For Quick Alerts
ALLOW NOTIFICATIONS  
For Daily Alerts

ಸ್ವಚ್ಛಭಾರತ ಸೆಸ್ ಎಂದರೇನು? ಯಾವುದರ ಬೆಲೆ ಏರಿಕೆ?

By Mahesh
|

ಬೆಂಗಳೂರು, ನ.16: ಸೇವಾ ಆಧಾರಿತ ಕ್ಷೇತ್ರಗಳ ಮೇಲೆ ವಿಧಿಸಲಾಗುವ ಸೇವಾ ತೆರಿಗೆ ಜೊತೆಗೆ ವಿತ್ತ ಕಾಯ್ದೆ 2015ರ ನಾಲ್ಕನೇ ಅಧ್ಯಾಯದ ಪ್ರಕಾರ ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ) ಹಾಕಲಾಗುತ್ತಿದೆ. 2015-16ನೇ ಸಾಲಿನ ಬಜೆಟ್‌ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಘೋಷಿಸಿದಂತೆ ಅಗತ್ಯವಾದಲ್ಲಿ ‘ಎಲ್ಲಾ ಅಥವಾ ನಿರ್ದಿಷ್ಟ ಸೇವೆಗಳಿಗೆ' ಮೇಲ್ತೆರಿಗೆ (ಸೆಸ್) ವಿಧಿಸಲಾಗುತ್ತದೆ.

ಹೀಗಾಗಿ ತೆರಿಗೆ ಕಟ್ಟಬೇಕಾದ ಸೇವೆಗಳ ಮೇಲೆ ಸ್ವಚ್ಛ ಭಾರತ ಯೋಜನೆಯ ಅಂಗವಾಗಿ ಶೇ.0.5 ಮೇಲ್ತೆರಿಗೆ (ಸೆಸ್) ಯನ್ನು ಕೇಂದ್ರ ಸರಕಾರ ವಿಧಿಸಿದೆ. ನವೆಂಬರ್ 15ರಿಂದ ಈ ಸೆಸ್ ಜಾರಿಗೆ ಬಂದಿದೆ.

ನವೆಂಬರ್ 15ಕ್ಕಿಂತ ಮೊದಲು ಹಣ ಪಡೆದಿರುವ ಹಾಗೂ ನ.29ಕ್ಕಿಂತ ಮೊದಲು ಸರಕುಪಟ್ಟಿ (ಇನ್‌ವಾಯ್ಸ್) ಸಿದ್ಧಪಡಿಸಲಾದ ಸೇವೆಗಳಿಗೆ ಸ್ವಚ್ಛಭಾರತ ತೆರಿಗೆ ಅನ್ವಯವಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಆದಾಯದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಸೇವಾ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಜೇಟ್ಲಿ ಅವರು ಸೇವಾ ತೆರಿಗೆಯನ್ನು ಶೇ 12ರಿಂದ ಶೇ 14ರಷ್ಟು ಹೆಚ್ಚಳ ಮಾಡಿದರು. ಇದರಿಂದ ಹೋಟೆಲ್ ಊಟ ಸೇರಿದಂತೆ ಅನೇಕ ಪದಾರ್ಥಗಳ ಬೆಲೆ ಏರಿಕೆಯಾಗಿತ್ತು.

ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ) ಲೆಕ್ಕಾಚಾರ ಹೇಗೆ?

ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ) ಲೆಕ್ಕಾಚಾರ ಹೇಗೆ?

ಸೇವಾ ತೆರಿಗೆ ಲೆಕ್ಕಾಚಾರದಂತೆ ಸ್ವಚ್ಛ ಭಾರತ್ ಸೆಸ್ (ಎಸ್ ಬಿಸಿ) ಕೂಡಾ ಲೆಕ್ಕ ಹಾಕಲಾಗುತ್ತದೆ. ಹೀಗಾಗಿ, ಎಲ್ಲ ತೆರಿಗೆ ಯೋಗ್ಯ ಸೇವೆಗಳ ಸೇವಾತೆರಿಗೆ ದರವು ಶೇ.14ರಿಂದ ಶೇ.14.5ಕ್ಕೆ ಏರಿಕೆಯಾಗಲಿದೆ.ಎಸ್ ಬಿಸಿ ಎಂಬುದು ಸೇವಾ ತೆರಿಗೆ ಮೇಲಿನ ಸೆಸ್ ಅಲ್ಲ ಬದಲಿಗೆ ಪ್ರತ್ಯೇಕ ಸೆಸ್ ಆಗಿದೆ.

ಸೇವಾತೆರಿಗೆ ದರ ಎಷ್ಟು?

ಸೇವಾತೆರಿಗೆ ದರ ಎಷ್ಟು?

ಹೊಟೇಲ್-ರೆಸ್ಟೋರಂಟ್ ನಲ್ಲಿನ ತಿಂಡಿ ದರ, ಪಾನೀಯ ದರ, ಏರ್ ಕಂಡಿಷನಿಂಗ್ ಮೇಲಿನ ತೆರಿಗೆ ಎಲ್ಲದರ ಜೊತೆಗೆ ಶೇ 0.5 ಹೆಚ್ಚುವರಿ ಸೆಸ್ ಕಟ್ಟಬೇಕಾಗುತ್ತದೆ. ಶೇ. 0.5 ಸ್ವಚ್ಛಭಾರತ ಸೆಸ್ ಹೇರಿಕೆಯಿಂದಾಗಿ ರೆಸ್ಟೋರೆಂಟ್-ಹೋಟೆಲ್ ಬಿಲ್ ಗಳ ಸೇವಾತೆರಿಗೆ ದರವು ಶೇ. 5.6ರಿಂದ ಶೇ.5.8ಕ್ಕೇರಲಿದೆ.

ಎಲ್ಲೆಲ್ಲಿ ಜಾರಿಯಾಗಲಿದೆ?

ಎಲ್ಲೆಲ್ಲಿ ಜಾರಿಯಾಗಲಿದೆ?

ಹೋಟೆಲ್-ರೆಸ್ಟೋರಂಟ್, ದೂರಸಂಪರ್ಕ (ಮೊಬೈಲ್ ಹಾಗೂ ಟೆಲಿಫೋನ್) ಹಾಗೂ ಪ್ರಯಾಣ ದರಗಳು ಹೀಗೆ ಸೇವಾ ಆಧಾರಿತ ಕ್ಷೇತ್ರದಿಂದ ಪಡೆಯುವ ಪ್ರಯೋಜನದ ಮೇಲೆ ಸೆಸ್ ಜಾರಿಯಾಗಲಿದೆ. ತೆರಿಗೆ ವಿನಾಯತಿ ಪಡೆದ ಅಥವಾ ಸೇವಾ ತೆರಿಗೆ ಒಳಪಡದ ಕ್ಷೇತ್ರಗಳಲ್ಲಿ ಮಾತ್ರ ಈ ಹೆಚ್ಚುವರಿ ಸೆಸ್ ನಿಂದ ವಿನಾಯತಿ ಸಿಗಲಿದೆ.

ಸರ್ಕಾರದ ನಿರೀಕ್ಷೆ ಏನು?

ಸರ್ಕಾರದ ನಿರೀಕ್ಷೆ ಏನು?

ಸ್ವಚ್ಛ ಭಾರತ ಮೇಲ್ತೆರಿಗೆಯಿಂದಾಗಿ ಸಂಗ್ರಹವಾಗುವ ಆದಾಯವು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ಆರ್ಥಿಕ ನಿಧಿಯಾಗಿ ಬಳಸಿಕೊಳ್ಳಲಾಗುವುದು.2016ರ ಮಾ.31ರ ವರೆಗಿನ ಪ್ರಸಕ್ತ ವಿತ್ತ ವರ್ಷದ ಉಳಿದ ಭಾಗದಲ್ಲಿ ಈ ತೆರಿಗೆಯು ಬೊಕ್ಕಸಕ್ಕೆ ಸುಮಾರು 3800 ಕೋಟಿ ರೂ.ಗಳನ್ನು ತಂದುಕೊಡುವ ನಿರೀಕ್ಷೆಯಿದೆ. (ಗುಡ್ ರಿಟರ್ನ್ಸ್.ಇನ್)

English summary

What Is Swachh Bharat Cess (SBC)? Where Is It Applicable?

It is a type of Cess which will be levied and collected in accordance with the provisions of Chapter VI of the Finance Act, 2015, called Swachh Bharat Cess (SBC).Swachh Bharat Cess will be applicable on services which are provided on or after 15th Nov, 2015.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X