ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ, ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಒಂದು ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ಅದು ಇಂಟರ್-ಬ್ಯಾಂಕ್ ಪೀರ್-ಟು-ಪೀರ್ (P2P) ಮತ್ತು ವ್ಯಕ್ತಿಯಿಂದ ವ್ಯಾಪಾರಿ (P2M) ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಆದರೆ ನೀವು ಯುಪಿಐ ಪಿನ್ ಅನ್ನೇ ಮರೆತುಬಿಟ್ಟಿದ್ದೀರಾ ಮುಂದೆ ಓದಿ...
ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಂದ ನಿಯಂತ್ರಿಸಲ್ಪಡುವ ಈ ವ್ಯವಸ್ಥೆಯನ್ನು ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಬ್ಯಾಂಕ್ ಖಾತೆಗಳ ನಡುವೆ ತಕ್ಷಣವೇ ಹಣವನ್ನು ವರ್ಗಾಯಿಸಲು ಬಳಕೆ ಮಾಡಬಹುದು. ಫೆಬ್ರವರಿ 2022 ರ ಹೊತ್ತಿಗೆ 452 ಕೋಟಿ (4.52 ಬಿಲಿಯನ್) ವಹಿವಾಟುಗಳನ್ನು ಯುಪಿಐನಲ್ಲಿ 304 ಬ್ಯಾಂಕ್‌ಗಳಲ್ಲಿ ನಡೆಸಲಾಗಿದೆ.
ಇದಲ್ಲದೆ, ಯುಪಿಐ ಸುರಕ್ಷಿತ ಪ್ಲಾಟ್‌ಫಾರ್ಮ್ ಆಗಿದ್ದು, ಒಬ್ಬರ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ಒದಗಿಸದೆಯೇ ಹಣ ವರ್ಗಾವಣೆ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ, ಬಳಕೆದಾರರ ಮೊಬೈಲ್ ಸಂಖ್ಯೆ ಮತ್ತು ಯುಪಿಐ ಐಡಿ ಎಂದು ಕರೆಯಲ್ಪಡುವ ವರ್ಚುವಲ್ ಪಾವತಿ ವಿಳಾಸ (VPA) ನೊಂದಿಗೆ ವರ್ಗಾವಣೆಗಳನ್ನು ಮಾಡಲಾಗುತ್ತದೆ. ಒಂದು ವೇಳೆ ನೀವು ಯುಪಿಐ ಪಿನ್ ಅನ್ನು ಮರೆತಿದ್ದಿರೇ ಮಾಡುವುದು ಏನು? ಯುಪಿಐ ಪಿನ್ ಅನ್ನು ಮತ್ತೆ ಜನರೇಟ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಯುಪಿಐ ಪಿನ್ ಎಂದರೇನು?
ಯುಪಿಐ ಪಿನ್ ಅನ್ನು ನಾವು ಜನರೇಟ್ ಮಾಡುವುದರ ಬಗ್ಗೆ ತಿಳಿಯುವುದಕ್ಕೂ ಮೊದಲು ಯುಪಿಐ ಪಿನ್ ಎಂದರೆ ಏನು ಎಂದು ತಿಳಿಯೋಣ. ಸಾಮಾನ್ಯವಾಗಿ, UPI ಪಿನ್ ಎಂಬುದು 4 ಅಥವಾ 6 ಅಂಕಿಗಳ ಪಾಸ್‌ಕೋಡ್ ಆಗಿದೆ. ಬಳಕೆದಾರರು ಯುಪಿಐ ಅಪ್ಲಿಕೇಶನ್‌ನಲ್ಲಿ ಮೊದಲ ಬಾರಿಗೆ ನೋಂದಾಯಿಸುವಾಗ ಯುಪಿಐ ಪಿನ್ ಜನರೇಟ್ ಆಗಲಿದೆ. ಹಣ ವರ್ಗಾವಣೆ ಮಾಡುವಾಗ ಬಳಕೆದಾರರು ಈ ಪಿನ್ ಅನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದಲ್ಲದೆ, ಎಲ್ಲಾ ಬ್ಯಾಂಕ್ ವಹಿವಾಟುಗಳನ್ನು ಆನ್‌ಲೈನ್ ಮೂಲಕ ನಡೆಸುವಾಗ ಈ ಯುಪಿಐ ಪಿನ್ ಅಗತ್ಯವಾಗಿದೆ. ಆದರೆ ಬಳಕೆದಾರರು ಈ ಪಿನ್ ಅನ್ನು ಅನಧಿಕೃತ ಮೂಲಗಳಿಗೆ ಹಾಗೂ ಎಲ್ಲಾ ಸಂದರ್ಭದಲ್ಲಿ ಹಂಚಿಕೊಳ್ಳಬಾರದು.
ಯುಪಿಐ ಪಿನ್ ರಚಿಸುವುದು ಹೇಗೆ?
ಯುಪಿಐ ಅನ್ನು ಪಾವತಿ ರೂಪದಲ್ಲಿ ಬಳಕೆ ಮಾಡಲು ಬಳಕೆದಾರರು ಬ್ಯಾಂಕ್‌ನಲ್ಲಿ ಸೇವೆಗೆ ಸೈನ್-ಅಪ್ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ನಿಮ್ಮ ನಿರ್ದಿಷ್ಟ ಬ್ಯಾಂಕ್‌ನ ಮೊಬೈಲ್/ನೆಟ್-ಬ್ಯಾಂಕಿಂಗ್‌ನಲ್ಲಿ ಮಾಡಬಹುದು.
* ನಿಮ್ಮ ಆಯ್ಕೆಯ ಯುಪಿಐ ಅಪ್ಲಿಕೇಶನ್ ಅನ್ನು ತೆರೆಯಿರಿ (BHIM, Google Pay, ಇತ್ಯಾದಿ)
* ಅಪ್ಲಿಕೇಶನ್‌ನಲ್ಲಿ 'ಬ್ಯಾಂಕ್ ಖಾತೆ' ವಿಭಾಗವನ್ನು ತೆರೆಯಿರಿ. ಈ ನಿರ್ದಿಷ್ಟ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಈ ವಿಭಾಗವು ತೋರಿಸುತ್ತದೆ
* ನೀವು ಯುಪಿಐ ಪಿನ್ ಹೊಂದಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ. ನೀವು ಬ್ಯಾಂಕ್ ಖಾತೆಗೆ ಯುಪಿಐ ಪಿನ್ ಅನ್ನು ಎಂದಿಗೂ ಹೊಂದಿಸದಿದ್ದರೆ ನೀವು 'SET' ಆಯ್ಕೆ ಕಾಣಲಿದೆ
* ನಿಮ್ಮ ಡೆಬಿಟ್/ಎಟಿಎಂ ಕಾರ್ಡ್‌ನ 'ಕೊನೆಯ ಆರು ಅಂಕೆಗಳು' ಮತ್ತು 'ಎಕ್ಸ್‌ಪೈರಿ ಡೇಟ್' ಅನ್ನು ನಮೂದಿಸಿ
* ನೋಂದಾಯಿತ ಮೊಬೈಲ್ ಸಂಖ್ಯೆಗೆ ನಿಮ್ಮ ಬ್ಯಾಂಕ್‌ನಿಂದ ಒಟಿಪಿ ಬರಲಿದೆ
* ಒಟಿಪಿ ಅನ್ನು ನಮೂದಿಸಿ submit ಆಯ್ಕೆಯನ್ನು ಕ್ಲಿಕ್ ಮಾಡಿ
* ಇದರ ನಂತರ ಯುಪಿಐ ಪಿನ್ ಜನರೇಟ್ ಆದ ಬಗ್ಗೆ ನಿಮಗೆ ಮೆಸೇಜ್ ಬರಲಿದೆ, ಇಲ್ಲಿಗೆ ಪ್ರಕ್ರಿಯೆ ಅಂತ್ಯವಾಗಲಿದೆ
* ಇದಾದ ನಂತರ ನೀವು ಹಣವನ್ನು ಕಳುಹಿಸಬಹುದು

ಯುಪಿಐ ಪಿನ್ ಬಳಸಿ ಹಣ ಕಳುಹಿಸುವುದು ಹೇಗೆ?
ಹಂತ 1- ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ UPI ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ
ಹಂತ 2 - 'Send Money' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3 - ಫಲಾನುಭವಿಯ UPI ID ಅನ್ನು ನಮೂದಿಸಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಿ
ಹಂತ 5 - ನೀವು ಕಳುಹಿಸಲು ಬಯಸುವ ಮೊತ್ತವನ್ನು ನಮೂದಿಸಿ
ಹಂತ 6- ದೃಢೀಕರಣದ ಮೇಲೆ ಕ್ಲಿಕ್ ಮಾಡಿ, ಯುಪಿಐ ಪಿನ್ ನಮೂದಿಸಿ, ವಹಿವಾಟು ಪೂರ್ಣ ಮಾಡಿ
ಹಂತ 7 - ನೀವು ಮತ್ತು ಸ್ವೀಕರಿಸುವವರಿಗೆ ಈ ಬಗ್ಗೆ ಮೆಸೇಜ್ ಬರಲಿದೆ


Click it and Unblock the Notifications