For Quick Alerts
ALLOW NOTIFICATIONS  
For Daily Alerts

SBIನ ಈ ಸಾಲದ ಮೇಲಿನ ಬಡ್ಡಿ ದರ 7.5% ಮಾತ್ರ

|

ಪದೇ ಪದೇ ಸದ್ಯಕ್ಕೆ ದೊರೆಯುತ್ತಿರುವಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲ್ಲ. ಇತ್ತೀಚಿನ ವರ್ಷಗಳಲ್ಲೇ ಇಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಕ್ಕಿಲ್ಲವಾದ್ದರಿಂದ ನಿಜಕ್ಕೂ ಅಗತ್ಯ ಇರುವವರು ತೆಗೆದುಕೊಳ್ಳಬಹುದು. ಯಾವುದೇ ಕಾರಣಗಳಿಗಾಗಿ ಸಾಲಕ್ಕಾಗಿ ನೀವು ಪ್ರಯತ್ನಿಸುತ್ತಿದ್ದಲ್ಲಿ SBI ಚಿನ್ನದ ಸಾಲ ನಿಮ್ಮ ಪಾಲಿಗೆ ಅತ್ಯುತ್ತಮ ಆಯ್ಕೆ ಆಗಲಿದೆ.

SBI ಚಿನ್ನದ ಸಾಲವೇ ಯಾಕೆ?

ಚಿನ್ನದ ಸಾಲ ಬಹಳ ಅಗ್ಗ. ಅದೇ ಪರ್ಸನಲ್ ಲೋನ್ ಪಡೆದರೆ 12ರಿಂದ 18% ಬಡ್ಡಿ ಬೀಳುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಚಿನ್ನದ ಮೇಲಿನ ಸಾಲವನ್ನು 7.5%ನಂತೆ ನೀಡಲಾಗುತ್ತಿದೆ. ಆದರೆ ಇದಕ್ಕಾಗಿ ಚಿನ್ನವನ್ನು ಅಡಮಾನ ಮಾಡಬೇಕಾಗುತ್ತದೆ. ಈ ರೀತಿ ಗರಿಷ್ಠ ಅಂದರೆ 50 ಲಕ್ಷ ರುಪಾಯಿ ಸಾಲ ಸಿಗುತ್ತದೆ. ಸಾಲದ ಮೊತ್ತದ ಮೇಲೆ 0.50% ಪ್ರೊಸೆಸಿಂಗ್ ಶುಲ್ಕ ತಗುಲುತ್ತದೆ.

 

ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್

ಒಂದು ವೇಳೆ SBIನ YONO ಮೂಲಕ ಅರ್ಜಿ ಹಾಕಿಕೊಂಡಲ್ಲಿ ಪ್ರೊಸೆಸಿಂಗ್ ಶುಲ್ಕ ಶೂನ್ಯ. ಇನ್ನು ಚಿನ್ನದ ಸಾಲ ಬಹಳ ಬೇಗ ಸಿಗುತ್ತದೆ. ಅರ್ಜಿ ಹಾಕಿಕೊಂಡ ದಿನವೇ ಸಾಲವನ್ನು ಬ್ಯಾಂಕ್ ವಿತರಣೆ ಮಾಡುತ್ತದೆ. ಒಂದು ವೇಳೆ ಕೆವೈಸಿ ಸರಿ ಇದ್ದಲ್ಲಿ ಮುತ್ತೂಟ್ ಫೈನಾನ್ಸ್ ನಂಥ ಚಿನ್ನದ ಸಾಲದ ಕಂಪೆನಿಗಳು 30 ನಿಮಿಷದಲ್ಲಿ ಸಾಲ ವಿತರಿಸುತ್ತವೆ.

SBIನ ಈ ಸಾಲದ ಮೇಲಿನ ಬಡ್ಡಿ ದರ 7.5% ಮಾತ್ರ

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಹಲವರು ಆರ್ಥಿಕ ಸಮಸ್ಯೆಯಿಂದಾಗಿ ಸಾಲ ಪಡೆಯುತ್ತಿದ್ದಾರೆ. ಆದರೆ ಪರ್ಸನಲ್ ಲೋನ್ ತೆಗೆದುಕೊಳ್ಳುತ್ತಾರೆ. ಆದರೆ ಇದು ಒಳ್ಳೆ ಆಯ್ಕೆ ಅಲ್ಲ. ಏಕೆ ಅಂದರೆ, ಪರ್ಸನಲ್ ಲೋನ್ ಗೆ ಬಡ್ಡಿ ಹೆಚ್ಚು. ಅಷ್ಟೇ ಅಲ್ಲ, ಪ್ರೊಸೆಸಿಂಗ್ ಶುಲ್ಕ, ಅವಧಿಗೆ ಮುಂಚೆ ಪಾವತಿಸಿದರೆ ಅದಕ್ಕೆ ಬಾಕಿ ಸಾಲ ಮೊತ್ತದ ಮೇಲೆ 4% ನೀಡಬೇಕಾಗುತ್ತದೆ.

ಆದ್ದರಿಂದ ಸದ್ಯದ ಸ್ಥಿತಿಗೆ ಬ್ಯಾಂಕ್ ಗಳಿಂದ ಚಿನ್ನದ ಮೇಲೆ ಸಾಲ, ಅದರಲ್ಲೂ ಎಸ್ ಬಿಐನಂಥದ್ದರಿಂದ ಪಡೆದುಕೊಳ್ಳುವುದು ಉತ್ತಮ. ಆದರೆ, ನೆನಪಿರಲಿ. ಒಂದು ವೇಳೆ ಸಾಲ ಮರುಪಾವತಿ ಮಾಡದಿದ್ದಲ್ಲಿ ಚಿನ್ನದ ಆಭರಣ ವಾಪಸ್ ಸಿಗುವುದಿಲ್ಲ.

English summary

SBI Gold Loan At 7.5 Percent Per Annum

Here is the cheapest gold loan available from State Bank Of India at 7.5% per annum. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X