For Quick Alerts
ALLOW NOTIFICATIONS  
For Daily Alerts

ಕೆಫೆ ಕಾಫಿ ಡೇ ಷೇರು ಖರೀದಿ ಮಾಡಬಹುದೆ?

|

ಕೆಫೆ ಕಾಫಿ ಡೇ ಷೇರುಗಳು ಅಧಿಕೃತವಾಗಿ ಮಾರುಕಟ್ಟೆಗೆ ಕಾಲಿಟ್ಟಿವೆ. 1996 ರಲ್ಲಿ ಬೆಂಗಳೂರಿನ ಬ್ರೀಗೇಡ್ ರಸ್ತೆಯಲ್ಲಿ ಆರಂಭವಾದ ಮಳಿಗೆಯ ವ್ಯವಹಾರ ಇಂದು ಷೇರು ಮಾರುಕಟ್ಟೆವರೆಗೆ ಬಂದು ನಿಂತಿದೆ. ಇಂದು ಸಮಾರು 1500 ಔಟ್ ಲೇಟ್ ಗಳು ಕಾರ್ಯನಿರ್ವಹಿಸುತ್ತಿವೆ.[ಡಿಮಾಟ್ ಖಾತೆಗೂ ಮುನ್ನ ಈ 6 ಅಂಶ ತಿಳಿದುಕೊಂಡಿರಬೇಕು]

ಕೆಫೆ ಕಾಫಿ ಡೇ ಐಪಿಒ ವಿವರಗಳು
* ಮಾರುಕಟ್ಟೆ ಪ್ರವೇಶ ಮತ್ತು ಖರೀದಿ ಅವಕಾಶ: 14 ಅಕ್ಟೋಬರ್ ನಿಂದ 16 ಅಕ್ಟೋಬರ್ 2015
* ಶೇ. 100 ಬುಕ್ ಬಿಲ್ಟ್ ಇಶ್ಶು
* ಮುಖಬೆಲೆ: 10 ರು. ಒಂದು ಷೇರಿಗೆ
* ದರ: 316 ರಿಂದ 328 ಪ್ರತಿ ಷೇರಿಗೆ ಬಿಡ್ ಮಾಡಬಹುದು
* ಲಾಟ್: 45 ಷೇರುಗಳ ಗುಚ್ಛ
* ಕನಿಷ್ಠ ಖರೀದಿ: 45 ಷೇರುಗಳು
* ಲೀಸ್ಟಿಂಗ್: ಬಿಎಸ್ ಸಿ ಮತ್ತು ಎನ್ ಎಸ್ ಸಿ
* ಕಂಪನಿ ಪ್ರಮೋಟರ್ಸ್: ವಿ ಜಿ ಸಿದ್ದಾರ್ಥ(ಅವರ ಬಳಿ 63,945 904 ರು. ಮೊತ್ತದ ಈಕ್ವಿಟಿ ಷೇರುಗಳಿದೆ)

ಕೆಫೆ ಕಾಫಿ ಡೇ ಷೇರು ಖರೀದಿ ಮಾಡಬಹುದೆ?

ಕಂಪನಿ ಮತ್ತು ಐಪಿಒದ ಬಗ್ಗೆ ತಿಳಿದುಕೊಳ್ಳಲೇಬೇಕಾದ 6 ಅಂಶಗಳು

* ಕಂಪನಿ ತನ್ನ ಬಂಡವಾಳವನ್ನು 1,150 ಕೋಟಿ ರು. ಗೆ ಏರಿಕೆ ಮಾಡುವ ಗುರಿಯೊಂದಿಗೆ ಮಾರುಕಟ್ಟೆ ಪ್ರವೇಶ ಮಾಡಿದೆ.[ಭಾರತದಲ್ಲಿ ಡಿಮಾಟ್ ಖಾತೆ ತೆರೆಯುವುದು ಕಡ್ಡಾಯವೇ?]

* ಎಕ್ಸಿಸ್ ಬ್ಯಾಂಕ್ , ಎಡಲ್ ವೈಸಸ್ ಫೈಮಾಶ್ಶಿಯಲ್ ಸರ್ವೀಸ್ ಮತ್ತು ಯೆಸ್ ಬ್ಯಾಂಕ್ ಬುಕ್ ರನಿಂಗ್ ಲೀಡ್ ಮ್ಯಾಮೆಜರ್ಸ್ ಗಳಾಗಿ ಕೆಲಸ ಮಾಡುತ್ತಿವೆ.
* ಷೇರುಗಳನ್ನು ಹೊರತು ಪಡಿಸಿ 15 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಾಣಿಕೆ ಮಾಡಿಕೊಳ್ಳಲು ಕಂಪನಿ ನಿರ್ಧಾರ ಮಾಡಿದೆ.

* 632 ಕೋಟಿ ರು. ಮೊತ್ತವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡಲಿದೆ. ರೋಸ್ಟಿಂಗ್ ವ್ಯವಸ್ಥೆ ಮತ್ತು ವೆಂಡಿಗ್ ಮಶಿನ್ ಗಳ ಮೇಲೂ ಹಣ ಹೂಡಿಕೆ ಮಾಡಲಿದೆ.

* ಕಳೆದ ಮೂರು ವರ್ಷಗಳಲ್ಲಿ ವಾರ್ಷಿಕವಾಗಿ ಅವಲೋಕನ ಮಾಡಿದರೆ ಕಂಪನಿ ಕೊಂಚ ನಷ್ಟದಲ್ಲಿಯೇ ಇದೆ.
* ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೆಕಣಿ, ಹೂಡಿಕೆದಾರ ರಾಜೇಶ್ ಜುಂಜುನ್ ವಾಲಾ ಸಹ ಕೆಫೆ ಕಾಫಿ ಡೇ ಯಲ್ಲಿ ಹೂಡಿಕೆ ಮಾಡಿದ್ದಾರೆ.

ಕೆಫೆ ಕಾಫಿ ಡೇ ಯೊಂದಿಗೆ ನೀವು ಹೆಜ್ಜೆ ಹಾಕಬಹುದೆ?

ಮೂಲಭೂತವಾಗಿ ಹೇಳಬೇಕು ಎಂದರೆ ಕಂಪನಿ ಕಳೆದ ಕೆಲ ವರ್ಷಗಳಲ್ಲಿ ನಷ್ಟದಲ್ಲಿಯೇ ಇದೆ. ಇದೇ ತೆರನಾದ ಪರಿಸ್ಥಿತಿ ಅನುಭವಿಸಿದ್ದ ಜುಬ್ಲೈಂಟ್ ಫುಡ್ ವರ್ಕ್ಸ್ ಇದೀಗ ಡೊಮಿನೋಸ್ ಪಿಜ್ಜಾ ಮೂಲಕ ಲಾಭದ ಹಾದಿಗೆ ಮರಳಿದೆ.

ಆದರೆ ಇಂಥ ಹೋಲಿಕೆಯನ್ನು ಇಂದಿನ ಮಾರುಕಟ್ಟೆ ಆಧರಿಸಿ ಹೇಳಲು ಸಾಧ್ಯವಿಲ್ಲ. ಜನರು ಯಾವ ಬಗೆಯ ಕ್ರೇಜ್ ತೋರಿಸಲಿದ್ದಾರೆ ಎಂಬುದರ ಮೇಲೂ ಷೇರಿನ ದರ ಏರಿಕೆ ನಿರ್ಧಾರವಾಗಬಹುದು.(ಗುಡ್ ರಿಟರ್ನ್ಸ್.ಇನ್)

English summary

Cafe Coffee Day IPO: Should You Subscribe?

Coffee Day Enterprises, which is more popular known under the brand "Cafe Cofee Day" or CCD, is the parent company of the Coffee Day Group. The first branch of Cafe Coffee Day opened in 1996 on Brigade Road in Bangalore. From then, it has nearly 1,500 outlets and dominates the business with a market share of 46 per cent.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X