Tap to Read ➤

ಎಸ್‌ಬಿಐ ಸಾಲದ ಬಡ್ಡಿದರ ಎಷ್ಟು ಹೆಚ್ಚಳ: ಇಲ್ಲಿದೆ ವಿವರ

ಆರ್‌ಬಿಐ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಎಸ್‌ಬಿಐ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
Mayuri N
ಎಸ್‌ಬಿಐ ಸಾಲದ ಬಡ್ಡಿದರವನ್ನು 20 ಮೂಲಾಂಕ ಹೆಚ್ಚಳ ಮಾಡಿದ್ದು ಜೂನ್ 15ರಿಂದಲೇ ಈ ಬಡ್ಡಿದರ ಅನ್ವಯವಾಗಲಿದೆ.
ಎಸ್‌ಬಿಐ ಓವರ್‌ನೈಟ್, ಮಾಸಿಕ, ತ್ರೈಮಾಸಿಕ ಅವಧಿಯ ಬಡ್ಡಿದರ ಶೇ. 7.05ಕ್ಕೆ ಏರಿಕೆಯಾಗಿದ್ದು ಈ ಹಿಂದೆ ಶೇ. 6.85 ಆಗಿತ್ತು.
6 ತಿಂಗಳ ಅವಧಿ ಬಡ್ಡಿದರವು ಶೇಕಡ 7.35ಕ್ಕೆ ಏರಿಸಿದ್ದು ಈ ಹಿಂದೆ ಶೇಕಡ 7.15 ಆಗಿತ್ತು.
1 ವರ್ಷದ ಸಾಲದ ಬಡ್ಡಿದರವು ಶೇಕಡ 7.40ಕ್ಕೆ ಏರಿದೆ. ಈ ಹಿಂದೆ ಶೇಕಡ 7.20 ಆಗಿತ್ತು.
2 ವರ್ಷದ ಅವಧಿಯ ಬಡ್ಡಿದರವು ಶೇಕಡ 7.60ಗೆ ಏರಿಕೆಯಾಗಿದೆ. ಈ ಹಿಂದೆ ಶೇಕಡ 7.40 ಆಗಿತ್ತು.
3 ವರ್ಷಗಳ ಬಡ್ಡಿದರವು ಶೇಕಡ 7.70ಕ್ಕೆ ಏರಿದೆ. ಈ ಹಿಂದಿನ ಬಡ್ಡಿದರವು ಶೇಕಡ 7.50 ಆಗಿತ್ತು.
ಗೃಹ, ಕಾರು, ವೈಯಕ್ತಿಕ ಸಾಲದ ಬಡ್ಡಿದರವು ಸಿಬಿಲ್ ಸ್ಕೋರ್ ಆಧಾರದಲ್ಲಿ ಬದಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ