For Quick Alerts
ALLOW NOTIFICATIONS  
For Daily Alerts

PMGKY ಅಡಿಯಲ್ಲಿ ಲೆಕ್ಕಕ್ಕೆ ಸಿಗದ ನಗದು ಘೋಷಣೆಗೆ ಅವಕಾಶ

ಹೊಸ ತೆರಿಗೆ ಕ್ಷಮಾದಾನ ಯೋಜನೆ ಅಡಿಯಲ್ಲಿ ಲೆಕ್ಕಕ್ಕೆ ಸಿಗದ ನಗದು ಬಹಿರಂಗಪಡಿಸಲು ಎರಡು ಪುಟಗಳ ಫಾರ್ಮ್ ತುಂಬಿ ಆದಾಯದ ಮೂಲವನ್ನು ಘೋಷಿಸಬಹುದು.

By Siddu
|

ಹೊಸ ತೆರಿಗೆ ಕ್ಷಮಾದಾನ ಯೋಜನೆ ಅಡಿಯಲ್ಲಿ ಲೆಕ್ಕಕ್ಕೆ ಸಿಗದ ನಗದು ಬಹಿರಂಗಪಡಿಸಲು ಎರಡು ಪುಟಗಳ ಫಾರ್ಮ್ ತುಂಬಿ ಆದಾಯದ ಮೂಲವನ್ನು ಘೋಷಿಸಬಹುದು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಲೆಕ್ಕಕ್ಕೆ ಸಿಗದ ನಗದಿನ ಆದಾಯದ ಮೂಲಗಳನ್ನು ಬಹಿರಂಗಪಡಿಸಲು ಅವಕಾಶ ಕಲ್ಪಿಸಲಾಗಿದೆ. ಹಳೆ ರೂ. 500, 1000 ನೋಟುಗಳನ್ನು ಬ್ಯಾಂಕು ಅಥವಾ ಅಂಚೆ ಕಚೇರಿ ಖಾತೆಗಳಲ್ಲಿ ಠೇವಣಿ ಇಡುವಾಗ ಫಾರ್ಮ್ ನಲ್ಲಿರುವ ವಿವರಗಳನ್ನು ತುಂಬಬೇಕು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (PMGKY) ನಿಯಮ 2016ರ ಅನ್ವಯ ವಿಳಾಸ, ಫೋನ್ ನಂಬರ್, ಇ-ಮೇಲ್, ಪಾನ್ ನಂಬರ್ ವಿವರಗಳನ್ನು ಆದಾಯ ಘೋಷಿಸುವವರು ಭರ್ತಿ ಮಾಡಬೇಕು.

PMGKY ಅಡಿಯಲ್ಲಿ ಲೆಕ್ಕಕ್ಕೆ ಸಿಗದ ನಗದು ಘೋಷಣೆಗೆ ಅವಕಾಶ

PMGKY 2016ರ ನಿಯಮಗಳು
1. ಹಳೆ ರೂ. 500, 1000 ಮುಖಬೆಲೆಯ ನೋಟುಗಳನ್ನು 5,000ಕ್ಕಿಂತ ಹೆಚ್ಚು ಮೊತ್ತ ಒಮ್ಮೆ ಮಾತ್ರ ಒಂದು ಖಾತೆಗೆ ಜಮಾವಣೆಗೆ ಅವಕಾಶ
2. ಇಲ್ಲಿಯವರೆಗೆ ಜಮೆ ಮಾಡದಿರುವ ಬಗ್ಗೆ ಬ್ಯಾಂಕಿನ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ವಿವರಣೆ ನೀಡಬೇಕು.
3. ಠೇವಣಿದಾರರಿಂದ ವಿವರಣೆ ಪಡೆಯುವಾಗ ಕನಿಷ್ಠ ಇಬ್ಬರು ಅಧಿಕಾರಿಗಳು ಉಪಸ್ಥಿತರಿದ್ದು, ವಿವರಣೆಯನ್ನು ದಾಖಲಿಸಿಕೊಳ್ಳುವರು.
4. ರೂ. 5,000ಕ್ಕಿಂತ ಕಡಿಮೆ ಮೊತ್ತ ಜಮಾ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ.
5. ಖಾತೆದಾರರ ಅನುಮತಿ ಪತ್ರ, ಗುರುತಿನ ಚೀಟಿ ಒದಗಿಸಿದರೆ ಬೇರೆಯವರ ಖಾತೆಗೂ ಹಳೆ ನೋಟು ಜಮೆಗೆ ಅವಕಾಶ.
6. ಕೆವೈಸಿ ಇಲ್ಲದಿರುವ ಖಾತೆಗಳಿಗೆ ರೂ. 5,000ಕ್ಕಿಂತ ಹೆಚ್ಚಿನ ಮೊತ್ತ ಜಮಾ ಮಾಡುವಂತಿಲ್ಲ.

PMGKY ಅಡಿಯಲ್ಲಿ ಲೆಕ್ಕಕ್ಕೆ ಸಿಗದ ನಗದು ಘೋಷಣೆಗೆ ಅವಕಾಶ

Read more about: money bank narendra modi black money
English summary

Simple Form To Be Filled For Declarations Under PMGKY

A simple two-page form is all that needs to be filled for declaring unaccounted cash under the new tax evasion amnesty scheme which does not require one to reveal the source of such income.
Story first published: Tuesday, December 20, 2016, 15:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X