UPI-ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ, ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಒಂದು ತ್ವರಿತ ಪಾವತಿ ವ್ಯವಸ್ಥೆ
Mahesh Malnad
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ನಿಯಂತ್ರಿಸಲ್ಪಡುವ ಈ ವ್ಯವಸ್ಥೆಯನ್ನು ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಬ್ಯಾಂಕ್ ಖಾತೆಗಳ ನಡುವೆ ತಕ್ಷಣವೇ ಹಣವನ್ನು ವರ್ಗಾಯಿಸಲು ಬಳಕೆ ಮಾಡಬಹುದು
ಒಂದು ವೇಳೆ ನೀವು ಯುಪಿಐ ಪಿನ್ ಅನ್ನು ಮರೆತಿದ್ದಿರೇ ಮಾಡುವುದು ಏನು? ಯುಪಿಐ ಪಿನ್ ಅನ್ನು ಮತ್ತೆ ಜನರೇಟ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ
UPI ಪಿನ್ ಎಂಬುದು 4 ಅಥವಾ 6 ಅಂಕಿಗಳ ಪಾಸ್‌ಕೋಡ್ ಆಗಿದೆ. ಬಳಕೆದಾರರು ಯುಪಿಐ ಅಪ್ಲಿಕೇಶನ್‌ನಲ್ಲಿ ಮೊದಲ ಬಾರಿಗೆ ನೋಂದಾಯಿಸುವಾಗ ಯುಪಿಐ ಪಿನ್ ಜನರೇಟ್ ಆಗಲಿದೆ.
ಹಣ ವರ್ಗಾವಣೆ ಮಾಡುವಾಗ ಬಳಕೆದಾರರು ಈ ಪಿನ್ ಅನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ನಿಮ್ಮ ಆಯ್ಕೆಯ ಯುಪಿಐ ಅಪ್ಲಿಕೇಶನ್ ಅನ್ನು ತೆರೆಯಿರಿ (BHIM, Google Pay, ಇತ್ಯಾದಿ)
PIN ಮರೆತರೆ ಏನು ಮಾಡಬೇಕು?
ಈ ನಿರ್ದಿಷ್ಟ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಈ ವಿಭಾಗವು ತೋರಿಸುತ್ತದೆ
ಅಪ್ಲಿಕೇಶನ್‌ನಲ್ಲಿ 'ಬ್ಯಾಂಕ್ ಖಾತೆ' ವಿಭಾಗವನ್ನು ತೆರೆಯಿರಿ.
ನೀವು ಯುಪಿಐ ಪಿನ್ ಹೊಂದಿಸಲು ಬಯಸುವ ಬ್ಯಾಂಕ್ ಖಾತೆ ಆಯ್ಕೆಮಾಡಿ
ನೀವು ಬ್ಯಾಂಕ್ ಖಾತೆಗೆ ಯುಪಿಐ ಪಿನ್ ಅನ್ನು ಎಂದಿಗೂ ಹೊಂದಿಸದಿದ್ದರೆ 'SET' ಆಯ್ಕೆ ಕಾಣಲಿದೆ
ನೋಂದಾಯಿತ ಮೊಬೈಲ್ ಸಂಖ್ಯೆಗೆ ನಿಮ್ಮ ಬ್ಯಾಂಕ್‌ನಿಂದ ಒಟಿಪಿ ಬರಲಿದೆ
ನಿಮ್ಮ ಡೆಬಿಟ್/ಎಟಿಎಂ ಕಾರ್ಡ್‌ನ 'ಕೊನೆಯ ಆರು ಅಂಕೆಗಳು' ಮತ್ತು 'ಎಕ್ಸ್‌ಪೈರಿ ಡೇಟ್' ನಮೂದಿಸಿ
ಒಟಿಪಿ ಅನ್ನು ನಮೂದಿಸಿ submit ಆಯ್ಕೆಯನ್ನು ಕ್ಲಿಕ್ ಮಾಡಿ
ನಂತರ ಯುಪಿಐ ಪಿನ್ ಜನರೇಟ್ ಆದ ಬಗ್ಗೆ ನಿಮಗೆ ಮೆಸೇಜ್ ಬರಲಿದೆ