For Quick Alerts
ALLOW NOTIFICATIONS  
For Daily Alerts

ಗೃಹ ಸಾಲ ಪಡೆಯುವವರಿಗೆ ಸಿಹಿಸುದ್ದಿ! ಅಕ್ಟೋಬರ್ 1ರಿಂದ ಬಡ್ಡಿ ಮೇಲೆ ಭರ್ಜರಿ ಉಳಿತಾಯ

ಗೃಹ ಸಾಲ ಪಡೆಯುವ ಗ್ರಾಹಕರಿಗೆ ಒಳ್ಳೆಯ ಸುದ್ದಿ. ಬಾಹ್ಯ ಮಾನದಂಡಗಳನ್ನು ಆಧರಿಸಿದ ಬಡ್ಡಿದರದಲ್ಲಿ ಸಾಲವನ್ನು ಕಡ್ಡಾಯವಾಗಿ ವಿಸ್ತರಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕುಗಳನ್ನು ಕೇಳಿದೆ.

|

ಗೃಹ ಸಾಲ ಪಡೆಯುವ ಗ್ರಾಹಕರಿಗೆ ಒಳ್ಳೆಯ ಸುದ್ದಿ. ಬಾಹ್ಯ ಮಾನದಂಡಗಳನ್ನು ಆಧರಿಸಿದ ಬಡ್ಡಿದರದಲ್ಲಿ ಸಾಲವನ್ನು ಕಡ್ಡಾಯವಾಗಿ ವಿಸ್ತರಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕುಗಳನ್ನು ಕೇಳಿದೆ. ಅಕ್ಟೋಬರ್ 1, 2019 ರಿಂದ, ಗೃಹ ಸಾಲ ಅಥವಾ ವಾಹನ ಸಾಲಗಳಂತಹ ಎಲ್ಲಾ ಹೊಸ ಬದಲಾಗುವ ದರದ ವೈಯಕ್ತಿಕ ಅಥವಾ ಚಿಲ್ಲರೆ ಸಾಲಗಳನ್ನು ಆರ್‌ಬಿಐ ರೆಪೊ ದರ ಬಾಹ್ಯ ಅಂಶಕ್ಕೆ ಮಾನದಂಡವಾಗಿರಿಸಲಾಗುವುದು. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ತೇಲುವ ದರ ಸಾಲಗಳನ್ನು ಕೂಡ ಇದು ಒಳಗೊಂಡಿರಲಿದೆ.

ಗೃಹ ಸಾಲ ಪಡೆಯುವವರಿಗೆ ಸಿಹಿಸುದ್ದಿ! ಅ. 1ರಿಂದ ಬಡ್ಡಿ ಮೇಲೆ ಉಳಿತಾಯ

ಆರ್‌ಎಲ್‌ಎಲ್ಆರ್ - ಎಂಸಿಎಲ್ಆರ್
ಎಸ್ಬಿಐ ರೆಪೊ-ಲಿಂಕ್ಡ್ ಲೆಂಡಿಂಗ್ ರೇಟ್(ಆರ್‌ಎಲ್‌ಎಲ್ಆರ್)ಆರಂಭಿಸಿ ಗೃಹ ಸಾಲ ನೀಡಿದ ಮೊದಲ ಬ್ಯಾಂಕ್ ಎನಿಸಿದೆ. ಜೊತೆಗೆ ಇತರ ಬ್ಯಾಂಕುಗಳು ಈಗಾಗಲೇ ಇದೇ ರೀತಿಯ ರೆಪೊ-ಲಿಂಕ್ಡ್ ಲೆಂಡಿಂಗ್ ರೇಟ್ ಸೇವೆಯವನ್ನು ಪ್ರಾರಂಭಿಸಿವೆ.

ರೆಪೊ-ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್ಆರ್) ಸೇವೆಯಿಂದಾಗಿ ಎಂಸಿಎಲ್ಆರ್ ಆಧರಿಸಿ ಇರುವ ಸಾಲಗಳಿಗೆ ಹೋಲಿಸಿದರೆ ಬಡ್ಡಿದರ ಕಡಿಮೆ ಆಗಲಿದೆ. ಹಿಂದಿನ ಮೂಲ ದರದಲ್ಲಿ ಈಗಿನ ಗೃಹ ಸಾಲ ಇಎಂಐಗಳನ್ನು ಪಾವತಿಸುತ್ತಿರುವವರಿಗೆ ಅಥವಾ ಎಂಸಿಎಲ್ಆರ್ ಆಧಾರಿತ ಸಾಲಗಳ ಪ್ರಸ್ತುತ ಅಕ್ಟೋಬರ್ 1 ರ ನಂತರ ಆರ್ಎಲ್ಎಲ್ಆರ್ ಲಿಂಕ್ಡ್ ಗೃಹ ಸಾಲಕ್ಕೆ ಬದಲಾಯಿಸಬಹುದು.

ಆರ್‌ಎಲ್‌ಎಲ್‌ಆರ್ ಗೃಹ ಸಾಲ ಉತ್ತಮ
ಅಂಕಿಅಂಶಗಳನ್ನು ಬಳಸಿಕೊಂಡು ಎಂಸಿಎಲ್ಆರ್ ಮತ್ತು ಆರ್‌ಎಲ್‌ಎಲ್‌ಆರ್ ಇವೆರಡರ ನಡುವಿನ ವ್ಯತ್ಯಾಸ ನೋಡೋಣ. ಇಎಂಐ ಹೇಗೆ ಭಿನ್ನವಾಗಿದೆ, ಎಷ್ಟು ಬಡ್ಡಿ ಹೊರೆ ಭಿನ್ನವಾಗಿರುತ್ತದೆ ಮತ್ತು ಆರ್‌ಎಲ್‌ಎಲ್‌ಆರ್ ಸಾಲಗಳಲ್ಲಿನ ಬಡ್ಡಿ ವೆಚ್ಚ ಎಷ್ಟು ಕಡಿಮೆ ಎಂದು ನೋಡೋಣ.
ಕೆಳಗಿನ ನಮ್ಮ ಉದಾಹರಣೆಯಲ್ಲಿ, ಆರ್‌ಎಲ್‌ಎಲ್‌ಆರ್ ಮತ್ತು ಎಂಸಿಎಲ್‌ಆರ್ ಗೃಹ ಸಾಲ ಎರಡರಲ್ಲೂ ಪರಿಣಾಮಕಾರಿ ಗೃಹ ಸಾಲ ಬಡ್ಡಿಯನ್ನು ಶೇಕಡಾ 8.5 ಪರಿಗಣಿಸುತ್ತೇವೆ ಮತ್ತು ಅವುಗಳ ಅವಧಿಯು ಒಂದೇ ಆಗಿರುತ್ತವೆ. ಪ್ರಾಯೋಗಿಕವಾಗಿ, ಹೊಂದಿಕೊಳ್ಳುವ ಸಾಲಗಳಾಗಿರುವುದರಿಂದ ದರಗಳು ಬದಲಾಗುತ್ತವೆ ಮತ್ತು ಸಾಮಾನ್ಯವಾಗಿ ಎಂಸಿಎಲ್ಆರ್ ಸಾಲಗಳು ಹೆಚ್ಚಿನ ಬಡ್ಡಿದರದಲ್ಲಿ ಬರುತ್ತವೆ.

Read more about: sbi interest rates money rbi banking
English summary

Good News to Home Loan Borrowers! Big savings in interest cost from October 1

The good news for home loan borrowers is finally in. The Reserve Bank of India (RBI) has asked banks to mandatorily extend loans to borrowers at an interest rate which is based on an external benchmark.
Story first published: Thursday, September 5, 2019, 17:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X