Tap to Read ➤

ರೆಪೋ ದರ ಮತ್ತೆ ಏರಿಕೆ; ಇಎಂಐ ಲೆಕ್ಕಾಚಾರ ಹೇಗೆ?

ಆರ್‌ಬಿಐ ರೆಪೋ ದರ ಏರಿಕೆ ಮಾಡಿದ್ದು, ಗೃಹ, ಆಟೋ, ವೈಯಕ್ತಿಕ ಸಾಲದ ಇಎಂಐ ಲೆಕ್ಕಾಚಾರ ಹೇಗೆ ಮುಂದೆ ಓದಿ...
Mahesh Malnad
ರೆಪೋ ದರ ಮತ್ತೆ ಏರಿಕೆ
ಜೂನ್ 8ರಂದು ಸುದ್ದಿಗೋಷ್ಠಿ ನಡೆಸಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಮತ್ತೊಮ್ಮೆ ರೆಪೋ ದರ ಏರಿಕೆ ಬಗ್ಗೆ ಘೋಷಿಸಿದರು. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿದೆ.
ರೆಪೋ ದರ ಏರಿಕೆ ನಂತರ ಗೃಹ ಸಾಲ, ಕಾರು ಸಾಲ ಮತ್ತಿತರ ಬಡ್ಡಿದರವನ್ನು ಬ್ಯಾಂಕ್‌ಗಳು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇಎಂಐ ಸಹ ಹೆಚ್ಚಾಗುತ್ತವೆ.
ರೆಪೋ ದರ ಎಂದರೇನು?
ವಾಣಿಜ್ಯ ಬ್ಯಾಂಕುಗಳಿಗೆ RBI ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್.

ಆರ್‌ಬಿಐನಿಂದ ಹಣ ಪಡೆಯು ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ
ಇಎಂಐ ಲೆಕ್ಕಾಚಾರ ಹೇಗೆ?
20 ವರ್ಷಗಳ ಅವಧಿಗೆ 30 ಲಕ್ಷ ರು ಗೃಹ ಸಾಲ, ಶೇ 7ರಷ್ಟು ವಾರ್ಷಿಕ ಬಡ್ಡಿ ಇದ್ದರೆ ಇಎಂಐ ಸುಮಾರು 1,648 ರು ಏರಿಕೆ, ಅಂದರೆ 23,259 ರು ಇಂದ 24,90 ರು ಏರಿಕೆ
ವಾಹನ ಮೇಲಿನ ಸಾಲ
8 ಲಕ್ಷ ರು ಗಳ ಆಟೋಮೊಬೈಲ್(ವಾಹನ) ಮೇಲಿನ ಸಾಲ, 7 ವರ್ಷಗಳ ಅವಧಿಗೆ ಬಡ್ಡಿದರ ಶೇ 10 ರಿಂದ ಶೇ 10.9ಕ್ಕೇರಲಿದೆ.

ಇಎಂಐ 375 ರು ಹೆಚ್ಚಳ; 13,281 ರು ನಿಂದ 13,656 ರು ಆಗಲಿದೆ
ವೈಯಕ್ತಿಕ ಸಾಲ
5 ಲಕ್ಷ ರು ಗಳ ಸಾಲ ಪಡೆದಿದ್ದರೆ, 5 ವರ್ಷಗಳ ಅವಧಿಗೆ ಬಡ್ಡಿದರ ಶೇ 14 ರಿಂದ ಶೇ 14.9ಕ್ಕೇರಿಕೆ.

ಇಎಂಐ 235 ರು ಅಧಿಕ; 11,634 ರು ನಿಂದ 11.869 ರು ಗೇರಲಿದೆ
EMI ಹೆಚ್ಚಿನ ಮಾಹಿತಿಗಾಗಿ