ಬೆಂಗಳೂರು, ಏಪ್ರಿಲ್ 25: ಜೀವನದಲ್ಲಿ ಬಂದ ಸೋಲಿಗೆ ಅಂಜದೆ ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸಿ, ಅಡೆತಡೆಗಳನ್ನು ಮೆತ್ತಿನಿಂತು ಸೂರ್ಯನಂತೆ ಬೆಳಗಿದ ವ್ಯಕ್ತಿಯ ಹಿಂದಿನ ಯಶಸ್ಸಿನ ಕಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ.
ಸ್ಕ್ರ್ಯಾಪ್ ಮೆಟಲ್ ಕಂಪನಿಯನ್ನು ಪ್ರಾರಂಭಿಸಿ ಮುಂದೆ "ಮೆಟಲ್ ಕಿಂಗ್" ಎಂದೇ ಕರೆಯಲ್ಪಡುವ ಅನಿಲ್ ಅಗರ್ವಾಲ್ ಅವರ ಗೆಲುವಿನ ಹಿಂದೆ ಹಲವಾರು ಸೋಲುಗಳ ಕಥೆಯೇ ಇದೆ. ಇಂದು ಅನಿಲ್ ಅಗರ್ವಾಲ್ ವೇದಾಂತದ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿ 1,40,000 ಕೋಟಿ ರೂ. ಮೌಲ್ಯದ ಗಣಿಗಾರಿಕೆ ಮತ್ತು ಲೋಹ ವಲಯದಲ್ಲಿ ಸಾಮ್ರಾಜ್ಯವನ್ನು ಸೃಷ್ಟಿಸಿದ ದಾರ್ಶನಿಕರಾಗಿದ್ದಾರೆ. ಮಾತ್ರವಲ್ಲ ತಮ್ಮ ಸಂಪತ್ತಿನ 75% ಯೋಗ್ಯ ಉದ್ದೇಶಗಳಿಗಾಗಿ ದಾನ ಮಾಡಲು ವಾಗ್ದಾನ ಮಾಡಿದ ಅದ್ಭುತ ಲೋಕೋಪಕಾರಿಯಾಗಿದ್ದಾರೆ.

ಪ್ರೌಢಶಾಲೆಯಿಂದ ಕಲೆಕೆಯ ನಂತರ ಅವರು ಹೆಚ್ಚಿನ ಶಿಕ್ಷಣವನ್ನು ಮುಂದುವರಿಸುವ ಬದಲು ನಂತರ ತಮ್ಮ ತಂದೆಗೆ ವ್ಯಾಪಾರದಲ್ಲಿ ಸಹಾಯ ಮಾಡಲು ನಿರ್ಧರಿಸಿದರು. ಬಳಿಕ ತಮ್ಮ 19 ನೇ ವಯಸ್ಸಿನಲ್ಲಿ ಮುಂಬೈನಲ್ಲಿ ವೃತ್ತಿ ಅವಕಾಶಗಳನ್ನು ಮುಂದುವರಿಸಲು ಪಾಟ್ನಾದಲ್ಲಿ ತನ್ನ ತಂದೆಯ ಅಲ್ಯೂಮಿನಿಯಂ ಕಂಡಕ್ಟರ್ ಉತ್ಪಾದನಾ ವ್ಯವಹಾರವನ್ನು ತೊರೆದು ತನ್ನ ವೃತ್ತಿಜೀವನದ ಪ್ರಯಾಣವನ್ನು ಪ್ರಾರಂಭಿಸಿದರು.
ಇಂದು ಬೃಹತ್ ಗಣಿ ಉದ್ಯಮಿಯಾಗಿರುವ ಅನಿಲ್ ಅವರು, 1970 ರಲ್ಲಿ, ಅಂದರೆ ತಾವು ಹದಿಹರೆಯದವರಾಗಿದ್ದಾಗ ಸ್ಕ್ರ್ಯಾಪ್ ಡೀಲರ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಲಂಡನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ವೇದಾಂತ್ ಸಂಪನ್ಮೂಲಗಳು ಜಾಗತಿಕವಾಗಿ ವೈವಿಧ್ಯಮಯ ನೈಸರ್ಗಿಕ ಸಂಪನ್ಮೂಲಗಳ ಸಮೂಹವಾಗಿದ್ದು, ಸತು, ಸೀಸ, ಬೆಳ್ಳಿ, ತಾಮ್ರ, ಕಬ್ಬಿಣದ ಅದಿರು, ಅಲ್ಯೂಮಿನಿಯಂ, ವಿದ್ಯುತ್ ಉತ್ಪಾದನೆ ಮತ್ತು ತೈಲ ಮತ್ತು ಅನಿಲದಲ್ಲಿ ಆಸಕ್ತಿ ಹೊಂದಿದೆ. ಅದರೂ ಇದರ ಆಸ್ತಿಗಳಲ್ಲಿ ಹೆಚ್ಚಿನ ಪಾಲು ಭಾರತದಲ್ಲಿದೆ.
"ನನ್ನ 20 ಮತ್ತು 30 ರ ದಶಕಗಳಲ್ಲಿ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದೆ, ಇತರರ ಯಶಸ್ವಿ ವ್ಯಕ್ತಿಗಳನ್ನು ನೋಡುತ್ತಿದ್ದಾಗ ನಾನು ಒಂದು ದಿನ ಆ ಮಟ್ತಕ್ಕೆ ಯಾವಾಗ ತಲುಪುತ್ತೇನೆ ಎಂದು ಆಶ್ಚರ್ಯ ಪಡುತ್ತಿದ್ದೆ. ಅದರಲ್ಲೂ ನಾನು ಆರಂಭಿಸಿದ ಹೊಸ ಹೊಸ ವ್ಯವಹಾರಗಳು ಒಂದೆರಡಲ್ಲ 9 ವಿಫಲತೆಯನ್ನು ಅನುಭವಿಸಿದ್ದೆ. ಜೊತೆಗೆ ಹಲವು ವರ್ಷಗಳ ಖಿನ್ನತೆಯನ್ನು ಅನುಭವಿಸಿದ್ದೆ. ಕೊನೆಗೂ ಒಂಬತ್ತು ವೈಫಲ್ಯಗಳನ್ನು ಅನುಭವಿಸಿ ಪ್ರಥಮ ಯಶಸ್ವಿ ಆರಂಭ ಹೊಂದಿದೆ" ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ".
ಇಂದು ಅವರ ನಿವ್ವಳ ಮೌಲ್ಯ 16,700 ಕೋಟಿ ರೂ. ಆಗಿದ್ದು, ಅವರ ಕಂಪನಿ ವೇದಾಂತ 1.4 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಅವರು 2003 ರಲ್ಲಿ ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ವ್ಯವಹಾರವನ್ನು ಪಟ್ಟಿ ಮಾಡಿದ ಮೊದಲ ಭಾರತೀಯರಾಗಿದ್ದರು. ಹಲವು ವೈಫಲ್ಯಗಳನ್ನು ಎದುರಿಸಿರುವ ಅವರು,ಇಂದು ವ್ಯಾಪಾರ ಸಾಮ್ರಾಜ್ಯದೊಂದಿಗೆ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿ ಬೆಳೆದುನಿಂತಿದ್ದಾರೆ. ನಿರಂತರ, ಕಠಿಣ ಪರಿಶ್ರಮ ಮತ್ತು ದೃಢನಿಶ್ಚಯದಿಂದ ಅಡೆತಡೆಗಳ ನಡುವೆಯೂ ನಮ್ಮ ಗುರಿಗಳನ್ನು ಅನುಸರಿಸುವುದು ಎಷ್ಟು ಮುಖ್ಯ ಎಂಬುದನ್ನು ಅನಿಲ್ ಅವರ ಜೀವನ ಕಥೆ ಉದಾರಣೆಯಾಗಿದೆ.


Click it and Unblock the Notifications