Tap to Read ➤

ಕಳೆದ ವಾರದಲ್ಲಿ ಯಾವ ಕಂಪನಿಗೆ ಎಷ್ಟು ಮೌಲ್ಯ ನಷ್ಟ?

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳು ಕಳೆದ ವಾರ(ಜೂನ್ 12ರ ತನಕ) ಭಾರಿ ನಷ್ಟ ಅನುಭವಿಸಿವೆ
Mahesh Malnad
ಕಳೆದ ವಾರ ಎಲ್ಲಾ ಕಂಪನಿಗಳ ಒಟ್ಟಾರೆ ನಷ್ಟದ ಮೊತ್ತ 2.29 ಟ್ರಿಲಿಯನ್ ರುಪಾಯಿ ಮೌಲ್ಯ ದಾಟಿದೆ. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..
ರಿಲಯನ್ಸ್
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 44,311.19 ಕೋಟಿ ರು ಇಳಿಕೆಕೊಂಡು 18,36,039.28 ಕೋಟಿ ರು ಮೌಲ್ಯ ತಲುಪಿದೆ
ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಹಾಗೂ ಇನ್ಫೋಸಿಸ್ ಸಂಸ್ಥೆ ಸುಮಾರು 45,746.13 ಕೋಟಿ ರು ಕುಸಿತ ಕಂಡಿವೆ.
ಟಿಸಿಎಸ್ ಮೌಲ್ಯ12,31,398.85 ಕೋಟಿ ರು ಹಾಗೂ ಇನ್ಫೋಸಿಸ್ ಮೌಲ್ಯ 6,21,502.63 ಕೋಟಿ ರು ತಲುಪಿದೆ.
ಬ್ಯಾಂಕುಗಳ ಮೌಲ್ಯ ಕುಸಿತ
ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಾದ ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕುಗಳು ಒಟ್ಟು 34,970.26 ಕೋಟಿ ರು ಮೌಲ್ಯ ಕುಸಿತ ಕಂಡಿವೆ
ಎಚ್ ಡಿ ಎಫ್ ಸಿ ಬ್ಯಾಂಕ್ 16,433.92 ಕೋಟಿ ರು ಕುಸಿತ ಕಂಡು 7,49,880.79 ಕೋಟಿ ರು ತಲುಪಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಎಸ್ ಬಿಐ 2,231.15 ಕೋಟಿ ರು ವ್ಯತ್ಯಾಸ ಕಂಡು 4,12,138.56 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕು16,305.19 ಕೋಟಿ ರು ಕಳೆದುಕೊಂಡು 5,00,744.27 ಕೋಟಿ ರು ಮುಟ್ಟಿದೆ.
ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 21,674.98 ಕೋಟಿ ರು ಕುಸಿತ ಕಂಡು 5,16,886.58 ಕೋಟಿ ರು ತಲುಪಿದೆ
ಸತತ ಕುಸಿತ
ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ದ ಮೌಲ್ಯ 57,272.85 ಕೋಟಿ ರು ಇಳಿಕೆಯಾಗಿ 4,48,885.09 ಕೋಟಿ ರು ತಲುಪಿದೆ
ಎಚ್ ಡಿ ಎಫ್ ಸಿ ಮೌಲ್ಯ 17,879.22 ಕೋಟಿ ರು ತಗ್ಗಿ 3,95,420.14 ಕೋಟಿ ರು ಆಗಿದೆ. ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ 3,95,420.14 ಕೋಟಿ ರು ಕಳೆದುಕೊಂಡು 3,69,613.44 ಕೋಟಿ ರು ಆಗಿದೆ.
ಟಾಪ್ 10 ಕಂಪನಿಗಳು
ರಿಲಯನ್ಸ್ ಇಂಡಸ್ಟ್ರೀಸ್ ಅಗ್ರಸ್ಥಾನ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಎಲ್ ಐ ಸಿ, ಎಸ್ ಬಿಐ, ಎಚ್ ಡಿ ಎಫ್ ಸಿ ಹಾಗೂ ಭಾರ್ತಿ ಏರ್ ಟೆಲ್.
ಹೆಚ್ಚಿನ ಮಾಹಿತಿಗೆ