ಚಿನ್ನ ಆಮದು ಸುಂಕ ಏರಿಕೆ, ಬೆಲೆ ಹೆಚ್ಚಳ ನಿರೀಕ್ಷೆ?

ಚಿನ್ನ ಆಮದು ಸುಂಕ ಏರಿಕೆ, ಬೆಲೆ ಹೆಚ್ಚಳ ನಿರೀಕ್ಷೆ?
ಬೆಂಗಳೂರು, ಜೂ.6: ಚಿನ್ನ ಆಮದು ಪ್ರಮಾಣ ತಗ್ಗಿಸಿ ವಿದೇಶಿ ವಿನಿಮಯ ಸಂಗ್ರಹದ ಮೇಲಿನ ಹೊರೆ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಚಿನ್ನ ಹಾಗೂ ಪ್ಲಾಟೀನಂ ಆಮದು ಸುಂಕವನ್ನು ಶೇ 2 ರಷ್ಟು ಏರಿಕೆ ಮಾಡಿ ಬುಧವಾರ(ಜೂ.5) ತಡ ರಾತ್ರಿ ಆದೇಶ ಹೊರಡಿಸಿದೆ.

ಕಳೆದ ಬಜೆಟ್ ನಲ್ಲಿ ಚಿನ್ನದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದ್ದ ಕೇಂದ್ರ ಸರ್ಕಾರ ಇದೀಗ ಚಿನ್ನದ ಆಮದು ಮೇಲಿನ ಸುಂಕವನ್ನು ಏರಿಕೆ ಮಾಡಿದೆ. ಶೇ 6ರಷ್ಟಿದ್ದ ಚಿನ್ನದ ಆಮದು ಸುಂಕ ಈಗ ಶೇ 8ಕ್ಕೆ ಹೆಚ್ಚಿದೆ. ಪರಿಣಾಮ ಚಿನ್ನದ ಬೆಲೆ ಕೆಲವು ವಾರಗಳಲ್ಲಿ ಕನಿಷ್ಠ ರು 500-700 ರಷ್ಟಾದರೂ ಹೆಚ್ಚಬಹುದು ಎಂಬುದು ಚಿನಿವಾರ ಪೇಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚಿನ್ನದ ಆಮದು ದರ ಏರಿಕೆ ಜೊತೆಗೆ ಚಿನ್ನದಾಭರಣ ತಯಾರಿಕೆಗೆ ಬಳಸುವ ಅದಿರು ಹಾಗೂ ಇನ್ನಿತರೆ ಕಚ್ಚಾವಸ್ತುಗಳ ಸುಂಕವನ್ನು ಶೇ 6ಕ್ಕೇರಿಸಲಾಗಿದೆ.

ಸುಂಕ ಹೆಚ್ಚಳ ಮುಂದೇನು? : ಚಿನ್ನದ ವ್ಯಾಪಾರಿಗಳಿಗೆ ಇದು ಹೊರೆಯಾಗಲಿದೆ. ಚಿನ್ನ ಆಮದು ಮಾಡಿಕೊಳ್ಳಲು ಹೆಚ್ಚು ಬಂಡವಾಳ ತೊಡಗಿಸಬೇಕಾಗುತ್ತದೆ. ಚಿನ್ನದ ಆಮದು ಸುಂಕ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಇನ್ನೊಂದೆಡೆ ಬಂಗಾರದ ಕಳ್ಳಸಾಗಣೆ ಚಟುವಟಿಕೆ ಹೆಚ್ಚಲು ಕಾರಣವಾಗಲಿದೆ ಎಂಬ ಮಾತು ಕೇಳಿ ಬಂದಿದೆ.

ಭಾರತ ಹಾಗೂ ಚೀನಾದಲ್ಲಿ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಆಭರಣ ಬೇಡಿಕೆ ಪ್ರಮಾಣ ಶೇ 15 ಹಾಗೂ ಶೇ 19 ರಷ್ಟು ಏರಿಕೆ ಕಂಡಿದೆ. ಭಾರತದಲ್ಲಿ 6 ತಿಂಗಳಲ್ಲಿ ಎರಡನೇ ಬಾರಿಗೆ ಸುಂಕ ಹೆಚ್ಚಳ ಕಾಣುತ್ತಿದೆ. ಮೇ ತಿಂಗಳಿನಲ್ಲಿ 162 ಟನ್ ಗಳಷ್ಟು ಆಮದು ಚಿನ್ನ ಸಂಗ್ರಹವಾಗಿದ್ದು ಸರ್ಕಾರದ ತಲೆನೋವಿಗೆ ಮುಖ್ಯ ಕಾರಣವಾಗಿದೆ. [ಚಿನ್ನದ ಮೇಲೆ ಹೂಡಿಕೆಗೆ ಇದು ಸಕಾಲವೇ?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+