For Quick Alerts
ALLOW NOTIFICATIONS  
For Daily Alerts

ಪರ್ಸನಲ್ ಲೋನ್ ನೀಡಲು ಮುಂದಾದ ಶಿಯೋಮಿ; ಭಾರತದಲ್ಲಿ Mi Credit ಆರಂಭ

|

ಚೀನಾದ ಪ್ರಮುಖ ಕಂಪೆನಿ ಶಿಯೋಮಿಯಿಂದ ಮಂಗಳವಾರ ಭಾರತದಲ್ಲಿ ಸಾಲ ನೀಡುವ Mi Credit ಅನ್ನು ಅಧಿಕೃತವಾಗಿ ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ 1 ಲಕ್ಷ ರುಪಾಯಿ ತನಕ ಸಾಲ ಪಡೆಯಬಹುದು. ಇಷ್ಟೇ ಅಲ್ಲ, ಇನ್ನೂ ಸಾಕಷ್ಟು ಇಂಥ ಯೋಜನೆಗಳನ್ನು ಪರಿಚಯಿಸುವ ಉದ್ದೇಶ ಇರುವುದಾಗಿ ಕಂಪೆನಿ ಹೇಳಿಕೊಂಡಿದೆ.

ಈ ವರೆಗೆ Mi Credit ಅನ್ನೋ ಈ ಸಾಲ ನೀಡುವ ಪ್ಲಾಟ್ ಫಾರ್ಮ್ ಅನ್ನು ಪ್ರಾಯೋಗಿಕವಾಗಿ ಬಳಸುತ್ತಿತ್ತು. KreditBee ಸಹಭಾಗಿತ್ವದಲ್ಲಿ 1 ಲಕ್ಷದ ತನಕ ಸಾಲ ನೀಡುವ ಯೋಜನೆಯನ್ನು ಕಳೆದ ವರ್ಷವೇ ಘೋಷಣೆ ಮಾಡಲಾಗಿತ್ತು. "ನಾವು ವಿವಿಧ ಬಗೆಯಲ್ಲಿ ಪ್ರಾಯೋಗಿಕವಾಗಿ ನಡೆಸುತ್ತಿದ್ದೇವೆ. ಆದರೆ ಇದು ಅಧಿಕೃತ ಆರಂಭ.

55 ಇಂಚಿನ Mi TV 4X ಹೊಸ ಟೀವಿ ಬಿಡುಗಡೆ; ಬೆಲೆ 34,999 ರುಪಾಯಿ

 

"ಅತ್ಯುತ್ತಮ ಪರ್ಸನಲ್ ಲೋನ್ ಗಳನ್ನು ಆನ್ ಲೈನ್ ಮೂಲಕ ಪಡೆಯುವುದಕ್ಕೆ ಎಂಐ ಕ್ರೆಡಿಟ್ ಉತ್ತಮ ಆಯ್ಕೆ. ಜನರಿಗೆ ಅತ್ಯಂತ ಕಡಿಮೆ ಸಮಯದಲ್ಲಿ ಒಂದು ಲಕ್ಷ ರುಪಾಯಿ ತನಕ ಸಾಲ ಪಡೆಯುವುದಕ್ಕೆ ಇಲ್ಲಿ ಅವಕಾಶ ಇದೆ" ಎಂದು ಶಿಯೋಮಿ ಉಪಾಧ್ಯಕ್ಷ ಮತ್ತು ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಮನು ಜೈನ್ ಹೇಳಿದ್ದಾರೆ.

ಎನ್ ಬಿಎಫ್ ಸಿಗಳ ಜತೆಗೆ ಸಹಭಾಗಿತ್ವ

ಎನ್ ಬಿಎಫ್ ಸಿಗಳ ಜತೆಗೆ ಸಹಭಾಗಿತ್ವ

ಸದ್ಯದ ಫಾರ್ಮ್ಯಾಟ್ ನಲ್ಲಿ KreditBee ನಮ್ಮ ಪಾರ್ಟನರ್ಸ್ ನ ಪಟ್ಟಿಯಲ್ಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಸದ್ಯಕ್ಕೆ ಎನ್ ಬಿಎಫ್ ಸಿಗಳು (ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಾರ್ಪೊರೇಷನ್) ಮತ್ತು ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್, ಮನಿ ವ್ಯೂ, ಅರ್ಲಿ ಸ್ಯಾಲರಿ, ಝೆಸ್ಟ್ ಮನಿ ಹಾಗೂ ಕ್ರೆಡಿಟ್ ವಿದ್ಯಾದಂಥ ಕಂಪೆನಿಗಳ ಜತೆ ಸಹ ಸಹಭಾಗಿತ್ವ ಇದೆ. Mi Pay ನಂತರ ಭಾರತದಲ್ಲಿ ಶಿಯೋಮಿ ಪರಿಚಯಿಸುತ್ತಿರುವ ಹಣಕಾಸಿಗೆ ಸಂಬಂಧಿಸಿದ ಉತ್ಪನ್ನ ಇದು. Mi Pay ಎಂಬುದು UPI ಆಧಾರಿತ ಅಪ್ಲಿಕೇಷನ್. ಅದು MIUI (ಶಿಯೋಮಿಯ ಆಪರೇಟಿಂಗ್ ಸಿಸ್ಟಮ್) ಫೋನ್ ಗಳಲ್ಲಿ ದೊರೆಯುತ್ತದೆ. ಮತ್ತು ಗೆಟ್ ಆಪ್ಸ್ ಅಥವಾ ಗೂಗಲ್ ಪ್ಲೇ ಸ್ಟೋರ್ ನಿಂದಲೂ ಡೌನ್ ಲೋಡ್ ಮಾಡಬಹುದು.

2 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರು
 

2 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರು

ಇದು ಭಾರತದಲ್ಲಿ 2018ರ ಮಾರ್ಚ್ ನಲ್ಲಿ ಆರಂಭವಾಯಿತು. ಇದಕ್ಕೆ 2 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರು ಇದ್ದಾರೆ. ಶಿಯೋಮಿ ಕಾರ್ಪೊರೇಷನ್ ನ ಸಹ ಸಂಸ್ಥಾಪಕ ಹಾಂಗ್ ಫೆಂಗ್ ಮಾತನಾಡಿ, ಸದ್ಯ ಜಾಗತಿಕ ಮಟ್ಟದಲ್ಲಿ 30 ಕೋಟಿ ಅಭಿಮಾನಿಗಳು ಎಂಐಗೆ ಇದ್ದಾರೆ. ಅವರಿಗೆ ಏನು ಬೇಕಿದೆ ಎಂಬುದು ನಮಗೆ ಗೊತ್ತಿದೆ. ಆದ್ದರಿಂದ ಜಾಗತಿಕ ಮಟ್ಟದಲ್ಲಿ ಎಂಐ ಆರ್ಥಿಕ ಉದ್ಯಮವನ್ನು ಗಟ್ಟಿಯಾಗಿ ಬೆಳೆಸಲು ಉದ್ದೇಶಿಸಿದ್ದೇವೆ ಎಂದಿದ್ದಾರೆ. ಚೀನಾದ ನಂತರ ಭಾರತವೇ ಆರ್ಥಿಕ ಉದ್ಯಮಕ್ಕೆ ಅತಿ ದೊಡ್ಡ ಮಾರುಕಟ್ಟೆ ಆಗಲಿದೆ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೀನಾದಲ್ಲಿ ಶಿಯೋಮಿಯಿಂದ ವೆಲ್ತ್ ಮ್ಯಾನೇಜ್ ಮೆಂಟ್ ನಿಂದ ಇನ್ಷೂರೆನ್ಸ್ ಉತ್ಪನ್ನಗಳ ತನಕ ವಿವಿಧ ಸೇವೆಗಳನ್ನು ಒದಗಿಸುತ್ತಿದೆ. ಭಾರತದಲ್ಲಿ ವಿವಿಧ ಕಂಪೆನಿ ಸಹಭಾಗಿತ್ವದಲ್ಲಿ ಇಂಥ ಪ್ರಾಡಕ್ಟ್ ಪರಿಚಯಿಸುವ ಉದ್ದೇಶ ಇದೆ ಎಂದಿದ್ದಾರೆ.

1.9 ಕೋಟಿ ಗ್ರಾಹಕರಿಂದ 4 ಲಕ್ಷ ಕೋಟಿ ಪರ್ಸನಲ್ ಲೋನ್ ಬಾಕಿ

1.9 ಕೋಟಿ ಗ್ರಾಹಕರಿಂದ 4 ಲಕ್ಷ ಕೋಟಿ ಪರ್ಸನಲ್ ಲೋನ್ ಬಾಕಿ

ಭಾರತೀಯ ಮಾರುಕಟ್ಟೆಗೆ ತರಲು ಬಯಸಿರುವ ಆರ್ಥಿಕ ಉತ್ಪನ್ನಗಳ ವಿಚಾರವಾಗಿ ಕಂಪೆನಿಯ 20 ಮಂದಿಯ ತಂಡವು ಮುಖ್ಯ ಕಚೇರಿಯ ಜತೆಗೂಡಿ ಕೆಲಸ ಮಾಡುತ್ತಿದೆ. 2023ರ ಹೊತ್ತಿಗೆ ಭಾರತದಲ್ಲಿ 70 ಲಕ್ಷ ಕೋಟಿ ರುಪಾಯಿ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಸಿಬಿಲ್ ವರದಿ ಆಧರಿಸಿ ಶಿಯೋಮಿಯಿಂದ ಬಂದಿರುವ ಮಾಹಿತಿ ಪ್ರಕಾರ, 1.9 ಕೋಟಿ ಗ್ರಾಹಕರಿಂದ 4 ಲಕ್ಷ ಕೋಟಿ ರುಪಾಯಿ ಪರ್ಸನಲ್ ಲೋನ್ ಬಾಕಿ ಇದೆ. ಅಂದರೆ ಸರಾಸರಿ ಪ್ರತಿ ಬಳಕೆದಾರರಿಂದ ಹತ್ತಿರ ಹತ್ತಿರ 2 ಲಕ್ಷ ರುಪಾಯಿ ಬಾಕಿ ಇದೆ. ಇದರಲ್ಲಿ ಬಹುತೇಕರು ವೈದ್ಯಕೀಯ ತುರ್ತು, ಶಾಪಿಂಗ್, ಮದುವೆ, ಪ್ರಯಾಣ ಮತ್ತು ಶಿಕ್ಷಣದ ಕಾರಣಕ್ಕೆ ಸಾಲ ಪಡೆದಿದ್ದಾರೆ.

ಯುವಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಂಐ ಕ್ರೆಡಿಟ್

ಯುವಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಂಐ ಕ್ರೆಡಿಟ್

ಎಂಐ ಕ್ರೆಡಿಟ್ ಅನ್ನು ಯುವಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಅವರಿಗೆ ಪರ್ಸನಲ್ ಲೋನ್ ಒದಗಿಸಲು ರೂಪಿಸಲಾಗಿದೆ. ಸಾಂಪ್ರದಾಯಿಕವಾಗಿ ಸಾಲ ನೀಡುವ ವಿಧಾನವನ್ನೇ ಸಂಪೂರ್ಣವಾಗಿ ಬಿಟ್ಟು, ಶೇಕಡಾ ನೂರರಷ್ಟು ಡಿಜಿಟಲ್ ಅನುಭವ ದೊರೆಯುವಂತೆ ಮಾಡುವ ಉದ್ದೇಶ ಕಂಪೆನಿಗೆ ಇದೆ. ಇನ್ನು ಎಂಐ ಫೋನ್ ಬಳಕೆದಾರರು ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಆಪ್ ಮೂಲಕ ಉಚಿತವಾಗಿ ಪರಿಶೀಲಿಸಬಹುದು. ಈಗಾಗಲೇ ನವೆಂಬರ್ ತಿಂಗಳಲ್ಲಿ ಎಂಐ ಕ್ರೆಡಿಟ್ ನಿಂದ ಇಪ್ಪತ್ತೆಂಟು ಕೋಟಿ ಸಾಲ ವಿತರಣೆ ಮಾಡಲಾಗಿದೆ. ಅದರಲ್ಲಿ ಇಪ್ಪತ್ತು ಪರ್ಸೆಂಟ್ ಗೂ ಹೆಚ್ಚು ಜನ ಒಂದು ಲಕ್ಷ ರುಪಾಯಿ ಸಾಲ ಪಡೆದಿದ್ದಾರೆ. ಸದ್ಯಕ್ಕೆ ಎಂಐ ಕ್ರೆಡಿಟ್ ಸೇವೆ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾವಿರದೈನೂರು ಪಿನ್ ಕೋಡ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

English summary

Xiaomi Launched Mi Credit In India To Provide Personal Loan

China's leading company Xiaomi launched Mi Credit in India on Tuesday to provide personal loan. Here is the complete details.
Story first published: Wednesday, December 4, 2019, 14:18 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more