ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳು ಕಳೆದ ವಾರ ಭಾರಿ ನಷ್ಟ ಅನುಭವಿಸಿವೆ. ಒಟ್ಟಾರೆ, 2.29 ಟ್ರಿಲಿಯನ್ ರುಪಾಯಿ ಮೌಲ್ಯ ನಷ್ಟವಾಗಿದೆ. ಅದರಲ್ಲೂ ಸರ್ಕಾರಿ ಸ್ವಾಮ್ಯದ ಜೀವ ವಿಮಾ ಸಂಸ್ಥೆ ಎಲ್ಐಸಿ ಭಾರಿ ನಷ್ಟ ಅನುಭವಿಸಿದೆ.
ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಆರ್ ಬಿಐ ರೆಪೋ ದರ ಏರಿಕೆ, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಬ್ಯಾಂಕ್ ಬಡ್ಡಿದರ ಏರಿಕೆ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಕಳೆದ ಎರಡು ವಾರದಿಂದ ರಿಲಯನ್ಸ್ ಭಾರಿ ಲಾಭ ಗಳಿಸಿತ್ತು.
ಕಳೆದ ವಾರ, ಬೆಂಚ್‌ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್1,465.79 ಪಾಯಿಂಟ್‌ಗಳು ಅಥವಾ ಶೇಕಡಾ 2.63 ಕುಸಿತ ಕಂಡಿತ್ತು. ಇದೇ ವೇಳೆ ನಿಫ್ಟಿ 382.50 ಅಥವಾ ಶೇಕಡಾ 2.31 ರಷ್ಟು ಇಳಿಕೆ ಕಂಡಿದ್ದರಿಂದ ಹೂಡಿಕೆದಾರರು ಸುರಕ್ಷತೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಯಿಂದ ಹಿಂದೆ ಸರಿಯಬೇಕಾಯುತು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ
ರಿಲಯನ್ಸ್ ಇಂಡಸ್ಟ್ರೀಸ್ ಮೌಲ್ಯ 44,311.19 ಕೋಟಿ ರು ಇಳಿಕೆಕೊಂಡು 18,36,039.28 ಕೋಟಿ ರು ಮೌಲ್ಯ ತಲುಪಿದೆ. ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಹಾಗೂ ಇನ್ಫೋಸಿಸ್ ಸಂಸ್ಥೆ ಸುಮಾರು 45,746.13 ಕೋಟಿ ರು ಕುಸಿತ ಕಂಡಿವೆ. ಟಿಸಿಎಸ್ ಮೌಲ್ಯ12,31,398.85 ಕೋಟಿ ರು ಹಾಗೂ ಇನ್ಫೋಸಿಸ್ ಮೌಲ್ಯ 6,21,502.63 ಕೋಟಿ ರು ತಲುಪಿದೆ.
ಎಚ್ ಡಿ ಎಫ್ ಸಿ ಬ್ಯಾಂಕ್
ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಾದ ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕುಗಳು ಒಟ್ಟು 34,970.26 ಕೋಟಿ ರು ಮೌಲ್ಯ ಕುಸಿತ ಕಂಡಿವೆ. ಎಚ್ ಡಿ ಎಫ್ ಸಿ ಬ್ಯಾಂಕ್ 16,433.92 ಕೋಟಿ ರು ಕುಸಿತ ಕಂಡು 7,49,880.79 ಕೋಟಿ ರು ತಲುಪಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಇದೇ ವೇಳೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) 2,231.15 ಕೋಟಿ ರು ವ್ಯತ್ಯಾಸ ಕಂಡು 4,12,138.56 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕು16,305.19 ಕೋಟಿ ರು ಕಳೆದುಕೊಂಡು 5,00,744.27 ಕೋಟಿ ರು ಮುಟ್ಟಿದೆ.
ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ
ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 21,674.98 ಕೋಟಿ ರು ಕುಸಿತ ಕಂಡು 5,16,886.58 ಕೋಟಿ ರು ತಲುಪಿದೆ. ಇದೇ ವೇಳೆ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ದ ಮೌಲ್ಯ 57,272.85 ಕೋಟಿ ರು ಇಳಿಕೆಯಾಗಿ 4,48,885.09 ಕೋಟಿ ರು ತಲುಪಿದೆ.
ಎಚ್ ಡಿ ಎಫ್ ಸಿ ಮೌಲ್ಯ
ಎಚ್ ಡಿ ಎಫ್ ಸಿ ಮೌಲ್ಯ 17,879.22 ಕೋಟಿ ರು ತಗ್ಗಿ 3,95,420.14 ಕೋಟಿ ರು ಆಗಿದೆ. ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ 3,95,420.14 ಕೋಟಿ ರು ಕಳೆದುಕೊಂಡು 3,69,613.44 ಕೋಟಿ ರು ಆಗಿದೆ.
ಟಾಪ್ 10 ಕಂಪನಿಗಳು
ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್, ಎಲ್ ಐ ಸಿ, ಎಸ್ ಬಿಐ, ಎಚ್ ಡಿ ಎಫ್ ಸಿ ಹಾಗೂ ಭಾರ್ತಿ ಏರ್ ಟೆಲ್.


Click it and Unblock the Notifications