 Everyday:Know more

Here the details of how women investors can get Rs 4 Lakh by saving just Rs 29 Daily
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X