Tap to Read ➤

ಕಳೆದ ವಾರ ಕಂಪನಿಗಳ ಮೌಲ್ಯ 1.78 ಲಕ್ಷ ಕೋಟಿ ಏರಿಕೆ

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಐದು ಕಂಪನಿಗಳು ಒಟ್ಟಾರೆ,1,78,650.71 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡಿವೆ.
Mahesh Malnad
ಕಳೆದ ವಾರ ರಿಲಯನ್ಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಭಾರಿ ಲಾಭ ಗಳಿಸಿದ್ದರೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹಾಗೂ ಇನ್ಫೋಸಿಸ್ ಭಾರಿ ನಷ್ಟ ಅನುಭವಿಸಿದೆ.
ರಿಲಯನ್ಸ್ ಮೌಲ್ಯ ಕುಸಿತ
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 1,31,320.8 ಕೋಟಿ ರು ಏರಿಕೆಕೊಂಡು 17,73,889.78 ಕೋಟಿ ರು ಮೌಲ್ಯ ತಲುಪಿದ್ದು, ಅತಿ ಹೆಚ್ಚು ಲಾಭ ಗಳಿಸಿದೆ.
ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 7,153.45 ಕೋಟಿ ರು ಕಳೆದುಕೊಂಡು 12,48,998.89 ಕೋಟಿ ರು ಮೌಲ್ಯಕ್ಕೆ ಕುಸಿದಿದೆ.
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 30,814.89 ಕೋಟಿ ರು ಏರಿಕೆ ಕಂಡು 5,46,397.45 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ
ಎಚ್‌ಡಿಎಫ್‌ಸಿ ಬ್ಯಾಂಕ್ 16,515.02 ಕೋಟಿ ರು ಮೌಲ್ಯ ಇಳಿಕೆ ಕಂಡು 7,33,156.15 ಕೋಟಿ ರು ತಲುಪಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 43,743.96 ಕೋಟಿ ರು ಕಳೆದುಕೊಂಡು 12,05,254.93 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ.
ಇನ್ಫೋಸಿಸ್ 20,129.66 ಕೋಟಿ ರು ಕುಸಿತ ಕಂಡು 6,12,303.26 ಕೋಟಿ ರು ತಲುಪಿದೆ.
ಎಲ್ಐಸಿ
ಕಳೆದ ವಾರ ಷೇರುಪೇಟೆಗೆ ಎಂಟ್ರಿಕೊಟ್ಟ ಎಲ್ಐಸಿ ಹೆಚ್ಚಿನ ಸದ್ದು ಮಾಡದೆ ನಷ್ಟ ಅನುಭವಿಸಿದರೂ ಟಾಪ್ 10 ಪಟ್ಟಿಯಲ್ಲಿ 6ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯ 5,22,602.94 ಕೋಟಿ ರು ಗಳಿಸಿದೆ.
ಟಾಪ್ 10 ಕಂಪನಿಗಳು
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಲ್ಐಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಎಚ್‌ಡಿಎಫ್‌ಸಿ, ಭಾರ್ತಿ ಏರ್ ಟೆಲ್
company quotes