For Quick Alerts
ALLOW NOTIFICATIONS  
For Daily Alerts

ಪ್ರಾಪರ್ಟಿ ಕೊಳ್ಳುವ ಮೊದಲು ಈ 8 ದಾಖಲೆ ಪರಿಶೀಲಿಸಿ

|

ಯಾವುದೇ ಪ್ರಾಪರ್ಟಿ ಕೊಳ್ಳುವ ಮುಂಚೆ ನೂರು ಸಲ ಯೋಚನೆ ಮಾಡಬೇಕಾಗುತ್ತದೆ. ಇದೊಂದು ಸುಲಭ ಕೆಲಸ ಖಂಡಿತ ಅಲ್ಲ. ಸ್ನೇಹಿತರೊಂದಿಗೆ ಚರ್ಚಿಸಿ, ಕಾನೂನು ತಜ್ಞರೋ ಅಥವಾ ನಿಮ್ಮ ವಕೀಲರ ಸಹಕಾರ ಪಡೆದು ಖರೀದಿಮಾಡಬೇಕಾಗುತ್ತದೆ. ಕೊಂಚ ಎಚ್ಚರ ತಪ್ಪಿದರೂ ವಂಚನೆಗೊಳಗಾಗಬೇಕಾಗುತ್ತದೆ.

ನೀವು ಯಾವ ಬಗೆಯ ಆಸ್ತಿ ಅಥವಾ ಪ್ರಾಪರ್ಟಿ ಕೊಳ್ಳಲು ಮುಂದಾಗಿದ್ದೀರಾ? ಅಥವಾ ಆ ರೀತಿಯ ಯೋಚನೆ ಮಾಡುತ್ತಿದ್ದೀರಾ? ಈ ಡಾಕ್ಯುಮೆಂಟ್‌ಗಳನ್ನು ಕಡ್ಡಾಯವಾಗಿ ನಿಮ್ಮ ಬಳಿ ಇರಿಸಿಕೊಳ್ಳಿ...

ಮದರ್‌ ಡೀಡ್‌

ಮದರ್‌ ಡೀಡ್‌

ಯಾವುದೇ ಆಸ್ತಿ ದಶಕಗಳಿಂದ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಬದಲಾಗುತ್ತ ಬರುತ್ತಿರುತ್ತದೆ. ಮದರ್‌ ಡೀಡ್‌ ಎನ್ನುವುದು ಇಲ್ಲಿಯವರೆಗೆ ಆಸ್ತಿ ಒಡೆತನ ಹೊಂದಿದ್ದವರ ಸಂಪೂರ್ಣ ಮಾಹಿತಿ ಹೊಂದಿರುತ್ತದೆ. ಯಾವುದೇ ಆಸ್ತಿ ಕೊಳ್ಳುವ ಮೊದಲು ಈ ದಾಖಲೆ ಪರೀಕ್ಷಿಸಿಕೊಂಡು ಪಡೆದುಕೊಳ್ಳಿ

ನಿರ್ದಿಷ್ಟ ಸಂಸ್ಥೆಯಿಂದ ಅನುಮತಿ ಪತ್ರ

ನಿರ್ದಿಷ್ಟ ಸಂಸ್ಥೆಯಿಂದ ಅನುಮತಿ ಪತ್ರ

ಪ್ರಾಪರ್ಟಿ ಅಥವಾ ಅಪಾರ್ಟ್‌ಮೆಂಟ್‌ ಕೊಳ್ಳುವ ಮುನ್ನ ಅದು ಸಂಬಂಧಿಸಿದ ಸಂಸ್ಥೆಯಿಂದ ಅನುಮತಿ ಪಡೆದ ಜಾಗದಲ್ಲಿ ಕಟ್ಟಲಾಗಿದೆಯೇ ಎಂಬುದನ್ನು ಪರೀಕ್ಷಿಸಲೇಬೇಕು. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಖರೀದಿಸುವ ಮುನ್ನ ಬಿಬಿಎಂಪಿ ಅನುಮತಿ ಪಡೆದಿದ್ದಾರೆಯೇ ಎಂದು ಪರೀಕ್ಷಿಸುದು ಕಡ್ಡಾಯ.

ತಕರಾರು ಇಲ್ಲ(ಎನ್‌ಒಸಿ) ಎಂಬುದು ಅಷ್ಟೇ ಮುಖ್ಯ

ತಕರಾರು ಇಲ್ಲ(ಎನ್‌ಒಸಿ) ಎಂಬುದು ಅಷ್ಟೇ ಮುಖ್ಯ

ಮರು ಮಾರಾಟದಲ್ಲಿ ಪ್ರಾಪರ್ಟಿ ಖರೀದಿಸುತ್ತಿದ್ದರೆ ಹಿಂದಿನ ಮಾಲೀಕರಿಂದ ತಕರಾರು ಇಲ್ಲ ಎಂಬ ಪ್ರಮಾಣ ಪತ್ರ ಪಡೆಯುವುದು ಅಷ್ಟೇ ಮುಖ್ಯ.

ಎನ್‌ಕಂಬರೆನ್ಸ್‌ ಪ್ರಮಾಣ ಪತ್ರ

ಎನ್‌ಕಂಬರೆನ್ಸ್‌ ಪ್ರಮಾಣ ಪತ್ರ

ಇದು ಸಹ ಅಷ್ಟೇ ಪ್ರಮುಖ ದಾಖಲೆಯಾಗಿದ್ದು ರಿಜಿಸ್ಟರ್‌ ಕಚೇರಿಯಿಂದ ಪಡೆದಿರಬೇಕಾಗುತ್ತದೆ. ಖರೀದಿಸುತ್ತಿರುವ ಪ್ರಾಪರ್ಟಿ ಮೇಲೆ ಬೇರೆ ಯಾರಿಗೂ ಯಾವುದೇ ರೀತಿಯ ಹಕ್ಕುಗಳಿಲ್ಲ ಎಂಬುದನ್ನು ಈ ಪ್ರಮಾಣ ಪತ್ರ ದೃಢಪಡಿಸುತ್ತದೆ.

ಟೈಟಲ್‌ ಡೀಡ್‌

ಟೈಟಲ್‌ ಡೀಡ್‌

ಯಾರಿಂದ ನೀವು ಪ್ರಾಪರ್ಟಿ ಖರೀದಿಸುತ್ತಿದ್ದೀರಿ ಎಂಬುದನ್ನು ಸೂಚಿಸುವ ಪ್ರಮಾಣ ಪತ್ರ. ಹಿಂದಿನ ಮಾಲೀಕರ ಹೆಸರನ್ನು ಸ್ಪಷ್ಟವಾಗಿ ಇದು ಸೂಚಿಸುತ್ತದೆ. ಮೂಲ ಪ್ರತಿಯನ್ನು ಪರಿಶೀಲಿಸುವಂತೆ ಇದನ್ನು ಪರಿಶೀಲಿಸುವುದು ಅಷ್ಟೇ ಮುಖ್ಯ.

ತೆರಿಗೆ ಕಟ್ಟಿದ ಪಾವತಿಗಳು

ತೆರಿಗೆ ಕಟ್ಟಿದ ಪಾವತಿಗಳು

ತೆರಿಗೆ ಕಟ್ಟಿದ ಪಾವತಿಗಳನ್ನು ಪಡೆದುಕೊಳ್ಳಬೇಕು. ಮನೆ ಕೊಳ್ಳುವಾಗಲೆಂತಲೂ ಇದನ್ನು ಗಮನಿಸಲೇಬೇಕು. ತೆರಿಗೆ ಕಟ್ಟದ ಆಸ್ತಿ ಕೋಡರೆ ನೀವು ಅಪಾಯ ಮೈಮೇಲೆ ಎಳೆದುಕೊಂಡಂತೆ!

ಸುತ್ತಲಿನವರಿಂದ ನೋ ಆನ್‌ಬ್‌ಜೆಕ್ಷನ್‌ ಸರ್ಟಿಫೀಕೇಟ್

ಸುತ್ತಲಿನವರಿಂದ ನೋ ಆನ್‌ಬ್‌ಜೆಕ್ಷನ್‌ ಸರ್ಟಿಫೀಕೇಟ್

ಸಮಾಜ ಅಥವಾ ಖರೀದಿಸುತ್ತಿರುವ ಪ್ರಾಪರ್ಟಿ ಸುತ್ತಲಿನವರಿಂದ ಯಾವುದೇ ತಕರಾರು ಇಲ್ಲ ಎಂಬ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ.

ಉತ್ತಮ ವಕೀಲರನ್ನು ಜತೆ ಇರಿಸಿಕೊಳ್ಳಿ

ಉತ್ತಮ ವಕೀಲರನ್ನು ಜತೆ ಇರಿಸಿಕೊಳ್ಳಿ

ಉತ್ತಮ ವಕೀಲರೊಬ್ಬರ ಮೂಲಕ ಹೆಜ್ಜೆ ಇಡಿ. ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವಾಗ ಕಾನೂನು ಮಾರ್ಗಗಳ ಕುರಿತು ಚರ್ಚಿಸಿ ಮುಂದುವರಿಯಿರಿ.

Read more about: finance news class room
English summary

Documents you must check before buying property in India

Buying a property is never an easy proposition, because of the need to examine carefully the various documents that are involved in buying. Here are a few documents you much check before buying a property in India.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X