
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬ್ಯಾಂಕುಗಳಿಗೆ ಇ ಪಾವತಿ ಸೌಲಭ್ಯ ಒದಗಿಸಲು ಮಾನ್ಯತೆ ನೀಡಿದೆ. ಈ ರೀತಿ 29 ಬ್ಯಾಂಕುಗಳ ಪಟ್ಟಿ ಇಲ್ಲಿದೆ. ಈ ಬ್ಯಾಂಕ್ ಗಳಲ್ಲಿ ನೀವು ಇ ಪಾವತಿ ಮಾಡಬಹುದು. ವೆಬ್ ಸೈಟ್ ಗಳು ಹಾಗೂ ಐಟಿ ರಿಟರ್ನ್ಸ್ ಗೆ ತಗುಲುವ ವೆಚ್ಚಗಳ ವಿವರಗಳನ್ನು ಇಲ್ಲಿ ನೋಡಿ
ಆನ್ ಲೈನ್ ಮೂಲಕ ಇರಲಿ, ಅಥವಾ ಕಚೇರಿಗೆ ನೇರ ಹೋಗಿ ತೆರಿಗೆ ಕಟ್ಟುವುದಿರಲಿ ಕೆಲವು ಕಡ್ಡಾಯವಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆಗಳ ವಿವರ ಇಲ್ಲಿದೆ
ಆನ್ ಲೈನ್ ಮೂಲಕ ತೆರಿಗೆ ಪಾವತಿಯಿಂದ ಅನೇಕ ಅನುಕೂಲಗಳಿದೆ ಏನು ಅನುಕೂಲ? ಆನ್ ಲೈನ್ ಮೂಲಕ ಪಾವತಿ ಮಾಡುವುದು ಎಷ್ಟು ಸುರಕ್ಷಿತ? ಇ ಪಾವತಿಯ ಬಗ್ಗೆ ಇರುವ ನಂಬಿಕೆಗಳು ನೈಜತೆ ಏನು ಎಂಬುದರ ವಿವರ ಇಲ್ಲಿದೆ.
ವೆಬ್ ಸೈಟ್ ಮೂಲಕ ಪಾವತಿ ಮಾಡಲು ಬೇಕಾದ ಸೌಲಭ್ಯಗಳು:
* ಇಂಟರ್ ನೆಟ್ ಸೌಲಭ್ಯವುಳ್ಳ ಕಂಪ್ಯೂಟರ್
* ನೆಟ್ ಬ್ಯಾಂಕಿಂಗ್ ಸೌಲಭ್ಯವುಳ್ಳ ಬ್ಯಾಂಕ್ ಖಾತೆ
ಆನ್ ಲೈನ್ ಪಾವತಿ ಮಾಡುವ ವಿಧಾನ:
* ನೆಟ್ ಬ್ಯಾಂಕಿಂಗ್ ಖಾತೆಯನ್ನು ಓಪನ್ ಮಾಡಿ (ಸೌಲಭ್ಯವುಳ್ಳ ಬ್ಯಾಂಕ್ ಗಳ ಪಟ್ಟಿ ನೋಡಿ)
* www.incometaxindia.gov.in ವೆಬ್ ಸೈಟ್ ಗೆ ಭೇಟಿ ಕೊಡಿ
* pay taxes on-line ಕ್ಲಿಕ್ ಮಾಡಿ
* ಚಲನ್ ಅನ್ನು ಭರ್ತಿ ಮಾಡಿ. ನಿಮಗೆ ಸಹಾಯ ಬೇಕಾದರೆ FAQ ಪಟ್ಟಿ, downloads ನೋಡಿ
* ಆನ್ ಲೈನ್ ನೆಟ್ ಬ್ಯಾಂಕಿಂಗ್ ಅಕೌಂಟ್ ಮೂಲಕ ತೆರಿಗೆ ಹಣ ಪಾವತಿಸಿ
* ಹಣ ಪಾವತಿ ನಂತರ CIN (challan identification number) ಜೊತೆಗೆ ಚಲನ್ ಸಿಗಲಿದೆ.
* CIN ಐಡಿ ಸಂಖ್ಯೆಯನ್ನು ರಿಟರ್ನ್ ಫೈಲ್ ಮಾಡುವಾಗ ಬಳಸಬೇಕಾಗುತ್ತದೆ
* ಚಲನ್ ರಸೀತಿ ಮುದ್ರಿಸಿಕೊಳ್ಳಬಹುದು ಅಥವಾ ಗಣಕದಲ್ಲಿ ಸೇವ್ ಮಾಡಿಕೊಟ್ಟುಕೊಳ್ಳಬಹುದು
* ನಿಮ್ಮ ಹಣ ಸರಿಯಾಗಿ ಪಾವತಿಯಾಗಿದೆಯೇ ಎಂದು ಆದಾಯ ತೆರಿಗೆ ಇಲಾಖೆ ತಾಣದಲ್ಲಿ ಪರೀಕ್ಷಿಸಿಕೊಳ್ಳಿ
ಆದಾಯ ತೆರಿಗೆ ಇಲಾಖೆ ವೆಬ್ ತಾಣದ ಮೂಲಕ ತೆರಿಗೆ ಹಣ ಕಟ್ಟಲು ತೊಂದರೆಯಾಗುತ್ತಿದ್ದರೆ ವಿವಿಧ ವೆಬ್ ಸೈಟ್ ಗಳು ಬಾಗಿಲು ತೆರೆದು ಕಾಯ್ದುಕೊಂಡಿದೆ. ಆಸಕ್ತರು ಭೇಟಿ ನೀಡಬಹುದು.


Click it and Unblock the Notifications